ಆರೋಗ್ಯ

ಭೂಮಿ ಕೊರೆದರೆ ನೀರು ಬರುತ್ತದೆ ಆದರೆ ಇಲ್ಲಿ ಮರ ಕೊರೆದರೆ ಸಾಕು ನೀರು ಬರುತ್ತದೆ !!

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ನಿಮಗೆಲ್ಲ ಗೊತ್ತು , ಭೂಮಿ ಕೊರೆದರೆ ನೀರು ಬರುತೆ , ಆದರೆ ಇಲ್ಲೊಂದು ಮರ ಇದೆ . ಈ ಮರ ಕೊರೆದರೆ ನೀರು ಚುಮ್ಮುತೆ . ಈ ಮರ ಯಾವುದು , ಇದರ ವೈಶಿಷ್ಟತೆ ತಿಳಿದು ಕೊಳ್ಳೋಣ . ಮೊದಲು ಈ ವಿಡಿಯೋ ನೋಡಿ.

ಈ ಮರದ ತಲಿಯನ್ನು “ಮತ್ತಿ” ಅಂತ ಕರಿಯುತ್ತಾರೆ . ಇದು   ಭಾರತ, ನೇಪಾಳ, ಬಾಂಗ್ಲಾದೇಶ, ಮ್ಯಾನ್ಮಾರ್, ಥೈಲ್ಯಾಂಡ್, ಲಾವೋಸ್, ಕಾಂಬೋಡಿಯಾ, ಮತ್ತು ವಿಯೆಟ್ನಾಂ ನಲ್ಲಿ ಸಿಗುತ್ತದೆ .

ಇದು ಕೊಂಬ್ರೇಟಸಿಯೆಕುಟುಂಬಕ್ಕೆ ಸೇರಿದ್ದು,ಟರ್ಮಿನಾಲಿಯಸಸ್ಯಕುಲ(Genus)ದಲ್ಲಿದೆ.ಇದರ ಸಸ್ಯಶಾಸ್ತ್ರೀಯ ಹೆಸರು ಟರ್ಮಿನಾಲಿಯ ಟೋಮೆಂಟೋಸ ಎಂದಾಗಿದೆ. ಇದನ್ನು ಇತ್ತೀಚಿಗೆ ಟರ್ಮಿನಾಲಿಯ ಎಲಿಪ್ಟಿಕಾ ಎಂದೂ ಕರೆಯುತ್ತಾರೆ.

ಇದರ ಕಾಂಡದಲ್ಲಿ ಸಾಮಾನ್ಯವಾಗಿ ನೀರು ಸಂಗ್ರಹವಾಗಿರುತ್ತದೆ , ಅರಣ್ಯ ಜನರು ಬೇಸಿಗೆಯಲ್ಲಿ ಕುಡಿಯುವ ನೀರಿನ ಮೂಲವಾಗಿ ಬಳಸುತ್ತಾರೆ. ಇದು ಹೊಟ್ಟೆ ನೋವು ಸರಿಪಡಿಸುವ ಮೌಲ್ಯವನ್ನು ಹೊಂದಿದೆ ಎಂದು ಭಾವಿಸಲಾಗಿದೆ.

ಥೇರವಾಡ ಬುದ್ಧಿಸಂ ನಲ್ಲಿ , ಈ ಮರದ ಜ್ಞಾನೋದಯ ಸಾಧಿಸಿದೆ ಎಂದು ಹೇಳಲಾಗುತ್ತದೆ.

ಹೃದಯ ದೌರ್ಬಲ್ಯ ಮತ್ತು ಎದೆ ನೋವು

ಒಣಗಿದ ಮತ್ತಿತರದ ತೊಗಟೆಯನ್ನು ನಯವಾಗಿ ಚೂರ್ಣಿಸುವುದು. ಪ್ರತಿ ಪ್ರಾತಃಕಾಲ ಬರೀ ಹೊಟ್ಟೆಯಲ್ಲಿ ಅರ್ಥ ಟೀ ಚಮಚ ಚೂರ್ಣವನ್ನು ಕೆಂಪು ಕಲ್ಲು ಸಕ್ಕರೆ ಪುಡಿ ಸೇರಿಸಿದ ಹಾಲಿನಲ್ಲಿ ಕದಡಿ ಕುಡಿಯುವುದು. ಮತ್ತಿ ಮರದ ತೊಗಟೆ ಚೂರ್ಣ ಒಂದು ಟೀ ಚಮಚ, ಕಾಲು ಲೀಟರು ನೀರು ಮತ್ತು ಕಾಲು ಲೀಟರು ಹಸುವಿನ ಹಾಲು ಹಾಕಿ ಮುಂದಾಗ್ನಿಯಿಂದ ಕಾಯಿಸಿ ಕಷಾಯ ಮಾಡುವುದು ಈ ಕಷಾಯವನ್ನು ಶೋಧಿಸಿ ಎರಡು ಚಮಚ ಕಷಾಯಕ್ಕೆ 2 ಚಮಚ ಕೆಂಪು ಕಲ್ಲು ಸಕ್ಕರೆ ಪುಡಿಯನ್ನು ಸೇರಿಸಿ ಸೇವಿಸುವುದು.

ವಸಡುಗಳ ಊತದಲ್ಲಿ

ಬಿಳಿ ಮತ್ತಿಯ ತಿರುಳಿನ ಕಷಾಯ ಮಾಡಿ, ಬಾಯಿ ಮುಕ್ಕಳಿಸುವುದು, ಹೀಗೆ ಪ್ರತಿನಿತ್ಯ 4-5 ಸಾರಿ.

