fbpx
ಉಪಯುಕ್ತ ಮಾಹಿತಿ

ನಿಮ್ ಹೆಂಡ್ತಿ ನೀವ್ ಚೆನ್ನಾಗಿರಬೇಕು ಅಂದ್ರೆ ಹಿಂಗೇ ಮಾಡಿ ಅಂತಾರೆ ಚಾಣಾಕ್ಯ

ನಿಮ್ ಹೆಂಡ್ತಿ ನೀವ್ ಚೆನ್ನಾಗಿರಬೇಕು ಅಂದ್ರೆ ಹಿಂಗೇ ಮಾಡಿ ಅಂತಾರೆ ಚಾಣಾಕ್ಯ

“ಅಂರಿತಮ್ ಸಾಹಸಂ ಮಾಯಾ ಮೂರ್ಖತ್ರಮತಿಲುಬ್ಧ ಅಶೋಚತ್ವಮ್ ನಿರ್ದಯತ್ವಮ್ ಸ್ತ್ರಿಣಮ್ ದೋಷ ಸ್ವಭಾವಜ.”

ಅಂದ್ರೆ ಸುಳ್ಳು ಹೇಳೋದು ಯಾವುದೇ ಚಿಂತನೆ ಇಲ್ಲದೆ ಕೆಲಸ ಮಾಡೋದು , ಮೋಸ, ಮೂರ್ಖ ಕೃತ್ಯಗಳು, ದುರಾಶೆ, ಕಲ್ಮಶಗಳನ್ನು ಮತ್ತು ಕ್ರೌರ್ಯ ಕೆಲವು ಮಹಿಳೆಯರ ಮೂಲಭೂತ ಗುಣಗಳಲ್ಲಿ ಒಂದು .

ಮದುವೇಲಿ ಇಬ್ರು ಜೀವನ ಪರ್ಯಂತ ಒಟ್ಟಿಗೆ ಇರ್ಬೇಕು ಆದ್ದರಿಂದ ಆಯ್ಕೆ ಸರಿಯಾಗಿ ಇರಬೇಕು ಅಂತ ಕೌಟಿಲ್ಯ ಅವ್ರ ಅರ್ಥ ಶಾಸ್ತ್ರದಲ್ಲಿ ಹೇಳ್ಕೊಂಡಿದಾರೆ.ಅವ್ರು ಹೇಳಿರೋ ನೀತಿಗಳಲ್ಲಿ ಕೆಲವು ತುಂಬ ಚೆನ್ನಾಗಿದೆ ಓದಿ

ಹುಡುಗಿ ಚೆನ್ನಾಗಿದ್ರೆ ಸಾಲದು ಅವಳ ಕುಟುಂಬ ಸಹ ಸರಿಯಾಗಿರಬೇಕು .ನಡತೆ ಸರಿ ಇಲ್ಲದ ಮನೆಯಿಂದ ಹುಡುಗಿ ತಗೊಂಡ್ ಬರ್ಬಾರ್ದು .

ತನ್ನ ಕುಟುಂಬದ ಹಣ ಕಾಸು , ಗೌರವಗಳು ಸರಿಹೊಂದೋ ಮನೆ ಇಂದಾನೆ ಹೆಣ್ಣು ತರ್ಬೇಕು .

ಹುಡುಗಿ ಚೆನ್ನಾಗಿಲ್ಲ ಅಂದ್ರು ಪರ್ವಾಗಿಲ್ಲ ಆದ್ರೆ ಮದುವೆ ಅನ್ನೋದು ಎರಡು ಕುಟುಂಬಗಳ ವಿಷ್ಯ ಹುಷಾರಾಗಿರಿ ಅಂದ ಚೆಂದ ಮುಖ್ಯ ಅಲ್ಲ .

ಪ್ರೀತಿ ಅನ್ನೋದು ಸಂಬಂಧದ ಅಡಿಪಾಯ ಅದರ ಕೊರತೆ ಉಂಟಾದರೆ ಜೀವನ ಹಾಳು , ಯಾರಾದ್ರೂ ಒಬ್ಬರಲ್ಲಿ ಪ್ರೀತಿ ಕಡಿಮೆ ಆದ್ರೆ ಇನ್ನೊಬ್ಬರು ತಿಳಿ ಹೇಳಿ ಸರಿ ಮಾಡ್ಕೊಳ್ಬೇಕು ಆದರೆ ಬೇರೆ ಸಂಗ ಸಹವಾಸ ಮಾಡಬಾರ್ದು .

ಹೆಂಡತಿಯ ಮುಖ್ಯ ಧರ್ಮ ಗಂಡನ ಇಷ್ಟಗಳನ್ನ ಪೂರೈಸೊದು ಗಂಡನು ಸಹ ಹೆಂಡತಿನ ಕೆಟ್ಟದಾಗಿ ನಡೆಸೋದು , ಕೆಟ್ಟದಾಗಿ ಮಾತಾಡೋ ಅಥವಾ ಸನ್ನಿವೇಶದ ದುರುಪಯೋಗ ಮಾಡುವ ಕೆಲಸಗಳನ್ನು ಮಾಡಬಾರದು .

ಒಳ್ಳೆಯ ಹೆಂಡ್ತಿ ತುಂಬ ಬುದ್ದಿವಂತೆ , ಪ್ರಾಮಾಣಿಕಳು ಆಗಿರ್ತಾಳೆ , ಕುಟುಂಬದ ಸೌಖ್ಯ ಹಾಗು ಆರೋಗ್ಯಕರ ಮನೆಯ ಕಾರಣ ಆಗಿರ್ತಾಳೆ.

ಹೆಂಡತಿಯನ್ನ ಬೈಯೋದು ಅಥವಾ ಹೊಡೆಯೋದು ನಿಷಿದ್ಧ .

ಬೇರೆ ಹೆಣ್ಣಿನ ವಿಷಯದ ಕುರಿತು ಹೆಂಡತಿ ಜೊತೆ ಜಗಳ ಆಡೋದು ಮಾತಾಡೋದು ಸಹ ಕೆಟ್ಟದ್ದು , ಪರ ಹೆಣ್ಣಿನ ಸಂಗ ಮಾಡಬಾರದು.

ಮನಸಿನಲ್ಲಿ ವಿಷ ತುಂಬಿ ಕೊಂಡಿರುವ ಮಹಿಳೆಯನ್ನು ಮದುವೆ ಮಾಡ್ಕೊಬಾರದು.

ಸುಳ್ಳು ಹೇಳುವ ಕೋಪಿಷ್ಠ , ನಂಬಿಕೆ ಉಳಿಸಿಕೊಳ್ಳದ ಹೆಣ್ಣಿನ ಸಹವಾಸ ಬೇಡ.

ಮನೆಯ ನೀತಿ ನಿಯಮಗಳು, ಕಾರ್ಯಗಳು ತಿಳಿಯದ ಹೆಣ್ಣಿನ ಸಹವಾಸ ಬೇಡ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top