fbpx
ದೇವರು

ಪ್ರಹ್ಲಾದನ ಹರಿ ಭಕ್ತಿ , ಶ್ರೀ ಹರಿಯ ಉಗ್ರ ನರಸಿಂಹನ ಅವತಾರ ಮತ್ತು ಹಿರಣ್ಯಕಶಿಪುವಿನ ಸಂಹಾರದ ಕಥೆ ..

ರಾಮಾಯಣ-4

ಶ್ರೀ ಹರಿಯ ನರಸಿಂಹಾವತಾರಕ್ಕೂ ಮುಂಚೆ ಪ್ರಹ್ಲಾದನ ಜನನ ಮತ್ತು ಹರಿಭಕ್ತಿ.

ಹಿರಣ್ಯಾಕ್ಷನ ಸಂಹಾರದ ನಂತರ ದೇವೇಂದ್ರನು ತನ್ನ ವಜ್ರಾಯುಧ ದಿಂದ ಪರ್ವತಗಳ ರೆಕ್ಕೆಯನ್ನು ಕತ್ತರಿಸಿದನು.ಶಾಶ್ವತವಾಗಿ ಒಂದೇ ಸ್ಥಳದಲ್ಲಿ ಇರುವಂತೆ ಮಾಡಿದ.ಅನಂತರ ದೇವದಾನವರ ಮದ್ಯದಲ್ಲಿ ಮತ್ತೆ ಯುದ್ಧವಾಗದಂತೆ ರಾಕ್ಷಸರು ಪಾತಾಳದಲ್ಲಿ ದೇವತೆಗಳು ತಮ್ಮ ಲೋಕದಲ್ಲಿ ಉಳಿಯುವಂತಾಯಿತು.ಹಿಮಾಲಯದ ಪುತ್ರ ಮೈನಾಕನು ಮಾತ್ರ ರೆಕ್ಕೆ ಸಹಿತನಾಗಿ ಸಮುದ್ರದಲ್ಲಿ ಸೇರಿಕೊಂಡನು. ಹಿರಣ್ಯಾಕ್ಷನನ್ನು ಶ್ರೀಮನ್ನಾರಾಯಣನು ಸಂಹಾರ ಮಾಡಿದ ನಂತರದಲ್ಲಿ ಅವನ ತಮ್ಮ ಹಿರಣ್ಯಕಶಿಪು ಅತ್ಯಂತ ಕ್ರೋಧಿತನಾದನು.

ಬ್ರಹ್ಮನಿಂದ ಮಾನವರಿಂದ ಪ್ರಾಣಿಯಿಂದ  ತನಗೆ ಮರಣ ಬರಬಾರದೆಂದು ವರ ಪಡೆದ ಹಿರಣ್ಯಕಶಿಪು ನಾರಾಯಣನು ಯಾವುದೇ ರೀತಿಯಿಂದ ತಪ್ಪಸ್ಸಿನಿಂದಾಗಿ ತನ್ನ ರಕ್ಷಣೆಗೆ ಮುಂದಾದನು.ಶಸ್ತಾಸ್ತ್ರ,ಪ್ರಾಣಿಗಳು, ದೇವತೆ,ಮಾನವ ರಿಂದಲೂ ಸಹ ತನಗೆ ಮರಣ ಉಂಟಾಗಬಾರದೆಂದು ವರ ಪಡೆದನು.ಹಗಲಿನಲ್ಲಿ ರಾತ್ರಿಯಲ್ಲಿ ಸಹ ಆಭಯ ಪಡೆದ ನಂತರದಲ್ಲಿ ಹಿರಣ್ಯಕಶಿಪು ಮಧಭರಿತನಾಗಿ  ಎಲ್ಲಾ ರಾಕ್ಷಸರನ್ನು ಸೇರಿಸಿ  ಜನರಿಗೆ ತೊಂದರೆ ಕೊಡಲು ಆರಂಭಿಸಿದನು.

