fbpx
ದೇವರು

ಹನುಮಾನ್ ಚಾಲೀಸ ಶ್ಲೋಕದ ಒಳ ಅರ್ಥ ತಿಳ್ಕೊಳ್ಳಿ ..

ಹನುಮಾನ್ ಚಾಲೀಸ.

ಹನುಮಾನ್ ಚಾಲೀಸ್ ರಚಿಸಿದವರು ಖ್ಯಾತ ಕವಿ ಗೋಸ್ವಾಮಿ ತುಳಸಿದಾಸರ ಹಿಂದೂ ಧರ್ಮದಲ್ಲಿ ಈ ಚಾಲೀಸಾಕ್ಕೆ ವಿಶೇಷವಾದ ಮಹತ್ವವಿದ್ದು ಇದನ್ನು ಪಠಿಸುವ ಮೂಲಕ ಆಂಜನೇಯನ ಕೃಪೆಗೆ ಪಾತ್ರರಾಗಬಹುದು ಎಂದು ತಿಳಿಯಲಾಗುತ್ತದೆ. ಅಲ್ಲದೇ ಸೈತಾನನ ಪ್ರಭಾವವನ್ನೂ ಹನುಮಾನ್ ಚಾಲೀಸಾ ಪಠಿಸುವ ಮೂಲಕ ಕೊನೆಗಾಣಿಸಬಹುದು.

ಎಲ್ಲ ಸಂಕಷ್ಟಗಳು ದೂರ :

ಹನುಮಾನ್ ಚಾಲೀಸಾವನ್ನು ಪಠಿಸುವ ಮೂಲಕ ಋಣಾತ್ಮಕ ಶಕ್ತಿಗಳು ಇಲ್ಲವಾಗಿ ಸುಖನಿದ್ದೆ ಆವರಿಸಲು ಸಾಧ್ಯವಾಗುತ್ತದೆ. ರಾತ್ರಿ ನಿದ್ದೆಯಲ್ಲಿ ಹೆದರುವ ಮಕ್ಕಳು ಈ ಹನುಮಾನ್ ಚಾಲೀಸಾವನ್ನು ತಪ್ಪದೇ ಓದಬೇಕು. ವಿಶೇಷವಾಗಿ ಹನುಮಾನ್ ಚಾಲೀಸಾವನ್ನು ಪ್ರತಿ ರಾತ್ರಿ ಪಠಿಸುವ ಮೂಲಕ ಜೀವನದಲ್ಲಿ ಎದುರಾಗುವ ಪೀಡೆಗಳಿಂದ ಮುಕ್ತಿ ಪಡೆಯಬಹುದು.

ಪಠಿಸಲು ಯಾವ ಸಮಯ ಶ್ರೇಷ್ಠ :

ವಿಶೇಷವಾಗಿ ಶನಿಗ್ರಹದ ಪ್ರಭಾವದಿಂದ ಉಪಟಳ ಇರುವ ವ್ಯಕ್ತಿಗಳು ಪ್ರತಿ ಶನಿವಾರ ರಾತ್ರಿ ಎಂಟು ಬಾರಿ ಪಠಿಸಿ ಮಲಗುವ ಮೂಲಕ ವಿಪತ್ತಿನಿಂದ ಪಾರಾಗಬಹುದು. ಹನುಮಾನ್ ಚಾಲೀಸಾವನ್ನು ಪಠಿಸಲು ಅತ್ಯುತ್ತಮ ಸಮಯವೆಂದರೆ ಮುಂಜಾನೆ ಮತ್ತು ರಾತ್ರಿ ಮಲಗುವ ಮುನ್ನ.

