ಉಪಯುಕ್ತ ಮಾಹಿತಿ

ಕರ್ನಾಟಕ ಸರ್ಕಾರದ ಸಮಾಜ ಕಲ್ಯಾಣ ಇಲಾಖೆ ಜೊತೆ ಕೆಲಸ ಮಾಡಲು ಸುವರ್ಣ ಅವಕಾಶ !!

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ನೀವು ಈ ಸಮಾಜದ ಹಿಂದುಳಿದ ವರ್ಗದ ಏಳಿಗೆ ಬಯಸುತ್ತಿರಾ! ನಿಮ್ಮ ಹತ್ತಿರ ಸಮಾಜದ ಹಿಂದುಳಿದ ವರ್ಗಗಳಿಗೆ ಏನಾದರು ಒಳಿತು ಮಾಡಬೇಕು ಎಂಬ ಬಯಕೆ ಅಥವಾ ಸಮಾಜ ಕಲ್ಯಾಣ ಇಲಾಖೆಗೆ ಸಲಹೆ ಸೂಚನೆ ಕೊಡಬೇಕು ಎಂಬ ಆಸೆ ಇದೆಯಾ ? . ಇನ್ಮುಂದೆ ನಿಮ್ಮ ಹಳ್ಳಿ / ಹೋಬಳಿಯಿಂದಲೆಯೇ ವಾರದ 24/7 ಸಮಾಜ ಕಲ್ಯಾಣ ಇಲಾಖೆಗೆ ನಿಮ್ಮ ದೂರು / ಸಲಹೆ ಸೂಚನೆಗಳನ್ನ ಕೊಡಬಹುದು .

ಇದು ಹೇಗೆ ಸಾಧ್ಯ ?, ನಾನು ಇದರಲ್ಲಿ ಹೇಗೆ ಭಾಗವಹಿಸಬಹುದು? ಎನ್ನುವವರಿಗೆ ಇಲ್ಲಿದೆ ಉತ್ತರ

ಈ ಆಲೋಚನೆಯ ರೂವಾರಿ ನಮ್ಮ ಕನ್ನಡದ ಖಡಕ್ ಐಎಎಸ್ ಅಧಿಕಾರಿ ಮಣಿವಣ್ಣನ್ ರವರು [ಕನ್ನಡದ ಖಡಕ್ ಅಧಿಕಾರಿ – ಮಣಿವಣ್ಣನ್. (IAS)] . ಇವರಿಗೆ ಉತ್ತೆಜನ ನೀಡುತ್ತಿರುವುದು ಸಮಾಜ ಕಲ್ಯಾಣ ಇಲಾಖೆಯ ಮಂತ್ರಿಗಳಾದ ಶ್ರೀ ಆಂಜನೇಯ ರವರು .

ಈ ಆನ್ಲೈನ್ ಪ್ಲಟ್ಫಾರ್ಮ್(Online Platform) ಉಪಯೋಗವೇನು ?

ನೀವು SC/ST ವರ್ಗದ ವಿದ್ಯಾರ್ಥಿಗಳಾಗಿದ್ದು ನಿಮಗೆ ವಿದ್ಯಾರ್ಥಿ ವೇತನ ಸಿಗುತ್ತಿಲ್ಲವೇ ?
ನೀವು SC/ST ವರ್ಗದ ವಿದ್ಯಾರ್ಥಿಗಳಾಗಿದ್ದು ನಿಮಗೆ ಬ್ಯಾಂಕ್ ನಲ್ಲಿ 4% ಬಡ್ಡಿ ದರದಲ್ಲಿ ಲೋನ್ ಹೇಗೆ ಅಪ್ಲೈ ಮಾಡುವುದು ಎಂಬ ಯೋಜನೆಯ ಅರಿವಿದೆಯೇ?
ನಿಮ್ಮ ಹಳ್ಳಿ / ಹೋಬಳಿಯಲ್ಲಿ SC/STವರ್ಗದ ಜನರಿಗೆ ಆಗುತ್ತಿರುವ ಅನ್ಯಾಯದ ಬಗ್ಗೆ ಯಾರು ಸ್ಪಂದಿಸುತ್ತಿಲ್ಲವೇ .?
ಈ ರೀತಿ ಎಷ್ಟೋ ಸಮಸ್ಯೆ ಇರುತ್ತದೆ , ಇವಕ್ಕೆಲ್ಲಾ ಆ ಸರ್ಕಾರಿ ಕಚೇರಿ ಈ ಸರ್ಕಾರಿ ಕಚೇರಿ ಎಂದು ಅಲೆಯೋ ಬದಲು ನಿಮ್ಮ ಮನೆ ಇಂದಲೇ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಿ.

ಈ ಐಡಿಯಾ ಮಣಿವಣ್ಣನ್ ಸಾಹೇಬರಿಗೆ ಬಂದಿದ್ದು ಹೇಗೆ ?

