fbpx
ಉಪಯುಕ್ತ ಮಾಹಿತಿ

‘ಈಜಿಪ್ಟ್’ ದೇಶದ ‘ಅಲೆಗ್ಸ್ಯಾಂಡ್ರಿಯ’ ನಗರದಲ್ಲಿ ‘ಕನ್ನಡದ’ ಕಂಪು

ಸಾಮ್ರಾಟ ಅಲೆಕ್ಸಾಂಡರ್ ನಿರ್ಮಿಸಿದ ಅಲೆಕ್ಸಾಂಡ್ರಿಯವನ್ನು ಇಂದು ಚಿಕ್ಕದಾಗಿ `ಅಲೆಕ್ಸ್’ ಎಂದೂ ಕರೆಯುತ್ತಾರೆ. ಅಲೆಕ್ಸಾಂಡ್ರಿಯ ಈ ಕಾರಣಗಳಿಂದ ಪ್ರಸಿದ್ಧ. ಮೊದಲನೆಯದು ಪ್ರಾಚೀನ ಏಳು ಮಹಾಅದ್ಭುತಗಳಲ್ಲಿ ಒಂದಾಗಿದ್ದ, ದಂತಕತೆಯಾಗಿರುವ ಅಲೆಕ್ಸಾಂಡ್ರಿಯಾದ ಲೈಟ್‍ಹೌಸ್, ಎರಡನೆಯದು ಅಷ್ಟೇ ಅಥವಾ ಅದಕ್ಕಿಂತ ಹೆಚ್ಚು ಜಗತ್ಪ್ರಸಿದ್ಧವಾದ ಅಲೆಕ್ಸಾಂಡ್ರಿಯಾದ ಗ್ರಂಥಾಲಯ.

ಆಕಸ್ಮಿಕ ಬೆಂಕಿ ಅನಾಹುತದಲ್ಲಿ ತಾಳೆ ಹಸ್ತಪ್ರತಿಗಳು ನಾಶಗೊಳಿಸಿತು. ಆಗ ಅಲೆಕ್ಸಾಂಡರ್ ಒಂದು ದೊಡ್ಡ ಗೋಡೆಯೊಂದನ್ನು ನಿರ್ಮಿಸಿ ಮತ್ತು ಅವನೆಲ್ಲ ಅಲ್ಲಿ ಕಾಣುವಾಗೇ ಮಾಡಿ ಎಂದು ತನ್ನ ಕಮಾಂಡರ್ಗಳಿಗೆ ಆದೇಶ ಮಾಡುತ್ತಾನೆ. ಅಲ್ಲಿ ಇದ್ದ ತಾಳೆ ಹಸ್ತಪ್ರತಿಗಳು ಗ್ರಂಥಗಳು ಗ್ರೀಕ್, ಲ್ಯಾಟಿನ್ ಮತ್ತು ಹೀಬ್ರೂ ಮಾತ್ರವಲ್ಲ ಸಂಸ್ಕೃತ ಮತ್ತು ಕನ್ನಡ ಕೂಡ ಒಳಗೊಂಡಿತ್ತು. ಅಲೆಕ್ಸಾಂಡ್ರಿಯಾ ಮೊದಲಿನಿಂದಲೂ ಕಲಿಕೆಯ, ಜ್ಞಾನಾರ್ಜನೆಯ ಕೇಂದ್ರವಾಗಿತ್ತು. ಮೊದಲನೇ ಟೊಲೆಮಿ ಸೋರ್ಟರ್ ಅಲೆಕ್ಸಾಂಡ್ರಿಯಾ ನಿರ್ಮಿಸಿದಾಗಲೇ ಅಲ್ಲಿ ಉನ್ನತ ಜ್ಞಾನಾರ್ಜನೆಯ ಅಲೆಕ್ಸಾಂಡ್ರಿಯನ್ ಮ್ಯೂಸಿಯಂ ಸ್ಥಾಪಿಸಲಾಯಿತು. ಅದು 1500 ವರ್ಷಗಳ ನಂತರ ರೂಪುಗೊಂಡ ಮಧ್ಯಕಾಲೀನ ವಿಶ್ವವಿದ್ಯಾನಿಲಯಗಳಂತೆಯೇ ಇತ್ತು. ಯೂಕ್ಲಿಡ್ ಬಹುಶಃ ಅಲ್ಲಿನ ಮೊಟ್ಟಮೊದಲ ಗಣಿತ ಬೋಧಕರಾಗಿದ್ದರು.

