fbpx
ಉಪಯುಕ್ತ ಮಾಹಿತಿ

ಕೂಲಿ ಮಾಡಿ ಐಪಿಎಸ್‍ ಮಾಡಿದ ಸಾಧಕನ ಜೀವನಕಥೆ

‘ಜೀ-ಕನ್ನಡ’ದಲ್ಲಿ ಪ್ರಸಾರವಾಗುವ ‘ವೀಕೆಂಡ್ ವಿತ್ ರಮೇಶ್’ ಕಾರ್ಯಕ್ರಮದಲ್ಲಿ ಈ ಬಾರಿ ಖಡಕ್ ಐ.ಪಿ.ಎಸ್ ಅಧಿಕಾರಿ ರವಿ.ಡಿ.ಚೆನ್ನಣ್ಣನವರ್ ಕಾಣಿಸಿಕೊಳ್ಳಲಿದ್ದಾರೆ. [ಕನ್ನಡದ ಖಡಕ್ ಆಫೀಸರ್ ರವಿ ಚನ್ನಣ್ಣನವರ್…]

ಈಗಾಗಲೇ ರವಿ.ಡಿ.ಚೆನ್ನಣ್ಣನವರ್ ಅವರ ಕಾರ್ಯಕ್ರಮದ ರೆಕಾರ್ಡಿಂಗ್ ಮುಗಿದಿದ್ದು ಈ ವಾರ ಪ್ರಸಾರವಾಗಲಿದೆ ಎಂದು ಕಾರ್ಯಕ್ರಮ ಸಂಘಟಕರು ತಿಳಿಸಿದ್ದಾರೆ.

ಕಳೆದ ಎರಡು ಆವೃತ್ತಿಗಳಿಂದಲೂ ರವಿ.ಡಿ.ಚೆನ್ನಣ್ಣನವರ್ ಅವರನ್ನ ವೀಕೆಂಡ್ ಸಾಧಕರ ಸೀಟಿನಲ್ಲಿ ನೋಡಬೇಕು ಎಂಬುದು ಪ್ರೇಕ್ಷಕರ ಒತ್ತಾಯವಾಗಿತ್ತು. ಈ ವಾರ ಆಸೆ ನೆರವೇರಲಿದೆ.[ರವಿ ಚನ್ನಣ್ಣನವರು ಕೆಳಹಂತದ ಸಹದ್ಯೋಗಿಗಳ ಕೈಯಲ್ಲಿ ಏನು ಮಾಡಿಸಿದ್ರು ನೋಡಿ…]

ರವಿ.ಡಿ.ಚೆನ್ನಣ್ಣನವರ್ ಅವರು ಬದುಕು ಸಿನಿಮಾ ಕಥೆಯಷ್ಟೇ ರೋಚವಾಗಿದೆ. ಪೊಲೀಸ್ ಆಗುವ ಮುನ್ನ ದಿನಗೂಲಿ ಮಾಡಿ, ಸ್ವೀಪರ್ ಹಾಗೂ ಧಾರವಾಡದ ಹೋಟೆಲ್ ನಲ್ಲಿ ಮಾಣಿಯಾಗಿ ಕೆಲಸ ಮಾಡಿದ್ದಾರೆ. ನಂತರ ಅದೇ ಧಾರವಾಡದ ಪೊಲೀಸ್ ಅಧಿಕಾರಿಯಾಗಿ ಕೆಲಸ ಮಾಡಿರುವುದು ನಿಜಕ್ಕೂ ಸಾಧನೆಯೇ ಸರಿ.

ರವಿ.ಡಿ.ಚೆನ್ನಣ್ಣನವರ್ ಅವರು ‘ಕರ್ನಾಟಕದ ಸಿಂಗಂ’ ಎಂದೇ ಖ್ಯಾತಿಗೊಳಿಸಿಕೊಂಡಿದ್ದಾರೆ. ಸದ್ಯ, ಮೈಸೂರಿನಲ್ಲಿ ರವಿ ಚನ್ನಣ್ಣನವರ್ ಕಾರ್ಯ ನಿರ್ವಹಿಸುತ್ತಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top