fbpx
Astrology

ಅಯ್ಯೋ ಗೂಬೆ ತರ ಆಡ್ತಾವ್ನೆ ಅಂತೀವಿ ಆದ್ರೆ ಪುರಾಣದ ಶಾಸ್ತ್ರದಲ್ಲಿ ನಾವೆಲ್ಲ ಒಂದೊಂದು ಪಕ್ಷಿನೇ !! ಬೇಕಾದ್ರೆ ನೀವು ಟೆಸ್ಟ್ ಮಾಡಿ ನೋಡಿ !

ಪಂಚ-ಪಕ್ಷಿ ಶಾಸ್ತ್ರ

ಪಂಚಪಕ್ಷಿ ಶಾಸ್ತ್ರವು ತಮಿಳು ಭಾಷೆಯ ಪುರಾತನ ಸಾಹಿತ್ಯದ ಮೇಲೆ ಆಧರಿಸಲ್ಪಟ್ಟಿದೆ. ಪಂಚ ಅಂದರೆ ಐದು ಹಾಗೂ ಪಕ್ಷಿ ಅಂದರೆ ಹಕ್ಕಿ. ಪಂಚ-ಪಕ್ಷಿ
ಪದ್ಧತಿಯು ವೇದ ಜೋತಿಷ್ಯ ಶಾಸ್ತ್ರದ ಪಂಚ-ಭೂತ ಪದ್ಧತಿಯನ್ನು ತುಸು ಹೋಲುತ್ತದೆ. ಐದು ಪಕ್ಷಿಗಳಿಂದ ಪ್ರತಿನಿಧಿಸಲ್ಪಡುವ ಪಂಚ ಭೂತಗಳು ಮಾನವ
ಜೀವಿಯ ಎಲ್ಲಾ ಕ್ರಿಯೆಗಳನ್ನು, ಚಟುವಟಿಕೆಗಳನ್ನು ನಿಯಂತ್ರಿಸುತ್ತದೆ ಎಂದು ನಂಬಲಾಗಿದೆ.

ಈ ಐದು ಪಕ್ಷಿಗಳು ಒಂದು ವಿಶೇಷ ಸರಣಿಯಲ್ಲಿ ತಮ್ಮ ಸರತಿಯನ್ನು ಅನುಸರಿಸುತ್ತವೆ ಹಾಗೂ ರಾತ್ರಿ ಹಾಗೂ ಹಗಲಿನ ವೇಳೆಯಲ್ಲಿ ತಮ್ಮ ಶಕ್ತಿಯನ್ನು ಹೊರಸೂಸುತ್ತವೆ. ಒಂದು ಹಗಲು ಅಥವಾ ರಾತ್ರಿಯ ವೇಳೆ
ಪರಿಣಾಮ ಬೀರುವ ಶಕ್ತಿ ಹಾಗೂ ನಂತರ ಅನುಸರಿಸುವ ಸರಣಿಯು ವಾರದ ದಿನ ಹಾಗೂ ಚಂದ್ರನ ಪಕ್ಷದ ಮೇಲೆ ಅವಲಂಬಿತವಾಗಿದೆ (ಹುಣ್ಣಿಮೆ ಅಥವಾ
ಅಮವಾಸ್ಯೆಯ ಚಕ್ರ)

