ಆರೋಗ್ಯ

ವಯಸ್ಸಿಗೆ ಬಂದ ಮಗನ ಜೊತೆ ಲೈಂಗಿಕ ವಿಷಯಗಳನ್ನು ಚರ್ಚಿಸುವ ಮುಂಚೆ ಇವೆಲ್ಲಾ ಗಮನದಲ್ಲಿ ಇರಲಿ ..

ವಯಸ್ಸಿಗೆ ಬಂದ ಮಗನ ಜೊತೆ ಲೈಂಗಿಕ ವಿಷಯಗಳನ್ನು ಚರ್ಚಿಸುವ ಮುಂಚೆ ಇವೆಲ್ಲಾ ಗಮನದಲ್ಲಿ ಇರಲಿ ..

ಹಿಂದೊಂದು ಕಾಲದಲ್ಲಿ ಲೈಂಗಿಕ ವಿಷಯದ ಮಂಡಿವಂತಿಕೆ ಅಂದ್ರೆ ಮಡಿವಂತಿಕೆ ಗಂಡ ಹೆಂಡ್ತಿ ಸಹ ಕಣ್ಣ ಸಲಿಗೆಲೇ ಮಾತಾಡ್ಕೋತಿದ್ರಂತೆ,ಲೈಂಗಿಕ ವಿಷಯ ಮಾತಾಡೋ ಹುಡುಗರನ್ನ ಕೆಟ್ಟವರು ಅಂತ ನೋಡ್ತಿದ್ರು  ಆದ್ರೆ ಈಗ ಕಾಲ ಬದ್ಲಾಗಿದೆ ಇಂಟರ್ನೆಟ್ ಎಲ್ಲರ ಕೈಗೂ ಸಿಗುವಂತಾಗಿದೆ 12 ವರ್ಷಕ್ಕಿಂತ ಚಿಕ್ಕ ಮಕ್ಳು ಸಹ ನೀಲಿ ಚಿತ್ರ ನೋಡ್ತಾರಂತೆ .

ವಿದೇಶಗಳಲ್ಲಿ ಲೈಂಗಿಕ ವಿಜ್ಞಾನ ಕೂಡ ಅವರ ಕಲಿಕೆಯ ಒಂದು ಭಾಗವೇ ಆಗಿದೆ
ಭಾರತದಲ್ಲಿ ಒಂಭತ್ತನೆಯ ಕ್ಲಾಸ್ಸಿನಿಂದ ಹನ್ನೆರಡನೆ ಕ್ಲಾಸ್ ಓದೋ ಮಕ್ಕಳ ಮೇಲೆ ಅಧ್ಯಯನ ಮಾಡಿದ್ರಂತೆ ಇದರ ಪ್ರಕಾರ ಸುಮ್ಮರು ಮೂವತ್ತು ಶೇಕಡಾ ಹುಡುಗರು ಮತ್ತೆ ಸುಮಾರು ಹದಿನೇಳು ಶೇಕಡಾ ಹುಡುಗಿಯರು ತಮಗೆ ಲೈಂಗಿಕ ವಿಷಯದ ಅನುಭವಾಗಿದೆ ಎಂದು ಒಪ್ಪಿಕೊಂಡ್ರು .
ಇನ್ನು 1.3% ಹುಡುಗಿಯರು ಮತ್ತೆ 6.3% ಹುಡುಗ್ರು ತಾವು ಲೈಂಗಿಕ ಕ್ರಿಯೆಯಲ್ಲಿ ಸಂಪೂರ್ಣ ತೊಡಗಿದ್ದೀವಿ ಅಂತ ಹೇಳಿರಂತೆ .

ಆದ್ದರಿಂದ ನಿಮ್ಮ ವಯಸ್ಸಿಗೆ ಬಂದ ಮಗನ ಜೊತೆ ಲೈಂಗಿಕ ವಿಷಯ ಮಾತಾಡೋದು ತಪ್ಪೇನಿಲ್ಲ

ಕೆಲವು ವಿಷಯಗಳನ್ನು ಸರಿಯಾಗಿ ಸಿದ್ಧಪಡಿಸಿ

ಪುರುಷ ಹಾಗು ಸ್ತ್ರೀ ಜನನಾಂಗಗಳು
ಫ್ಯಾಮಿಲಿ ಪ್ಲಾನಿಂಗ್
ನೀಲಿ ಚಿತ್ರಗಳು
ಲೈಂಗಿಕ ಕ್ರಿಯೆ
ಲಿಂಗ ಪ್ರಕಾರಗಳ ಬಗ್ಗೆ
ಲೈಂಗಿಕವಾಗಿ ಹರಡುವ ಸೋಂಕುಗಳು
ಅತ್ಯಾಚಾರ , ಗರ್ಭಧಾರಣೆ ,
ಡ್ರಗ್ಸ್ ,ಸಾರಾಯಿ , ಸಿಗರೇಟ್ ಇವುಗಳ ಪರಿಣಾಮ ಹೀಗೆ …

ನಿಮ್ಮ ಮಗನ ಕೆಲವು ಪ್ರಶ್ನೆಗಳಿಗೆ ಉತ್ತರಿಸಿ

ಮುಕ್ತವಾಗಿ ಮಾತಾಡಿ , ಶಾಲೆಯಲ್ಲಿನ ಪರಿಸರ ,ಲೈಂಗಿಕ ಶಿಕ್ಷಣ , ಸಹಪಾಠಿಗಳ ಸಂಗ ಎಲ್ಲದರ ಬಗ್ಗೆ ತಿಳಿದುಕೊಳ್ಳಿ

ಆಗಾಗ ಮಾತನಾಡುತ್ತ ಇರಿ ಒಂದೇ ಬಾರಿಗೆ ಎಲ್ಲವನ್ನು ತುರುಕಬೇಡಿ

ಆತನ ದೇಹದಲ್ಲಿ ಆಗುತ್ತಿರ್ವ ಬದಲಾವಣೆಗಳ ಬಗ್ಗೆ ತಿಳಿದುಕೊಳ್ಳಿ

ವಿಷ್ಯ ಹೇಳುವಾಗ ನಿಗಾ ಇರಲಿ ನಿಮ್ಮ ಸ್ನೇಹಿತರ ಜೊತೆ ಬಳಸುವ ಆಡು ಪದಗಳನ್ನ ಬಳಸಬೇಡಿ

ಪ್ರಶ್ನೆ ಹಾಗು ಉತ್ತರಗಳ ವಿನಿಮಯವಾಗಲಿ

ಸ್ನೇಹಿತರ ಸಂಗ ಎಂತದ್ದು ಅಂತ ಅರಿತು ಸರಿಯಾದ ಮಾರ್ಗದರ್ಶನ ನೀಡಿ

ಬೈಯ್ಯುವುದು ಒಡೆಯುವುದು ಮಾಡಬೇಡಿ , ಸಮಾಧಾನವಾಗಿರಿ

ಕೆಲವು ಲೈಂಗಿಕ ಕಾರ್ಟೂನ್ ಹಾಗು ಪುಸ್ತಕಗಳು ಸಿಗುತ್ತವೆ ಅದರ ಮಾಹಿತಿಯನ್ನು ನೀಡಿ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top