fbpx
ಕರ್ನಾಟಕ

ತುಮಕೂರಿನ ಬಗ್ಗೆ ಕನ್ನಡಿಗರು ಹೆಮ್ಮೆ ಪಡುವಂತ 29 ವಿಷಯಗಳು..

ತುಮಕೂರಿನ ಬಗ್ಗೆ ನಿಮಗೆಷ್ಟು ಗೊತ್ತು.

ತುಮಕೂರು ಬೆಂಗಳೂರಿನಿಂದ  ಕೇವಲ 70 ಕಿಲೋಮೀಟರ್ ದೂರದಲ್ಲಿದೆ ಅಷ್ಟೆ.ತುಮಕೂರಿನ ಬಗ್ಗೆ ನಿಮಗೆಷ್ಟು ಗೊತ್ತು?ಬನ್ನಿ ತಿಳಿಯೋಣ..

1. “ತುಮಕೂರು ಹೆಸರು ಹೇಗೆ ಬಂತು ಎಂದು ಯಾರಿಗಾದರೂ ಗೊತ್ತೇ ? ಹಿಂದಿನ ಕಾಲದಲ್ಲಿ ತುಂಬೆ ಊರುಎಂದು ಕರೆಯುತ್ತಿದ್ದರು. ಊರಿನ ತುಂಬೆಲ್ಲಾ ತುಂಬೆ ಹೂವಿನ ಗಿಡಗಳು ಇದ್ದವು ಮತ್ತು ತಮಟೆ ವಾದ್ಯದ ಘೋಷ್ಠಿ  ಎಲ್ಲರಿಗೂ ಚಿರಪರಿಚಿತವಾಗಿತ್ತು .ಆದ್ದರಿಂದ ತುಮಕೂರು ಎಂದು ಹೆಸರು ಬಂತು.

2.ತುಮಕೂರನ್ನು ಕಲ್ಪತರು ನಾಡುಎಂದು ಕರೆಯುತ್ತಾರೆ ಏಕೆಂದರೆ ಜಿಲ್ಲೆಯಲ್ಲಿ ತೆಂಗಿನ ಮರಗಳು ಜಾಸ್ತಿ ಇವೆ ಮತ್ತು ರೈತರೂ ಕೂಡ ಅಧಿಕವಾಗಿ ತೆಂಗಿನ ಮರವನ್ನೇ  ಕೃಷಿಗಾಗಿ ಬೆಳೆಯುತ್ತಾರೆ.

3 ತುಮಕೂರನ್ನು ಶೈಕ್ಷಣಿಕ ನಾಡುಎಂದು ಕೂಡ ಕರೆಯುತ್ತಾರೆ ಏಕೆಂದರೆ ಇಲ್ಲಿನ  ಶಿಕ್ಷಣದ ವ್ಯವಸ್ಥೆ ಚೆನ್ನಾಗಿದೆ ಅಧಿಕ ಶಿಕ್ಷಣ ಸಂಸ್ಥೆಗಳು ಇಲ್ಲೆವೆ.ಅವು

3.1.ಸಿದ್ದಾರ್ಥ ವೈದ್ಯಕೀಯ ಶಿಕ್ಷಣ ಸಂಸ್ಥೆ ಮತ್ತು ಆಸ್ಪತ್ರೆ,

ಸಿದ್ದಾರ್ಥ ಇಂಜಿನೀರಿಂಗ್ ಕಾಲೇಜು.

3.2.ಸಿದ್ದಗಂಗಾ ಶಿಕ್ಷಣ ಸಂಸ್ಥೆ.

ಸಿದ್ದಗಂಗಾ ಇಂಜಿನೀರಿಂಗ್ ಕಾಲೇಜು.

3.3.ಶ್ರೀದೇವಿ ವೈದ್ಯಕೀಯ ಶಿಕ್ಷಣ ಸಂಸ್ಥೆ ಮತ್ತು ಆಸ್ಪತ್ರೆ.

ಶ್ರೀದೇವಿ ಇಂಜಿನೀರಿಂಗ್ ಕಾಲೇಜು.