ಒಬ್ಬ ವ್ಯಕ್ತಿಯ ಜನ್ಮ ನಕ್ಷತ್ರ ಹಾಗೂ ಜನನದ ಅವಧಿಯ ಚಂದ್ರನ ಪಕ್ಷದ ಆಧಾರದ ಮೇಲೆ ಒಬ್ಬ ವ್ಯಕ್ತಿಯ ಮೇಲಿನ ನಿಯಂತ್ರಕ ಶಕ್ರಿಯಾಗಿ ಈ
ಐದರಲ್ಲೊಂದು ಪಕ್ಷಿಯನ್ನು ನಿಯೋಜಿಸಲಾಗುತ್ತದೆ. ಒಂದು ನಿರ್ಧರಿತ ಸಮಯದಲ್ಲಿ ಈ ಮುಖ್ಯ ಪಕ್ಷಿಯ ಚಟುವಟಿಕೆ ಹಾಗೂ ಅದೇ ಸಮಯದಲ್ಲಿ
ಉಪ-ಪಕ್ಷಿಯ ಚಟುವಟಿಕೆ ಹಾಗೂ ಅವುಗಳ ನಡುವಿನ ಸಂಬಂಧವು, ಕಾಲವು ಆ ವ್ಯಕ್ತಿಗೆ ಪ್ರಶಸ್ತವಾಗಲಿದೆಯೇ ಹಾಗೂ ಅದೃಷ್ಟಕರವಾಗಲಿದೆಯೇ ಅಥವಾ
ಇಲ್ಲವೇ ಎನ್ನುವುದನ್ನು ಸೂಚಿಸುತ್ತದೆ. ಪಂಚ-ಪಕ್ಷಿ ಶಾಸ್ತ್ರವು ದಕ್ಷಿಣ ಭಾರತದಲ್ಲಿ, ವಿಶೇಷವಾಗಿ ತಮಿಳುನಾಡಿನಲ್ಲಿ ಅತ್ಯಂತ ಜನಪ್ರಿಯವಾಗಿದೆ. ಇದು
ಪ್ರಶಸ್ತವಾಗಿರುವ ಮುಹೂರ್ತ ಕಾಲದ ಆಯ್ಕೆಯಲ್ಲಿ ಹಾಗೂ ಪ್ರಶ್ನೆಗಳನ್ನು ಉತ್ತರಿಸುವುದಕ್ಕೆ ನೆರವಾಗುತ್ತದೆ.

ಪಂಚ-ಪಕ್ಷಿ ಶಾಸ್ತ್ರದಲ್ಲಿರುವ ಐದು ಪಕ್ಷಿಗಳು ಇಂತಿವೆ:

1- ರಣಹದ್ದು
2- ಗೂಬೆ
3- ಕಾಗೆ
4- ಹುಂಜ
5- ನವಿಲು

ಯಾವುದೇ ಸಮಯದಲ್ಲಿ ಈ ಪಕ್ಷಿಗಳು ಈ ಕೆಳಗಿನ ಐದು ಚಟುವಟಿಕೆಗಳಲ್ಲಿ ಯಾವುದೇ ಒಂದರಲ್ಲಿ ತೊಡಗಿರುತ್ತವೆ:

1- ಆಳು
2- ಉಣ್ಣು
3- ನಡೆ
4- ನಿದ್ರಿಸು
5- ಮರಣಿಸು

ಆಳುವ ಸಮಯದಲ್ಲಿ ಈ ಪಕ್ಷಿಗಳು ಅತ್ಯಂತ ಪ್ರಬಲ ಹಾಗೂ ಮರಣಿಸುವಾಗ ಅತ್ಯಂತ ದುರ್ಬಲವೆಂದು ಪರಿಗಣಿಸಲಾಗುತ್ತದೆ.
ನಿಮ್ಮ ಜನ್ಮ ಪಕ್ಷಿ (ನಕ್ಷತ್ರ ಪಕ್ಷಿ)ಯನ್ನು ಕಂಡುಹಿಡಿಯಲು ನೀವು ವೇದದ ಅನುಸಾರವಾಗಿ ನಿಮ್ಮ ಜನ್ಮ ನಕ್ಷತ್ರವನ್ನು ತಿಳಿದುಕೊಂಡಿರಬೇಕು. ಜೊತೆಗೆ, ನಿಮ್ಮ
ಜನ್ಮದ ಸಮಯದಲ್ಲಿನ ಚಂದ್ರನ ಪಕ್ಷವನ್ನೂ ತಿಳಿದುಕೊಂಡಿರಬೇಕು. ಚಂದ್ರನು ಗಾತ್ರದಲ್ಲಿ ಹಿಗ್ಗುತ್ತಾ ಪೂರ್ಣ ಚಂದ್ರ(ಪೌರ್ಣಿಮೆ)ನಾಗುವ ಸಮಯವನ್ನು
ಶುಕ್ಲಪಕ್ಷ ಎಂದೂ ಚಂದ್ರನು ಗಾತ್ರದಲ್ಲಿ ಕೃಷವಾಗುತ್ತಾ ಅಮವಾಸ್ಯೆಯನ್ನು ತಲಪುವ ಅವಧಿಯ ಭಾಗವನ್ನು ಕೃಷ್ಣ ಪಕ್ಷವೆಂದೂ ಕರೆಯುತ್ತಾರೆ. ಜನ್ಮ
ನಕ್ಷತ್ರವು ಚಂದ್ರನ ರೇಖಾಂಶದ ಮೇಲೆ ಹೊಂದಿಕೊಂಡಿರುತ್ತದೆ ಹಾಗೂ ಅಶ್ವಿನಿಯಿಂದ ರೇವತಿಯವರೆಗೆ ಒಟ್ಟು 27 ಜನ್ಮ ನಕ್ಷತ್ರಗಳಿವೆ.