ಎಷ್ಟು ಬಾರಿ ಪಠಿಸಬೇಕು :

ಪ್ರತಿ ರಾತ್ರಿ ಮಲಗುವ ಮುನ್ನ ಹನುಮಾನ್ ಚಾಲೀಸಾ ಪ್ರಥಮ ಅಧ್ಯಾಯಗಳನ್ನು ಎಂಟು ಬಾರಿ ಪಠಿಸುವ ಮೂಲಕ ಅಂದಿನ ದಿನ ನಿಮಗೆ ಅರಿವಿದ್ದೋ, ಅರಿವಿರದೆಯೋ ಯಾರ ಮನಸ್ಸನ್ನು ನೋಯಿಸಿದ್ದರೆ ಆ ಪಾಪ ಇಲ್ಲವಾಗುತ್ತದೆ.ಜೀವನದಲ್ಲಿ ಮಹತ್ತರವಾದ ಗುರಿಯನ್ನು ಸಾಧಿಸುವ ಇಚ್ಛೆಯುಳ್ಳವರು ತಮ್ಮ ಗುರಿ ಸಾಧನೆಯ ಅವಧಿಯಲ್ಲಿ ಪ್ರತಿ ಮಂಗಳವಾರ, ಗುರುವಾರ ಮತ್ತು ಶನಿವಾರ ಅಥವಾ ಮೂಲಾ ನಕ್ಷತ್ರದ ರಾತ್ರಿ ಒಟ್ಟು 1008 ಬಾರಿ ಹನುಮಾನ್ ಚಾಲೀಸಾವನ್ನು ಪಠಿಸಿದರೆ ಹನುಮದೇವರ ಅನುಗ್ರಹ ಪಡೆಯಬಹುದು.

ಪಠಿಸಲು ಕಾರಣ :

ಜೀವನದಲ್ಲಿ ಸುಖ, ನೆಮ್ಮದಿ, ಶಾಂತಿ ಮತ್ತು ಸಮೃದ್ಧಿಗಾಗಿ ಹನುಮಾನ್ ಚಾಲೀಸಾವನ್ನು ಪ್ರತಿ ರಾತ್ರಿ ಭಕ್ತಿ ಶ್ರದ್ಧೆಯಿಂದ ಪಠಿಸಿ.

ಆಂಜನೇಯನ ಶ್ರೀರಕ್ಷೆ :

ಹನುಮಾನ್ ಚಾಲೀಸಾವನ್ನು ಪ್ರತಿ ರಾತ್ರಿ ಪಠಿಸುವ ಮೂಲಕ ಆಂಜನೇಯ ದೇವರ ರಕ್ಷಣೆಯನ್ನು ಪಡೆಯಬಹುದು. ಅಲ್ಲದೇ ದೇವರ ಅನುಗ್ರಹದಿಂದ ಜೀವನದಲ್ಲಿ ಎದುರಾಗುವ ಅಡ್ಡಿ ಆತಂಕಗಳು ಇಲ್ಲವಾಗಿ ಜೀವನದ ಗುರಿಯನ್ನು ಸುಲಭವಾಗಿ ತಲುಪಬಹುದು.

ಹನುಮಾನ್ ಚಾಲೀಸವನ್ನು ನಿರಂತರವಾಗಿ ಓದಿದರೆ ನಮ್ಮ ಕಷ್ಟಗಳು ಸುಲಭವಾಗಿ ಬೇಗನೆ ದೂರವಾಗುತ್ತವೆ.ಈಗ ಹನುಮಾನ್ ಚಾಲೀಸ ಮತ್ತು ಅದರ ಅರ್ಥವನ್ನು ತಿಳಿಯೋಣ

