fbpx
ದೇವರು

ಅರಳಿ,ಬಿಲ್ವ,ಬೇವಿನ ಮರಗಳ ಉದ್ಭವದ ಬಗ್ಗೆ ಹಿಂದಿನ ಪುರಾಣದ ಕಥೆ ತಿಳಿದುಕೊಳ್ಳೋಣ ಬನ್ನಿ….

ಅರಳಿ,ಬಿಲ್ವ,ಬೇವಿನ ಮರಗಳ ಉದ್ಭವದ ಬಗ್ಗೆ ಹಿಂದಿನ ಪುರಾಣದ ಕಥೆ ,
ಪೂಜ್ಯನೀಯ ಮರಗಳ ಇತಿಹಾಸ ಹೇಗೆ,ಎಲ್ಲಿ,ಯಾವಾಗ?ತಿಳಿದುಕೊಳ್ಳೋಣ ಬನ್ನಿ….

ಪೂರ್ವದಲ್ಲಿ ಪಾರ್ವತಿ, ಪರಮೇಶ್ವರ ಏಕಾಂತದಲ್ಲಿದಾಗ ,ದೇವತೆಗಳು ಮಹಾ ವಿಷ್ಣುವನ್ನು ಮುಂದಿಟ್ಟುಕೊಂಡು ,ಕೈಲಾಸಕ್ಕೆ ಬಂದರು. ಆಗ ಪಾರ್ವತಿ- ಪರಮೇಶ್ವರರು ಏಕಾಂತದಲ್ಲಿದುದ್ದನ್ನು ನೋಡಿ, ಮಹಾವಿಷ್ಣುವು ದೇವತೆಗಳಿಗೆ ಈ ಸಮಯವು ಅಷ್ಟು ಒಳ್ಳೆಯದಲ್ಲ ,ನಂತರ ಬರೋಣ ಎಂದು ಹೇಳಿದನು.

ಆಗ ದೇವತೆಗಳು, ತರಕಾಸುರ,ಶೂರ ಪದ್ಮಾಸುರ, ರಾಕ್ಷಸರ ಹಾವಳಿ ತಾಳಲಾರದೆ ಇದಕ್ಕೇ ಸಲಹೆ ಪಾರ್ವತಿ ಪರಮೇಶ್ವರರಿಂದ ಸೂಕ್ತ ಉಪಾಯ ಪಡೆಯಬೇಕೆಂದು ಹೆಬ್ಬಯಕೆಯನ್ನು ಪರಮಾತ್ಮನಾದ ವಿಷ್ಣುವಿಗೆ ತಿಳಿಸಿ ಆಗ ದಂಪತಿಗಳನ್ನು ನೋಡಲೇಬೇಕೆಂದು ಪಟ್ಟು ಹಿಡಿದರು.

ಪಾರ್ವತಿಯ ಶಿವನೊಡನೆ ಮೈ ಮರೆತು ಅನಂದದಿಂದಿರುವಾಗ ,ಕ್ಯೆಲಾಸಕ್ಕೆ ಯಾರೋ ಬಂದು ನಮಗಾಗಿ ಕಾದಿರುವರು ಎಂದು ಸೂಕ್ಷ್ಮತೆಯನ್ನು ತಿಳಿದ ಪರಶಿವನು, ಪಾರ್ವತಿಯನ್ನು ಬದಿಗೆ ಕಳಿಸಿ ದೇವತೆಗಳು ನಿಂತಿರುವುದನ್ನು ನೋಡಿದನು.

ಶಿವನು ಏನು ಹೇಳಲಾಗದೆ ಮೂಕ ವಿಸ್ಮಯನಾದನು .ದೇವತೆಗಳು ಪರಾಶಿವನನ್ನು ನೋಡಿ ಸ್ತಂಭೀಭೂತರಾಗಿ ಹಾಗೆ ನಿಂತರು.ಜಗನ್ಮಾತೆಯಾದ ಪಾರ್ವತಿಯ ನಾಚಿಕೆ ಪಟ್ಟವಳಾಗಿ ,ಕ್ರೋಧದಿಂದ, ದೇವತೆಗಳನ್ನು ನೋಡಿ,
” ನನ್ನ ಏಕಾಂತಕ್ಕೆ ನೀವು ಅಡ್ಡಿ ಪಡಿಸಿದ್ದರ ತಪ್ಪಿನಿಂದ ನೀವೆಲ್ಲರೂ ಈ ಕ್ಷಣದಲ್ಲೇ ವೃಕ್ಷಗಳಾಗಿರಿ” ಎಂದು ಶಾಪವನ್ನಿತಳು.ತಕ್ಷಣ ಭಗವತಿಯ ಕೋಪಕ್ಕೆ ತುತ್ತಾಗಿ ಎಲ್ಲರೂ ವೃಕ್ಷಗಳಾಗಿಬಿಟ್ಟರು.

