fbpx
ಪ್ರಯಾಣ

ಗೊಮ್ಮಟೇಶ್ವರ ಎಕ್ಸ್‌ಪ್ರೆಸ್‌ : ಬೆಂಗಳೂರು-ಹಾಸನ ನೇರ ರೈಲು ಸಂಚಾರ ಆರಂಭ

ಗೊಮ್ಮಟೇಶ್ವರ ಎಕ್ಸ್‌ಪ್ರೆಸ್‌ ಬೆಂಗಳೂರಿನಿಂದ ಶ್ರವಣಬೆಳಗೊಳ ಮಾರ್ಗವಾಗಿ ಹಾಸನ ತಲುಪುವ ರೈಲು 167 ಕಿ.ಮೀ. ಪ್ರಯಾಣಿಸಲಿದೆ.

ಮೊದಲ ಮಳೆಯಂತೆ , ಬಹು ನಿರೀಕ್ಷೆಯ ಹಾಸನ ಬೆಂಗಳೂರು ನೇರ‌ ರೈಲು ಹಾಸನಕ್ಕೆ ಆಗಮಿಸಿದಾಗ ಜನಸ್ತೋಮವೇ ನೆರೆದಿದಿತ್ತು … ನಿರೀಕ್ಷೆ ನಿಜಗೊಂಡಾಗ ಜನರ ಸಂತೋಷಕ್ಕೆ ಪಾರವೇ ಇರಲಿಲ್ಲ..

ಯಶವಂತಪುರ ರೈಲು ನಿಲ್ದಾಣದಲ್ಲಿ ರೈಲ್ವೆ ಸಚಿವ ಸುರೇಶ್‌ ಪ್ರಭು ಅವರು ನೂತನ ರೈಲಿಗೆ ಹಸಿರು ನಿಶಾನೆ ತೋರಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಜೆಡಿಎಸ್‌ ರಾಷ್ಟ್ರಾಧ್ಯಕ್ಷ ಎಚ್‌.ಡಿ. ದೇವೇಗೌಡ ಅವರು ಸೇರಿದಂತೆ ಗಣ್ಯರು ಹಾಜರಿದ್ದರು.

1996ರಲ್ಲಿ ಪ್ರಧಾನಿ ದೇವೇಗೌಡರ ಸಚಿವ ಸಂಪುಟದಲ್ಲಿ ಅಂದಿನ ರೈಲ್ವೆ ಸಚಿವರಾದ ಜಾಫರ್ ಷರೀಫ್ ಅವರು ರಾಜಧಾನಿಯಿಂದ ಹಾಸನಕ್ಕೆ ರೈಲು ಸಂಪರ್ಕ ಕಲ್ಪಿಸುವ ಯೋಜನೆಯನ್ನು ಬಜೆಟ್‌ನಲ್ಲಿ ಘೋಷಣೆ ಮಾಡಿದ್ದರು. ಇದಾದ ಬಳಿಕೆ ಹಲವು ಬಾರಿ ಯೋಜನೆಯ ಕಾಮಗಾರಿಗೆ ಚಾಲನೆ ಸಿಕ್ಕರೂ ವೇಗ ಕುಂಠಿತವಾಗಿತ್ತು. ₹ 1,290 ಕೋಟಿ ಯೋಜನೆಯ ಒಟ್ಟು ಅಂದಾಜು ಮೊತ್ತ.

ಹಾಸನದಿಂದ ಬೆಳಗ್ಗೆ 6.30ಕ್ಕೆ ಹೊರಡುವ ರೈಲು 9.15ಕ್ಕೆ ಬೆಂಗಳೂರಿಗೆ ತಲುಪಲಿದೆ. ಸಂಜೆ 6.15ಕ್ಕೆ ಮತ್ತೆ ಬೆಂಗಳೂರಿನಿಂದ ತೆರಳಲಿದೆ.

ಗೊಮ್ಮಟೇಶ್ವರ ಎಕ್ಸ್‌ಪ್ರೆಸ್‌ಗೆ ಈ ಭಾಗದ ಜನರಿಂದ ಭವ್ಯ ಸ್ವಾಗತ ದೊರೆಯಿತು. ಶ್ರವಣಬೆಳಗೊಳದಲ್ಲಿ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅವರು ಪುರ್ಣಕುಂಭ ಸ್ವಾಗತ ಕೋರಿದರು. ಕರ್ನಾಟ ಜೈನ ಅಸೋಷಿಯೇನಷ್‌ ಹಾಗೂ ಜೈನ ಸಮಾಜದ ಸದಸ್ಯರು ರೈಲು ನಿಲ್ದಾಣದಲ್ಲಿ ರೈಲನ್ನು ಸ್ವಾಗತಿಸಿದರು.

ರೈಲು ಶ್ರವಣಬೆಳಗೊಳ ತಲುಪಿದಾಗ ಸಾವಿರಾರು ಮಂದಿ ಹರ್ಷೋದ್ಗಾರ, ಶಿಳ್ಳೆ, ಚಪ್ಪಾಳೆ, ಜಯಘೋಷದ ಮೂಲಕ ಸಂತಸ ವ್ಯಕ್ತಪಡಿಸಿದರು. ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅವರು ವಿಶೇಷ ಪೂಜೆ ಸಲ್ಲಿಸಿದರು. ನೂತನ ರೈಲಿಗೆ ಗೊಮ್ಮಟೇಶ್ವರ ಹೆಸರು ಇಟ್ಟಿರುವುದಕ್ಕೆ ಸ್ವಾಮೀಜಿ ಹರ್ಷ ವ್ಯಕ್ತಪಡಿಸಿದರು. ಯೋಜನೆ ಸಾಕಾರಕ್ಕೆ ಶ್ರಮಿಸಿದ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರಿಗೆ ಕೃತಜ್ಞತೆ ಸಲ್ಲಿಸಿದರು.

ಈ ರೈಲು ಓಡಾಟದಿಂದ ಮುಂದಿನ ವರ್ಷ ನಡೆಯುವ ಮಹಾಮಸ್ತಕಾಭಿಷೇಕಕ್ಕೆ ಹೆಚ್ಚು ಮಂದಿ ಬರಲಿದ್ದಾರೆ, ಪ್ರವಾಸೋದ್ಯಮವೂ ಅಭಿವೃದ್ಧಿಯಾಗಲಿದೆ ಎಂದು ಸ್ವಾಮೀಜಿ ಹೇಳಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top