ಮುನಿಗಳು ಯಜ್ಞಯಾಗದಿಗಳನ್ನು ದ್ವಂಸಗೊಳಿಸಿದನು. ಇಂದ್ರಲೋಕವನ್ನು ಆಕ್ರಮಣ ಮಾಡಿ ದೋಚಿದನು. ದಿಕ್ಪಾಲಕರನ್ನು ಐರಾವತವನ್ನು ಅಪಹರಿಸಿ ತಾನೇ ಸರ್ವಶ್ರೇಷ್ಠ ನೆಂದು ತನ್ನನ್ನೇ ಎಲ್ಲರೂ ಆರಾಧಿಸಬೇಕೆಂದು ಭಕ್ತರಿಗೆ ಆಜ್ಞೆ ಮಾಡಿದನು.ದೇವತೆಗಳು ಇವನ ತೊಂದರೆ ತಾಳಲಾರದೆ ಬ್ರಹ್ಮನಲ್ಲಿ ಬೇಡಿಕೊಂಡರು.

ಬ್ರಹ್ಮನು ಶ್ರೀಮನ್ನಾರಾಯಣನು ಇವನ ಸಂಹಾರವನ್ನು ಮಾಡುವನು ಎಂದು ಸಮಾಧಾನ ಮಾಡಿ ಕಳಿಸಿದನು .ಸಮಯವನ್ನು ನಿರೀಕ್ಷಿಸುತ್ತಲೇ ಶ್ರೀ ಹರಿಯು ಮುಂದಿನ ಆಲೋಚನೆಯಲ್ಲಿದ್ದನು. ಹಿರಣ್ಯಕಶಿಪುವಿನ ತಪೋಬಲವು ನಷ್ಟವಾಗಿ,ಅವನ ಪಾಪವು ಹೆಚ್ಚಾಗುವ ಸಮಯಕ್ಕಾಗಿ ಕಾಯುತ್ತಿದ್ದನು.

ಹಿರಣ್ಯಕಶಿಪುವಿನ ಪತ್ನಿ ಕಯಾದು ಬಹುಕಾಲದಿಂದ ಮಕ್ಕಲಿಲ್ಲದೆ ಕೊನೆಗೆ ನಾರಾದಮಹರ್ಷಿಗಳಿಂದ ಶ್ರೀಮನ್ನಾರಾಯಣನ  ಅಷ್ಟಾಕ್ಷರಿ  ಮಂತ್ರವನ್ನು ಉಪದೇಶ ಪಡೆದು ಪುತ್ರ ಪ್ರಾಪ್ತಿಗಾಗಿ ಬೇಡಿಕೊಳ್ಳುತ್ತಿದ್ದಳು.ರೀತಿಯ ಭಕ್ತಿಯಿಂದ ಕಯಾದು ಪ್ರಹ್ಲಾದ, ಅನುಹ್ಲದ,ಸಂಹ್ಲಾದ, ಮತ್ತು ಅಹ್ಲಾದ ರೆಂಬ ನಾಲ್ಕು ಮಕ್ಕಳನ್ನು ಪಡೆದಳು.ಪ್ರಹ್ಲಾದನು ಭಗವಂತನಾಗಿದ್ದು ಜನ್ಮದಿಂದಲೇ ಶ್ರೇಷ್ಠ ಭಕ್ತನಾಗಿದ್ದನು.

ದೇವಶಿಲ್ಪಿ ವಿಶ್ವಕರ್ಮನಿಂದ ಸಭಾಮಂಟಪವನ್ನೇ ನಿರ್ಮಾಣ ಮಾಡಿದ ಹಿರಣ್ಯಕಶಿಪು ಸಮಸ್ತ ಲೋಕವನ್ನಾಳುತ್ತಾ, ತನ್ನ ಮಗನ ವಿದ್ಯಾಭ್ಯಾಸದ ಬಗ್ಗೆ ಶುಕ್ರಾಚಾರ್ಯರು ಬಳಿ ಹೇಳಿಕೊಂಡನು. ಗುರುವಿನ ಬಳಿಗೆ ಬಂದ ಪ್ರಹ್ಲಾದನು ಶ್ರೀಮನ್ನಾರಾಯಣನ ಸ್ಮರಣೆಯನ್ನು ಮಾಡಿದಾಗ ಶುಕ್ರಾಚಾರ್ಯರಿಗೆ  ತಡೆಯಲಾಗಲಿಲ್ಲ.ನೀನು ರಾಜಕುಮಾರನಾಗಿದ್ದಿಯ.ಇಲ್ಲದ್ದಿದ್ದರೆ ನಿನಗೆ ಮರಣ ನಿಶ್ಚಿತವಾಗುತ್ತಿತ್ತು ಎಂದು ಹೆದರಿಸಿದನು.ನಮ್ಮ ರಾಕ್ಷಸ ವಂಶದ ವ್ಯೆರಿಯಾದ ವಿಷ್ಣುವನ್ನು ಸ್ಮರಣೆ ಮಾಡಬೇಡ ,ನಮಗೆಲ್ಲ ಆರಾಧ್ಯ. ಪರಮೇಶ್ವರ  “ಓಂ ನಮಃ ಶಿವಾಯ” ಎಂದು ಶಿವನನ್ನೇ ವಂದಿಸಬೇಕು.ವೇದ ಶಾಸ್ತ್ರಗಳಿಗೆ  ನಮ್ಮಲ್ಲಿ ಬೆಲೆ ಇಲ್ಲ  ಎಂದಾಗ ಪ್ರಹ್ಲಾದನು ಅವರ ಮಾತುಗಳನ್ನು ಕೇಳಲಾಗದೆ ಕಿವಿ ಮುಚ್ಚಿಕೊಳ್ಳುತ್ತಾ ಶ್ರೀ ಹರಿಯ ನಾಮ ಸ್ಮರಣೆ ಮಾಡುತ್ತಿದ್ದನು.

