fbpx
ಸಾಧನೆ

ಇತಿಹಾಸ ಸೃಷ್ಟಿಸಿದ ‘ಥಟ್ ಅಂತ ಹೇಳಿ’ ರಸ ಪ್ರಶ್ನೆ ಕಾರ್ಯಕ್ರಮ

ದೂರದರ್ಶನ ಚಂದನ ವಾಹಿನಿಯ ಜನಪ್ರಿಯ ರಸಪ್ರಶ್ನೆ ಕಾರ್ಯಕ್ರಮ ‘ಥಟ್ ಅಂತ ಹೇಳಿ’ ಹೊಸ ಇತಿಹಾಸ ಸೃಷ್ಟಿಸಿದೆ. ಬರೋಬ್ಬರಿ 3000 ಸಂಚಿಕೆಗಳ ಗಡಿ ತಲುಪುವ ಮೂಲಕ ಭಾರತದ ದೂರದರ್ಶನ ಇತಿಹಾಸದಲ್ಲೇ ಹೊಸ ದಾಖಲೆ ಬರೆದಿದೆ.

ಕಾರ್ಯಕ್ರಮದ ಅಂಕಿ-ಅಂಶಗಳ ವಿವರ

  • ‘ಥಟ್ ಅಂತ ಹೇಳಿ ಕ್ವಿಜ಼್ ಕಾರ್ಯಕ್ರಮವು ಹಲವು ವಿಧಗಳಲ್ಲಿ ದಾಖಲೆಗಳನ್ನು ಸೃಷ್ಟಿಸಿದೆ. ಅವುಗಳಲ್ಲಿ ಕೆಲವನ್ನು ಈ ಕೆಳಗೆ ವಿವರಿಸಲಾಗಿದೆ:
  • ನಿರಂತರತೆ 2450 ಕಂತುಗಳು. ಈ ದಾಖಲೆ ಕನ್ನಡದ ವಾಹಿನಿಗಳನ್ನು ಒಳಗೊಂಡಂತೆ ಎಲ್ಲ ಭಾರತೀಯ ವಾಹಿನಿಗಳಿಗೆ ಅನ್ವಯವಾಗುತ್ತದೆ.
  • ಕಾಲಾವಧಿ ಜನವರಿ ೪, ೨೦೦೨ ರಿಂದ ಇಂದಿನವರೆಗೆ, ಸುಮಾರು 12 ವರ್ಷಗಳಿಗೂ ಹೆಚ್ಚಿನ ಕಾಲ.
  • ಗಂಟೆಗಳು 1225 ಗಂಟೆಗಳ ಕಾರ್ಯಕ್ರಮ ಪ್ರಸಾರವಾಗಿದೆ.
  • ಪ್ರಶ್ನೆಗಳು ಇದುವರೆಗೂ ಒಟ್ಟು 40,000 ಪ್ರಶ್ನೆಗಳನ್ನು ಕೇಳಲಾಗಿದೆ.
  • ಸ್ಪರ್ಧಿಗಳು ಒಟ್ಟು 7350 ಸ್ಪರ್ಧಿಗಳು ಭಾಗವಹಿಸಿರುವರು.
  • ಸ್ಪರ್ಧೆಯಲ್ಲಿ ಗೆಲ್ಲಲು ಇಟ್ಟಿದ್ದ ಒಟ್ಟು ಪುಸ್ತಕಗಳು 50,000
  • ಸ್ಪರ್ಧಿಗಳು ಗೆದ್ದಿರುವ ಪುಸ್ತಕಗಳು ಒಟ್ಟು ಸುಮಾರು 35,000 (ಈ ಪುಸ್ತಕಗಳನ್ನು ಬಹುಮಾನ ರೂಪದಲ್ಲಿ ವಿತರಿಸಲಾಗಿದೆ. )
  • ಪ್ರತಿ ಕಾರ್ಯಕ್ರಮದ ಆರಂಭದಲ್ಲಿ ಉತ್ತಮ ಕನ್ನಡ ಪುಸ್ತಕಗಳನ್ನು ಪರಿಚಯ ಮಾಡಿಕೊಡಲಾಗುತ್ತದೆ ಅಥವಾ ಗಣ್ಯರ ಬದುಕಿನ ರಸಘಳಿಗೆಗಳನ್ನು ಇಲ್ಲವೇ ಜೀವನಾನುಭವವನ್ನು ಹಂಚಿಕೊಳ್ಳಲಾಗುತ್ತದೆ.
  • ೧೯೦೦ ಕಾರ್ಯಕ್ರಮಗಳಲ್ಲಿ ಸುಮಾರು ೯೫೦ ಉತ್ತಮ ಕನ್ನಡ ಪುಸ್ತಕಗಳನ್ನು ಪರಿಚಯ ಮಾಡಿಕೊಡಲಾಗಿದೆ.

ಅಮಿತಾಬ್ ಬಚ್ಚನ್ ನಡೆಸಿಕೊಡುತ್ತಿದ್ದ ಕೌನ್ ಬನೇಗ ಕರೋಡ್ ಪತಿ ಕಾರ್ಯಕ್ರಮದಂತೆ ಆರ್ಥಿಕ ಬಲವಿಲ್ಲದಿದ್ದರೂ ಥಟ್ ಅಂತ ಹೇಳಿ ಕಾರ್ಯಕ್ರಮ ಜನಪ್ರಿಯವಾಗಿರುವುದು ಹಲವರ ಹುಬ್ಬೇರಿಸಿದೆ. ಕಾರ್ಯಕ್ರಮದಲ್ಲಿ ನೀಡುವ ಉಪಯುಕ್ತ ಮಾಹಿತಿಗಳು, ಕನ್ನಡ ಪುಸ್ತಕಗಳು ಆಸಕ್ತರ ಜ್ಞಾನದಾಹದನ್ನು ತಣಿಸುತ್ತಿವೆ. ಮನೆಮಂದಿಯಲ್ಲಾ ಕುಳಿತು ನೋಡಬಹುದಾದ ಕಾರ್ಯಕ್ರಮವಿದಾಗಿದೆ.

ಚೀಟಿ ಎತ್ತುವುದರ ಮೂಲಕ ಸ್ಪರ್ಧಿಗಳ ಆಯ್ಕೆ ನಡೆಯಲಿದೆ. ‘ಥಟ್ ಅಂತ ಹೇಳಿ’ ಕಾರ್ಯಕ್ರಮವನ್ನು ಡಾ.ನಾ.ಸೋಮೇಶ್ವರ ನಿರೂಪಣೆಯಲ್ಲೇ  ನಡೆಸಿಕೊಂಡು ಬಂದಿದೆ. ‘ಥಟ್ ಅಂತ ಹೇಳಿ’ ಹಾಟ್ ಸೀಟ್ ನಲ್ಲಿ ಕೂರುವ ಆಸೆ ನಿಮಗೆ ಇದ್ದರೆ, ತಪ್ಪದೇ ಬೆಂಗಳೂರಿನ ದೂರದರ್ಶನ ಕೇಂದ್ರಕ್ಕೆ ಭೇಟಿ ಕೊಡಿ….

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top