fbpx
ಸಮಾಚಾರ

ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲೂ ಕರಾವಳಿ ಮುಡಿಗೆ ಗರಿ: ವಿದ್ಯಾರ್ಥಿನಿಯರೇ ಮೇಲುಗೈ

ಬಹುನಿರೀಕ್ಷಿತ ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದ್ದು, ಕರಾವಳಿ ಅಗ್ರಸ್ಥಾನ ಪಡೆದರೆ, ಬೀದರ್‍ ಕೊನೆಯ ಸ್ಥಾನಕ್ಕೆ ಕುಸಿದಿದೆ. ಉಡುಪಿ ಮೊದಲ ಸ್ಥಾನ ಪಡೆದರೆ, ದಕ್ಷಿಣ ಕನ್ನಡ ಎರಡನೇ ಸ್ಥಾನ ಪಡೆಯುವ ಮೂಲಕ ಬುದ್ಧಿವಂತರ ಜಿಲ್ಲೆ ಎಂಬ ಹೆಗ್ಗಳಿಕೆ ಉಳಿಸಿಕೊಂಡಿದೆ.

ಬೆಂಗಳೂರಿನಲ್ಲಿ ಶುಕ್ರವಾರ ಶಿಕ್ಷಣ ಸಚಿವ ತನ್ವೀರ್‍ ಸೇಠ್‍ ಪರೀಕ್ಷಾ ಫಲಿತಾಂಶ ಪ್ರಕಟಿಸಿದ್ದು, 625 ಅಂಕಗಳ ಪೈಕಿ ಪೂರ್ಣ 625 ಅಂಕ ಗಳಿಸಿದ ಬೆಂಗಳೂರಿನ ಸುಮಂತ್‍ ಹೆಗ್ಡೆ, ಪುತ್ತೂರಿನ ಪೂರ್ಣಾನಂದ ಮತ್ತು ಬಾಗಲಕೋಟೆಯ ಪಲ್ಲವಿ ರಾಜ್ಯಕ್ಕೆ ಪ್ರಥಮ ಸ್ಥಾನ ಹಂಚಿಕೊಂಡಿದ್ದಾರೆ.

ಈ ಬಾರಿ 67.87 ಶೇ. ಫಲಿತಾಂಶ ಬಂದಿದ್ದು, ಪಿಯುಸಿಯಲ್ಲಿ ಈ ಬಾರಿ ಶೇ.5ರಷ್ಟು ಫಲಿತಾಂಶ ಕಡಿಮೆ ಬಂದರೆ, ಎಸ್ಸೆಸ್ಸೆಲ್ಸಿಯಲ್ಲಿ ಶೇ.8ರಷ್ಟು ಫಲಿತಾಂಶ ಕಡಿಮೆ ಬಂದಿರುವುದು ಆಘಾತಕಾರಿಯಾಗಿದೆ.

ಶೇ. 82.39 ಫಲಿತಾಂಶ ಪಡೆದ ಉಡುಪಿ ರಾಜ್ಯಕ್ಕೆ ಮೊದಲ ಸ್ಥಾನ ಪಡೆದರೆ, ಶೇ. 82.39ರಷ್ಟು ಫಲಿತಾಂಶ ಪಡೆದ ದಕ್ಷಿಣ ಕನ್ನಡ ಎರಡನೇ ಸ್ಥಾನ ಗಳಿಸಿದೆ. ಚಿಕ್ಕೋಡಿ (80.47) ಮೂರನೇ ಸ್ಥಾನ ಹಾಗೂ ಶೇ.60.02 ಅಂಕ ಗಳಿಸಿದ ಬೀದರ್ ಕೊನೆಯ ಸ್ಥಾನಕ್ಕೆ ಕುಸಿದಿದೆ.

ಈ ಬಾರಿ ಕೂಡ ಬಾಲಕಿಯರೇ ಮೇಲುಗೈ ಗಳಿಸಿದ್ದು, ಶೇ. 74.06 ಫಲಿತಾಂಶ ಪಡೆದರೆ, ಶೇ. 62.42 ರಷ್ಟು ಫಲಿತಾಂಶ ಪಡೆದು ಬಾಲಕರು ಎರಡನೇ ಸ್ಥಾನ ಗಳಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top