ಅಲ್ಲದೇ. ಶುಕ್ರಾಚಾರ್ಯರ  ವೇದ ಶಾಸ್ತ್ರಗಳು ಎಲ್ಲರಿಗೂ ಜ್ಞಾನವನ್ನು  ಕೊಡಬಲ್ಲವು.ಜ್ಞಾನಿಗಳಾದ ನೀವು ಹರಿಹರರಲ್ಲಿ ಭೇದವನ್ನು ಎಣಿಸುವಿರೇ? ರೀತಿಯಲ್ಲಿ ನೀವು ಹೇಗೆ ಗುರುಗಳಾಗುವಿರಿ?ಎಂದು ಕೇಳಿದಾಗ. ಪ್ರಹ್ಲಾದನು ತನ್ನ ಮಾತನ್ನು ಕೇಳುವುದಿಲ್ಲ.ಇವು ರಾಕ್ಷಸ ಕುಲಕ್ಕೆ ನಾಶಕರ್ತನಾಗುವುದು ನಿಶ್ಚಿತವೆಂದು  ತಿಳಿದು.ಹಿರಣ್ಯಕಶಿಪುಗೆ ತಿಳಿಸ ಬಯಸಿದನು.

 

ಆಗ ಶುಕ್ರಾಚಾರ್ಯರು ರಾಜ ಪತ್ನಿ ಕಯಾದುವಿಗೆ ಪ್ರಹ್ಲಾದನ ವರ್ತನೆಯ ಬಗ್ಗೆ ತಿಳಿಸಿದರು.ಆಗ ಅವಳು ಮಗನೇ ,ನಮ್ಮ ಕುಲಕ್ಕೆ ಮಾರಕವಾಗದ ರೀತಿಯಲ್ಲಿ ನೀನು ಮಾಡಬೇಕು.ವಿಷ್ಣು ಭಕ್ತಿಯನ್ನು ಬಿಡು  ನ್ನಿನ ತಂದೆಗೆ ತಿಳಿದರೆ ಒಳ್ಳೆಯದಾಗುವುದಿಲ್ಲ ಎಂದಳು.ಆಗ ಪ್ರಹ್ಲಾದನು ಮಾತೆ, ಜಗತ್ತಿಗೆ ಆನಂದವನ್ನು ಉಂಟು ಮಾಡುವ ಮಹಾವಿಷ್ಣುವನ್ನು ನಾನು ಸ್ಮರಿಸದೇ ಬಿಡುವುದಿಲ್ಲವೆಂದನು.

