fbpx
ಕಥೆ

ಇದು ನಮ್ಮ ಚಿಕ್ಕಮಗಳೂರು ಇಡೀ ಭಾರತಕ್ಕೆ ಕಾಫಿ ಘಮಲು ಹರಡಿಸಿದ ಕಥೆ !

ಇದು ನಮ್ಮ ಚಿಕ್ಕಮಗಳೂರು ಇಡೀ ಭಾರತಕ್ಕೆ ಕಾಫಿ ಘಮಲು ಹರಡಿಸಿದ ಕಥೆ !

ಸೊಮಾಲಿಯಾದ ಮೇಕೆಗಾಹಿಗಳು ಯಾವುದೋ ಗಿಡದ ಎಲೆಗಳನ್ನು, ಹಣ್ಣುಗಳನ್ನು ಆಡು ,ಕುರಿ ತಿಂದು ಆಡು ,ಕುರಿ ದಷ್ಟ ಪುಷ್ಟವಾಗಿ ,ಚುರುಕಾಗಿ ಬೆಳೆಯುತ್ತಿದ್ದದ್ದನ್ನು ಕಂಡುಕೊಂಡಿದ್ದರು ಅದುವೇ ಕಾಫಿ ಗಿಡವಾಗಿತ್ತು.
ಕಾಫಿಯ ಇತಿಹಾಸ 800 ಇಸವಿಯಿಂದ ಇದ್ದರು ಸಹ ಕೇವಲ ಅರಬ್ ಸಂಯುಕ್ತ ರಾಷ್ಟ್ರಗಳಲ್ಲಿ ಮಾತ್ರ ಉಪಯೋಗಿಸಲಾಗುತ್ತಿತ್ತು.

ಕಾಫಿ ಭಾರತಕ್ಕೆ ಬಂದ ರೋಚಕ ಕಥೆ :

1670 ನೇ ಇಸವಿಯಲ್ಲಿ ಮೊಟ್ಟ ಮೊದಲ ಬಾರಿಗೆ ಸಂತ ಬಾಬಾ ಬುಡನ್ ರವರು ಯೆಮನ್ ನಿಂದ ಭಾರತಕ್ಕೆ ಬರುವಾಗ ತಂದಿದ್ದರು.

 

ಪವಿತ್ರ ಮೆಕ್ಕಾದ ಹಜ್ ಯಾತ್ರೆಯಲ್ಲಿದ್ದ ಸಂತರು ಭಾರತಕ್ಕೆ ಮರಳಿ ಬರಬೇಕೆಂದರೆ ಯೆಮನ್ ಮೂಲಕ ಭಾರತಕ್ಕೆ ಬರಬೇಕಿತ್ತು ,
ಮಾರ್ಗ ಮದ್ಯದಲ್ಲಿ ಅರಬ್ಬರು ಒಂದು ವಿಚಿತ್ರ ರೀತಿಯ ಪಾನೀಯವನ್ನು ಕುಡಿಯುವುದನ್ನು ಕಂಡ ಸಂತರಿಗೆ ಆಶ್ಚರ್ಯಯಾಯಿತು .

ಇದರ ಬಗ್ಗೆ ಮತ್ತಷ್ಟು ತಿಳಿಯುವ ಕುತೂಹಲದೊಂದಿಗೆ ಇದರ ಬಗ್ಗೆ ಮತ್ತಷ್ಟು ಮಾಹಿತಿ ಕಲೆ ಹಾಕಿದಾಗ ತಿಳಿದು ಬರುವ ವಿಷಯವೇನೆಂದರೆ ಈ ಪಾನೀಯವನ್ನು ಯಾವುದೋ ಒಂದು ಬೀಜದಿಂದ ಮಾಡಲಾಗುತ್ತದೆ, ಬೀಜಗಳು ನೆರಳಿನಲ್ಲಿ ,ಗುಡ್ಡಗಾಡಿನಲ್ಲಿ ಬೆಳೆಯುತ್ತದೆ ಎಂಬುದು.

