fbpx
ದೇವರು

ಎಲ್ಲಾ ದೇವ್ರಿಗೆ ಒಂದೊಂದು ವಾಹನ ಇದೆ ಯಾವ್ ದೇವ್ರಿಗೆ ಯಾವ್ ವಾಹನ ಅಂತ ನಿಮಗೆಷ್ಟು ಗೊತ್ತು ?

ದೇವರ ವಾಹನ ಪ್ರಾಣಿಗಳು ಮತ್ತು ಪಕ್ಷಿಗಳು.

ನಮ್ಮ  ಸಂಪ್ರದಾಯದಲ್ಲಿ ಅನೇಕ ದೇವರುಗಳು ಇವೆ.ಒಂದೊಂದು ದೇವರು ಕೂಡ ಒಂದೊಂದು ಪ್ರಾಣಿಯನ್ನು ಅಥವಾ ಪಕ್ಷಿಯನ್ನು  ತನ್ನ ವಾಹನವನ್ನಾಗಿ ಉಪಯೋಗಿಸಿ ಕೊಂಡಿದ್ದಾರೆ ಅದರ ಮೇಲೆಯೇ ಸವಾರಿ ಮಾಡಿಕೊಂಡು ಇಡೀ  ಜಗತ್ತನ್ನು ಸುತ್ತುತ್ತಾರೆ.ಅದನ್ನು ಈಗ ನಾವು ತಿಳಿದುಕೊಳ್ಳೋಣ ಬನ್ನಿ ಯಾವ ದೇವರು ಯಾವ ಪ್ರಾಣಿಯನ್ನು ಆಯ್ದು ಕೊಂಡಿದ್ದಾರೆಂದು..

ಶೀತಲ ಮಾತ:ಇವರು ಕಥೆಯ  ಮೇಲೆ ಸವಾರಿ ಮಾಡುತ್ತಾರೆ.

ಕಾಮಧೇನು ಅಥವಾ ಪ್ರೇಮ,ಪ್ರೀತಿಯ ದೇವರು. ಇವರು ಕಾಮ ಮತ್ತು ಆಸೆ ದೇವರು.ಕಾಮದೇವ  ಗಿಣಿಯ ಮೇಲೆ ಸವಾರಿ ಮಾಡುತ್ತಾನೆ. ಅವನು ಮನುಷ್ಯರನ್ನು ತನ್ನ ಬಾಣಗಳಿಂದ ಹೊಡೆದು ಪ್ರೀತಿ ಮತ್ತು ಕಾಮದ ಬಲೆಗೆ ಬೀಳುವ ಹಾಗೆ ಮಾಡುತ್ತಾನೆ.

ಲಕ್ಷ್ಮೀ:ಲಕ್ಷ್ಮೀ ದೇವಿಯೂ ಗೂಬೆಯ ಮೇಲೆ ಕುಳಿತು ಸವಾರಿ ಮಾಡುತ್ತಾರೆ.

ಭೈರವ :ಇವರು ನಾಯಿಯನ್ನು ಬಳಸುತ್ತಾರೆ ನಾಯಿಯ ಮೇಲೆ ಕುಳಿತು ಸವಾರಿ ಮಾಡುತ್ತಾರೆ.

ಇಂದ್ರ ದೇವ:ಇಂದ್ರ ದೇವ ಇವನು ಶೌರ್ಯ ವಂತನು, ದೇವತೆಗಳ ರಾಜ ಆನೆಯ ಮೇಲೆ ಅಂದರೆ ಐರಾವತದ ಮೇಲೆ ಕುಳಿತು ಸವಾರಿ ಮಾಡುತ್ತಾರೆ.

ವಾಯು (ಗಾಳಿ)ದೇವ:ಗಾಳಿಯ ದೇವರು ಮಾರುತ,ಗಾಳಿ ಎಂದು ಕೂಡ ಕರೆಯುವರು,ವಾಯು ದೇವ ಜಿಂಕೆಯ ಮೇಲೆ ಕುಳಿತು ಸವಾರಿ ಮಾಡುತ್ತಾರೆ.