ಸಮಯದಲ್ಲಿ ಹಿರಣ್ಯಕಶಿಪು ಸಭಾ ಮಂಟಪದಿಂದ ಹೊರಗೆ ಬಂದು ಮಗನು ಗುರು ಹಾಗೂ ಪತ್ನಿಯೊಂದಿಗೆ ಮಾತಾಡುತ್ತಿರುವುದ್ದನ್ನು ಕಂಡನು.ಪ್ರೀತಿಯಿಂದ ಕರೆದು ಮುದ್ದು ಮಾಡಿ ಈವರೆಗೆ ಏನೇನ್ನನ್ನು ಕಲಿತೆ?ಎಂದು ಕೇಳಿದನು.ಆಗ ಪ್ರಹ್ಲಾದ ನಾವು ತಮೋಗುಣಯುಕ್ತವಾದ ರಾಕ್ಷಸ ಕುಲವನ್ನು ಗೌರವಿಸಬಾರದು ಪರಿಸರದಿಂದ  ಬಿಡುಗಡೆ ಬಯಸಬೇಕು.ಅದಕ್ಕೆ ಶ್ರೀ ಹರಿಯ ಅನುಗ್ರಹ ಪಡೆಯಬೇಕು ಎಂದು ಹೇಳಿದನು.ಹಿರಣ್ಯಕಶಿಪುವಿಗೆ ಸಿಟ್ಟು ಬಂತು.ಮಗನೇ,ಸಕಲ ಶಾಸ್ತ್ರಗಳನ್ನು ತಿಳಿದ  ಗುರು ಶುಕ್ರಾಚಾರ್ಯರಿಂದ ಶಿಕ್ಷಣ ಕೊಡಿಸಿದ್ದೇನೆ.ಆದರೆ ನಿನಗೆ ಕೆಟ್ಟ ಬೋಧನೆಯನ್ನು ಮಾಡಿದವರು ಯಾರು? ಎಂದು ಗುರು ಶುಕ್ರಾಚಾರ್ಯರ ಕಡೆಗೆ ತಿರುಗಿದಾಗ ಅವರು ರಾಜೇಂದ್ರ, ನಾನು ನಾನಾ ರೀತಿಯಲ್ಲಿ ಬಾಲಕನನ್ನು ತಿದ್ದಲು ಪ್ರಯತ್ನಿಸಿದರು ಸಹ ಅವನು ತನ್ನ ಹಟ, ಮೂರ್ಖತನವನ್ನು ಬಿಡಲಿಲ್ಲ. ನಾನು ಇಂತಹ ದೂರ್ಭೋದನೆ ಮಾಡಲು ಸಾಧ್ಯವೇ?ಇವನು ದುರಾದೃಷ್ಟ ದಿಂದಾಗಿ ಹರಿಭಕ್ತ ನಾಗಿದ್ದಾನೆ ಎಂದನು.

 

ನರಸಿಂಹಾವತಾರದ ಮೂಲಕ    ಹಿರಣ್ಯಕಶಿಪುವಿನ ಸಂಹಾರ.

ದುರಾದೃಷ್ಟವಶಾತ್ ಹರಿಭಕ್ತ ನಾಗಿದ್ದಾನೆ ಎಂದು ಶುಕ್ರಾಚಾರ್ಯರು ಹೇಳಿದರು, ಹಿರಣ್ಯಕಶಿಪು ,ಮಗನೇ,ನೀನು ದೇವರ ಮೇಲೆ ಅಣೆ ಮಾಡಿ ಹೇಳು “ನಿನಗೆ ಯಾರು ರೀತಿ ಹರಿಭಕ್ತಿಗೆ ಪ್ರೇರಣೆ ಕೊಟ್ಟರು” ಎಂದು ಕೇಳಿದನು.ಆಗ ಪ್ರಹ್ಲಾದನು ‘ಎಲ್ಲಾ ವಿದ್ಯೆಗಳಿಗೂ ಅಧಿಪತಿಯಾದ ಎಲ್ಲರ ಹೃದಯದಲ್ಲಿರುವ  ಎಲ್ಲರ ಸಾಕ್ಷಿಯಾಗಿರುವ ಸಚ್ಚಿದಾನಂದ ಸ್ವರೂಪನಾದ ಪರಮಾತ್ಮನೇ ಎನಗೆ ಗುರು’ ಮಹಾವಿಷ್ಣುವೇ ಸರ್ವ ಶ್ರೇಷ್ಠನು ಎಂದು ಹೇಳಿದಾಗ ಮಗನ ಮಾತಿನಿಂದ ಇನ್ನಷ್ಟು ಕ್ರೋಧಿತನಾದನು ಹಿರಣ್ಯಕಶಿಪು.

ಬಾಲಕನನ್ನು ಹೀಗೆಯೇ ಬಿಟ್ಟರೆ ರಾಕ್ಷಸ ಕುಲವನ್ನೇ ನಾಶಪಡಿಸುವನು ಎಂದು ಆಲೋಚಿಸಿ ಪ್ರಹ್ಲಾದನಿಗೆ ನಾನಾ ರೀತಿಯ ತೊಂದರೆ ಕೊಟ್ಟು ಅವನು ಶ್ರೀ ಹರಿಯ ಸ್ಮರಣೆ ಮಾಡದಂತೆ ಉಪಾಯ ಮಾಡಿದನು.

