fbpx
ಕನ್ನಡ

#SayNoToBahubali ಜ್ವಾಲೆಗೆ ಮೊದಲ ಕಿಡಿ ಹಚ್ಚಿದ್ದು ನಮ್ಮ ಸಾಮಾನ್ಯ ಕನ್ನಡಿಗ

ಇಂದು ಕನ್ನಡಿಗರ ಕಿಚ್ಚು ಸ್ವಾಭಿಮಾನ ನೋಡಿ ನನಗೆ ತುಂಬಾ ಖುಷಿ ಆಗುತ್ತಿದೆ , #SayNoToBahubali ಇಷ್ಟು ದೊಡ್ಡ ಮಟ್ಟದಲ್ಲಿ ಸಕ್ಸಸ್ ಆಗೋಕೆ 3 ಜನ ಕಾರಣ ಕರ್ತರು . ಅವರು ಯಾರೆಂದರೆ

ಸಂದೀಪ್ ಪಾರ್ಶ್ವನಾಥ್
ಅಧ್ಯಕ್ಷರು ಸಾಮಾನ್ಯ ಕನ್ನಡಿಗ ಪ್ರತಿಷ್ಠಾನ

ಪ್ರವೀಣ್ ಕುಮಾರ್ ಶೆಟ್ಟಿ
ಅಧ್ಯಕ್ಷರು ಕರ್ನಾಟಕ ರಕ್ಷಣಾ ವೇದಿಕೆ

ವಾಟಾಳ್ ನಾಗರಾಜ್
ಅಧ್ಯಕ್ಷರು, ಕನ್ನಡ ಒಕ್ಕೂಟ

ಮಾರ್ಚ್ ಮೊದಲನೇ ವಾರ ನಾನು ಯಾವುದೋ ವಿಡಿಯೋ ನೋಡುವ ಸಂಧರ್ಭದಲ್ಲಿ ಯುಟ್ಯೂಬ್ ನಲ್ಲಿ ‘suggestion’ ಆಗಿ ಬಂದ ಈ ಸತ್ಯರಾಜ್ ನ ಕಾವೇರಿ ಸಮಯದಲ್ಲಿ ಹೇಳಿದ್ದ ಹೇಳಿಕೆಗಳ ವಿಡಿಯೋ ನೋಡಿ ಬಹಳ ಆಶರ್ಯವಾಯ್ತು ಅಷ್ಟಾಗಿ ತಮಿಳು ಬಾರದ ನಾನು ಮತ್ತೆ ಮತ್ತೆ ಅದೇ ವಿಡಿಯೋವನ್ನು ಕೇಳಿ ಅರ್ಥ ಮಾಡಿಕೊಂಡೆ ಬಹಳ ಕೋಪದಿಂದಲೇ

ಇದನ್ನು ನಾನು ಸಾಮಾನ್ಯ ಕನ್ನಡಿಗ ತಂಡದ ಅಧ್ಯಕ್ಷರಾದ ಸಂದೀಪ್ ರವರಿಗೆ ಕಳುಹಿಸಿದೆ . ಅವರು ಈಗಾಗಲೇ ಎಲ್ಲಾಕಡೆ ವೈರಲ್ ಆದ ಸಾಮಾನ್ಯ ಕನ್ನಡಿಗ ವಿಡಿಯೋವನ್ನು ಸಾಮಾನ್ಯ ಕನ್ನಡಿಗ ಫೇಸ್ ಬುಕ್ ಪುಟದಲ್ಲಿ ಲೈವ್ ಮಾಡಿದರು ಅಷ್ಟೇ ಅಲ್ಲ , ನಾವು “ಬಾಹುಬಲಿ -2” ಬಿಡುಗಡೆ ಮಾಡಲು ಬಿಡುವುದಿಲ್ಲ ಅಂತ ಹೇಳಿಬಿಟ್ಟರು .

ನಾನು ಇದು ಆಗದ ಮಾತು , ಬಾಹುಬಲಿ -2 ಒಂದು ದೊಡ್ಡ ಮಟ್ಟದ ಫಿಲಂ , ಸಾಮಾನ್ಯ ಕನ್ನಡಿಗ ತಂಡ ಇದನ್ನು ತಡೆಯಲು ಸಾಧ್ಯನಾ ಅಂದು ಕೊಂಡೆ .

