fbpx
ಉಪಯುಕ್ತ ಮಾಹಿತಿ

ತಂದೆಯ ದೇಹದಾನ ಮಾಡಿ ಮಾದರಿಯಾದ ಕರ್ನಾಟಕದ ಮಹಿಳಾ ಐಎಎಸ್ ಅಧಿಕಾರಿ

ಐಎಎಸ್ ಅಧಿಕಾರಿ ಶಾಲಿನಿ ರಜನೀಶ್ ಅವರು ತಮ್ಮ ತಂದೆಯ ಮೃತದೇಹ ದಾನ ಮಾಡಿ ಸಮಾಜಕ್ಕೆ ಮಾದರಿಯಾಗಿದ್ದಾರೆ.

ಹೌದು. ಕರ್ನಾಟಕ ಸರಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮುಖ್ಯ ಕಾರ್ಯದರ್ಶಿಯಾದ ಮಹಿಳಾ ಐಎಎಸ್ ಅಧಿಕಾರಿ ಶಾಲಿನಿ ರಜನೀಶ್ ಅವರು ಮಾರ್ಚ್ 17 ಶುಕ್ರವಾರದಂದು ಕೊನೆಯುಸಿರೆಳೆದ ತಮ್ಮ ತಂದೆ ನಿವೃತ್ತ ಐಎಎಸ್ ಅಧಿಕಾರಿ ಪಿ.ಪಿ. ಛಬ್ರಾ (81) ಅವರ ದೇಹವನ್ನು ಬೆಂಗಳೂರು ವೈದ್ಯಕೀಯ ಕಾಲೇಜ್ ಮತ್ತು ಸಂಶೋಧನಾ ಸಂಸ್ಥೆ (BMCRI) ಗೆ ಶಾಲಿನಿ ರಜನೀಶ್ ದಾನ ಮಾಡಿದ್ದಾರೆ.

ಎಲ್ಲ ಮೆಡಿಕಲ್ ಕಾಲೇಜ್ ಗಳೂ ಸಂಶೋಧನೆಗಾಗಿ ಶವದ ಕೊರತೆಯನ್ನು ಎದುರಿಸುತ್ತಿವೆ. 50-60 ಮೆಡಿಕಲ್ ವಿದ್ಯಾರ್ಥಿಗಳಿಗೆ ಸಂಶೋಧನೆಗಾಗಿ ಒಂದು ಶವ ಸಿಕ್ಕುವುದೇ ಕಷ್ಟವಾಗಿದೆ. ಇಂತಹ ಸಂದರ್ಭದಲ್ಲಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ತಂದೆಯ ದೇಹದಾನ ಮಾಡುವ ಮೂಲಕ ಮಾದರಿಯಾಗಿದ್ದಾರೆ ಶಾಲಿನಿ ರಜನೀಶ್.

ಸಂಶೋಧನೆಗಾಗಿ ಶವದ ಕೊರತೆಯ ಕುರಿತು ಹಲವು ಮೆಡಿಕಲ್ ಕಾಲೇಜುಗಳು ಈಗಾಗಲೇ ಜಾಗೃತಿ ಕಾರ್ಯಕ್ರಮ ನಡೆಸುತ್ತಿದ್ದರೂ, ಇದರಿಂದ ಹೆಚ್ಚೇನೂ ಪ್ರಯೋಜನವಾದಂತಿಲ್ಲ. ಶವ ಸಂಸ್ಕಾರಕ್ಕಿಂತ ದೇಹದಾನ ಅತ್ಯಂತ ಪುಣ್ಯದ ಕೆಲಸ ಎಂಬುದು ಜನರಿಗೆ ಅರಿವಾಗಬೇಕಿದೆ ಎಂದು ಶಾಲಿನಿ ರಜನೀಶ್ ಹೇಳಿದ್ದಾರೆ.

ನೀವು ಸಹ ದೇಹ ದಾನ ಮಾಡಬೇಕು ಅಂತಿದ್ದಾರೆ ಈ ಕೆಳಗಿನ ನಂಬರ್ ಅನ್ನು ಸಂಪರ್ಕಿಸಿ

ನೀವು ದೇಹದಾನ ಮಾಡಿದ ಮೇಲೆ ನಿಮಗೆ ಒಂದು ಕಾರ್ಡ್ ಕೊಡಲಾಗುವುದು

ನಿಮ್ಮ ದೇಹ ದಾನಮಾಡಿ ಮನುಕುಲಕ್ಕೆ ಮಾದರಿ ಆಗಿ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top