ಆರೋಗ್ಯ

ನಿಮ್ಮ ಕಣ್ಣೇ ನಿಮ್ಮ ದೇಹಾರೋಗ್ಯದ ಕನ್ನಡಿ

ನಿಮ್ಮ ಕಣ್ಣೇ ನಿಮ್ಮ ದೇಹಾರೋಗ್ಯದ ಕನ್ನಡಿ:

ನಮ್ಮ ಪಂಚೇದ್ರಿಯಗಳಲ್ಲಿ ಕಣ್ಣಿಗೆ ಪ್ರಾಧಾನ್ಯ ಸ್ಥಾನವಿದೆ. ಸೂಕ್ಷ್ಮವಾಗಿ ಗಮನಿಸಿದರೆ ನಮ್ಮ ಮನಸಿನ ಭಾವನೆಗಳು ನಮ್ಮ ಕಣ್ಣುಗಳಲ್ಲೇ ವ್ಯಕ್ತವಾಗುತ್ತದೆ. ಮನಸ್ಸಿಗೇ ಕನ್ನಡಿ ಹಿಡಿದ ಕಣ್ಣು ಇನ್ನು ನಮ್ಮ ದೇಹದ ಆರೋಗ್ಯದ ಗುಣಲಕ್ಷಣಗಳನ್ನು  ತಿಳಿಸುವುದಿಲ್ಲವೇ. ಇಲ್ಲಿವೆ ಕಣ್ಣಿನಲ್ಲಿ ವ್ಯಕ್ತವಾಗುವ ಅಂತಹ 8 ಗುಣಲಕ್ಷಣಗಳು.

ಕಣ್ಣು ಚುಕ್ಕಲೆ:

ಇದು ಸಾಧಾರಣವಾಗಿ ಎಲ್ಲರಿಗೂ ಒಂದಲ್ಲಾ ಒಂದು ಸಾರಿ ಬಂದಿರುತ್ತದೆ. ಬ್ಯಾಕ್ಟೀರಿಯಾ ಸೋಂಕಿನಿಂದ ಇದು ಬರುತ್ತದೆ. ಸಾಮಾನ್ಯವಾಗಿ ಇದು 3-4 ದಿನ ಅಥವಾ ಒಂದು ವಾರದೊಳಗೆ ಹೋಗುತ್ತದೆ. ಆದರೆ 3 ತಿಂಗಳಿಗೂ ಹೆಚ್ಚಾಗಿದ್ದರೆ ಅಥವಾ ಒಂದೇ ಕಣ್ಣಿಗೆ ಬಂದ ಜಾಗದಲ್ಲೇ ಪದೇ ಪದೇ ಬರುತ್ತಿದ್ದರೆ ನಿಮಗಿದು ಎಚ್ಚರಿಕೆಯ ಗಂಟೆ. ಸೆಬಾಸಿಯಸ್ ಗ್ರಂಥಿಯ ಕ್ಯಾನ್ಸರ್ ಇರಬಹುದು. ನಿಮ್ಮ ವೈದ್ಯರ ಬಳಿ ಪರೀಕ್ಷಿಸುವುದು ಒಳ್ಳೆಯದು.

ಹುಬ್ಬಿನ ಕೂದಲು ಉದುರುವುದು:

ಕೂದಲು ಉದುರುವುದು ಸಾಮಾನ್ಯ ಸಮಸ್ಯೆ. ಆಹಾರ ಪದ್ಧತಿ ಬದಲಾದಾಗ ಮುಂತಾದ ಕಾರಣಗಳಿಗೆ ಕೂದಲು ಉದುರುತ್ತದೆ. ಆದರೆ ಹುಬ್ಬಿನ ಕೂದಲು ನಿರಂತರವಾಗಿ ಉದುರುತ್ತಿದ್ದರೆ ಥೈರಾಯಿಡ್ ಸಮಸ್ಯೆಯ ಮುನ್ಸೂಚನೆ ಆಗಿರಬಹುದು.

ಮಂದ ದೃಷ್ಟಿ:

ಕಂಪ್ಯೂಟರ್ ನೊಂದಿಗೆ ನಿರಂತರವಾಗಿ ಕೆಲಸ ಮಾಡುವವರಿಗೆ ಮಂದ ದೃಷ್ಟಿಯ ಸಮಸ್ಯೆ ಎದುರಾದರೆ ವೈದ್ಯರನ್ನು ಕಾಣುವುದು ಒಳ್ಳೆಯದು.

ಕುರುಡು ತಾಣಗಳು(Blind Spots):

ನೀವು ಕ್ಶೀಣಿಸುತ್ತಿರುವ ದೃಷ್ಟಿ ಅಥವಾ ಕಣ್ಣಿನ ಮುಂದೆ ಅಲೆಯಂತಹ ಗೆರೆಗಳು ಕಾಣುತ್ತಿದ್ದರೆ ಖಂಡಿತ ನಿರ್ಲಕ್ಷಿಸಬೇಡಿ.ಇದು ಯಾವುದೋ ಮುಂಬರುವ ಖಾಯಿಲೆಯ ಗುಣಲಕ್ಷಣವಾಗಿರಬಹುದು. ಇದರ ಜೊತೆಗೆ ತಲೆನೋವು ಸಹ ಬರಬಹುದು.

ಕಣ್ಣಿನ ಊದುವಿಕೆ:

ನಿರ್ಲಕ್ಷಿಸದಿರಿ, ಹೈಪೋಥೈರಾಯಿಡಿಸಮ್ ನ ಮುನ್ಸೂಚನೆ ಇರಬಹುದು.

ಕಣ್ಣಿನ ಹಳದಿಗಟ್ಟುವಿಕೆ:

ಹೌದು, ನೀವಂದುಕೊಂಡತೆ ಜಾಂಡೀಸ್ ನ ಲಕ್ಷಣ ಇರಬಹುದು. ಇದು ಚಿಕ್ಕ ಮಕ್ಕಳಲ್ಲಿ ಸಾಮಾನ್ಯವಾಗಿದ್ದರೂ ಹಿರಿಯರಲ್ಲಿಯೂ ಕಂಡುಬರುವ ಸಾಧ್ಯತೆ ಇದೆ.

ಮಧುಮೇಹಿಗಳಲ್ಲಿ ಮಂದದೃಷ್ಟಿ:

ಖಂಡಿತವಾಗಿಯೂ ನಿರ್ಲಕ್ಷಿಸಬೇಡಿ. ಇದು ಡಯಾಬಿಟಿಕ್ ರೆಟಿನೋಪತಿಯ ಲಕ್ಷಣವಾಗಿದ್ದು ಶಾಶ್ವತ ಕುರುಡುತನ ಉಂಟು ಮಾಡಬಹುದು.

ಮಂದದೃಷ್ಟಿ ಹಾಗೂ ಎರಡೆರಡು ಕಾಣುವಿಕೆ:

ಇದು ಸಾಮಾನ್ಯವಾಗಿ ಪಾರ್ಶ್ವವಾಯು / ಪ್ಯಾರಾಲಿಸಿಸ್ ನ ಲಕ್ಷಣವಾಗಿರಬಹುದು. ವೈದ್ಯೆನ್ನು ಸಂಪರ್ಕಿಸುವುದು ಒಳ್ಳೆಯದು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top