ಅದರಂತೆ ಶುಕ್ರಾಚಾರ್ಯರು ನಾನಾ ರೀತಿಯ ಶಸ್ತ್ರಗಳಿಂದ ಹೆದರಿಸಿದರು.

ಬಾಲಕನು ಶಾಂತನಾಗಿ ಪರಮಾತ್ಮನ ಧ್ಯಾನ ಮಾಡಲಾರಂಭಿಸಿದನು.

 ಅನೇಕ ಸರ್ಪಗಳನ್ನು ತಂದು ಪ್ರಹ್ಲಾದನನ್ನು ಕೊಲ್ಲಲ್ಲು ಬಿಟ್ಟರು.ಸರ್ಪಗಳು ಕಡಿದಾಗ ಅವನ ಶರೀರದಲ್ಲಿ ವಿಷದ ಬದಲಿಗೆ ಅಮೃತವೇ ಸೇರಿಕೊಂಡಿತು.

ದಿಗ್ಗಜಗಳು ಬಾಲಕನನ್ನೇ ಕೊಲಲ್ಲು ಪ್ರಯತ್ನಿಸಿ ವಿಫಲರಾದರು.

ಅಗ್ನಿ ಸುಡಲಾರದೇ ಹೋದನು.

ಹರಿಭಕ್ತಿಯಿಂದ ತನ್ನ ಮಗನೂ ಅಜೆಯನಾದುದನ್ನು ತಿಳಿದು ಇನ್ನಷ್ಟು  ಆಲೋಚನೆಗಳನ್ನು ಮಾಡುತ್ತಿರುವಾಗ ತಂದೆಯೇ,ಜಗದೀಶ್ವರನ ಆಜ್ಞೆಯಿಲ್ಲದೆ ಜಗತ್ತಿನಲ್ಲಿ ಎನೂ ನೆಡೆಯುವುದಿಲ್ಲ.ಆದರೆ ಅಂತ್ಯಕಾಲದಲ್ಲಿ ಹೊಟ್ಟೆಯಲ್ಲಿರುವ ಜಠರಾಗ್ನಿಯೇ ಶರೀರವನ್ನು ದಹಿಸುವುಸು ಎಂದನು ಪ್ರಹ್ಲಾದ.

ನವ ವಿಧವಾದ ವಿಷಗಳನ್ನು ಸೇರಿಸಿ ಹಿರಣ್ಯಕಶಿಪು ಅದನ್ನು ಪ್ರಹ್ಲಾದನಿಗೆ ಕುಡಿಯಲು ಕೊಡುವ ತೀರ್ಮಾನ  ಮಾಡಿದನು.ವಿಷಗಳು ಅಮೃತಮಯವಾದಾಗ ಹಿರಣ್ಯಕಶಿಪುವಿನ ಎಲ್ಲಾ ಪ್ರಯತ್ನಗಳು ವ್ಯರ್ಥವಾಗತೊಡಗಿದವು.

ಜಗದೀಶ್ವರನ ಅಪೇಕ್ಷೆ ಇದ್ದರೆ ವಿಷವು ಅಮೃತವಾಗುವುದು ಎಂದು ಪ್ರಹ್ಲಾದನು ಹೇಳಿದಾಗ ಹಿರಣ್ಯಕಶಿಪು ಬೇರೆ ರೀತಿಯಲ್ಲಿ ಹಿಂಸೆ ಕೊಡುವ ಬಗ್ಗೆ ಆಲೋಚಿಸಿದನು.

ರಾಕ್ಷಸರು ಹಿರಣ್ಯಕಶಿಪುವಿನ ಆದೇಶದಂತೆ ಎತ್ತರವಾದ ಪರ್ವತ ಶಿಖರದಿಂದ ಬೀಳಿಸಿದನು.ಆಗ ಪ್ರಹ್ಲಾದನನ್ನು ಸ್ವತಃ ಭೂದೇವಿಯೇ ಬಂದು ಎತ್ತಿಕೊಂಡಳು.