ಹೆಚ್ಚಿನ ಮಾಹಿತಿಗಾಗಿ ಇಲ್ಲಿ  ಕ್ಲಿಕ್ ಮಾಡಿ ಅಲೆಕ್ಸಾಂಡ್ರಿಯಾ ಗ್ರಂಥಾಲಯ

`ಈ ಹಿಂದೆ ನಮ್ಮ ಚರಿತ್ರೆಯಲ್ಲಿ ಬೌದ್ಧಿಕವಾಗಿ ಉನ್ನತವಾಗಿದ್ದ ವೈಜ್ಞಾನಿಕ ನಾಗರಿಕತೆಯೊಂದನ್ನು ಒಮ್ಮೆ ಮಾತ್ರ ಕಾಣಬಹುದಿತ್ತು. ಎರಡು ಸಾವಿರ ವರ್ಷಗಳ ಹಿಂದೆ ಅದರ ಕೇಂದ್ರ ಸ್ಥಾನ ಅಲೆಕ್ಸಾಂಡ್ರಿಯಾದ ಗ್ರಂಥಾಲಯವಾಗಿತ್ತು. ಅಲ್ಲಿ ಆ ಕಾಲದ ಪ್ರತಿಭಾನ್ವಿತರು ಗಣಿತಶಾಸ್ತ್ರ, ಭೌತಶಾಸ್ತ್ರ, ಜೀವಶಾಸ್ತ್ರ, ಖಗೋಳ ವಿಜ್ಞಾನ, ಸಾಹಿತ್ಯ, ಭೂಗೋಳ ಶಾಸ್ತ್ರ ಮತ್ತು ವೈದ್ಯಕೀಯ ಶಾಸ್ತ್ರಗಳ ಕ್ರಮಬದ್ಧ ಅಧ್ಯಯನಕ್ಕೆ ಬುನಾದಿ ಹಾಕಿದ್ದರು. ನಾವು ಇಂದಿಗೂ ಆ ತಳಹದಿಯ ಮೇಲೆಯೇ ನಮ್ಮ ಅಧ್ಯಯನವನ್ನು ಮುಂದುವರಿಸಿದ್ದೇವೆ. ಕ್ರಿ.ಪೂ. ಮೂರನೇ ಶತಮಾನದಲ್ಲಿ ಪ್ರಾರಂಭವಾದ ಅದು ಏಳು ಶತಮಾನಗಳ ನಂತರ ನಾಶವಾಗುವವರೆಗೂ ಅದು ಪ್ರಾಚೀನ ಜಗತ್ತಿನ ಮಿದುಳು ಮತ್ತು ಹೃದಯವಾಗಿತ್ತು’ ಎಂದು ಖ್ಯಾತ ವಿಜ್ಞಾನಿ ದಿ. ಕಾರ್ಲ್ ಸಾಗನ್ ತಮ್ಮ ಕೃತಿ `ಕಾಸ್ಮಾಸ್’ನಲ್ಲಿ ಹೇಳಿದ್ದಾರೆ.

ಈಜಿಪ್ಟ್ ನ ಅಲೆಕ್ಸಾಂಡ್ರಿಯಾ ಗ್ರಂಥಾಲಯದ ಗೋಡೆ ಮೇಲೆ ಕನ್ನಡ

ಇಂದು ಪ್ರಾಚೀನ ಗ್ರಂಥಾಲಯವಿತ್ತೆಂದು ಹೇಳುವ ಸ್ಥಳದಲ್ಲಿಯೇ ನಿರ್ಮಿಸಿರುವ ಆಧುನಿಕ ಗ್ರಂಥಾಲಯ ಹಾಗೂ ಅದರ ಹೊರರಚನೆಯನ್ನು ಗ್ರಾನೈಟ್ ಶಿಲೆಗಳಿಂದ ನಿರ್ಮಿಸಿದ್ದು ಅದರ ಮೇಲೆ ವಿಶ್ವದ ಈ ಹಿಂದೆ ಇದ್ದ ಹಾಗೂ ಈಗ ಬಳಕೆಯಲ್ಲಿರುವ ಭಾಷೆಗಳ ಎಲ್ಲ ಲಿಪಿಗಳನ್ನು ಕೆತ್ತಲಾಗಿದೆ.

ಇಂದು ಲೈಟ್‍ಹೌಸ್ ಹಾಗೂ ಗ್ರಂಥಾಲಯಗಳು ನೂರಾರು ವರ್ಷಗಳ ಹಿಂದೆಯೇ ನಾಶವಾಗಿದ್ದರೂ ಅವುಗಳಿದ್ದವು ಎನ್ನಲಾದ ಸ್ಥಳಗಳಲ್ಲಿ ಅವುಗಳ ಪ್ರತಿಕೃತಿಗಳಿವೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

2 Comments
SUNIL HIREMATH says:

kandkke tannde ada itihasvide erigu gottiro hage 2000 varshgal itohas but nanu uhisid prkar namm kannda bashyennu namm bhart deshd harapp kaldidnlu balusuta irbhuda anta nann anisike. ondu ellru tildu kollbekad vishy andre harapp jald janru hadgin badlu vyparvannu lotaldlli madta idru adre ai janru abhran priyru anta ellrigu gottu iro matu. abrellru balusutirudda gold annu agin kaldlli yu sah karntakd kolar dinda gold suplyy agta ittu idrinda ne tillyutte ka ndkme 5000 varshgal irihas vide

To Top