ಆದರೆ #venkayasakaya ಅಭಿಯಾನದಲ್ಲಿ [ವೆಂಕಯ್ಯ ಸಾಕಯ್ಯ: ಆನ್‌ಲೈನ್‌ ಅಭಿಯಾನ ಹಿಟ್‌!] ಸಂದೀಪ್ ತಂಡದ ಕಾರ್ಯಕೌಶಲ್ಯವನ್ನು ಮತ್ತು ಆನ್ಲೈನ್ ನಲ್ಲಿ IT/BT ಹುಡುಗರನ್ನ [ವೆಂಕಯ್ಯ ನಾಯ್ಡುಗೆ ಕನ್ನಡ ಕಲಿಸಿದ ಸಾಮಾನ್ಯ ಕನ್ನಡಿಗ!]ಅವರು ಸೆಳೆಯುವ ಪರಿ ಮತ್ತು ಕಂಬಳ ಹೋರಾಟದಲ್ಲಿ ಆನ್ಲೈನ್ ಬಿಟ್ಟು ಬೀದಿಯಲ್ಲೂ IT/BT ಹುಡುಗರನ್ನ ಕರೆತಂದ[ಕಂಬಳ ಓಟಕ್ಕೆ ಸಮ್ಮತಿ, ಸಾಮಾನ್ಯ ಕನ್ನಡಿಗನಿಗೆ ಸಿಕ್ಕ ಜಯ] ಅವರ ಸಂಘಟನಾ ಚಾತುರ್ಯ ನೋಡಿದ್ದ ನಾನು ಇವರು ಈ ಕೆಲಸವನ್ನು ಹಿಡಿದೇ ತೀರುತ್ತಾರೆ ಎಂದು ಭಾವಿಸಿದ್ದೆ.
ಇವತ್ತು ಅದನ್ನು ಸಾಧಿಸಿಯೇ ಬಿಟ್ಟರು.

ಮೊದಲು ವೈರಲ್ ಆದ ಲೈವ್ ಮಾಡಿದ್ದು ಸಾಮಾನ್ಯ ಕನ್ನಡಿಗ ಪುಟದಲ್ಲಿ ಆನಂತರ whatsapp , ಇನ್ಸ್ಟಾಗ್ರಾಮ್ ಇನ್ನಿತರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು . ಆದರೆ ವೀಕ್ ಡೇ ಬೀದಿಗೆ ಬರಬೇಕಲ್ಲ ನಮ್ಮ IT/BT ಯುವಕರು ಅದಕ್ಕೆ ಸಾಮಾನ್ಯ ಕನ್ನಡಿಗನ ಕೈ ಜೋಡಿಸಿದ್ದು ಕರ್ನಾಟಕ ರಕ್ಷಣಾ ವೇದಿಕೆ ಜೊತೆ , ಪ್ರವೀಣ್ ಕುಮಾರ್ ಶೆಟ್ಟಿಯವರು ಸತ್ಯರಾಜ್ ಹೇಳಿಕೆ ಖಂಡಿಸಿ ‘ಕನ್ನಡ ವಾಣಿಜ್ಯ ಮಂಡಳಿ’ ಮುಂದೆ ಪ್ರತಿಭಟನೆ ಮಾಡಿದರು , ಆಗಲೇ ನಮ್ಮ ಫಿಲಂ ಇಂಡಸ್ಟ್ರಿಗೆ ಗೊತ್ತಾಗಿದ್ದು ಈ ವಿಡಿಯೋ ಬಗ್ಗೆ .

ಇಷ್ಟು ದೊಡ್ಡ ಮಟ್ಟದಲ್ಲಿ ಹೋರಾಟ ನಡೆಯಬೇಕೆಂದರೆ ಇದಕ್ಕೆ ಮೂಲ ಕಾರಣ ಒಂದು ಕನ್ನಡಿಗರ ಬಗ್ಗೆ ಕೇವಲವಾಗಿ ಮಾತಾಡಿದ್ದು ಮತ್ತೊಂದು ಕನ್ನಡ ಪರ ಹೋರಾಟಗಾರ ವಾಟಾಳ್ ರ ಬಗ್ಗೆ ಸತ್ಯರಾಜ್ ನ ಕುಹಕಿ ಮಾತುಗಳು , ಇಷ್ಟೇ ಸಾಕಾಗಿತ್ತು ವಾಟಾಳ್ ನಾಗರಾಜ್ ರವರು ಪ್ರವೀಣ್ ಕುಮಾರ್ ಶೆಟ್ಟರ ಜೊತೆ ಹೋರಾಟಕ್ಕೆ ನಿಲ್ಲಲು .
ಇದರ ಫಲ ಶ್ರುತಿಯೇ ಇವತ್ತಿನ ಬಾಹುಬಲಿ ನಿರ್ಮಾಪಕರ ಮತ್ತು ನಿರ್ದೇಶಕರ ಡೋಂಗಿ ನಾಟಕ .