 

ಪಕ್ಷ (15 ದಿನ )

ಚಂದ್ರನ ಪಥ  ಅಮಾವಾಸ್ಯೆ -> ಹುಣ್ಣಿಮೆ(ಶುಕ್ಲ ಪಕ್ಷ)

ಚಂದ್ರನ ಪಥ  ಹುಣ್ಣಿಮೆ -> ಅಮಾವಾಸ್ಯೆ(ಕೃಷ್ಣ ಪಕ್ಷ)

ಶುಕ್ಲ ಪಕ್ಷ 

ಜನ್ಮ ಪಕ್ಷಿಯ ಮೃತ್ಯು ದಿನಗಳು : ಗುರುವಾರ, ಶನಿವಾರ
ಜನ್ಮ ಪಕ್ಷಿಯ ದಿನಗಳನ್ನು ದಿನ ಆಳುವುದು : ಭಾನುವಾರ, ಮಂಗಳವಾರ
ಜನ್ಮ ಪಕ್ಷಿಯ ದಿನಗಳನ್ನು ರಾತ್ರಿ ಆಳುವುದು : ಶುಕ್ರವಾರ,
ಬಣ್ಣ : ಹಳದಿ
ದಿಕ್ಕು : ಪೂರ್ವ
ನಾಮಾಕ್ಷರ : ಅ,ಆ
ಮಿತ್ರ ಪಕ್ಷಿಗಳು : ಮಯೂರ (ನವಿಲು), ಗೂಬೆ
ಶತ್ರು ಪಕ್ಷಿಗಳು : ಕಾಗೆ, ಹುಂಜ

ಕೃಷ್ಣ ಪಕ್ಷ

ಜನ್ಮ ಪಕ್ಷಿಯ ಮೃತ್ಯು ದಿನಗಳು : ಮಂಗಳವಾರ,
ಜನ್ಮ ಪಕ್ಷಿಯ ದಿನಗಳನ್ನು ದಿನ ಆಳುವುದು : ಶುಕ್ರವಾರ,
ಜನ್ಮ ಪಕ್ಷಿಯ ದಿನಗಳನ್ನು ರಾತ್ರಿ ಆಳುವುದು : ಭಾನುವಾರ, ಮಂಗಳವಾರ
ಬಣ್ಣ : ಕಪ್ಪು
ದಿಕ್ಕು : ಪೂರ್ವ
ನಾಮಾಕ್ಷರ : ಇ,ಈ
ಮಿತ್ರ ಪಕ್ಷಿಗಳು : ಮಯೂರ (ನವಿಲು), ಕಾಗೆ
ಶತ್ರು ಪಕ್ಷಿಗಳು : ಗೂಬೆ, ಹುಂಜ

ರಣಹದ್ದು :

ನಕ್ಷತ್ರಗಳು
ಅಶ್ವಿನಿ, ಭರಣಿ, ಕೃತಿಕಾ , ರೋಹಿಣಿ ಮತ್ತು ಮಿರ್ಗಶಿರ ,
ಪಂಚ ಪಕ್ಷಿ ರಣಹದ್ದು ಅಡಿಯಲ್ಲಿ ಬರುತ್ತವೆ.

ಈ ಅಡಿಯಲ್ಲಿ ಜನಿಸಿದ ಜನರು ವಯಸ್ಸಾದ ನಂತರವೂ ತಮ್ಮ ಬಾಲಿಶ(Humorous ) ನಡವಳಿಕೆಯನ್ನು ಇರಿಸಿಕೊಳ್ಳಲು ಇಷ್ಟಪಡುತ್ತಾರೆ.
ಇತರರರನ್ನು ನಗಿಸುತ್ತಾ ಅವರು ಸಹ ಸದಾ ನಗುತ್ತ ಇರುತ್ತಾರೆ, ಬಹಳ ಪ್ರೀತಿ ಪಾತ್ರರು .