ಮೂಳೆ ಮುರಿತ ಮತ್ತು ಮೂಳೆಗೆ ಪೆಟ್ಟು

ಬಿಳಿ ಮತ್ತಿ ಒಣಗಿದ ತಿರುಳಿನ ನಯವಾದ ಚೂರ್ಣವನ್ನು ಸ್ವಲ್ಪ ಕೆಂಪು ಕಲ್ಲು ಸಕ್ಕರೆ ಪುಡಿ ಮತ್ತು ಹಸುವಿನ ತುಪ್ಪ ಸೇರಿಸಿ, ನೇವಿಸುವುದು. ಬೆಳಿಗ್ಗೆ ಮತ್ತು ಸಾಯಂಕಾಲ ಎರಡು ವೇಳೆ ತೆಗೆದುಕೊಳ್ಳುವುದು. ಮುರಿದ ಮೂಳೆಯನ್ನು ತಿಳಿದವರಿಂದ ಸರಿಯಾಗಿ ಕೂಡಿಸಿ, ಮತ್ತಿ ಮರದ ತಿರುಳಿನ ನಯವಾದ ಪುಡಿಯನ್ನು ಹಸುವಿನ ತುಪ್ಪದಲ್ಲಿ ಕಲೆಸಿ ಪಟ್ಟಿ ಹಾಕುವುದು. ಮತ್ತು ಬಟ್ಟೆಯಿಂದ ಕಟ್ಟು ಹಾಕುವುದು. ಇದರಿಂದ ನೋವು ನಿವಾರಣೆಯಾಗಿ ಮುರಿದ ಮೂಳೆಗಳು ಕೂಡಿಕೊಳ್ಳುವುವು. ಬಿಳಿ ಮತ್ತಿ ತಿರುಳು, ಸರ್ಪಗಂಧ ಮತ್ತು ಶತಾವರಿ ಸಮತೂಕ ಕುಟ್ಟಿ ನಯವಾದ ಚೂರ್ಣ ಮಾಡುವುದು ಈ ಚೂರ್ಣದ ಅರ್ಧ ಟೀ ಚಮಚಕ್ಕೆ ಸಕ್ಕರೆ ಹಾಲು ಸೇರಿಸಿ ಸೇವಿಸುವುದು.

ಗಾಯ ಹುಣ್ಣು ಮತ್ತು ಕೆಟ್ಟ ವ್ರಣಗಳಿಗೆ

ಮತ್ತಿ ಮರದ ತೊಗಟೆಯ ಕಷಾಯದಲ್ಲಿ ಹುಣ್ಣುಗಳನ್ನು ತೊಳೆಯುವುದು. ನಯವಾದ ತೊಗಟೆಯ ಚೂರ್ಣವನ್ನು ಗಾಯದ ಮೇಲೆ ಉದುರಿಸಿ, ಬಟ್ಟೆ ಕಟ್ಟುವುದು.

ಕುಗ್ಗಿದ ಇಂದ್ರಿಯ ಶಕ್ತಿ ಮತ್ತು ಶೀಘ್ರ ಸ್ಖಲನಕ್ಕೆ

ಒಣಗಿದ ಮತ್ತಿತೊಗಟೆಯ ಚೂಣ್ವನ್ನು ಕೆಂಪು ಕಲ್ಲು ಸಕ್ಕರೆ ಪುಡಿ ಸೇರಿಸಿದ ಹಾಲಿನಲ್ಲಿ ಸೇವಿಸುವುದು. ಒಂದು ಬಟ್ಟಲು ಹಾಲಿಗೆ 1/4ಟೀ ಚಮಚ ಚೂರ್ಣ ಹಾಕುವುದು.

ಸ್ತ್ರೀಯರ ಶ್ವೇತಪ್ರದರ ಮತ್ತು ರಕ್ತ ಪ್ರದರದಲ್ಲಿ

ಬಿಳಿ ಮತ್ತಿಮರದ ತಿರುಳಿನ ಕಷಾಯ ಮಾಡಿ, ಕೆಂಪು ಕಲ್ಲು ಸಕ್ಕರೆ ಪುಡಿ ಮತ್ತು ಅಪ್ಪಟವಾದ ಜೇನುತುಪ್ಪ ಸೇರಿಸಿ ಸೇವಿಸುವುದು.

ರಕ್ತಬೇಧಿ ಮತ್ತು ಅತಿ ಸಾರದಲ್ಲಿ

ಬಿಳಿ ಮತ್ತಿಮರದ ತೊಗಟೆಯ ಅರ್ಧ ಟೀ ಚಮಚ ನಯವಾದ ಚೂರ್ಣಕ್ಕೆ ಒಂದು ಲೋಟ ಆಡಿನ ಹಾಲು ಹಾಕಿ ಸೇವಿಸುವುದು. ಪ್ರತಿನಿತ್ಯ ಬೆಳಿಗ್ಗೆ ಮತ್ತು ಸಾಯಂಕಾಲ 10ಗ್ರಾಂ ಚಿರಿಯಾತ ಮತ್ತು 10ಗ್ರಾಂ ಅತಿಮಧುರವನ್ನು ಚೆನ್ನಾಗಿ ಕುಟ್ಟಿ ನುಣ್ಣಗೆ ಪುಡಿ ಮಾಡುವುದು. ಹೊತ್ತಿಗೆ 21/2ಗ್ರಾಂ ಚೂರ್ಣವನ್ನು ಸೇವಿಸಿ ಮೇಲೆ ಸಕ್ಕರೆ ಸೇರಿಸಿದ ಬಿಸಿಯಾದ ಹಾಲು ಕುಡಿಯುವುದು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

Comments

comments

Click to comment

Leave a Reply

Your email address will not be published. Required fields are marked *

To Top