fbpx
Astrology

ಹೆಣ್ಮಕ್ಕಳು ಬಳೆ, ಓಲೆ, ಕಾಲುಂಗುರ, ಮೂಗುತ್ತಿ ಹಾಕೋದು ಬರಿ ಫ್ಯಾಷನ್ಗಲ್ಲ ಅದರ ಹಿಂದೆ ವೈಜ್ಞಾನಿಕ ಕಾರಣ ಇದೆ!

ಹೆಣ್ಮಕ್ಕಳು ಬಳೆ , ಓಲೆ , ಕಾಲುಂಗುರ, ಮೂಗುತ್ತಿ ಹಾಕೋದು ಬರಿ ಫ್ಯಾಷನ್ಗಲ್ಲ ಅದರ ಹಿಂದೆ ವೈಜ್ಞಾನಿಕ ಕಾರಣ ಇದೆ!

ಭಾರತೀಯರಲ್ಲಿ ಹಿಂದಿನ ಕಾಲದಿಂದಲೂ ಆಭರಣಗಳಿಗೆ ಹೆಚ್ಚಿನ ಮಹತ್ವವನ್ನು ನೀಡಲಾಗುತ್ತಿತ್ತು
ಏಕೆಂದರೆ ಚಿನ್ನ ಮ್ಯಾಗ್ನೆಟಿಕ್ ತರಂಗಗಳನ್ನು ಆಕರ್ಷಿಸುವುದಿಲ್ಲ ಇದರಿಂದಾಗಿ ರಕ್ತದ ಸಂಚಲನೆ ನಿಯಂತ್ರಣದಲ್ಲಿ ಇರುತ್ತದೆ, ಬೆಳ್ಳಿಯು ಕೂಡ ದೇಹಕ್ಕೆ ಒಳ್ಳೆಯ ಉಷ್ಣ ಕಾರಕ .

1. ಮೂಗುತ್ತಿ :

ಮೂಗು ಚುಚ್ಚುವ ಪದ್ಧತಿಯಿಂದ ಉಸಿರಾಟದ ಸಮಸ್ಯೆ ಗಳನ್ನ ನಿಯಂತ್ರಿಸಬಹುದು, ಕಿವಿಯ ಸಮಸ್ಯೆ , ಪಾರ್ಶ್ವವಾಯು ಇಂತಹ ಸಮಸ್ಯೆಗಳಿಂದ ದೂರವಿರಬಹುದು.
ಎಡ ಮೂಗಿನ ಹೊಳ್ಳೆ ಚುಚ್ಚುವುದರಿಂದ ಗರ್ಭಕೋಶದ ನಾಡಿಗಳನ್ನು ಹತೋಟಿಯಲ್ಲಿ ಇಡಬಹುದು , ಋತು ಸ್ರಾವದ ಸಂಧರ್ಭದಲ್ಲಿ, ಮಗುವನ್ನು ಹೆರುವ ಸಂಧರ್ಭದಲ್ಲಿ ಮೂಗಿನ ಮುಗುತ್ತಿಯನ್ನು ಒತ್ತಿದರೆ
ನೋವು ಕಡಿಮೆ ಆಗುತ್ತದೆ ಎಂದು ಹೇಳಲಾಗುತ್ತದೆ.

2. ಬಳೆ

ಸಾಧಾರಣವಾಗಿ ಹಿಂದಿನ ಕಾಲದಲ್ಲಿ ಹೆಣ್ಣು ಮಕ್ಕಳು ಮನೆಯ ಕೆಲಸಗಳನ್ನು ನೋಡಿಕೊಳ್ಳುತ್ತಿದ್ದರು .
ಹೆಚ್ಚು ಹೊರಗಡೆ ತಿರುಗಾಡುತ್ತಿರಲಿಲ್ಲ ಬಳೆಗಳನ್ನು ಹಾಕಿಕೊಳ್ಳುವುದರಿಂದ ಮಣಿಕಟ್ಟಿನ ಬಳಿ ಇರುವ ರಕ್ತ ನಾಡಿಗಳ ಚಲನ ವಲನ ನಿಯಂತ್ರಣದಲ್ಲಿ ಇರುತ್ತದೆ , ಅಷ್ಟೇ ಅಲ್ಲದೆ ಸ್ನಾಯುಗಳಿಗೆ ಒಂದು ರೀತಿಯ ವ್ಯಾಯಾಮವನ್ನು ಉಂಟು ಮಾಡುತ್ತದೆ , ಹಾಗೆಯೇ ಮುಂಗೈ ನಡುವಿನ ನಾಡಿಗಳು ಗರ್ಭಾಶಯ ನಾಡಿಗಳೊಂದಿಗೆ ಸಂಪರ್ಕವಾಗಿರುತ್ತವೆ ಇದು ಗರ್ಭಕೋಶವನ್ನು ನಿಯಂತ್ರಿಸುತ್ತದೆ.
ಆದ್ದರಿಂದಲೇ ಎಲ್ಲ ಶುಭ ಕಾರ್ಯಗಳಲ್ಲಿ ಬಳೆತೊಡಿಸುವುದು ಪದ್ಧತಿ.

3. ಕಿವಿಯೋಲೆ

ಮಹಿಳೆಯರು ಧರಿಸುವ ಕಿವಿಯೋಲೆ ಅವರನ್ನು ಸುಂದರವಾಗಿಸುವುದಷ್ಟೇ ಅಲ್ಲ..ಅವರು ಬುದ್ಧಿವಂತಿಯಿಂದ ನಿರ್ಧಾರ ತೆಗೆದುಕೊಳ್ಳಲು ಕಾರಣವಾಗುತ್ತವೆ.. ಕಿವಿಯೋಲೆ ಧರಿಸುವುದರಿಂದ ಎಲ್ಲಿ ಎಷ್ಟು ಮಾತನಾಡಬೇಕು ಅಷ್ಟೇ ಮಾತನಾಡುತ್ತಾರೆ, ತುಂಬಾ ಬುದ್ಧಿವಂತಿಕೆಯಿಂದ ನಿರ್ಧಾರ ತೆಗೆದುಕೊಳ್ಳುತ್ತಾರಂತೆ.

4. ಕಾಲುಂಗುರ

ಪಾದದ ಎರಡನೇ ಬೆರಳಿಗೆ ಕಾಲುಂಗುರ ಧರಿಸುವುದರಿಂದ ಬಹಳ ಪ್ರಯೋಜನಗಳಿವೆ ಕಾಲಿನ ಎರಡನೇ ಬೆರಣಿನ ನಾಡಿ ಗರ್ಭಕೋಶಕ್ಕೆ ಸಂಬಂಧಪಟ್ಟಿರುತ್ತದೆ ಕಾಲುಂಗರವನ್ನು ಧರಿಸುವುದರಿಂದ ನಿರ್ದಿಷ್ಟ ಪ್ರಮಾಣದ ಶಾಖ ಅಥವಾ ಉಷ್ಣ ನಾಡಿಯನ್ನು ತಲುಪಲು ಸಹಾಯ ಮಾಡುತ್ತದೆ ಅಲ್ಲದೆ ಇದು ಋತು ಚಕ್ರವನ್ನು ಸರಿಯಾಗಿ ಆಗುವಂತೆ ನೋಡಿಕೊಳ್ಳುವುದು ಹಾಗು ಸಂತಾನ ಸಮಸ್ಯೆಯನ್ನು ದೂರಮಾಡುವುದು.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

1 Comment
shwetha says:

Super I like this information

To Top