fbpx
ಉಪಯುಕ್ತ ಮಾಹಿತಿ

ಪೂಜೆಯಲ್ಲಿ ಶಂಖವನ್ನು ಏಕೆ ಊದಲಾಗುತ್ತದೆ ? ವೈಜ್ಞಾನಿಕ ಕಾರಣಗಳು

ಶಂಖವನ್ನು ದೇವಾಲಯಗಳಲ್ಲಿ ಏಕೆ ಊದಲಾಗುತ್ತದೆ ? ವೈಜ್ಞಾನಿಕ ಕಾರಣಗಳು

ವರಾಹ ಪುರಾಣದಲ್ಲಿ ದೇವಸ್ಥಾನದ ಬಾಗಿಲು ತೆರೆಯುವ ಮುನ್ನ ಪೂಜಾರಿಗಳು ಶಂಖ ಧ್ವನಿ ಮಾಡಿದರೆ ದೇವಸ್ಥಾನದ ಬಾಗಿಲು ತೆರೆಯುತ್ತೇವೆ ಎಂಬ ಮಾಹಿತಿ ತಿಳಿಸಲಾಗುತ್ತದೆ.


ಬೃಹನ್ನರಾಧ್ಯ ಪುರಾಣದ ಪ್ರಕಾರ ದೇವಾಲಯದಲ್ಲಿ ಶಂಖ ನಾದ ಮಾಡಿದರೆ ಎಲ್ಲ ಕೆಟ್ಟ ಶಕ್ತಿಗಳು ದೇವಾಲಯದಿಂದ ತೊಲಗುತ್ತವೆ ಎಂದು ಹೇಳಲಾಗುತ್ತದೆ.

ಶಂಖವನ್ನು ಷೋಡಶೋಪಚಾರದ ಸಮಯದಲ್ಲಿ ಪೂಜಿಸಲಾಗುತ್ತದೆ

ಸಾಧರಮ್ ಶಂಖಮಪಿ ಚ ಸಂಪೂಜ್ಯಾ ಕುಸುಮದಿಭಿಹ್ ನಿಹಕ್ಷಿಪೇದಾಸ್ರವರ್ಣಭಾಯಾಂ ಶೋಧಿತಮ್ ತತ್ರ ಸಜ್ಜಲಂ!
ಅಂದರೆ ಶಂಖವನ್ನು ಹೂವ್ಗಳಿಂದ ಅಲಂಕರಿಸಿ , ನೀರನ್ನು ಕೊಳೆಯಾಗದಂತೆ ಪ್ರೋಕ್ಷಣೆ ಮಾಡಿಡಬೇಕು , ಕವಚವನ್ನು ಬಳಸಿ ಶಂಖವನ್ನು ಸುರಕ್ಷಿತವಾಗಿ ಇಡಬೇಕು,.

ಶಂಖದೊಯು ಚಂದ್ರದೈವತ್ಯಂ ಕುಕ್ಷೌ ವರುಣದೇವತಾ
ಪೃಷ್ಠೆ ಪ್ರಜಾಪತಿಶ್ಚೈವ ಅಗ್ರೇ ಗಂಗಾ ಸರಸ್ವತಿ
ತ್ವಂ ಪುರ ಸಾಗರೋತ್ಪನ್ನ ವಿಷ್ಣುನಾ ವಿಧುತಃ ಕರೆ
ಅಗ್ರತಃ ಸರ್ವದೇವನಂ ಪಾಂಚಜನ್ಯ ನಮೋಸ್ತುತೇ

ಚಂದ್ರ ಶಂಖದ ತಳದಲ್ಲಿ , ವರುಣ ಕುಕ್ಷಿ ಯಲ್ಲಿ , ಪ್ರಜಾಪತಿ ಶಂಖದ ಹಿಂದೆ , ಗಂಗಾ ಸರಸ್ವತಿ ಶಂಖದ ಬಾಯಿಯ ಬಳಿ ,ವಿಷ್ಣುವಿನ ಕೈಯಲ್ಲಿ ನಲಿಯುವ ನೀನು
ಸಮುದ್ರದಿಂದ ಹುಟ್ಟಿಕೊಂಡೆ ಆದ್ದರಿಂದ ನಿನ್ನನ್ನು ಆರಾಧಿಸುವೆ ಎಂಬುದು ಇದರ ಅರ್ಥ.