ಕುಬೇರ ದೇವರು:ಕುಬೇರನ ವಾಹನ ಮುಂಗುಸಿ.ಮುಂಗುಸಿಯು ಸರ್ಪಗಳ ಜೊತೆ ಹೋರಾಡಿ ಸರ್ಪವನ್ನು ಸಾಯಿಸುತ್ತದೆ.ಪ್ರಾಣಿಯೂ ಕುಬೇರ ದೇವನಿಗೆ ಸಂಬಂಧಿಸಿದೆ.

ಅಗ್ನಿ ದೇವ: ಅಗ್ನಿ ದೇವ ಎಂದರೆ ಬೆಂಕಿಯ ದೇವರು.ಇವರ ವಾಹನ ಗಂಡು ಕುರಿಯಾಗಿದೆ.

ಶನಿ ದೇವ:ಶನಿದೇವನು ಕಾಗೆಯನ್ನು ಆಯ್ಕೆಮಾಡಿಕೊಂಡಿದ್ದಾರೆ. ಒಳ್ಳೆಯದಾಗಲಿ ಅಥವಾ ಕೆಟ್ಟದಾಗಲಿ ಇದು ಮನುಷ್ಯನ ಕರ್ಮಕಾನುಸಾರವಾಗಿ  ಪ್ರತಿಪಲಗಳನ್ನು ಕೊಡುವ ಸಮಯದಲ್ಲಿ ಕಾಗೆಯ ಮೇಲೆ ಕುಳಿತಿರುತ್ತಾರೆ ಎನ್ನುವ ನಂಬಿಕೆ. ಉಳಿದ ಸಮಯದಲ್ಲಿ ಶನಿಯು ಎತ್ತಿನ ಮೇಲೆ  ಕುಳಿತಿರುತ್ತಾರೆ.

 

ಸೂರ್ಯ ದೇವ:ಸೂರ್ಯದೇವನು 7 ಕುದುರೆಗಳ ಗಾಡಿಯ ಮೇಲೆ ಕುಳಿತು ಸವಾರಿ ಮಾಡುತ್ತಾನೆ.

ಸರಸ್ವತೀ ದೇವತೆ: ಸರಸ್ವತಿ ಎಂದರೆ ಜ್ಞಾನ.ದೇವತೆಯೂ ಹಂಸದ ಮೇಲೆ ಕುಳಿತಿರುತ್ತಾರೆ.

ಬ್ರಹ್ಮ ದೇವ:ಬ್ರಹ್ಮದೇವನು 7 ಹಂಸಗಳನ್ನು ಒಳಗೊಂಡಿರುವ ಗಾಡಿಯ ಮೇಲೆ ಕುಳಿತು ಸವಾರಿ ಮಾಡುತ್ತಾರೆ.

ಯಮರಾಜ:ಯಮರಾಜ ನೆಂದರೆ ಸಾವಿನ ದೇವರು.ಮನುಷ್ಯ ಸಾಯುವುದಕ್ಕೆ ಯಮನೇ ಕಾರಣ.ಯಮನ ವಾಹನ ಕಪ್ಪು ಎಮ್ಮೆ.

ವಿಷ್ಣು ದೇವ:ವಿಷ್ಣು ದೇವರ ವಾಹನ ಗರುಡ ಪಕ್ಷಿ ಅಥವಾ ಹದ್ದು.

ಸುಬ್ರಹ್ಮಣ್ಯ :ಸುಬ್ರಹ್ಮಣ್ಯ ವಾಹನ ನವಿಲು.

ಗಣೇಶ:ಗಣೇಶನ ವಾಹನ ಇಲಿ.ಗಣೇಶನು ಇಲಿಯ ಮೇಲೆ ಕುಳಿತು ಇಡೀ ಲೋಕವನ್ನೇ ಸುತ್ತುತ್ತಾನೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top