ಮೂರು ಸಂಸ್ಥೆಗಳಲ್ಲಿ ಚಿಕ್ಕ ಮಕ್ಕಳು ಶಾಲೆಯಿಂದ ಹಿಡಿದು ಅವರ ವೃತ್ತಿ ಶಿಕ್ಷಣದ ವರೆಗೂ ಇಲ್ಲಿಯೇ ಓದಬಹುದು,ಎಲ್ಲಾ ಡಿಗ್ರಿ ಕೋರ್ಸ್ಗಳನ್ನು ವಳಗೊಂಡಿವೆ.

3.4.ಎಚ್. ಎಂ. ಸ್. . ಟಿ. ಇಂಜಿನೀರಿಂಗ್ ವಿದ್ಯಾ ಸಂಸ್ಥೆ ಜಿಲ್ಲೆಯ ನಗರದ ಹೊರಗೆ  ಸ್ಥಾಪನೆ ಗೊಂಡಿದೆ.

4. “ಕೈಗಾರಿಕ ನಗರವೆಂದು ಕೂಡ ಪ್ರಸಿದ್ಧಿಯನ್ನು ಹೊಂದಿದೆ.ಇಲ್ಲಿ 24 ದೊಡ್ಡ ಕಾರ್ಖಾನೆ   ಗಳನ್ನು ಹೊಂದಿದೆ.

5.ತುಮಕೂರಿನಲ್ಲಿ  ಅತೀ ದೊಡ್ಡ (mega food park) ಆಹಾರ ಪಾರ್ಕ್ ಇದು ತುಮಕೂರಿನ ಹೊರ ಹೊಲಯದಲ್ಲಿ ವಸಂತನರಸಾಪುರ ಕೈಗಾರಿಕ ಪ್ರದೇಶದಲ್ಲಿ ಸ್ಥಾಪಿತವಾಗಿದೆ. ಇದನ್ನು ಪ್ರದಾನಿ  ಮೋದಿ ಯವರು ಬಂದು ಉದ್ಘಾಟನೆ ಮಾಡಿದ್ದರು.

6.ತುಮಕೂರಿನಿಂದ 5 ಕಿಲೋಮೀಟರ್ ದೂರವಿರುವ ಕ್ಯಾತಸಂದ್ರ ದಲ್ಲಿ ಸಿದ್ದಗಂಗಾ ಮಠವಿದೆ ಇಲ್ಲಿ ನೆಡೆದಾಡುವ ದೇವರುಎಂದೇ ಪ್ರಸಿದ್ದರಾಗಿರುವ ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಯವರು ನೆಲೆ ಇರುವ ಸ್ಥಳ.ಇಲ್ಲಿ ಬಡ ಮಕ್ಕಳಿಗೆ ಉಚಿತ ವಸತಿ,ಊಟ, ಶಿಕ್ಷಣವನ್ನು ನೀದುತ್ತಾರೆ.ವರ್ಷಕ್ಕೊಮ್ಮೆ ಅದ್ದೂರಿಯಾಗಿ ಜಾತ್ರೆ ನಡೆಯುತ್ತದೆ,ಇದರಲ್ಲಿ ದನಗಳ ಜಾತ್ರೆಯೂ ವಿಶೇಷವಾಗಿದೆ.

7.ಇಲ್ಲಿ ಮೊದಲಿಗೆ 1025 ರಲ್ಲಿ     ‘ ಗಂಗರುವಾಸವಾಗಿದ್ದರು ಆಗ ತುಮಕೂರು ಅವರ ಆಳ್ವಿಕೆಯಲ್ಲಿತ್ತು.

8.ಅವರ ನಂತರ ರಾಷ್ಟ್ರಕೂಟರು,ಚಾಲುಕ್ಯರು, ಮತ್ತು ನೊಳಂಬರು ಬಹಳ ವರ್ಷಗಳ ವರೆಗೂ ಅಳ್ವಿ ಕೆಯನ್ನು ನೆಡೆಸಿದ್ದಾರೆ.

9.17 ನೇ ಶತಮಾನದ ನಂತರ 18 ಮತ್ತು 29 ನೇ ಶತಮಾನದಲ್ಲಿ ಮೈಸೂರಿನ ಒಡೆಯರು ಅಳಿದ್ದರು.