ನೀವು ಶಾಶ್ವತವಾಗಿ ಅಸಡ್ಡೆ ಮನೋಭಾವನೆಯನ್ನು ಹೊಂದಿರುತ್ತೀರಿ
ನೀವು ಒಂದು ದೊಡ್ಡ ಸೆಳೆಯುವ ಶಕ್ತಿ ಮತ್ತು ಹೊಸ ವಿಷಯಗಳನ್ನು ತಿಳಿಯಲು ಸಾಕಷ್ಟು ಸುಲಭ ನಿಮಗೆ .
ಸಂಗೀತ ಕ್ಷೇತ್ರದಲ್ಲಿ ವೃತ್ತಿ ಆಯ್ಕೆ ಮಾಡಿಕೊಳ್ಳಬಹುದು .

ಗೂಬೆ :

ನಕ್ಷತ್ರಗಳು
ಆರ್ದ್ರ , ಪುನರ್ವಸು , ಪುಷ್ಯ, ಆಶ್ಲೇಷ ಮತ್ತು ಮಖ ,
ಪಂಚ ಪಕ್ಷಿ – ಗೂಬೆ ಅಡಿಯಲ್ಲಿ ಬರುತ್ತವೆ.

ಆತ್ಮವಿಶ್ವಾಸದ ವ್ಯಕ್ತಿತ್ವ ,ಆಕಾಶದ ಎತ್ತರದಷ್ಟು ಕನಸುಗಳು , ಬಹಳ ಮಹತ್ವಾಕಾಂಕ್ಷೆ ಉಳ್ಳವರು ,
ಕಠಿಣ ಪರಿಶ್ರಮ , ಸಮರ್ಪಣೆ ವಿಷಯಗಳಲ್ಲಿ ನಿಮ್ಮನ್ನು ಮೀರಿಸುವವರು ಯಾರು ಇಲ್ಲ.
ಮೂಗಿನ ಮೇಲೆ ಕೋಪವಿರುತ್ತದ್ದೆ ಇದರಿಂದ ಸ್ನೇಹಿತರೊಡನೆ ಮನೆಯವರೊಂದಿಗೆ ನಿತ್ಯ ಜಗಳ ಅನುಭವಿಸಬೇಕಾಗುತ್ತದೆ.
ಹಿಡಿದ ಕೆಲಸ ಸಾಧಿಸುವ ಪಟ್ಟು ನಿಮ್ಮದು, ದುಂದು ವೆಚ್ಚ ಮಾಡುವವರು.

ಕಾಗೆ :

ನಕ್ಷತ್ರಗಳು
ಉತ್ತರಫಾಲ್ಗುಣಿ , ಹಸ್ತ, ಚಿತ್ರಾ, ಸ್ವಾತಿ, ಮತ್ತು ವಿಶಾಖ ,
ಪಂಚ ಪಕ್ಷಿ – ಕಾಗೆಯ ಅಡಿಯಲ್ಲಿ ಬರುತ್ತವೆ.

ನೀವು ಮುಗ್ಧ ಮತ್ತು ಸರಳ ಜೀವಿಗಳು ಆದರೆ ಜೀವನದಲ್ಲಿ ತುಂಬ ಬಯಕೆಗಳನ್ನುಹೊಂದಿರುತ್ತೀರಾ .ಆಸ್ತಿ ಅಂತಸ್ತು ಇವುಗಳ ಬಗ್ಗೆ ಹೇಳಿಕೊಳ್ಳದೆ ಇದ್ದರು ಮನಸಿನಲ್ಲಿ ಬಹಳ ಆಸೆ ಇರುತ್ತದೆ,
ಇದೆ ನಿಮಗೆ ಮುಳುವಾಗಬಹುದು ಎಚ್ಚರ.
ಕಳೆದು ಹೋದದ್ದಕ್ಕೆ ಹೆಚ್ಚು ಸಂಕಟ ಪಡುವ ಜಾಯಮಾನ ನಿಮ್ಮದಲ್ಲ , ಪರಿಶ್ರಮ ಜೀವಿಗಳು , ನಿಮ್ಮ ಜೀವನದಲ್ಲಿ ಸ್ನೇಹಿತರಿಗಿಂತ ಶತ್ರುಗಳು ಜಾಸ್ತಿ.