ಮಹಾವಿಷ್ಣುವು ಅರಳಿ ವೃಕ್ಷನಾದನು, ಪಾರ್ವತಿಯ ದೃಷ್ಟಿಯೂ ಭೂಮಿ ಮೇಲೆ ಕೂಡ ಬಿದ್ದಿತು,ಆಗ ಜಗನ್ಮಾತೆಯಾದ ಪಾರ್ವತಿಯ ಭೂದೇವಿಗೆ ,”ನಿನಗೆ ರೂಪವಿಲ್ಲದಿರಲಿ. ನೀನೂ ಅನೇಕರಿಗೆ ಭಾರ್ಯೆಯಾಗು. ಯಾವಾಗಲೂ ಅಯೋನಿಜೆಯಾಗಿ ,ಭುಗರ್ಭದಲ್ಲಿ ಪ್ರಸವಿಸುವ ಶಕ್ತಿಯನ್ನು ಹೊಂದು” ಎಂದು ಶಾಪವನ್ನಿತಳು.
ಈ ಶಾಪವೇ ಮುಂದೆ ತ್ರೇತಾಯುಗದಲ್ಲಿ ಸೀತೆಯೂ ಹುಟ್ಟುವುದಕ್ಕೆ ಕಾರಣವಾಯಿತು.ಮುಂದೆ ಕಾಲಾಂತರದ ಯುಗಾಂತ್ಯದಲ್ಲಿ ಸೀತೆಯೂ ಭೂದೇವಿಯನ್ನು ಸೇರಿದಳು. ಅದ್ದರಿಂದ ಸೀತೆಗೆ ಭುಜಾತೆ ಎಂದು ಹೆಸರು ಬಂತು.

ಇದರಿಂದ ದೇವತೆಗಳು ಎಲ್ಲರೂ ಒಂದೊಂದು ವೃಕ್ಷಗಳಾಗಿ ಮುಂದೆ ಮಹರ್ಷಿಗಳಿಂದ,ಮುನಿಗಳಿಂದ ಪೂಜಿಸಲ್ಪಟ್ಟರು.
ವಿಷ್ಣುವು ಅರಳಿಮರದಲ್ಲಿ ನಿಂತಿರುವುದನ್ನು ಕಂಡು ಸೃಷ್ಟಿಯು ಏರುಪೇರಾಯಿತು.,ನಂತರ ಪರಶಿವನು ಪಾರ್ವತಿಯನ್ನು ಕರೆದು ,ಈ ಶಾಪವನ್ನು ಹಿಂತೆಗೆದುಕೊ ಎಂದು ವಿನಂತಿಸಿದನು. ಪಾರ್ವತಿಯು ಇದಕ್ಕೆ ಸಮ್ಮತಿಸದೆ, ಶಾಪವೂ ನೆರವೇರುವುದು ಎಂದು ಹೇಳಿದಳು.

ಅದಕ್ಕೆ ಶಿವನು,ವಿಷ್ಣುವಿನ ಜೊತೆ ಸೇರಿ,ಬಿಲ್ವಮರವನ್ನು ಆಶ್ರಯಿಸಿದನು, ಪಾರ್ವತಿಯು ಶಿವನ ವಿರಹವನ್ನು ತಾಳಲಾರದೆ ಬೇವಿನ ಮರವನ್ನು ಆಶ್ರಯಿಸಿದಳು.
ಹೀಗೆ ಅರಳಿ,ಬೇವು, ಬಿಲ್ವ,ದ್ಯೆವೀಕ ವೃಕ್ಷಗಳಾಗಿ ಭೂಲೋಕದಲ್ಲಿ ಮಾನ್ಯತೆ ಪಡೆದವು.

ಶಿವ ವಿಷ್ಣು ಶಕ್ತಿ ಸಂಕೇತವಾದ ಈ ವೃಕ್ಷಗಳನ್ನು ಪೂಜಿಸಿ ನಾವೂ ನಮ್ಮ ಪಾಪ ಪರಿಹಾರ ಮಾಡಿಕೊಳ್ಳಬಹುದು.


ಬ್ರಹ್ಮದಂಡಿಯೂ ಶಿವನ ನಾಮದ ಮಹಿಮೆಯಿಂದ ವೃಕ್ಷವೂ ಪರಿಮಳವಾಗಿ ಮಾರ್ಪಟ್ಟಿತು. ಬ್ರಹ್ಮದಂಡಿಯೂ ತನ್ನ ಪ್ರತಿಯೊಂದು ಕಡ್ಡಿ,ಕಾಷ್ಠ,ಎಲೆಗಳಲ್ಲಿ ತನ್ನ ಶಕ್ತಿಯನ್ನು ತುಂಬಿಕೊಂಡಿತ್ತು.
ಹೀಗೆ ದೈವೀಕ ಮರಗಳು ಭೂಮಿಯ ಮೇಲೆ ಉದ್ಭವಗೊಂಡವು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top