fbpx
ಉಪಯುಕ್ತ ಮಾಹಿತಿ

ಸಾಡೇ ಸಾತಿ (ಶನಿಯ ದೋಷಗಳು ) ಅಂದರೆ ಏನು ? ಹೇಗೆ ಪರಿಹಾರ ಮಾಡಬಹುದು

ಸಾಡೇ ಸಾತಿ (ಶನಿಯ ದೋಷ ಗಳು ) ಅಂದರೆ ಏನು ? ಹೇಗೆ ಪರಿಹಾರ ಮಾಡಬಹುದು

ಶನಿಯು ನಿಮ್ಮ ಜನ್ಮಕುಂಡಲಿಯ ಚಂದ್ರನಿರುವ ಸ್ಥಾನ ದಿಂದ 12 ,1 ಹಾಗು 2 ನೇ ಮನೆಗಳಿಗೆ ಹೋಗುವುದನ್ನು ಸಾಡೇ ಸತಿ ಎಂದು ಕರೆಯುತ್ತಾರೆ.

ಶನಿಯು ಒಂದು ರಾಶಿಯನ್ನು ದಾಟಲು 2 ವರ್ಷಗಳನ್ನು ತೆಗೆದುಕೊಳ್ಳುತ್ತದೆ ಒಟ್ಟು ಮೂರು ರಾಶಿಗಳನ್ನು ದಾಟಲು 7 ವರ್ಷಗಳನ್ನು ತೆಗೆದುಕೊಳ್ಳುತ್ತದೆ

ಹಾಗೆ ಎಲ್ಲ 12 ರಾಶಿಗಳನ್ನು ದಾಟಲು ಒಟ್ಟು (ರಾಶಿಚಕ್ರ ) ಒಂದು ಸುತ್ತಿಗೆ 30 ವರ್ಷ ತೆಗೆದುಕೊಳ್ಳುತ್ತಾನೆ.
ಸಾಡೆ ಅಂದರೆ ಅರ್ಧ ಮತ್ತು ಸಾತಿ ಅಂದರೆ 7 .

ಎಲ್ಲರು ಅಂದುಕೊಂಡಿರುವ ಹಾಗೆ ಸಾಡೇ ಸತಿ ಅವಧಿಯಲ್ಲಿ ಅಸಮಾಧಾನ, ನಿರಾಶೆಗಳು, ಖಿನ್ನತೆ, ವ್ಯತ್ಯಾಸಗಳು, ವಿವಾದಗಳು, ಅನಪೇಕ್ಷಿತ ಫಲಿತಾಂಶ ಇರುತ್ತದೆ ಎಂಬುದು ಆದರೆ ಹೀಗೆ ಇರುವುದಿಲ್ಲ .
ಶನಿಯು ಯೋಗ ಕಾರಕನಾಗಿದ್ದರೆ ಯಾವುದೇ ರೀತಿಯ ಕೆಟ್ಟ ಪರಿಣಾಮಗಳು ಆಗುವುದಿಲ್ಲ.

ಮನುಷ ಜೀವಿತಾವಧಿಯಲ್ಲಿ ಒಟ್ಟು 3 – 4 ಸಾಡೆ ಸಾತಿ ಅವಧಿಗಳನ್ನು ನೋಡಬಹುದು.

ಸಾಡೆ ಸಾತಿ ಪರಿಣಾಮಗಳು :

ವ್ಯಕ್ತಿಯ ಜೀವನದ ಒಂದು ಸಾಡೇ ಸಾತಿ ಸಮಯ 7 – 7 .5 ವರ್ಷಗಳಾಗಿದ್ದು , ಕೆಲವು ಕಷ್ಟಗಳನ್ನು ಎದುರಿಸಬೇಕಾಗುತ್ತದೆ ಆದರೂ ಎಷ್ಟೇ ಕಷ್ಟವಾದರು ಬಂದಿದ್ದನ್ನು ಎದುರಿಸಿ ನಡೆಯುವವನೇ ನಿಜವಾದ ಮನುಷ್ಯ
ಯಾರೇ ಇಷ್ಟ ಪಟ್ಟರು ಇಷ್ಟ ಪಡದಿದ್ದರು ಹೆದರದೆ ಮುನ್ನುಗ್ಗುವವನೇ ವಿಜಯಿಶಾಲಿ ,
ಅದೇ ರೀತಿ ಸೊಕ್ಕಿನ ,ಸ್ವಾರ್ಥಿಯಾದ, ಅನುಕಂಪವಿಲ್ಲದ ,ಕಷ್ಟಪಟ್ಟು ದುಡಿಯದ ವ್ಯಕ್ತಿಗೆ ಕಷ್ಟವು ಈ ಕಾಲದಲ್ಲಿ ಕಟ್ಟಿಟ್ಟ ಬುತ್ತಿ.

ಆದರೂ ಸಹ ಈ ವಿಷಯಗಳನ್ನು ಜ್ಯೋತಿಷಿಗಳ ಬಗ್ಗೆ ಕೇಳಿ ತಿಳಿಯಬೇಕು ಇವು ಸಹ ಸಾಡೇ ಸಾತಿ ಯ ಪರಿಣಾಮಗಳಲ್ಲಿ ಬಹು ಮುಖ್ಯ ಅಂಶ ಹೊಂದಿದೆ :

ಶನಿ ಜನ್ಮ ರಾಶಿಗೆ ಶುಭಕಾರಕನೇ ?
ದಶ ಭುಕ್ತಿ ನಡೆಯುತ್ತಿದೆಯೇ ? ಅದರಲ್ಲಿ ಶನಿ ಇದ್ದಾನೆಯೇ ?
ಶನಿ ಜನ್ಮ ಕುಂಡಲಿಯಲ್ಲಿ ಯಾವ ನಕ್ಷತ್ರದಲ್ಲಿ ಬರುತ್ತಾನೆ ?
ಶನಿ ಯಾವ ಲಗ್ನದಲ್ಲಿ ಇರುತ್ತಾನೆ ?

