fbpx
ದೇವರು

ಒಡವೆಗಳನ್ನ ಮನೆಯಲ್ಲಿ ಶಾಸ್ತ್ರದ ಪ್ರಕಾರ ಶುದ್ದಿಗೊಳಿಸುವುದು ಹೇಗೆ? ವೈಜ್ಞಾನಿಕ ಹಾಗು ಶಾಸ್ತ್ರದ ಕಾರಣಗಳು

ಒಡವೆಗಳನ್ನ ಮನೆಯಲ್ಲಿ ಶಾಸ್ತ್ರದ ಪ್ರಕಾರ ಶುದ್ದಿಗೊಳಿಸುವುದು ಹೇಗೆ? ವೈಜ್ಞಾನಿಕ ಹಾಗು ಧಾರ್ಮಿಕ ಕಾರಣಗಳು :

ಹಿಂದಿನ ಅಂಕಣದಲ್ಲಿ ಹೇಳಿದ ಹಾಗೆ ಮಹಿಳೆ ಹಾಗು ಪುರುಷರು ಧರಿಸುವ ಪ್ರತಿಯೊಂದು ಆಭರಣದ ಹಿಂದೆ ಒಂದೊಂದು ವೈಜ್ಞಾನಿಕ ಕಾರಣಗಳಿವೆ.

ಚಿನ್ನವು ಉಷ್ಣದಾಯಕವಲ್ಲ ಹಾಗೆಯೇ ಬೆಳ್ಳಿಯು ಉತ್ತಮ ಉಷ್ಣ ಪ್ರವಹಿಸುವ ವಸ್ತು ಆದ್ದರಿಂದಲೇ ಬೆಳ್ಳಿಯನ್ನು ಕಾಲಿಗೆ ಹಾಕುವುದು.

ಕನಿಷ್ಠ ಹತ್ತು % ನಷ್ಟಾದರೂ ನಕಾರಾತ್ಮಕ ಶಕ್ತಿ ನಮ್ಮ ದೇಹವನ್ನು ಸೇರದಂತೆ ತಡೆಯುತ್ತದೆ, ಆಭರಣಗಳನ್ನು ಆಗಾಗ ತೊಳೆಯುತ್ತ ಇರಬೇಕು ಏಕೆಂದರೆ ಆಭರಣಗಳು ರಜ ಹಾಗು ತಮ ಶಕ್ತಿಗಳಿಂದ ಧರಿಸಿದವರನ್ನು ರಕ್ಷಿಸುತ್ತದೆ.

ಮೊದಲು ಅಮ್ಟಳಕಾಯಿ , ನೊರೆಕಾಯಿ ,ತೊಗಟೆ ಕಾಯಿ ಎಂದು ಕರೆಯಲ್ಪಡುವ ಮಾರ್ಜಕದ ಕಾಯಿಯನ್ನು ಒಂದು ಬಟ್ಟಲಲ್ಲಿ ನೀರಿನ ಜೊತೆ ನೆನೆಸಿ ಇಡಬೇಕು ಒಂದು ದಿನದ ನಂತರ


ಆಭರಣಗಳನ್ನು ಈ ಮಿಶ್ರಣದಲ್ಲಿ ಚೆನ್ನಾಗಿ ಉಜ್ಜಿ ತೊಳೆಯಬೇಕು.

ನಂತರ ಸಂಪೂರ್ಣ ತತ್ವಗಳಿಂದ ಆಭರಣವನ್ನು ಶುದ್ದಿ ಗೊಳಿಸಬೇಕು.

ಮೊದಲು ತೇಜ ತತ್ವ –

ಆಭರಣಗಳಿಗೆ ವಿಭೂತಿಯನ್ನು ಹಚ್ಚಿಡಬೇಕು

ಎರಡನೆಯ ಕ್ರಮ ವಾಯು ತತ್ವ –

ವಿಭೂತಿಯನ್ನು ಬಾಯಲ್ಲಿ ಗಾಳಿ ಊದಿ ತೆಗೆಯಬೇಕು , ಸಾಮ್ರಾಣಿಯ ಹೊಗೆ ಅಥವಾ ಗಂಧದ ಕಡ್ಡಿ ಹಚ್ಚಿ ಆ ಹೊಗೆಯಿಂದ ತೆಗೆಯಬೇಕು.

ಮೂರನೇ ಕ್ರಮ ಆಕಾಶ ತತ್ವ –

ಒಂದು ಖಾಲಿ ಡಬ್ಬಿಯಲ್ಲಿ ಹಾಕಿ ಇಡಬೇಕು , ಖಾಲಿ ಡಬ್ಬಿಯಲ್ಲಿ ನಿರ್ಗುಣ ತತ್ತ್ವಗಳಿರುತ್ತದೆ, ಇನ್ನು ಯಾವುದಾದರೂ ಕೆಟ್ಟ ಶಕ್ತಿ ಇದ್ದರೆ ನಿರ್ಗುಣ ತತ್ವ ನಿರ್ನಾಮಗೊಳಿಸುತ್ತದೆ.

ಇನ್ನು ಹೆಚ್ಚಿನ ಆಭರಣಗಳ ದೋಷವೇನಾದರೂ ಇದ್ದರೆ ಅಂದರೆ ಮುರಿದ , ಆಕಾರ ಬದಲಾದ ಆಭರಗಳಿದ್ದರೆ ಅವುಗಳನ್ನು ಅಗ್ನಿ ತತ್ವದಲ್ಲಿ ಸರಿಪಡಿಸಲಾಗುವುದು.


ವೈಜ್ಞಾನಿಕ ಕಾರಣಗಳು :

ನಮಗೆ ತಿಳಿದಿರುವ ಹಾಗೆ ಈಗಲೂ ಒಡವೆ ಅಂಗಡಿಗಳಲ್ಲಿ ನೊರೆ ಕಾಯಿಯನ್ನು ಚಿನ್ನವನ್ನು ತೊಳೆಯಲು ಶುದ್ದಿ ಪಡಿಸಲು ಬಳಸುತ್ತಾರೆ .

ಹಾಗೆಯೇ ವಿಗ್ರಹಗಳನ್ನು ಒಡವೆಗಳನ್ನು ಕುಳಿ ಬೀಳದಂತೆ ಕಾಪಾಡಲು ಬೂದಿ ಅಥವಾ ವಿಭೂತಿಯನ್ನು ಈಗಲೂ ಬಳಸುತ್ತಾರೆ.

ಹಾಗೆಯೇ ಇನ್ನು ಕೆಲವೆಡೆ ಕೋಲ್ಗ್ ಟ್ ಪೌಡರ್ ಅನ್ನು ಒಡವೆಗಳ ಮೇಲೆ ಬೆರಳಚ್ಚು ಕೊಳೆ ಬೀಳದಂತೆ ತಡೆಯಲು ಬಳಸುತ್ತಾರೆ.

,

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top