ಮಾಯ ಪಟುವಾದ ಶಿಖರಾಸುರನನ್ನು ಮಾಯೆಗಳಿಂದ ಮಗುವನ್ನು ಸಂಹರಿಸಲು ಹಿರಣ್ಯಕಶಿಪು ಕೇಳಿಕೊಂಡಾಗ ಅವನು ವಿಧ ವಿಧವಾಗಿ ಬ್ರಾಂತಿಗೊಳಿಸಿದನು. ಆಗ ಪ್ರಹ್ಲಾದನಿಗೆ ಏನಾಗುತ್ತಿದೆ ಎಂದು ಅರಿಯದಾದಾಗ ವೇದಗಳು ನಾಶವಾದವೆ?ಸತ್ಕ್ರಿಯೆಗಳು ಕಾಣದಾದವೇ?ಮಹಾವಿಷ್ಣುವು ನಿದ್ದೆ ಮಾಡುತ್ತಿದ್ದಾನೆಯೇ?ಎಂದು ಚಿಂತೆಯಿಂದ ಇದೇನು ಸ್ವಪ್ನವೋ,ಸತ್ಯವೊ ಎಂದು ತಿಳಿಯಲಾರದೇ ಶ್ರೀಮನ್ನಾರಾಯಣನನ್ನು ಭಜಿಸುತ್ತಿದ್ದನು.

ಶ್ರೀ ಹರಿಯ ಚಕ್ರದಿಂದ ಮಾಯ ಕಷ್ಟಗಳೆಲ್ಲವು ದೂರವಾದವು.ಹಿರಣ್ಯಕಶಿಪು ವಾಯುದೇವನನ್ನು ಮಗನನ್ನೇ ಶೋಷಿಸಿದಾಗ ನಾನೇನು ಮಾಡಲಾರೆ ಎಂದನು.

ಆಗ ನಾಗಪಾಶದಿಂದ ಕಟ್ಟಿರಿ ಎಂದು ರಾಕ್ಷಸರಿಗೆ ಹಿರಣ್ಯಕಶಿಪು ಆದೇಶ ಮಾಡಿದನು.ನಾಗಪಾಶದಿಂದ ಬಂಧಿಸಿ ಪ್ರಹ್ಲಾದನನ್ನು ಸಮುದ್ರದಲ್ಲಿ ಎಸೆದರು.ಪ್ರಹ್ಲಾದನು ಸಮುದ್ರ ರಾಜನನ್ನು ಪ್ರಾರ್ಥಿಸಿದಾಗ ಶ್ರೀಮನ್ನಾರಾಯಣನ ಕೃಪೆಯಿಂದ ಹೂವಿನ ರಾಶಿಯಲ್ಲಿರುವಂತೆ ಸಮುದ್ರದಲ್ಲಿ ಜಲಕ್ರೀಡೆಯಾಡುತ್ತಿದ್ದನು ಪ್ರಹ್ಲಾದ.

ತನ್ನ ಯಾವುದೇ ಕಾರ್ಯವು ಮಗನನ್ನು ಕೊಲ್ಲಲು ಅಸಮರ್ಥವಾದಾಗ ಸ್ವತಃ ಖಡ್ಗವನ್ನು ಹಿಡಿದು ಬಂದನು.ನಿನ್ನ ಶ್ರೀ ಹರಿಯು ಎಲ್ಲಿದ್ದಾನೆ?ಎಂದು ಕೇಳಿದಾಗ ಪ್ರಹ್ಲಾದನು ಪರಮಾತ್ಮನು ಅಂತರ್ಯಾಮಿ ಎಲ್ಲಾ ಕಡೆಗಳಲ್ಲಿಯೂ ಇದ್ದಾನೆಂದು  ಹೇಳಿದಾಗ ಒಂದು ಮಣಿಸ್ತoಭವನ್ನು ತೋರಿಸಿ ಇದರಲ್ಲಿದ್ದಾನೆಯೇ ಎಂದು ಕೇಳಿದನು.ಹಿರಣ್ಯಕಶಿಪು ಖಡ್ಗದಾರಿಯಾಗಿ ಮಗನನ್ನು ಕೊಲ್ಲಲು ಸಿದ್ಧನಾದಾಗ ಮನಿಸ್ತoಬದಲ್ಲಿ ಪ್ರಕಟವಾಗುವಂತೆ ಶ್ರೀ ಹರಿಯನ್ನು ಪ್ರಾರ್ಥಿಸುತ್ತಿದ್ದನು.