ಸಾಡೇ ಸಾತಿಯ ಮೂರು ಅವಧಿ ಚಕ್ರಗಳು :

ಸಾಡೇ ಸಾತಿಯ ಮೊದಲ ಅವಧಿ ಚಕ್ರ :

ಶನಿಯು ಚಂದ್ರನಿಂದ 12 ನೇ ಮನೆಗೆ ಹೊರಡುತ್ತಾನೆ.
2 .5 ವರ್ಷಗಳದ್ದು ಇದಾಗಿದ್ದು
ನಮ್ಮ ಸಂಬಂಧಿಕರನ್ನು ಕೆಟ್ಟ ಪರಿಣಾಮಗಳಿಗೆ ಒಡ್ದ ಬಹುದು , ಕಣ್ಣಿನ ಸಮಸ್ಯೆಗಳು , ದುಡ್ಡಿನ ಸಮಸ್ಯೆಗಳು ಬಹಳವಾಗಿ ಕಾಡುತ್ತವೆ , ಸಾಲ ಮಾಡುವುದು , ಅನಾವಶ್ಯಕ ಖರ್ಚ್ ಮಾಡುವುದು ಮಾಡಬಾರದು .

ಎರಡನೇ ಅವಧಿ ಚಕ್ರ :

ಶನಿಯು ಚಂದ್ರನಿಂದ 1 ನೇ ಮನೆಗೆ ಹೊರಡುತ್ತಾನೆ.
2 .5 ವರ್ಷಗಳದ್ದು ಇದಾಗಿದ್ದು
ಮನೆಯ ಹಾಗು ಉದ್ಯೋಗದ ಪರಿಸರವನ್ನು ಹಾಳು ಮಾಡಬಹುದು.
ಹಣಕಾಸು ನಷ್ಟ , ಅನೇಕ ಕಷ್ಟ, ಆರೋಗ್ಯ ನಷ್ಟ, ತೇಜೋವಧೆ ಆತ್ಮವಿಶ್ವಾಸವನ್ನು ಮತ್ತು ಸ್ವಯಂ ಗೌರವ ಕಳೆದುಕೊಳ್ಳಬೇಕಾಗುತ್ತದೆ
ಈ ಅವಧಿಯಲ್ಲಿ ಮಿಶ್ರಫಲಗಳಿವೆ ಒಳ್ಳೆಯದು ಸಹ ನಡೆಯುತ್ತದೆ.

ಮೂರನೇ ಅವಧಿ ಚಕ್ರ :

ಶನಿಯು ಚಂದ್ರನಿಂದ 2 ನೇ ಮನೆಗೆ ಹೊರಡುತ್ತಾನೆ.
ಮಕ್ಕಳು, ಕುಟುಂಬ, ಆರೋಗ್ಯ, ಮತ್ತು ದೈಹಿಕ ನೋವನ್ನು ತಂದೊಡ್ಡಬಹುದು.

ಹಣದ ನಷ್ಟ, ಭಾರೀ ವೆಚ್ಚ, ಆರೋಗ್ಯ ನಷ್ಟ, ಅತೃಪ್ತಿ ,ಮಾನಸಿಕ ಯಾತನೆ, ಸಂಪತ್ತು ನಷ್ಟ, ಸಾಕಷ್ಟು ದುಃಖ , ನೋವುಗಳು ,ಶತ್ರು ಕಾಟ, ದೈಹಿಕ ಯಾತನೆ, ಜಗಳಗಳು ಹೆಚ್ಚಾಗುತ್ತದೆ.

ಸಾಡೇ ಸಾತಿ ಪರಿಹಾರಗಳು :

ಕೆಲವು ಒಳ್ಳೆಯ ಗುಣಗಳನ್ನು ನಾವು ಈ ಕಾಲದಲ್ಲಿ ಕಲಿಯುತ್ತೇವೆ , ತಾಳ್ಮೆ ಪರಿಶ್ರಮ , ಕಷ್ಟ ಪಟ್ಟು ದುಡಿಯುವ ಮನೋಭಾವನೆಯನ್ನು ಬೆಳೆಸಿಕೊಳ್ಳೋಣ.

ಶನಿ ದೇವರಿಗೆ ಎಳ್ಳೆಣ್ಣೆ ದೀಪವನ್ನು ಹಚ್ಚುವುದು ನಮ್ಮ ಕಷ್ಟಗಳನ್ನು ದೂರ ಮಾಡುತ್ತದೆ.

ಎಳ್ಳಿನ ಬತ್ತಿ ಕಟ್ಟಿ ಬೆಂಕಿಯಲ್ಲಿ ಸುಟ್ಟರೆ ಒಳ್ಳೆಯದು .


ಹನುಮಂತನ ಪೂಜೆ ಆರಾಧನೆ ಒಳ್ಳೆಯದು .
ಹನುಮಂತನ ಹನುಮಾನ್ ಚಾಲೀಸಾ ಪಠಣ ಒಳ್ಳೆಯದು .
ಹನುಮಂತನ ಪ್ರಿಯವಾದ ವಡ ಮಾಲೆ ಹಾಕಿಸುವುದು ಒಳಿತು.
ಆದಷ್ಟು ಕಪ್ಪು ಬಟ್ಟೆಗಳನ್ನು ಧರಿಸಬೇಡಿ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top