ಸಾಮಾನ್ಯ ಕನ್ನಡಿಗ ತಂಡ ದಿನ ಒಂದರಿಂದ ಇವತ್ತಿನವರೆಗೂ ಇದೇ ವಿಷಯವಾಗಿ ಕೆಲಸ ಮಾಡುತ್ತಾ ಬಂದಿದೆ ,

ಕರ್ನಾಟಕದಲ್ಲಿ ಬಾಹುಬಲಿ-2 ರೆಲೀಸ್ ಗೆ ಸಂಕಟವಾದ ಕಟ್ಟಪ್ಪನ ಕನ್ನಡ ವಿರೋಧಿ ಹೇಳಿಕೆ !!

ಕರ್ನಾಟಕದಲ್ಲಿ ಬಾಹುಬಲಿ -2 ರಿಲೀಸ್ ಮಾಡೋಕ್ಕೆ ಬಿಡಲ್ವಂತೆ ? ಯಾಕೆ ಅಂತ ನೋಡಿ !

‘ಬಾಹುಬಲಿ-2’ ಚಿತ್ರವನ್ನ ಕರ್ನಾಟಕದಲ್ಲಿ ನಿಷೇಧಿಸುವುದಾದರೆ ಖಂಡಿತ ಒಗ್ಗಟ್ಟಿನ ಹೋರಾಟಕ್ಕಿಳಿಯೋಣ : ಡಾ.ವಿಷ್ಣು ಸೇನಾ ಸಮಿತಿ

ಕನ್ನಡಿಗರ ವಿರೋಧದ ನಡುವೆಯೂ ಪಬ್ಲಿಕ್ ರಂಗ , ಬಾಹುಬಲಿ-2 ಪ್ರಚಾರ ಏಕೆ ಮಾಡುತ್ತಿದ್ದಾರೆ ಗೊತ್ತಾ ??

ಕನ್ನಡಿಗರ ಬಗ್ಗೆ ಕಟ್ಟಪ್ಪನ ಕೆಟ್ಟ ಮಾತು: ಕರ್ನಾಟಕದಲ್ಲಿ ಬಾಹುಬಲಿ-2 ನಿಷೇಧಕ್ಕೆ ಹೆಚ್ಚಿದ ಒತ್ತಡ

ಕರ್ನಾಟಕದಲ್ಲಿ ‘ಕಟ್ಟಪ್ಪ’ನಿಗೆ ಕಡಿವಾಣ : ಕರ್ನಾಟಕದ 22 ಜಿಲ್ಲೆಗಳಲ್ಲಿ ಕಟ್ಟಪ್ಪನ ವಿರುದ್ಧ ದೂರು ದಾಖಲೆ

ಬಾಹುಬಲಿ ವಿರುದ್ಧ ಈಗ ಟಿಪ್ಪು ಸೇನೆ !

ಕನ್ನಡ ದ್ರೋಹಿಯನ್ನು ವಿಜೃಂಭಿಸುತ್ತಿರುವ ಕನ್ನಡ ನ್ಯೂಸ್ ಚಾನೆಲ್ ನಮಗೆ ಬೇಕಾ ???

ಕಟ್ಟಪ್ಪ ದೆಸೆ : ಕನ್ನಡಿಗರಿಂದ ಚಪ್ಪಲಿ ಏಟು ತಿಂದ ಪ್ರಭಾಸ್

ವಾಟಾಳ್ ನಾಗರಾಜ್ ನಾಯಕತ್ವ ದಲ್ಲಿ ಬಾಹುಬಲಿ ಟ್ರೈಲರ್ ತಡೆದ ಕನ್ನಡಿಗರು

ಆಸ್ಟ್ರಲ್ ಪೈಪ್ ನಿಂದ ಬಾಹುಬಲಿ ಪ್ರಚಾರ ನಿಲ್ಲಿಸಿದ ಸಾಮಾನ್ಯ ಕನ್ನಡಿಗ

ಬಾಹುಬಲಿ ಚಿತ್ರಕೆ ಕರ್ನಾಟಕದಲ್ಲಿ ಪ್ರಚಾರ ಬೇಡ ಅಂತ BMS ಗೆ ಸಾಮಾನ್ಯ ಕನ್ನಡಿಗನಿಂದ ಆಗ್ರಹ !!