ಹುಂಜ :

ನಕ್ಷತ್ರಗಳು
ಅನುರಾಧ ಜೇಷ್ಠ, ಮೂಲಾ, ಪೂರ್ವಾಷಾಢ , ಮತ್ತು ಉತ್ತರಾಷಾಡ ,
ಪಂಚ ಪಕ್ಷಿ – ಹುಂಜದ ಅಡಿಯಲ್ಲಿ ಬರುತ್ತವೆ.

ಎಲ್ಲವನ್ನು ಅಳೆದು ತೂಗಿದ ಮೇಲೆ ಅಂದರೆ ಸರಿಯಾಗಿ ಆಲೋಚನೆ ಮಾಡಿ ನಿರ್ಧಾರಗಳನ್ನ ಹಾಗು ಅಭಿಪ್ರಾಯಗಳನ್ನು ನೀಡುತ್ತಾರೆ.
ಅತ್ಯಂತ ಬುದ್ದಿಶಾಲಿಗಳು ಆದರೂ ಸಹ ವಿಷಯಗಳ ಬಗ್ಗೆ ಮರು ಚಿಂತನೆ ಮಾಡುವ ಅಭ್ಯಾಸವನ್ನು ಬಿಡುವುದಿಲ್ಲ .
ಮೋಸ ಮಾಡುವವರನ್ನು ಕ್ಷಮಿಸುತ್ತೀರಾ ಆದರೆ ಅವರ ತಪ್ಪುಗಳನ್ನು ಮರೆಯುವುದಿಲ್ಲ. ನಿಮ್ಮ ನಡುವಳಿಕೆಯ ಬಗ್ಗೆ ಅತ್ಯಂತ ನಿಗಾವಹಿಸುತ್ತೀರಾ.
ಮೋಸ ,ವಂಚನೆ ,ಸುಳ್ಳು , ಅನ್ಯಾಯ ಮಾಡಿದವರನ್ನು ಜೀವಪರ್ಯಂತ ಮನಸಿನಲ್ಲೇ ಇಟ್ಟುಕೊಂಡಿರುತ್ತೀರಾ , ಅತಿ ಚಿಂತೆ ಆರೋಗ್ಯವನ್ನು ಹಾಳುಮಾಡುತ್ತದೆ .
ಸಿಹಿ ತಿಂಡಿ ಮತ್ತು ಅತಿ ನಿದ್ರೆ ನಿಮಗೆ ಪ್ರಿಯವಾದದ್ದು.

ನವಿಲು :

ನಕ್ಷತ್ರಗಳು
ಶ್ರವಣ, ಧನಿಷ್ಠ , ಶತಭೀಷ್ಟ , ಪೂರ್ವಭಾದ್ರ , ಉತ್ತರಾಭಾದ್ರ , ಹಾಗೂ ರೇವತಿ,
ಪಂಚ ಪಕ್ಷಿ – ನವಿಲಿನ ಅಡಿಯಲ್ಲಿ ಬರುತ್ತವೆ.

ನೀವು ಎಷ್ಟೇ ಕೆಲಸಗಳನ್ನು ಮಾಡಿದ್ದರು ಸಹ ಜಗತ್ತಿಗೆ ತೋರಿಸಲು ಇಷ್ಟಪಡುವುದಿಲ್ಲ.
ಯಾರೊಂದಿಗಾದರೂ ಮಾತಾಡಬೇಕೆಂದರೆ ಆತ್ಮ ವಿಶ್ವಾಸ ಕೊರತೆ ಎದ್ದು ಕಾಣುತ್ತದೆ.
ಬೇರೆಯವರು ಏನು ಎಂದು ಕೊಂಡಾರು ಎಂಬ ಅಳುಕು ನಿಮನ್ನು ಸದಾ ಕಾಡುತ್ತಿರುತ್ತದೆ .
ನಿಮ್ಮ ಬಗ್ಗೆ ಇತರರು ಏನು ಎಂದು ಕೊಳ್ಳುತ್ತಿದ್ದಾರೆ ಎಂಬ ಚಿಂತೆ ಇರುತ್ತದೆ.
ಯಾವುದೇ ಅತಿಯಾಸೆ ಇರುವುದಿಲ್ಲ ಆದರೆ ಹಳೆ ವಿಷಯಗಳನ್ನು ಯೋಚಿಸುತ್ತ ಬೇಜಾರು ಪಟ್ಟುಕೊಂಡಿರುತ್ತೀರಾ ಇದನ್ನು ನಿಲ್ಲಿಸಿದರೆ ಉತ್ತಮ .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top