ಕುತೂಹಲ ಮತ್ತಷ್ಟು ಹೆಚ್ಚಿ ಬೀಜಗಳನ್ನ ಬಿಸಿ ಬಾಣಲೆಯಲ್ಲಿ ಉರಿದು ,ಒಣಗಿಸಿ ಪುಡಿ ಮಾಡುತ್ತಿದ್ದದ್ದನ್ನು ಕಂಡು ಬೆರಗಾಗಿ ಇದನ್ನು ಸೇವಿಸಲೇ ಬೇಕೆಂದು ಅಂದುಕೊಂಡು ರುಚಿ ನೋಡಿದ ಕೂಡಲೇ ಪರಮಾನಂದ.ಅದು ಕಾಫಿ ಬೀಜವಾಗಿತ್ತು.

ಆದರೆ ಕಾಫಿ ಬೀಜಗಳನ್ನು ಅರಬ್ ದೇಶದಿಂದ ಹೊರಗಡೆ ತೆಗೆದುಕೊಂಡು ಹೋಗುವುದನ್ನು ಸಂಪೂರ್ಣ ನಿಷೇಧಿಸಲಾಗಿತ್ತು ಆದರೆ ಉರಿದ ಬೀಜಗಳನ್ನು ತೆಗೆದು ಕೊಂಡು ಹೋಗಲು ಅವಕಾಶವಿತ್ತು. ಬಾಬಾ ಬುಡನ್ ರವರು 7 ಬೀಜಗಳನ್ನು ಯಾರಿಗೂ ಕಾಣದಂತೆ ಕದ್ದು ತಮ್ಮ ಸೊಂಟದ ಪಟ್ಟಿಗೆ ಕಟ್ಟಕೊಂಡರು , ಇಸ್ಲಾಂ ಧರ್ಮದಲ್ಲಿ ಸಂಖ್ಯೆ 7 ಕ್ಕೆ ಪವಿತ್ರ ಸ್ಥಾನವಿದೆ.

ನಂತರ ಮೋಕಾ ಬಂದರಿನ ಮೂಲಕ ಯೆಮನ್ ನಿಂದ ಹೊರಟು ಬಂದರು

 

ಬಂದವರೇ ಮೈಸೂರು ರಾಜ್ಯದ ಚಿಕ್ಕ ಮಗಳೂರು ಜಿಲ್ಲೆಯ ಚಂದ್ರಗಿರಿ ಬೆಟ್ಟದ ಮೇಲೆ ಕಾಫಿ ಗಿಡಗಳನ್ನು ನೆಟ್ಟರು ಕೆಲ ವರ್ಷಗಳ ನಂತರ ಈ ಬೆಟ್ಟಕ್ಕೆ ಬಾಬಾ ಬುಡನ್ ಗಿರಿ ಎಂಬ ಹೆಸರು ಬಂದಿತು.

 

ಕೆಲವೇ ಗಿಡಗಳಿಂದ ಆರಂಭವಾದ ಕಾಫಿ ಕೃಷಿ ಮುಂದೆ ದೊಡ್ಡ ದೊಡ್ಡ ಎಸ್ಟೇಟ್ಗಳಾದವು , ಸರ್ಕಾರವು ಕಾಫಿ ಬೋರ್ಡ್ಅನ್ನು ಸಹ ಸ್ಥಾಪಿಸಿತು.
ಮೊದಲು ಕರ್ನಾಟಕದ ಗುಡ್ಡಗಾಡು ಪ್ರದೇಶಗಳಲ್ಲಿ ಬೆಳೆಯುತ್ತಿದ್ದ ಕಾಫಿ ಕಾಲಕ್ರಮೇಣ ಕೇರಳದ ವಾಯ್ನಾಡ್, ತಮಿಳು ನಾಡಿನ ನೀಲಗಿರಿ ಪ್ರದೇಶಗಳಿಗೂ ಹರಡುತ್ತದೆ.

ಇಂದು ಕರ್ನಾಟಕ ರಾಜ್ಯ ಭಾರತದ ಕಾಫಿ ಉತ್ಪಾದನೆಯಲ್ಲಿ ಮೊದಲನೇ ಸ್ಥಾನದಲ್ಲಿದ್ದು , 2 ಕಾಫಿ GI ಟ್ಯಾಗ್ ಗಳನ್ನು ಹೊಂದಿದೆ , ಕಾಫಿ ಉತ್ಪಾದನೆಯ ಸಿಂಹ ಪಾಲು ಚಿಕ್ಕಮಗಳೂರು ಜಿಲ್ಲೆಯದ್ದು .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top