fbpx
ಜೀವನ ಕ್ರಮ

ನಿಮ್ಮ್ ಫ್ರೆಂಡ್ಸ್ , ಮುಖವಾಡ ಹಾಕೊಂಡಿರೋ ಫ್ರೆಂಡ್ಸ್ ಯಾರಂತ ಕಂಡಿಡಿಬಹುದು ಅಂತಾರೆ ಚಾಣಕ್ಯ !

ನಿಮ್ಮ್ ಫ್ರೆಂಡ್ಸ್ , ಮುಖವಾಡ ಹಾಕೊಂಡಿರೋ ಫ್ರೆಂಡ್ಸ್ ಯಾರು ಅಂತ ಕಂಡಿಡಿಬಹುದು ಅಂತಾರೆ ಚಾಣಕ್ಯ !

ಪ್ರಾಚೀನ ಭಾರತೀಯ ತತ್ವಜ್ಞಾನಿ, ಶಿಕ್ಷಕ ಮತ್ತು ಅರ್ಥಶಾಸ್ತ್ರಜ್ಞ ಚಾಣಕ್ಯ ತಮ್ಮ ಅನುಭವಗಳನ್ನು ಜೀವನದ ಸಾರಗಳನ್ನು ತಮ್ಮ ಪುಸ್ತಕದಲ್ಲಿ ಹಂಚಿಕೊಂಡಿದ್ದಾರೆ.
ಅವರು ತಮ್ಮ ರಾಜಕೀಯ ಗ್ರಂಥ ಅರ್ಥಶಾಸ್ತ್ರದಲ್ಲಿ ಯಾವುದೇ ವ್ಯಕ್ತಿಯ ನಿಜವಾದ ಮುಖವನ್ನು ನಿರ್ಧರಿಸಲು ಕೆಲವು ಸಲಹೆಗಳನ್ನು ಉಲ್ಲೇಖಿಸುತ್ತಾರೆ.

ಒಬ್ಬ ವ್ಯಕ್ತಿಗೆ ಎರಡು ಮುಖಗಳಿದ್ದು ಸಮಾಜದ ಮುಂದೆ ಒಂದು ಪ್ರತ್ಯೇಕ ರೀತಿ ಹಾಗು ತನ್ನ ಒಳಗೆ ಮತ್ತೊಬ್ಬನಾಗಿ ಇರುತ್ತಾನೆ ,ಬುದ್ದಿ ಶಕ್ತಿಯಿಂದ ಮಾತ್ರ ನಿಜವಾದ ಮುಖವನ್ನು ಹೊರಗೆ ತೆಗೆಯಲು ಸಾಧ್ಯ
ಕೆಲವು ಸಮಯುಗಳಲ್ಲಿ ಮಾತ್ರ ವ್ಯಕ್ತಿಯ ನಿಜ ಬಣ್ಣ ಬಯಲಾಗುವುದು ಆ ಸಮಯಕ್ಕಾಗಿ ಕಾಯಬೇಕು .

ನಿಮ್ಮ ಸ್ನೇಹಿತನೇ ತ್ಯಾಗದ ಗುಣಗಳನ್ನು ಹೊಂದಿದ್ದನೋ ಇಲ್ಲವೋ ಎಂಬುದನ್ನು ಪರೀಕ್ಷಿಸಿ ಒಂದು ವೇಳೆ ಆತನು ಮಾನವೀಯತೆಯಿಂದ ಕೂಡಿಲ್ಲದೆ ತನ್ನ ಅಹಂ ನಲ್ಲಿ ಜೀವಿಸುತ್ತಿದ್ದಾರೆ ಅಂತವನು ನಂಬಿಕೆಗೆ ಅರ್ಹನಲ್ಲ ನಿಮಗೂ ಕೈ ಕೊಟ್ಟು ಹೋಗುವ ಗುಣವನ್ನು ಹೊಂದಿರುತ್ತಾರೆ.
ತನ್ನ ಮನೆಯವರನ್ನು ಇತರ ಸ್ನೇಹಿತರನ್ನು ಪ್ರೀತಿಸುವ ಅವರಿಗಾಗಿ ಸಣ್ಣ ಪುಟ್ಟ ತ್ಯಾಗ ಮಾಡಬಲ್ಲವ ನಿಜವಾದ ಸ್ನೇಹಿತ.

ಆತುರದಲ್ಲಿ ಯಾರನ್ನು ಹೇಗೆ ಎಂಬ ನಿರ್ಧಾರ ಮಾಡುವುದು ಬೇಡ ನಿಜವಾದ ಮುಖವಾಡಗಳು ಆದಷ್ಟು ಬೇಗ ಕಳಚಿಬೀಳುತ್ತದೆ , ಮೊದಲನೇ ಮಾತು ಕಥೆಯಲ್ಲಿಯೇ ವ್ಯಕ್ತಿಯ ಮನಸ್ಸು ತಿಳಿಯುವುದಿಲ್ಲ.

ಕೆಟ್ಟ ವಿಚಾರಗಳನ್ನು , ಒಳ್ಳೆಯ ವಿಚಾರಗಳನ್ನು ಹೇಗೆ ಅವರ ದೃಷ್ಟಿಕೋನದಿಂದ ಅಳೆಯುತ್ತಾರೆ ಎಂಬುದರ ಮೇಲೆ ವ್ಯಕ್ತಿಯ ನಿಜ ಗುಣ ಅಡಗಿರುತ್ತದೆ.

ಅವರ ಸಹವಾಸ ಎಂತದ್ದು , ಅವರು ಯಾರನ್ನು ಭೇಟಿ ಮಾಡುತ್ತಿದ್ದಾರೆ , ಹೇಗೆ ನಡೆದುಕೊಳ್ಳುತ್ತಿದ್ದಾರೆ ಹಾಗು ಅವರು ಸಹವಾಸ ಮಾಡುವ ವ್ಯಕ್ತಿಯ ಹಿನ್ನಲೆ ಏನು ಎಂಬುದು ಸಹ ವ್ಯಕ್ತಿಯ ನಿಜ ಗುಣ ತಿಳಿಸುತ್ತದೆ .
ವ್ಯಕ್ತಿಯ ಸ್ನೇಹಿತರ ಗುಂಪಿನಲ್ಲಿ ಯಾವ ರೀತಿಯ ಮಾತುಕತೆಗಳು ನಡೆಯುತ್ತದೆ ಹಾಗು ವ್ಯಕ್ತಿಯು ಇಲ್ಲದಿರುವಾಗ ಹೇಗೆ ಮಾತಾಡುತ್ತಾರೆ ಎಂಬುದನ್ನು ಗಮನಿಸಬೇಕು ಏಕೆಂದರೆ ಒಳ್ಳೆಯ ವ್ಯಕ್ತಿಯಾಗಿದ್ದಾರೆ ಹಿಂದೆ ಮುಂದೆ ಎರಡು ಕಡೆ ಒಂದೇತರಹದ ಮಾತುಗಳು ಕೇಳಿಸುತ್ತದೆ.

ಇತರರ ಮುಂದೆ ಜಂಬ ಕೊಚ್ಚಿಕೊಳ್ಳುವ , ಅನಾವಶ್ಯಕವಾಗಿ ಸುಳ್ಳು ಹೇಳುವ , ತಾನೇ ಮೇಧಾವಿ ಎಂದುಕೊಳ್ಳುವ ವ್ಯಕ್ತಿಯನ್ನು ನಂಬಬಾರದು ಸದಾ ದುಡ್ಡು ಎನ್ನುವ ವ್ಯಕ್ತಿಯನ್ನು ನಂಬಬಾರದು .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top