ಮಣಿವಣ್ಣನ್ ಐಎಎಸ್ ರವರು ಮೊದಲಿಂದಲೂ ಜನಗಳ ಪರವಾಗಿ ಕೆಲಸ ಮಾಡಿದ್ದಾರೆ , ಇವರು ಕೋಲಾರದಲ್ಲಿ ಹಾಸ್ಟೆಲ್ ರೇಡ್ ಮಾಡಿ ಅಲ್ಲಿ ನಡೆಯುತ್ತಿದ್ದ ಅಕ್ರಮ ಬಯಲಿಗೆಳೆದರು [ಕೋಲಾರದ ಹಾಸ್ಟೆಲ್ ಗಳ ಮೇಲೆ ಖಡಕ್ ಅಧಿಕಾರಿ ಮಣಿವಣ್ಣನ್ ನೇತೃತ್ವದ ತಂಡದಿಂದ ದಾಳಿ!!!] . ಅಷ್ಟೇ ಅಲ್ಲ ಹುಬ್ಬಳ್ಳಿಯಲ್ಲಿ ಒಂದು ರಾತ್ರಿ ಹಾಸ್ಟೆಲ್ ಹುಡುಗರ ಜೊತೆ ಕಾಲ ಕಳೆದು ಅವರ ಅಹವಾಲುಗಳನ್ನು ಕೇಳಿ ಅವ್ರ ಊಟವನ್ನೇ ತಿಂದು ಅಲ್ಲಿನ ಪರಿಸ್ಥಿತಿಯನ್ನು ಸುಧಾರಿಸಿ ಬಂದವರು [OBC ಹಾಸ್ಟೆಲ್ ನಲ್ಲಿ ಕನ್ನಡದ ಖಡಕ್ ಅಧಿಕಾರಿ ಮಣಿವಣ್ಣನ್. (IAS) ವಾಸ್ತವ್ಯ]. ಮಣಿವಣ್ಣನ್ ಸಾಹೇಬರಿಗೆ ಗಾಂಧಿ ಮತ್ತು ಅಂಬೇಡ್ಕರ್ ಕಂಡ ಕನಸನ್ನು ನನಸು ಮಾಡಲು ಆನ್ಲೈನ್ ಒಂದು ಸುಖ ವೇದಿಕೆ ಅಂತ ಅನಿಸಿದೆ ಬನ್ನಿ ಅವರ ಆಶಯಕ್ಕೆ ಬೆಂಬಲ ನೀಡೋಣ ಒಂದು ಉತ್ತಮ ಸಮಾಜದ ನಿರ್ಮಾಣಕ್ಕೆ ಪಣ ತೊಡೋಣ.

ಈ ಆನ್ಲೈನ್ ಗ್ರೂಪ್ ಹೇಗೆ ಸೇರೋದು :

ನೀವು ನಿಮ್ಮ ಸ್ಮಾರ್ಟ್ ಫೋನ್ ನಲ್ಲಿ ಟೆಲಿಗ್ರಾಂ ಮೆಸ್ಸೆಂಜರ್ [https://telegram.org/] app ಡೌನ್ಲೋಡ್ ಮಾಡಬೇಕು .
ನಿಮ್ಮ ವಿವರವನ್ನ ಸಂಕ್ಷಿತವಾಗಿ 91 99011 00000 ಈ ನಂಬರ್ ಗೆ ಕಳುಹಿಸಬೇಕು.
ನೀವು ಈ ಗ್ರೂಪ್ ಗೆ ಯಾಕೆ ಸೇರಬೇಕು ಅಂತ ಬಯಸುತ್ತೀರಾ ಅಂತಲೂ ಹೇಳಿ.
ಈ ನಂಬರ್ ವಾರದ 24/7 ಕೆಲಸ ಮಾಡುತ್ತದೆ .
ನಿಮ್ಮ ಸ್ನೇಹಿತರಿಗೂ ಇದರ ಬಗ್ಗೆ ಮಾಹಿತಿ ಕೊಡಿ .

ಈ ಗುಂಪಿನಲ್ಲಿ ಯಾರ್ ಯಾರ್ ಇರ್ತಾರೆ !

ಈ ಗುಂಪಿನಲ್ಲಿ ಐಎಎಸ್ ಮಣಿವಣ್ಣನ್ ರವರು , ಅವರ ಸಿಬ್ಬಂದಿ , ಸಮಾಜ ಕಲ್ಯಾಣದ ಎಲ್ಲ ಉನ್ನತ ಉದ್ದೆಯ ಅಧಿಕಾರಿಗಳು ,ಅವರ ಎಲ್ಲ ಸಿಬ್ಬಂದಿ ವರ್ಗದವರು
ಇರುತ್ತಾರೆ. ನಿಮ್ಮ ಸಮಸ್ಯೆ / ಸಲಹೆ ಅಥವಾ ಸೂಚನೆಗೆ ಅತಿ ಶೀಘ್ರವಾಗಿ ಇಲ್ಲಿ ಸ್ಪಂದನೆ ಸಿಗುತ್ತದೆ .

ಮತ್ತೆ ಯಾಕೆ ತಡ ಶ್ರೀಘ್ರವಾಗಿ ಟೆಲಿಗ್ರಾಂ ಮೆಸ್ಸೆಂಜರ್ ಡೌನ್ಲೋಡ್ ಮಾಡಿ , ಈ ಗುಂಪಿನ ಮೆಂಬರ್ ಆಗಿ .

ಅನಾವಶ್ಯಕ ಸಂದೇಶಗಳು ಬೇಡ ಹಾಗು ಗುಂಪಿನಲ್ಲಿ ಚರ್ಚೆ ಸಮಯ ಬೆಳಗ್ಗೆ 6 ರಿಂದ 8 ಹಾಗು ರಾತ್ರಿ 9 ರಿಂದ 10

ಹೆಚ್ಚಿನ ಮಾಹಿತಿಗೆ ಕೆಳಗೆ ನೋಡಿ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

Comments

comments

Click to comment

Leave a Reply

Your email address will not be published. Required fields are marked *

To Top