fbpx
ಕನ್ನಡ

ಕನ್ನಡ ಪಕ್ಷ – ಕರ್ನಾಟಕ ಸೇರಲು ಕರೆಯೋಲೆ

ಕನ್ನಡ ಪಕ್ಷ – ಕರ್ನಾಟಕ

ಸ್ನೇಹಿತರೆ,
ಕರ್ನಾಟಕದಲ್ಲಿ ಒಂದು ಪ್ರಾದೇಶಿಕ ಪಕ್ಷದ ಅಗತ್ಯತೆಯ ಕುರಿತಂತೆ ಏಪ್ರಿಲ್14 ರಂದು ಸೆಂಟ್ರಲ್ ಕಾಲೇಜು, ಸೆನೇಟ್ ಹಾಲ್ನಲ್ಲಿ ನೆಡೆಸಿದ ಚರ್ಚೆಯಲ್ಲಿ ಆಸಕ್ತರು ಪಾಲ್ಗೊಂಡಿದ್ದರು. ಅಂತಹ ಪಕ್ಷ ಅಗತ್ಯ ಎಂದು ಅಂದು ಸಭೆ ಸರ್ವಾನುಮತದಿಂದ ನಿರ್ಣಯಿಸಿತ್ತು.

ಸಭೆಯನ್ನು ಆಯೋಜಿಸಿದ ನಾವುಗಳು ಈ ನಿಟ್ಟಿನಲ್ಲಿ ಪರಿಹಾರವನ್ನು ಕಂಡು ಕೊಳ್ಳಲು ಹಲವು ಸಲ ಭೇಟಿಯಾಗಿ ಚರ್ಚಿಸಿದ್ದು ಒಂದು ನಿರ್ಧಾರಕ್ಕೆ ಬಂದಿದ್ದೇವೆ. 50ಕ್ಕು ಮೀರಿದ ವರ್ಷಗಳ ಹಿಂದೆ ಕನ್ನಡದ ವೀರಸೇನಾನಿ ದಿ: ಮದ್ದೂರು ರಾಮಮೂರ್ತಿ (ಮ. ರಾಮಮೂರ್ತಿ) ಹಾಗೂ ಆ.ನಾ.ಕೃಷ್ಣರಾಯರು ಮೊದಲುಗೊಂಡ ದಿಗ್ಗಜರ ಗುಂಪು ಸ್ಥಾಪಿಸಿದ ‘ಕನ್ನಡ ಪಕ್ಷ’ ವನ್ನು ಸೇರುವುದು ಎಂದು ತೀರ್ಮಾನಿಸಿದ್ದೇವೆ. ಅದನ್ನು ಮತ್ತೆ ಚೇತನಗೊಳಿಸಿವುದು, ಬೆಳಸಿವುದು ನಮ್ಮ ಉದ್ದೇಶ.

ಕನ್ನಡ ಪಕ್ಷ ನವೆಂಬರ 23, 1991 ರಂದು ಚುನಾವಣೆ ಅಯೋಗದೊಂದಿಗೆ ನೋಂದಾಯಿತವಾಗಿದ್ದು ಹಲವಾರು ಕರ್ನಾಟಕ, ಕನ್ನಡ ಮತ್ತು ಕನ್ನಡಿಗರ ಪರ ಸಂಘಟನೆಗಳಲ್ಲಿ, ಕಾರ್ಯಕ್ರಮಗಳಲ್ಲಿ ಅಲ್ಲದೆ ಚುನಾವಣೆಗಳಲ್ಲೂ ಪಾಲ್ಗೊಂಡಿದೆ. ಅದರ ಮೂಲ ಚಿಂತನೆ ನಮ್ಮ ಇಂದಿನ ಆಶಯಗಳಿಗೆ ಹೊಂದುವಂತಿದೆ. ಹೆಮ್ಮೆಯ ವಿಷಯವೆಂದರೆ ಈಗ ಸರ್ವಸಮ್ಮತ ಹೊಂದಿರುವ ‘ಕರ್ನಾಟಕದ ಬಾವುಟ’ ವಾಸ್ತವವಾಗಿ ಈ ಪಕ್ಷದ ಸಂಸ್ಥಾಪಕರಾದ ಮ.ರಾಮಮೂರ್ತಿಗಳು ರಚಿಸಿದ ಪಕ್ಷದ ಅಧಿಕೃತ ಬಾವುಟ.

ಕನ್ನಡ ಪಕ್ಷದ ಇಂದಿನ ಅಧ್ಯಕ್ಷರು ಮಾನ್ಯ ಪಿ. ಪುರುಷೋತ್ತಮ ಅವರು. ನಮ್ಮ ಕಾರ್ಯಕಾರಿ ಸಮಿತಿಯ ತುರ್ತು ಸಭೆಗೆ ಬಂದು ಅವರು ನಮ್ಮ ತೀರ್ಮಾನವನ್ನು ಉತ್ಸಾಹದಿಂದ ಸ್ವಾಗತಿಸಿದ್ದಾರೆ.

ಭಾನುವಾರ 21 ಮೇ, 2017, ಬೆಳಗ್ಗೆ 10:30ಕ್ಕೆ ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜ ಪೇಟೆ, ಸಭಾಂಗಣದಲ್ಲಿ ನಾವು ಅಧಿಕೃತವಾಗಿ ಕನ್ನಡ ಪಕ್ಷವನ್ನು ಸೇರುವ ಕಾರ್ಯಕ್ರಮವನ್ನು ಆಯೋಜಿಸಿದ್ದೇವೆ. ಸಭೆಯಲ್ಲಿ ಪಾಲ್ಗೊಳ್ಳಲು ಇಚ್ಛಿಸುವವರು ಈ ದೂರವಾಣಿ ಸಂಖ್ಯೆಗೆ ಕರೆ ಮಾಡಿ:8073779075

ನಮ್ಮ ಅಸ್ಮಿತೆ, ಆಕಾಂಕ್ಷೆ, ಆಸ್ತೆ – ಕರ್ನಾಟಕ, ಕನ್ನಡ, ಕನ್ನಡಿಗರು

ಪ್ರಕಾಶ್ ಬೆಳವಾಡಿ
ಕೇಂದ್ರ ಸಮಿತಿಯ ಪರವಾಗಿ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top