ರಾಜ್ಯದಲ್ಲಿ ‘ಬಾಹುಬಲಿ–2’ ವಿತರಣೆ ಹಕ್ಕು ಪಡೆಯಲು ನಿರಾಸಕ್ತಿ

ಕನ್ನಡಿಗರು ಮಾಡುತ್ತಿರುವುದು ಸರಿಯಲ್ಲ : ಕಟ್ಟಪ್ಪ ‘ನೈಸ್ ಮ್ಯಾನ್’ ಎಂದ ರಾಜಮೌಳಿ

ಕೊನೆಗೂ #SayNoToBahubali ಗೆ ಬೆಂಬಲ ಕೊಟ್ಟ ಕೆಲವು ಕನ್ನಡ ಚಾನೆಲ್ ಗಳು

ಪ್ರಭಾಸ್ ಅಭಿಮಾನಿಗಳಿಂದ ಕನ್ನಡಿಗರ ದಿಕ್ಕು ತಪ್ಪಿಸುವ ಪ್ರಯತ್ನ

ಕನ್ನಡಿಗರೇ “Troll Tollywood” ಗೆ ನಿಮ್ಮ ಶಕ್ತಿ ತೋರಿಸಿ

ಬಾಹುಬಲಿ ಪ್ರೊಡ್ಯೂಸರ್ ಬೆಂಗಳೂರಿನಲ್ಲಿ, ಅಂಬರೀಷ್ ಮಧ್ಯಸ್ಥಿಕೆ ಯಲ್ಲಿ ಬಾಹುಬಲಿ ರಿಲೀಸ್ ಆಗುತ್ತಾ !!!

ಒಬ್ಬ ಸಾಮಾನ್ಯ ಕನ್ನಡಿಗನಾಗಿ ಬಾಹುಬಲಿ 2 , ಕರ್ನಾಟಕದಲ್ಲಿ ತಡಿಯೋದು ಹೇಗೆ

ಬಾಹುಬಲಿ-2 ಚಿತ್ರದ ಗೊಂದಲಗಳಿಗೆ ತೆರೆಯಳಿಯುವ ಸಮಯ

ಅಂಬಿ ಆಯಿತು ಬಾಹುಬಲಿ -೨ಕ್ಕೆ ಈಗ ಕಿಚ್ಚ ಸುದೀಪ್ ಮಧ್ಯಸ್ಥಿಕೆ ಮಾಡ್ತಾರಾ ?

ಸತ್ಯರಾಜ್ ಬದಲು ರಾಜಮೌಳಿ ಕನ್ನಡಿಗರಲ್ಲಿ ಕ್ಷಮಾಪಣೆ , ತಿರಸ್ಕರಿಸಿದ ಸಾಮಾನ್ಯ ಕನ್ನಡಿಗ

ಕೋಟಿ ರೂಪಾಯಿ ಕೊಟ್ಟರು ನಾವು ಬಾಹುಬಲಿ-2 ನೋಡೋಲ್ಲ : ಮೂಲತಃ ಆಂಧ್ರದ ಸಜ್ಜನರ ಮಾತನ್ನು ಕೇಳಿ

ಮಧ್ಯಸ್ಥಿಕೆ ಬಿಟ್ಟು ಕನ್ನಡ ಪರ ಹೋರಾಟಕ್ಕೆ ಬೆಂಬಲ ಕೊಟ್ಟ ಅಂಬಿ

ಬೆಂಗಳೂರಲ್ಲಿ ಬಾಹುಬಲಿ ಫಿಲಂ ಪ್ರಮೋಷನ್ ಫುಲ್ ಕ್ಯಾನ್ಸಲ್
ಈ ಹೋರಾಟಕ್ಕೆ ಯಾವುದೇ ಫಿಲಂ ಸ್ಟಾರ್ ಸಪೋರ್ಟ್ ಇಲ್ಲ ಆದರೂ ಅಭಿಯಾನ ಬಾರಿ ಮಟ್ಟದ ಯಶಸ್ಸು ಕಂಡದ್ದು ಸ್ವಾಭಿಮಾನಿ ಕನ್ನಡಿಗರಿಂದ , ಕನ್ನಡಿಗರು ಮನಸ್ಸು ಮಾಡಿದರೆ ಯಾವುದೇ ಕರ್ನಾಟಕದ ಹೋರಾಟವನ್ನು ಯಶಸ್ಸುಗೊಳಿಸಬಹುದು ಎಂಬುದಕ್ಕೆ ಇದೊಂದು ಬಹು ಮುಖ್ಯ ಉದಾಹರಣೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top