fbpx
ಉಪಯುಕ್ತ ಮಾಹಿತಿ

ಹೆಣ್ಮಕ್ಳಲ್ಲಿ ಇರೋ ವಿಧ ವಿಧ ಗುಣಗಳು ಗಂಡ್ಮಕ್ಳಿಗೆ ಗೊತ್ತಿರ್ಲೆಬೇಕು!

ನಾವು ಒಬ್ಬ ಹೆಣ್ಣನ್ನು ನೋಡಿದಾಗ ಆಕೆಯ ಗುಣ ನಡತೆಯ ಮೇಲೆ ,ಆಕೆಯ ಸ್ವಭಾವದ ಮೇಲೆ ಆಕೆಯನ್ನು ವಿವಿಧ ಗುಂಪುಗಳಿಗೆ ಸೇರಿಸುತ್ತೇವೆ ಅಲ್ಲವೇ ಇದು ಸರ್ವೇ ಸಾಮಾನ್ಯ.

ಪುರಾತನ ಸಾಮುದ್ರಿಕ ಶಾಸ್ತ್ರದಲ್ಲೂ ಸಹ ಹೆಣ್ಣನ್ನು ಆಕೆಯ ನಡವಳಿಕೆಯ ಆಧಾರದ ಮೇಲೆ , ಆಕೆ ಪೂರ್ವ ಜನ್ಮ ,ಸಿದ್ದ ಗುಣಗಳ ಆಧಾರದ ಮೇಲೆ, ತಾನು ಹಿರಿಯರಿಂದ ಪಡೆದ ಗುಣಗಳ ಆಧಾರದ ಮೇಲೆ ಹೆಣ್ಣನ್ನು ಕೆಲವು ಗುಂಪುಗಳಾಗಿ ವರ್ಗಿಕರಿಸಲಾಗುತ್ತದೆ.
ನಿಮಗೆ ತಿಳಿದಿರಲಿ ಸಾಮುದ್ರಿಕ ಶಾಸ್ತ್ರವೆಂದರೆ ಹೆಣ್ಣಿನ ಬಾಹ್ಯ ದೇಹ ,ಗುಣ ವಿಶೇಷಗಳನ್ನು ಆಧಾರಿಸಿ ವಿವಿಧ ಗುಣ “ಸತ್ವ”ಗಳಾಗಿ ಗುಂಪುಗಳನ್ನು ಮಾಡಲಾಗುತ್ತದೆ.

ದೇವಸತ್ತ್ವಸ್ತ್ರಿ :

ಧಾರ್ಮಿಕ ಭಾವನೆಗಳನ್ನು ಹೊಂದಿರುವ ವ್ಯಕ್ತಿಯಾಗಿದ್ದು ಉತ್ಸಾಹಭರಿತ ವ್ಯಕ್ತಿತ್ವ ಪ್ರದರ್ಶಿಸುತ್ತಾರೆ , ಆಕರ್ಷಕವಾದ ವ್ಯಕ್ತಿತ್ವವನ್ನು ಹೊಂದಿರುತ್ತಾರೆ, ಕುಶಲಗಾರ್ತಿ, ಒಳ್ಳೆಯ ಮಾತಾಡುವ , ಸಜ್ಜನಿಕೆ ಸ್ವಭಾವದ, ಅನುಕಂಪ ಹೊಂದಿರುವ , ಯಾವಾಗಲೂ ಸಮಾಜಕ್ಕೆ ಉದಾರ ಕೆಲಸ ಮಾಡುವ ಗುಣಗಳನ್ನು ಹೊಂದಿರುತ್ತಾರೆ , ಇವ್ರು ಹೋದ ಕಡೆಯೆಲ್ಲ ಒಳ್ಳೆಯ ಭಾವನೆ ಮೂಡಿಸುತ್ತಾರೆ.

ಗಂಧರ್ವಸತ್ತ್ವಸ್ತ್ರಿ :

ಬಹಳ ಪ್ರೀತಿಯಿಂದ ಕೂಡಿರುತ್ತಾರೆ ,ಭಾವನಾಜೀವಿ , ಸುಮಧುರ ಧ್ವನಿ , ಬುದ್ಧಿವಂತ ಮನಸ್ಸು, ಶುದ್ಧ ಆಲೋಚನೆಗಳು, ಸೃಜನಶೀಲ ವ್ಯಕ್ತಿ , ಪರಿಪೂರ್ಣ ದೇಹ ಸಂಯೋಜನೆ ಕಲೆ, ಗಾಯನ ಮತ್ತು ನೃತ್ಯ ಕಡೆಗೆ ಒಲವನ್ನು ಹೊಂದಿರುತ್ತಾರೆ.


ಯಕ್ಷಸತ್ತ್ವಸ್ತ್ರಿ :

ಅತ್ಯಂತ ಸುಂದರವಾದ ದೇಹ ಕಾಯ ,ಎಲ್ಲವನ್ನು ತನ್ನ ನಿಯಂತ್ರಣದಲ್ಲಿ ಇಟ್ಟುಕೊಂಡಿರುವ ವ್ಯಕ್ತಿ , ಮನೆಯ ಸಂಪತ್ತನ್ನು ತಾನೇ ನಿಭಾಯಿಸುವ ,
ಮಾಂಸ ಮತ್ತು ಮದ್ಯಗಳಲ್ಲಿ ಆಸಕ್ತಿಯುಳ್ಳ , ಏನೇ ಬಂದರು ಎದರಿಸುವ ಬಲವುಳ್ಳವರು ,ಬಲವಾದ ನಡೆನುಡಿ , ಸಮಾಜದ ಯಾವುದೇ ಮಾತಿಗೆ ತಲೆಕೆಡಿಸಿಕೊಳ್ಳದ ವ್ಯಕ್ತಿ.

