fbpx
Astrology

ಮುಟ್ಟಿನ (ಋತು ಸ್ರಾವ)ದ ಸಂಧರ್ಭದಲ್ಲಿ ದೇವಸ್ಥಾನಕ್ಕೆ ಏಕೆ ಭೇಟಿ ನೀಡಬಾರದು ವೈಜ್ಞಾನಿಕ ಕಾರಣಗಳು !

ಮುಟ್ಟಿನ (ಋತು ಸ್ರಾವ) ದ ಸಂಧರ್ಭದಲ್ಲಿ ದೇವಸ್ಥಾನಕ್ಕೆ ಏಕೆ ಭೇಟಿ ನೀಡಬಾರದು ವೈಜ್ಞಾನಿಕ ಕಾರಣಗಳು !

ಆಯುರ್ವೇದದ ಪ್ರಕಾರ ಶರೀರದ ದೋಷಗಳಲ್ಲಿ ಮೂರು ವಿಧ ವಾತ, ಪಿತ್ತ ಮತ್ತು ಕಫ, ಗಾಳಿ, ಬೆಂಕಿ ಮತ್ತು ನೀರಿನ ಅಂಶಗಳು ಕ್ರಮವಾಗಿ
ಹೊಂದಿಕೆಯಾಗಿವೆ ಇವೆ. ವಾತ ( ಗಾಳಿ) ಸಂವಹನ, ಗ್ರಹಿಕೆ ಮತ್ತು ಸಂವೇದನೆ, ಚಲಿಸುವ ಶಕ್ತಿಯ ಕಾರಣಕಾರ.
ಪಿತ್ತ ( ಬೆಂಕಿ) ಪಚನ ಕ್ರಿಯೆಗೆ ಸಹಾಯಕ (Metabolism ) ಮತ್ತು ಕಫ (ನೀರು) ಸ್ಥಿರತೆಯ ಶಕ್ತಿ.

 

ಮುಟ್ಟಿನ ಸಂದರ್ಭದಲ್ಲಿ :

ವಾತ ದೋಷ ಪ್ರಧಾನ ದೋಷ ವಾಗಿದೆ ವಾತ ದೋಷದಲ್ಲಿನ ಅಪ ವಾಯುವು ಮುಟ್ಟಿನ ರಕ್ತವನ್ನು ಕೆಳಗೆ ಹರಿಯಲು ಸಹಾಯ ಮಾಡುತ್ತದೆ.
ಆದ ಕಾರಣ ಯಾವುದೇ ಭಾರ ಎತ್ತುವ , ಇನ್ನಿತರ ಶಕ್ತಿ ವ್ಯಯಿಸುವ ಕೆಲಸಗಳನ್ನು ಮಾಡಬಾರದು.
ಈ ಸಂಧರ್ಭದಲ್ಲಿ ಅಪವಾಯುವಿನ ದೋಷದಿಂದ ಶಕ್ತಿಕುಂದಿರುವುದರಿಂದ ಪರಿಸರದಲ್ಲಿನ ಹಾಗು ಆಹಾರದಲ್ಲಿನ ಶಕ್ತಿಯನ್ನು ಹೆಣ್ಣು ಮಕ್ಕಳಿಗೆ ಒದಗಿಸಲು ಸಹಕರಿಸಬೇಕು.

ಮುಟ್ಟಿನ ಸಂದರ್ಭದಲ್ಲಿ ಈ ಕೆಲಸಗಳನ್ನು ಮಾಡಬಾರದು:

ಧಾರ್ಮಿಕ ಕಾರ್ಯಕ್ರಮಗಳು ದೇವಸ್ಥಾನಕ್ಕೆ ಭೇಟಿ ನೀಡಬಾರದು.
ಅಡುಗೆ ಮಾಡುವುದು ಇತರರೊಂದಿಗೆ ತಿನ್ನುವ ಅಭ್ಯಾಸಗಳನ್ನು ಬಿಡಬೇಕು
ಮುಟ್ಟಿನ ಸಂದರ್ಭದಲ್ಲಿ ಲೈಂಗಿಕ ಕ್ರಿಯೆ ಮಾಡಬಾರದು
ಮನೆಯ ದೊಡ್ಡ ದೊಡ್ಡ ಕೆಲಸಗಳನ್ನು ಮಾಡಬಾರದು

ಧಾರ್ಮಿಕ ಕಾರ್ಯಕ್ರಮಗಳು ದೇವಸ್ಥಾನಕ್ಕೆ ಭೇಟಿ ನೀಡಬಾರದು ಏಕೆ ?

ಆಗಲೇ ಹೇಳಿದ ಹಾಗೆ ಅಪ ವಾಯುವು ಮುಟ್ಟಿನ ರಕ್ತವನ್ನು ಕೆಳಗೆ ಹರಿಯಲು ಸಹಾಯ ಮಾಡುತ್ತದೆ ಅಂದರೆ ಶಕ್ತಿಯು ಕೆಳಮುಖವಾಗಿ ಹರಿಯುತ್ತಿರುತ್ತದೆ ಆದರೆ ದೇವಸ್ಥಾನದ ಭಜನೆ ಇತ್ಯಾದಿಗಳು ಶಕ್ತಿಯನ್ನು ಮೇಲ್ಮುಖವಾಗಿ ಹರಿಸುತ್ತವೆ ಇದರಿಂದ ದೇಹದಲ್ಲಿ ಅಸಮತೋಲನ ಉಂಟಾಗುತ್ತದೆ.
ಆದ್ದರಿಂದ ದೇವಾಲಯಗಳಿಗೆ ಹೋಗುವುದನ್ನು ನಿಷೇಧಿಸಬೇಕು.

ಅಡುಗೆ ಮಾಡುವುದು ಇತರರೊಂದಿಗೆ ತಿನ್ನುವ ಅಭ್ಯಾಸಗಳನ್ನು ಬಿಡಬೇಕು ಏಕೆ ?

ದೇಹದಲ್ಲಿ ಒಟ್ಟು 7 ಚಕ್ರಗಳಿದ್ದು ಊಟಮಾಡುವಾಗ ದೇಹದ ಕೆಳಗಿನ ಚಕ್ರಗಳು ಕಾರ್ಯ ನಿರ್ವಹಿಸುತ್ತಿರುತ್ತವೆ ಹಾಗು ಈ ಚಕ್ರಗಳು ನಕಾರಾತ್ಮಕ ಶಕ್ತಿಯನ್ನು ಬಿಡುಗಡೆ ಮಾಡುತ್ತವೆ ಆಗಲೇ ದೈಹಿಕವಾಗಿ ದಣಿದಿರುವ ಮುಟ್ಟಿನ ಮಹಿಳೆಯರು ಹತ್ತಿರ ಇದ್ದರೆ ಅವರು ಆ ನಕಾರಾತ್ಮಕ ಶಕ್ತಿಯನ್ನು ಹೀರುವ ಸಾಧ್ಯತೆ ಹೆಚ್ಚು.

ಮುಟ್ಟು ಅಪವಿತ್ರವಾದದಲ್ಲ ಎಲ್ಲೂ ಹಾಗೆ ಹೇಳಲು ಇಲ್ಲ ಮುಟ್ಟಿನ ದೇವತೆಗಳನ್ನು ನಮ್ಮ ದೇಶದಲ್ಲಿ ಆರಾಧಿಸುತ್ತೇವೆ.
ಕಾಮಾಕ್ಯ ದೇವಿ ದೇವಾಲಯ 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

1 Comment
ashok says:

Thanks for the impormetions

To Top