10.ತುಮಕೂರಿನ ಗುಬ್ಬಿ ತಾಲ್ಲೂಕಿನಲ್ಲಿ 610 ಎಕರೆ ಪ್ರದೇಶದಲ್ಲಿ ಎಚ್.. ಎಲ್.ಇದೆ  ಇಲ್ಲಿ ಹೆಲಿಕಾಪ್ಟರ್ ತರಬೇತಿಯೂ ಇದೆ.

11.ತುಮಕೂರಿನ ಪಾವಗಡ ದಲ್ಲಿ 2000 ಮೆಗಾ ವ್ಯಾಟ್ ವಿದ್ಯುತ್ತ ಉತ್ಪಾದನೆ, 790 ಕೋಟಿಯನ್ನು ಖರ್ಚು ಮಾಡಿ ,11,000 ಎಕರೆ ಪ್ರದೇಶದಲ್ಲಿ ನಿರ್ಮಿಸಲಾಗಿದೆ.

12.ಅತೀ ಹೆಚ್ಚು ತೆಂಗು ಬೆಳೆಯುವ ನಾಡು ತುಮಕೂರು.

13.ಅತೀ ಹೆಚ್ಚು ಅಡಿಕೆ ಬೆಳೆಯುವ ನಾಡು.

14.ಅತೀ ಹೆಚ್ಚು ಭತ್ತ ಬೆಳೆಯುವ ನಾಡು.

15.ತುಮಕೂರಿನ ಪವಾಗಡ ದಲ್ಲಿ ಪ್ರಸಿದ್ದಿ ಪಡೆದಿರುವ 600 ವರ್ಷಗಳ ಇತಿಹಾಸ ವಿರುವ ಶನಿಯ ದೇವಸ್ಥಾನ ವಿದೆ.

16.ತುಮಕೂರಿನ  ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಹತ್ತಿರ 86 ಅಡಿಗಳಷ್ಟು ದೊಡ್ಡದಾದ ಆಂಜನೇಯ ಸ್ವಾಮಿಯ ಮೂರ್ತಿ ನೋಡಲು ಬಹು ಆಕರ್ಷತೆಯನ್ನು ಹೊಂದಿದೆ.

17.ತುಮಕೂರಿನ ತಿಪಟೂರು ತಾಲ್ಲೂಕಿನಲ್ಲಿ ತಾಯಿ ಚೌಡೇಶ್ವರಿ ದೇವಿಯ ಪುರಾತನ ದೇವಸ್ಥಾನವಿದೆ.

18.ತುಮಕೂರಿನ ಕೊರಟಗೆರೆ ತಾಲೂಕಿನಲ್ಲಿ ಸುಪ್ರಸಿದ್ಧ ಶ್ರೀ ಗೊರವನಹಳ್ಳಿ ದೇವಸ್ಥಾನ ವಿದೆ. 19.ತುಮಕೂರಿನ ಎಡೆಯೂರು ಸಿದ್ದಲಿಂಗೇಶ್ವರ ಸ್ವಾಮಿಯ ಜಾತ್ರೆ ಬಹಳ ದೊಡ್ಡ ಜಾತ್ರೆಯಾಗಿದ್ದು ವಿಜೃಂಭಣೆಯಿಂದ ನೆಡೆಯುತ್ತದೆ.

20.ಇಲ್ಲಿನ ಪ್ರೇಕ್ಷಣೀಯ ಸ್ಥಳಗಳು

ಸಿದ್ದಗಂಗೆ.

ಶಿವಗಂಗೆ.

ನಾಮದ ಚಿಲುಮೆ.

ದೇವರಾಯನ ದುರ್ಗ.

21.ಗುಬ್ಬಿ ವೀರಣ್ಣ ನವರು ನಮ್ಮ ಕನ್ನಡ ಚಿತ್ರರಂಗದ ಕಲೆಯನ್ನು ಬೆಳಕಿಗೆ ತಂದವರು ಮತ್ತು  ನಾಟಕದ ನಿರ್ದೇಶಕರಾಗಿದ್ದವರು ಹುಟ್ಟಿದ ನಾಡಿದು.