ಮುನುಷ್ಯಸತ್ತ್ವಸ್ತ್ರಿ:

ಸ್ನೇಹ ಮತ್ತು ಆತಿಥ್ಯ ಒಲವನ್ನು ಹೊಂದಿರುವ , ಆಭರಣ ಪ್ರಿಯೆ , ಕಷ್ಟಪಟ್ಟು ಕೆಲಸಮಾಡುವ , ಗೌರವನಂಬಿಕೆಉಳ್ಳವಳು , ಗೋಧಿ ಮುಖಛಾಯೆಯ ಮತ್ತು ಚೂಪಾದ ಕಣ್ಣುಗಳನ್ನು ಹೊಂದಿರುತ್ತಾರೆ, ಮಾತನಾಡಲು ಹೆದರುವ ಸ್ವಭಾವ.

ಪಿಸಾಚಸತ್ತ್ವಸ್ತ್ರಿ :

ಬೇಡದ್ದನ್ನು ಮಾಡುವ , ಅತಿಯಾದ ದುರಾಸೆ , ಅತಿಯಾದ ದುಡ್ಡು ಸಂಪತ್ತಿನ ಹುಚ್ಚು , ಮನೆಯ ಪರಿಸರವನ್ನು ಸ್ವಚ್ಛವಾಗಿ ,ಸುಂದರವಾಗಿ ಇಡುವ ವ್ಯಕ್ತಿತ್ವ ಇವರದ್ದು.

ನಾಗಸತ್ತ್ವಸ್ತ್ರಿ :

ಸಪೂರ,ನಯವಾದ ದೇಹ , ಸದಾ ನಿದ್ದೆ ಮಾಡಬೇಕೆಂಬ ಹಂಬಲ ಹೊಂದಿರುವ , ದಣಿದ ದೇಹ , ಯಾವಾಗಲೂ ಮನಸಿನಲ್ಲೇ ಮಂಡಿಗೆ ಹಾಕುವ , ಅನುಮಾನಾಸ್ಪದ ವ್ಯಕ್ತಿತ್ವ , ಯಾವುದೇ ಸಹಾಯವನ್ನು ಇವರಿಂದ ಬಯಸಬಾರದು ಹಾಗು ಮಾಡಿದ ಸಹಾಯವನ್ನು ನೆನೆಯುವ ಗುಣ ಇವರಲ್ಲಿ ಇರುವುದಿಲ್ಲ .

ಕಾಕಸತ್ತ್ವಸ್ತ್ರಿ :

ತುಂಬ ಒಳ್ಳೆಯವರಂತೆ ನಟನೆ ಮಾಡುತ್ತಾ ಇರುತ್ತಾರೆ ಆದರೆ ಯಾವುದೇ ಸಹಾಯ ಮಾಡುವ ಗುಣಗಳನ್ನು ಹೊಂದಿರುವುದಿಲ್ಲ ,ಬೇರೆಯವರಿಂದ ಸಹಾಯವನ್ನು ಬಯಸುತ್ತ ಇರುತ್ತಾರೆ , ಸಂಪತ್ತಿಗಾಗಿ ಲಾಲಸೆ ಹೊಂದಿರುತ್ತಾರೆ , ಸುಮಾರಾದ ದೇಹಾಕಾಯ ಹೊಂದಿದ್ದು , ತಮ್ಮನ್ನು ಸುಂದರವವಾಗಿ ಇಟ್ಟುಕೊಂಡಿರುವುದಿಲ್ಲ.

ವಾನರಸತ್ತ್ವಸ್ತ್ರಿ :

ಹೆಸರಿಗೆ ತಕ್ಕಂತೆ ಅಧಿಕವಾದ ಮಾತು , ಕೂದಲು ಎಳೆದುಕೊಳ್ಳುವ , ಕಣ್ಣು ಮುಖ ಉಜ್ಜಿಕೊಳ್ಳುವ , ಭಾವುಕ , ಅತ್ಯಂತ ವೇಗವಾಗಿ ಮಾತಾಡುವ , ಎಲ್ಲರನ್ನು ನಗಿಸುವ , ಸದಾ ಹಸನ್ಮುಖಿಯಾಗಿರುವ , ಸಕ್ರಿಯಾ, ಬಹಳ ಚುರುಕು ವೇಗ ಬೇರೆಯವರು ಏನು ಎಂದು ಕೊಳ್ಳುತ್ತಾರೆ ಅದರ ಚಿಂತೆ ಮಾಡದ ವ್ಯಕ್ತಿ ಇವರು.

ಖಾರಸತ್ತ್ವಸ್ತ್ರಿ :

ಇಂತಹ ಮಹಿಳೆಯರಿಗೆ ಮಾನವೀಯ ಮೌಲ್ಯಗಳ ಅರಿವು ಇರುವುದಿಲ್ಲ , ಸಮಾಜದ ಬಗ್ಗೆ ಆತಂಕ ಪಡುವುದಿಲ್ಲ , ಅಶುದ್ಧ , ಸ್ನಾನ ಮಾಡದೆ ಇರುವುದು , ಅಶುಚಿಯಾದ ಬಟ್ಟೆಗಳನ್ನು ಪುನರಾವರ್ತಿಸುವ, ಜೋರಾದ ಮಾತುಕತೆ , ಕೆಟ್ಟ ಪದಗಳ ಬಳಕೆ ಮಾಡುವ ವ್ಯಕ್ತಿತ್ವ ಇವರದ್ದು .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top