ಹಿರಣ್ಯಕಶಿಪು ನಾನಾ ರೀತಿಯಿಂದ ದೇವತೆಗಳನ್ನು ಶ್ರೀ ಹರಿಯನ್ನು ನಿಂಧಿಸುತ್ತಿರಲು  ಶುಕ್ಲ ಚತುರ್ದಶಿಯ ದಿನ ಪ್ರದೋಷ ಕಾಲದಲ್ಲಿ ನರಸಿಂಹ ರೂಪದಿಂದ ಬ್ರಹ್ಮಾoಡವೇ ಬಿರಿಯುವಂತೆ ಆರ್ಭಟಿಸುತ್ತಾ ಮಣಿಸ್ತoಭವನ್ನು ಭೇದಿಸಿ ಪ್ರಕಟವಾದನು.ಉಗ್ರವಾದ ಸಿಂಹನ ತಲೆ ನರಶರೀರದಿಂದ ಅತ್ಯಂತ ಪ್ರಕಾಶಮಾನವಾಗಿ ಪ್ರಕಟವಾದಾಗ ಶ್ರೀ ಹರಿಯ ಹೊಸ ಅವತಾರದಿಂದಾಗಿ ಭೂಮಿ ಅಲ್ಲಾಡಿತು.ಸಮುದ್ರವೂ ಉಕ್ಕಿ ಹರಿಯಿತು, ಮಹಾ ಕೋಲಾಹಲ ಉಂಟಾಯಿತು.ಹಿರಣ್ಯಕಶಿಪುವಿನ ಪರಿವಾರದವರು ನಾನಾ ರೀತಿಯ ಶಸ್ತ್ರಾಸ್ತ್ರಗಳನ್ನು ನರಸಿಂಹನ ಮೇಲೆ ಪ್ರಯೋಗಿಸಿದರು ಏನು ಪ್ರಯೋಜನವಾಗಲಿಲ್ಲ.

ನರಸಿಂಹನು ಹಿರಣ್ಯಕಶಿಪುವನ್ನೇ ಹಿಡಿದು ತನ್ನ ಉಗುರುಗಳಿಂದಲೇ ಅವನ ಶರೀರವನ್ನು ಸಿಗಿದು ರಕ್ತಪಾನ ಮಾಡಿ ಕರುಳಮಾಲೆ ಧರಿಸಿದನು.ಎಲ್ಲಾ ಲೋಕಗಳನ್ನೇ ನಾಶ ಮಾಡುವ ಕಾಲರುದ್ರನಂತಾಗಿದ್ದ  ನರಸಿಂಹನ ಅವತಾರದಿಂದ  ಅವನ ಕಾರ್ಯದಿಂದ ಹೆದರಿದ ದೇವತೆಗಳು ನಾನಾ ರೀತಿಯಿಂದ ಪ್ರಾರ್ಥಿಸಿದರು. ಪರಮೇಶ್ವರನು ಬಯಸಿದಾಗೆ ವೀರತನದ ಶರಭವು ಅವಿರ್ಭವಿಸಿ ನರಸಿಂಹನ ಕ್ರೌರ್ಯವನ್ನು ಶಾಂತಗೊಳಿಸಿತು.

ಲಕ್ಷ್ಮೀ ದೇವಿಯ ಪ್ರಾರ್ಥನೆಯು  ವ್ಯರ್ಥವಾದಾಗ ಪ್ರಹ್ಲಾದನೇ ಭಕ್ತಿಯಿಂದ ಭಜಿಸಿದನು. ಆಗ ಭಕ್ತ ಪರಾಧೀನನಾದ ನರಸಿಂಹನು ಪ್ರಹ್ಲಾದವರದನಾಗಿ ರಾಜ್ಯವನ್ನಿತ್ತು  ಪಟ್ಟಾಭಿಷೇಕ ಮಾಡಿ ಲಕ್ಷ್ಮೀ ಸಮೇತನಾಗಿ ಅಂತರ್ದಾನ ಹೊಂದಿದನು.ರೀತಿಯಲ್ಲಿ ನರಸಿಂಹ ಹಾಗೂ  ವರಹಾ ಅವತಾರಗಳನ್ನು ಮಾಡಿದ ಶ್ರೀ ಹರಿಯು  ಜಯ ವಿಜಯರಿಗೆ ಕೊಟ್ಟ ವಚನವನ್ನೇ ಪೂರೈಸಿದನು.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top