fbpx
ಆರೋಗ್ಯ

ಹೆತ್ತವರೇ, ನಿಮ್ಮ ಮಕ್ಕಳನ್ನು ರಕ್ಷಿಸಿಕೊಳ್ಳಿ: ಬೆಂಗಳೂರಿನ 45 ಕಡೆ ಡ್ರಗ್ಸ್ ಚಾಕಲೇಟ್ ಮಾರಾಟ!

ಮಕ್ಕಳು ಪದೇಪದೆ ಚಾಕಲೇಟ್ ಕೇಳುತ್ತಿದ್ದಾರೆಯೇ? ಕೇಳಿದ ಕೂಡಲೇ ಕೊಡಿಸಲಿಲ್ಲ ಅಂದರೆ ರಂಪಾಟ ಮಾಡುತ್ತಿದ್ದಾರೆಯೇ? ಹಾಗಾದರೆ ಹೆತ್ತವರೇ ಈ ನೀವು ಎಚ್ಚರಗೊಳ್ಳಲೇಬೇಕು. ಮಕ್ಕಳೇ ಹಾಗೆ ರಂಪಟ ಮಾಡ್ತಾರೆ ಅಂತ ನೀವು ಸುಮ್ಮನಾಗಿಬಿಟಟ್ಟರೆ ಪಶ್ಚಾತಾಪ ಪಡಬೇಕಾಗುತ್ತದೆ.
ಏಕೆಂದರೆ, ನಿಮ್ಮ ಮಕ್ಕಳು ಡ್ರಗ್ಸ್ ದಾಸರಾಗಿರಲೂಬಹುದು. ಅದಕ್ಕೆ ನೀವೇ ಕಾರಣರಾಗಿರಬಹುದು! ವಿಷಾದದ ಸಂಗತಿ ಅಂದರೆ ಅದು ನಿಮಗೆ ಗೊತ್ತಾಗಿರುವುದೇ ಇಲ್ಲ.
ಹೌದು, ಬೆಂಗಳೂರಿನಲ್ಲಿ ೪೩ ಬಡಾವಣೆಗಳಲ್ಲಿ ಡ್ರಗ್ಸ್ ಮಿಶ್ರಣ ಇರುವ ಚಾಕಲೇಟ್‌ಗಳನ್ನು ಮಾರಾಟ ಮಾಡಲಾಗುತ್ತಿದೆ. ಈ ವಿಷಯ ಇದೀಗ ಬೆಳಕಿಗೆ ಬಂದಿದ್ದು, ಇಡೀ ಬೆಂಗಳೂರು ಬೆಚ್ಚಿಬಿದ್ದಿದೆ.
ಗೃಹ ಸಚಿವ ಜಿ. ಪರಮೇಶ್ವರ್ ಶುಕ್ರವಾರ ವಿಧಾನಸಭೆ ಅಧಿವೇಶನದ ವೇಳೆ ನೈಜಿರಿಯಾ ಪ್ರಜೆಗಳ ವಿರುದ್ಧ ತಾವೇಕೆ ಗಡಿಪಾರು ಮಾಡುವ ಕಟು ನಿರ್ಧಾರ ಕೈಗೊಂಡಿದ್ದೇವೆ ಎಂದು ವಿವರಿಸಿದಾಗ ಆತಂಕದ ಅಲೆ ಎಬ್ಬಿಸಿದೆ. ಬೆಂಗಳೂರಿನಲ್ಲಿ ನೈಜಿರಿಯಾ ಪ್ರಜೆಗಳು ಹೇಗೆ ಡ್ರಗ್ಸ್ ದಂಧೆಯನ್ನು ವ್ಯಾಪಿಸಿಕೊಂಡಿದ್ದಾರೆ ಎಂದು ವಿವರಿಸಿದ್ದಾರೆ.
ಮಾರಾಟ ಹೇಗೆ?
ಜಯನಗರ ಕಾನ್ವೆಂಟ್‌ನಲ್ಲಿ ಇಬ್ಬರು ನೈಜಿರಿಯಾ ಪ್ರಜೆಯ ಮಕ್ಕಳು ಶಾಲೆ ಬರುತ್ತಾರೆ. ಈ ಮಕ್ಕಳು ಸ್ನೇಹಿತಿಗೆ ಚಾಕಲೇಟ್ ನೀಡುತ್ತಾರೆ. ಚಾಕಲೇಟ್ ತುಂಬಾ ಚೆನ್ನಾಗಿದೆ ಎಂದು ಮಕ್ಕಳು ಮತ್ತೆ ಮತ್ತೆ ಕೇಳಿ ಪಡೆಯುತ್ತಾರೆ. ಇದನ್ನು ಕಂಡು ನೈಜಿರಿಯಾ ಪ್ರಜೆಗಳು ಶಾಲೆಯ ಸುತ್ತ ಚಾಕಲೇಟ್ ಮಾರಾಟ ದಂಧೆ ಆರಂಭಿಸಿದ್ದರು. ಇವರ ಬಳಿ ಇದ್ದ ಚಾಕಲೇಟ್ ಪರಿಶೀಲಿಸಿದಾಗ ಇವುಗಳಲ್ಲಿ ಗಾಂಜಾ ಇರುವುದು ಪತ್ತೆಯಾಗಿದೆ.
ಎಲ್ಲಿ ಮಾರಾಟ?
ಬೆಂಗಳೂರಿನಲ್ಲಿ ಮಾದಕ ವಸ್ತುಗಳ ಮಾರಾಟ ಪ್ರಕರಣಗಳು 45ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದೆ. ಬಾಗಲೂರು, ಎಚ್‌ಎಸ್‌ಆರ್ ಲೇಔಟ್, ಕೆ.ಆರ್ ಪುರ, ಜೆಜೆ ನಗರ, ಜಯನಗರ, ಕೆಜಿ ನಗರ, ಕಾಡುಗೋಡಿ, ಕೆಂಗೇರಿ, ಮಡಿವಾಳ, ಪುಲಿಕೇಶಿ ನಗರ, ತಿಲಕ್‌ನಗರ, ವರ್ತೂರು, ಯಲಹಂಕ, ಬಸವನಗುಡಿ, ಸೇರಿದಂತೆ ಹಲವೆಡೆ ಪ್ರಕರಣ ದಾಖಲಾಗಿದೆ.
ವ್ಯಾಪಾರಿಗಳು ಯಾರು?
ನೈಜಿರಿಯಾ ಮೂಲದ ಪ್ರಜೇಗಳು ಸಮಾಜ ಘಾತುಕ ಕೆಲಸ ಮಾಡುತ್ತಿರುವುದು ಬಯಲಿಗೆ ಬಂದಿದೆ. ಅಲ್ಲದೆ ಇವರು ಅವಧಿ ಮೀರಿ ನಮ್ಮ ದೇಶದಲ್ಲಿ ವಾಸವಾಗಿರುವುದು ಪತ್ತೆಯಾಗಿದೆ. ಅಲ್ಲದೆ ದೇಶವನ್ನು ಬಿಟ್ಟು ಹೋಗದ ಪರಿಸ್ಥಿತಿ ನಿರ್ಮಾಣವಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top