ಶಂಖ ನಾದವನ್ನು ಏಕೆ ಮಾಡಲಾಗುತ್ತದೆ ?

ದುಷ್ಟಶಕ್ತಿಗಳನ್ನು ಶಂಖ ಧ್ವನಿ ಇಂದ ಹೊರಗಡೆ ಓಡಿಸಲಾಗುತ್ತದೆ . ಶಂಖ ಧ್ವನಿ ಮಂಗಳಕರ ಎಂದು ಅನೇಕ ಗ್ರಂಥಗಳಲ್ಲಿ ಉಲ್ಲೇಖಿಸಲಾಗಿದೆ

ಮುಖ್ಯವಾಗಿ ಶಂಖ ಅಥವಾ ಲೋಹದ ಗಂಟೆ ಮಂಗಳಕರ ವಾದ್ಯಗಳಲ್ಲಿ ಒಂದು ವಾತಾವರಣದಲ್ಲಿ ಕೆಟ್ಟ ಕಂಪನಗಳನ್ನು ತೆಗೆದುಹಾಕಲು ಪೂಜೆ ಅವಧಿಯಲ್ಲಿ ಬಳಸಲಾಗುತ್ತದೆ.

ಶಂಖ ಧ್ವನಿ ವಾತಾವರಣವನ್ನು ಮಂಗಳಕರವಾಗಿಸುತ್ತದೆ ಹೀಗಾಗಿ ಪೂಜೆ ಸಮಯದಲ್ಲಿ ಶಂಖವನ್ನು ಬಳಸಲಾಗುತ್ತದೆ.

ವಿವಿಧ ಶಂಖಗಳು :

ದಕ್ಷಿಣವರ್ತಿ ಶಂಖ
ವಾಮವರ್ತಿ ಶಂಖ
ಗೌಮುಖಿ ಶಂಖ


ಗಣೇಶ ಶಂಖ
ಕೌರಿ ಶಂಖ
ಮೋತಿ ಶಂಖ
ಹೀರಾ ಶಂಖ

ವೈಜ್ಞಾನಿಕ ಕಾರಣಗಳು :

ಶಂಖ ನಾದವನ್ನು ಕಿವಿಯ ಹತ್ತಿರ ಹಿಡಿದು ಕೇಳಿದರೆ ನಿಧಾನವಾಗಿ ಮೊರೆಯುವ ಸಮುದ್ರದ ಧ್ವನಿ ಕೇಳಿಸುತ್ತದೆ .
ಭೂಮಿಯ ನೈಸರ್ಗಿಕ ಕಂಪನ ಅಥವಾ ಭೂಮಿಯ ಕಾಸ್ಮಿಕ್ ಶಕ್ತಿ ಶಂಖದಿಂದ ಹೊರಹೊಮ್ಮಿದರೆ ತರಂಗಗಳು ವರ್ಧಿಸಿರುತ್ತವೆ ಇದು ಸಕಾರಾತ್ಮಕ ಕಂಪನಗಳಾಗಿವೆ.

ಜಾಗತಿಕ ತಾಪಮಾನದ ಕಾರಣದಿಂದ ಉಂಟಾದ ಓಝೋನ್ ಪದರದ ರಂಧ್ರ ಗಳನ್ನು ಸರಿಪಡಿಸಲು ಶಂಖ ನಾದ ಒಳ್ಳೆಯ ಪರಿಣಾಮಕಾರಿ ವೈಜ್ಞಾನಿಕ ಚಿಕಿತ್ಸೆಯಾಗಿದೆ .

ಸಕಾರಾತ್ಮಕ ಶಕ್ತಿಗಳಾದ ಧೈರ್ಯ, ಸಂಕಲ್ಪ, ಭರವಸೆ, ಆಶಾವಾದ,ಮನೋ ಧೈರ್ಯ ಗಳನ್ನು ಹೆಚ್ಚಿಸುತ್ತದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top