ಮಜಾ ಟಾಕೀಸ್’ ಕಾರ್ಯಕ್ರಮದ ಮಾರ್ಚ್ 19 ಸಂಚಿಕೆಯಲ್ಲಿ ತುಳುನಾಡಿನ ‘ಭೂತಾರಾಧನೆ’ ಬಗ್ಗೆ ಸೃಜನ್ ಲೋಕೇಶ್ ಅಪಹಾಸ್ಯ ಮಾಡಿದ್ದು ಇಂದು ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ವಿವಾದಕ್ಕೆ ನಾಂದಿ ಹಾಡಿದೆ.
ಮಜಾ ಟಾಕೀಸ್’ ಕಾರ್ಯಕ್ರಮದಲ್ಲಿ ನಿನ್ನೆ ‘ಶುದ್ಧಿ’ ತಂಡ ವಿಶೇಷ ಅತಿಥಿಗಳಾಗಿ ಭಾಗವಹಿಸಿದ್ದರು. ‘ಶುದ್ಧಿ’ ತಂಡ ನಿರ್ದೇಶಕ ಆದರ್ಶ ರವರಿಗೆ ‘ಮಜಾ ಟಾಕೀಸ್’ ಸೆಟ್ ನಲ್ಲಿ ಕುಳಿತಿದ್ದ ಆಡಿಯನ್ಸ್ ಒಬ್ಬರು ಪ್ರಶ್ನೆಯೊಂದನ್ನು ಕೇಳಿದರು.
”ಸರ್ಕಾರಿ ಕೆಲಸ ದೇವರ ಕೆಲಸ ಅಂತಾರಲ್ಲ… ಕಾಲ್ ಸೆಂಟರ್ ಕೆಲಸ, ಐಟಿ-ಬಿಟಿ ಕೆಲಸಕ್ಕೆ ಏನಂತಾರೆ.?” ಅಂತ ಪ್ರಶ್ನೆ ಕೇಳಿದ್ದಕ್ಕೆ ನಿರ್ದೇಶಕ ಆದರ್ಶ, ”ಹೊಟ್ಟೆಪಾಡಿಗೆ ಮಾಡುವ ಕೆಲಸ” ಅಂತ ಉತ್ತರ ಕೊಟ್ಟರು. ಜೊತೆಗೆ ನಟಿ ನಿವೇದಿತಾ ಕೂಡ ”ಕಾಯಕವೇ ಕೈಲಾಸ” ಎಂದರು.
ಪ್ರಶ್ನೋತ್ತರ ಅಷ್ಟಕ್ಕೆ ಮುಗಿದಿದ್ದರೆ ವಿವಾದ ಆಗುತ್ತಿರಲಿಲ್ಲ. ಇದೇ ಪ್ರಶ್ನೆಗೆ ‘ಒನ್ ಲೈನ್ ಪಂಚ್’ ಕೊಡಲು ಹೋದ ಸೃಜನ್, ”ಅದು ದೇವರ ಕೆಲಸವೇ. ಒಂದು ಚೂರು ವ್ಯತ್ಯಾಸ ಏನು ಅಂದ್ರೆ, ದಕ್ಷಿಣ ಕನ್ನಡದಲ್ಲಿ ಭೂತ ಕುಣಿತ ಮಾಡ್ತಾರೆ ಗೊತ್ತಾ.?” ಅಂತ ಹೇಳಲಾರಂಭಿಸಿದರು.
ವಿಡಿಯೋ ನೋಡಿ :
ಸೃಜನ್ ಲೋಕೇಶ್ – ”ಹಾ.. ಕರೆಕ್ಟ್….ಸರ್ಕಾರಿ ಕೆಲಸ ದೇವರ ಕೆಲಸ. ಈ ಕಾಲ್ ಸೆಂಟರ್ ಕೆಲಸ ಭೂತಾರಾಧನೆ ಕೆಲಸ. ಯಾಕೆ ಅಂತ ಕೇಳಮ್ಮ…”
ಯುವತಿ – ”ಯಾಕೆ”
ಸೃಜನ್ ಲೋಕೇಶ್ – ”ಯಾಕೆ ಅಂದ್ರೆ, ಕಾಲ್ ಸೆಂಟರ್ ಕೆಲಸ ಮಾಡೋದು ರಾತ್ರಿ ಹೊತ್ತು. ಭೂತಾರಾಧನೆ ಕೂಡ ಮಾಡುವುದು ರಾತ್ರಿ ಹೊತ್ತು. ಅದಕ್ಕೆ ನೈಟ್ ಶಿಫ್ಟ್ ಒನ್ಲಿ”
ತುಳುನಾಡಿನ ನಂಬಿಕೆಯ ಭೂತಾರಾಧನೆ ಬಗ್ಗೆ ಸೃಜನ್ ಲೋಕೇಶ್ ಮಾಡಿದ ಅಪಹಾಸ್ಯ ಈಗ ಕರಾವಳಿಗರ ಆಕ್ರೋಶಕ್ಕೆ ಕಾರಣವಾಗಿದೆ. ಭೂತಾರಾಧನೆ ಬಗ್ಗೆ ಸೃಜನ್ ಕೊಟ್ಟಿರುವ ಹೇಳಿಕೆಯಿಂದ ತುಳುನಾಡಿಗರ ಧಾರ್ಮಿಕ ಭಾವನೆಗೆ ಧಕ್ಕೆ ಉಂಟಾಗಿದೆ. ಹೀಗಾಗಿ ಸೃಜನ್ ಲೋಕೇಶ್ ಬಹಿರಂಗವಾಗಿ ಕ್ಷಮೆ ಕೇಳಲೇಬೇಕು ಅಂತ ವೀಕ್ಷಕರು ಸಾಮಾಜಿಕ ಜಾಲತಾಣಗಳಲ್ಲಿ ಒತ್ತಾಯಿಸಿದ್ದಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Nage nagesalu beedi maja takies super
Ayooooooooooooo Evarige Medokke Bere Kelsa Ilvalaaa Eno matinalli andre adu avamana madidane antanaaa prati visheyaaaa e tara think madidre ellaaa visheyagallu samasyage dari yagutte