22.ರಂಗಾಯಣ ರಘು ಇತ್ತೀಚಿನ ಸಿನೆಮಾ ಗಳಲ್ಲಿ ಹಾಸ್ಯ ಪಾತ್ರವನ್ನು ಮಾಡುವ ಮೂಲಕ ಪ್ರಸಿದ್ಧಿಯನ್ನು ಪಡೆದುಕೊಂಡು ಇಡೀ ಕರ್ನಾಟಕ ದಲ್ಲೇ ಹೆಸರುವಾಸಿ ಯಾಗಿದ್ದರೆ ಅವರು ಕೂಡ ಇಲ್ಲಿಯವರೆ.

23.ರಾಜರಾಮಣ್ಣ  ನವರಂತಹ ಭೌಗೋಳಿಕ ತಜ್ಞರು ಹುಟ್ಟಿದ ಜಿಲ್ಲೆಯಿದು.

24.ಅಮರಶಿಲ್ಪಿ ಜಕಣಾಚಾರಿ ಕಲ್ಲುಗಳ ಕೆತ್ತನೆಯ ಮೂಲಕ ಜಗತ್ಪ್ರಸಸಿದ ಶಿಲ್ಪಿಯಾದವರು  ಇದೆ ಜಿಲ್ಲೆಯವರು.

25.ಆಯುರ್ವೇದ ವನಸಿರಿಯನ್ನು ಹೊಂದಿ ಸುಮಾರು ಒಂದು ಸಾವಿರ ಔಷಧಿ ಗಿಡಗಳನ್ನು ಹೊಂದಿರುವ ಆಯುರ್ವೇದ ಸಸ್ಯ ವನ ಇದೇ ತುಮಕೂರಿನ ನಾಮದ ಚಿಲುಮೆಯ ಪಕ್ಕದಲ್ಲಿದೆ.

26.ತುಮಕೂರಿನ ಸ್ವರ್ಗ ಎಂದೇ ಕರೆಯುವ ನಾಮದ ಚಿಲುಮೆ ಇಲ್ಲಿ ಶ್ರೀರಾಮ, ಲಕ್ಷ್ಮಣ, ಸೀತೆ ಬಂದು ಹೋಗಿರುವ ಗುರುತು ಹಾಗೆಯೇ ಇದೆ.ಅದೇ ನಾಮದ ಚಿಲುಮೆ ಇಲ್ಲಿ ಕಲ್ಲುಗಳಿಂದ ನೀರು ಜಿನುಗುತ್ತದೆ. ಇದೆ ಶ್ರೀರಾಮರು ಬಂದಿರುವುದಕ್ಕೆ ಕುರುಹಾಗಿದೆ.

27.ದೇವರಾಯನದುರ್ಗ ಇದು ಒಂದು ಪ್ರೇಕ್ಷಣೀಯ ಸ್ಥಳವಾಗಿದ್ದು ಇಲ್ಲಿ ಲಕ್ಷ್ಮಿ ನರಸಿಂಹಸ್ವಾಮಿ. ಭೋಗಾನರಸಿಂಹ ಸ್ವಾಮಿ, ಯೋಗಾ ನರಸಿಂಹಸ್ವಾಮಿಯ ದೇವಸ್ಥಾನ ವಿದೆ.

28.ಜಯಮಂಗಳಾ ನದಿ ಮತ್ತು ತೀತಾ ನದಿ ಹುಟ್ಟಿದ ನಾಡು.

29.ಶಿವಗಂಗೆ ಶಿವಲಿಂಗದ ಆಕಾರವನ್ನೇ ಹೋಲುವ ಬೆಟ್ಟವಿದ್ದು ಅದೇ ಶಿವಗಂಗೆ..

ಹೀಗೆ ಇನ್ನು ಹಲವು ವಿಶೇಷತೆಗಳನ್ನು ಒಳಗೊಂಡಿದೆ ನಮ್ಮ ತುಮಕೂರು ಜಿಲ್ಲೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

1 Comment
Hanumantharaya says:

Super

To Top