fbpx
ಆರೋಗ್ಯ

ಕೀಲು ನೋವಿಗೆ(ಆರ್ಥ್ರೈಟಿಸ್ ) ಸುಲಭವಾದ ಮನೆ ಮದ್ದುಗಳು

ಕೀಲು ನೋವಿಗೆ ಸುಲಭವಾದ ಮನೆ ಮದ್ದುಗಳು :

ನಿಂಬೆ ಹಣ್ಣನ್ನ ನಾಲ್ಕೈದು ಹೋಳುಗಳಾಗಿ ಮಾಡಿ ಒಂದು ಬಟ್ಟೆಲ್ಲಿ ಸುತ್ತ್ಕೊಂಡು ಇಡಬೇಕು ಆಮೇಲೆ ಅದನ್ನ ಕಾದ ಎಳ್ಳೆಣ್ಣೆ ಯಲ್ಲಿ ಅದ್ದಿ ಬಟ್ಟೆನ ಕಾಲಿನ ಕೀಲಿನ ಜಾಗಕ್ಕೆ ಪಟ್ಟಿ ಕಟ್ಟಬೇಕು.

ನಿಂಬೆ ಹಣ್ಣಿನ ಚಿಪ್ಪೆಗಳನ್ನ ಆಲಿವ್ ಎಣ್ಣೆ ಜೊತೆ ಹಾಕಿ ಗಾಳಿ ಆಡದಂತೆ ಮುಚ್ಚಿ ಇಡಬೇಕು ಆಮೇಲೆ 10 ದಿನ ಆದ್ಮೇಲೆ ಹತ್ತಿ ಬಟ್ಟೆ ತಗೊಂಡು ಈ ಮಿಶ್ರಣನ ಹಾಕಿ ಕಾಲಿಗೆ ಪಟ್ಟಿ ಕಟ್ಟಿ ಒಂದು ದಿನ ಹಾಗೆ ಬಿಡ್ಬ್ಬೇಕು ಮತ್ತೆ ಇದನ್ನ ವಾರಕ್ಕೆ ಮೂರು ಸರಿ ಮಾಡಿದ್ರೆ ಕೀಲು ನೋವು ವಾಸಿ ಆಗುತ್ತೆ.
ನಿಂಬೆ ಹಣ್ಣಿನ ರಸನ ಒಂದು ಗ್ಲಾಸ್ ಕಾಯಿಸಿ ಆರಿಸಿದ ನೀರಿಗೆ ಹಾಕೊಂಡು ಕುಡಿದ್ರೆ ಒಳ್ಳೇದು.

ಹುಣಸೆ ಬೀಜವನ್ನ ಚೆನ್ನಾಗಿ ಬೇಯಿಸಿ ನಂತರ ನೀರಲ್ಲಿ ನೆನೆಸಿ ಆಮೇಲೆ ಒಣಗಿ ಹಾಕಿ ,ಒಣಗಿದ ಹುಣಸೆ ಬೀಜದ ಪುಡಿಯನ್ನು ಸ್ವಲ್ಪ ಸಕ್ಕರೆ ಬೆರೆಸಿ ತಿಂದರೆ ಒಳ್ಳೇದು.

ಒಮೆಗಾ-3 ಕೊಬ್ಬಿನ ತೈಲ, ಹೂಕೋಸು, . ಸಾಲ್ಮನ್ ಮೀನು, ವಿಟಮಿನ್ -ಬಿ ,ಮೀನು, ಸೋಯಾ, ಅಗಸೆ ಬೀಜ,ಸಿಗಡಿ, ಅವರೆ ಕೀಲು ನೋವಿಗೆ ತುಂಬ ಒಳ್ಳೇದು.

ಸೀತಾಫಲ ತಿಂದರೆ ಕೀಲು ಬಲಗೊಳ್ಳುತ್ತದೆ.
ಸೋಡಿಯಂ ಬಳಕೆ ಸ್ವಲ್ಪ ಕಮ್ಮಿ ಮಾಡಿ .
ಉದ್ದಿನ ಬೇಳೆ ಸಾರು ಪಲ್ಯ ತುಂಬಾನೇ ಒಳ್ಳೇದು

ಗೋದಿ ಚಪಾತಿ ಅಥವಾ ಇನ್ನಿತರ ತಿನಿಸುಗಳನ್ನು ತಿನ್ನುವುದು ಉತ್ತಮ.

ಉಪ್ಪನ್ನು ಉರಿದು ಶಾಖ ಕೊಡಬೇಕು ಅಥವಾ ಅಕ್ಕಿಯನ್ನು ಉರಿದು ಶಾಖ ಕೊಡಬೇಕು.

ಮಂಡಿ ನೋವಿಗೆ ಮಂಜುಗಡ್ಡೆಯನ್ನು ಬಟ್ಟೆಯಲ್ಲಿ ಸುತ್ತಿ ವರ್ತುಲವಾಗಿ ಮಸಾಜ್ ಮಾಡಿಕೊಳ್ಳಬೇಕು 15 ನಿಮಿಷ ಹೀಗೆ ಮಾಡಿದರೆ ನೋವು ಕಡಿಮೆಯಾಗುತ್ತದೆ.

ಮಾಂಸ ಹಾರಿಗಳಾಗಿದ್ದರೆ ಕುರಿ ಅಥವಾ ಮೇಕೆಯ ಕಾಲ್ ಸೂಪ್ ಕುಡಿದರೆ ಉತ್ತಮ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top