fbpx
Astrology

ಇವೆಲ್ಲಾ ಹಾವಿಗಿಂತ ವಿಷ ಅಂತೇ !! ಹಾಗಂತ ಚಾಣಕ್ಯ ಶಾಸ್ತ್ರದಲ್ಲಿ ಇದೆ

ಅನಾಭ್ಯಾಸೆ ವಿಷಮ್ ಶಾಸ್ತ್ರಮಗೀರ್ನಯೇ ಭೋಜನಂ ವಿಷಮ್ | ದರಿದ್ರಸ್ಯ ವಿಷಮ್ ಗೋಷ್ಠಿ ವ್ರಿಧಸ್ಯ ತರುಣಿ ವಿಷಮ್

ಅನಾಭ್ಯಾಸೆ ವಿಷಮ್

ಅಂದರೆ ಅಭ್ಯಾಸ ಇಲ್ಲದೆ ಶಾಸ್ತ್ರ ಸೈದ್ಧಾಂತಿಕ ಜ್ಞಾನವನ್ನು ವಾಸ್ತವವಾಗಿ ಅರ್ಥ ಮತ್ತು ಅಭ್ಯಾಸ ಮಾಡದೆ ತಾನು ವಿದ್ವಾಂಸ ನೆಂದು ಜಂಬ ಕೊಚ್ಚಿಕೊಳ್ಳುವ ಮನುಷ್ಯ
ಸುಳ್ಳು ಮುಖವಾಡಹಾಕಿಕೊಂಡಿರುವವನು ಅರ್ಧ ತುಂಬಿದ ಜ್ಞಾನ ವಿಷಕ್ಕೆ ಸಮನಾಗಿರುತ್ತದೆ.

ಶಾಸ್ತ್ರಮಗೀರ್ನಯೇ ಭೋಜನಂ ವಿಷಮ್

ಅಜೀರ್ಣವಾದ ಹೊಟ್ಟೆಯು ವಿಷಕ್ಕೆ ಸಮ ಇದು ಮನುಷ್ಯನ ನಾಲಿಗೆಯನ್ನು ಕೆಡಿಸುತ್ತದೆ, ಹೀಗೆ ವಿವಿಧ ಕಾಯಿಲೆಗಳು ಕಾರಣವಾಗುತ್ತದೆ ,ಅತಿಯಾದ ಆಹಾರ ಸೇವನೆ ಒಳ್ಳೆಯದಲ್ಲ ಆದಷ್ಟು ಇಂತಹ ಆಹಾರಗಳಿಂದ ದೂರ ಇರಬೇಕು .

ದರಿದ್ರಸ್ಯ ವಿಷಮ್

ಕಡಿಮೆ ಅಂತಸ್ತಿನ ವ್ಯಕ್ತಿಯು ತನಗಿಂತ ಮೇಲ್ಮಟ್ಟದ ವ್ಯಕ್ತಿಯ ಹಾಗೆ ಬದುಕಬೇಕೆಂದು ಭಾವಿಸಿ ಜೀವನದ ನೆಮ್ಮದಿ ಶಾಂತಿಯನ್ನು ಕಳೆದುಕೊಂಡು ಅವಮಾನ, ಆತಂಕ, ಖಿನ್ನತೆ ಮತ್ತು ಜೀವನದಲ್ಲಿ ದುಃಖ ಇವುಗಳಿಂದ ಬಳಲುತ್ತಾನೆ.

ಗೋಷ್ಠಿ ವ್ರಿಧಸ್ಯ ತರುಣಿ ವಿಷಮ್

ವಯಸಿನಲ್ಲಿ ಬಹಳ ಹಿರಿಯರಾಗಿದ್ದು ತನಗಿಂತ ಚಿಕ್ಕವಳಾದ ಬಾಲಕಿಯನ್ನು ಮದುವೆಯಾದರೆ ಕುಟುಂಬಕ್ಕೂ ಹಾಗು ಸಮಾಜಕ್ಕೂ ಮಾರಕವಾಗಿ ಪರಿಣಮಿಸುತ್ತದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top