ಶ್ರೀ ಹನುಮಾನ್ ಚಾಲೀಸಾ ಪ್ರಾರಂಭ

1.ಶ್ರೀ ಗುರು ಚರಣ ಸರೋಜ ರಜ ನಿಜ ಮನ ಮುಕುರ ಸುಧಾರಿ ಬರನಉ ರಘುಬರ ವಿಮಲ ಜಸು ಜೋಧಾಯಕ ಫಲ ಚಾರಿ.
ಅರ್ಥ:ಶ್ರೀ ಗುರು ಮಹಾರಾಜರ ಚರಣಕಮಲಗಳ ಧೂಳಿಯಿಂದ ಮನವೆಂಬ ಕನ್ನಡಿಯು ಹೇಗೆ ಪವಿತ್ರವಾಗುವುದೋ ಹಾಗೆ ಪವಿತ್ರಗೊಳಿಸಿಕೊಂಡು ನಾನು ರಘುವೀರನ ನಿರ್ಮಲವಾದ ಯಶಸ್ಸಿನ ವರ್ಣನೆಯು ಧರ್ಮ,ಅರ್ಥ,ಕಾಮ,ಮೋಕ್ಷಗಳನ್ನು ಕೊಡುವದಾಗಿದೆ.

2.“ಬುದ್ದಿ ಹೀನ ತನು ಜಾನಿ ಕೆ,ಸುಮಿರೌ ಪವನ ಕುಮಾರ l ಬಲಬುದ್ಧಿ ವಿದ್ಯಾ ದೇಹು ಮೋಹಿ,ಕರಹು ಕಲೇಶ ವಿಕಾರ”
ಅರ್ಥ:ಹೇ ಪವನ ನಂದನ,ನಾನು ನಿನ್ನ ಸ್ಮರಣೆಯನ್ನು ಮಾಡುತ್ತೇನೆ.ನೀನು ತಿಳಿದಂತೆ ನನ್ನ ಶರೀರ ಮತ್ತು ಬುದ್ಧಿಗಳು ನಿರ್ಬಲವಾಗಿವೆ.ನನಗೆ ಶಾರೀರಿಕ ಬಲ ಮತ್ತು ಸದ್ಬುದ್ಧಿ ಜ್ಞಾನಗಳನ್ನು ಕೊಡು ಮತ್ತು ನನ್ನ ದುಃಖಗಳನ್ನು ನಾಶ ಮಾಡು ಎಂದು ಬೇಡುತ್ತೇನೆ.

3.ಜಯ ಹನುಮಾನ್ ಜ್ಞಾನ ಗುಣಸಾಗರ್ ಜಯ ಕಪೀಶ್ ತಿಹು ಲೋಕ ವುಜಾಗರ.
ಹೇ ಕೇಸರಿನಂದನ ಹನುಮಂತ, ‘ನಿನಗೆ ಜಯವಾಗಲಿ, ನಿನ್ನಲ್ಲಿ ಜ್ಞಾನ ಮತ್ತು ಗುಣಗಳು ಅನಂತವಾಗಿವೆ.ಹೇ ಕಪೀಶ್ವರ್ ನಿನಗೆ ಜಯವಾಗಲಿ, ಸ್ವರ್ಗ, ಭೂಮಿ, ಮತ್ತು ಪಾತಾಳ ಲೋಕಗಳಲ್ಲಿ ನಿನ್ನ ಕೀರ್ತಿಯೂ ಹರದಿರುವುದು.

4.ರಾಮ ದೂತ ಆತುಲಿತ ಬಲಧಾಮ ಅಂಜನಿ ಪುತ್ರ ಪವನ ಸುತನಾಮ.
ಹೇ ಪವನಪುತ್ರ, ಅಂಜನೀ ನಂದನ,ರಾಮದೂತ, ಈ ಸಂಸಾರದಲ್ಲಿ ನಿನಗೆ ಸಮಾನ ಬಲಶಾಲಿಯಾದವನು ಬೇರೆ ಯಾರು ಇಲ್ಲ.

5.ಮಹಾವೀರ ವಿಕ್ರಮ ಭಜರಂಗಿ ಕುಮತಿ ನಿವಾರ್ ಸುಮತಿ ಕೆ ಸಂಗೀ.
ಹೇ ಭಜರಂಗ ಬಲಿ ನೀನು ಪರಾಕ್ರಮ ಶಾಲಿ ಮತ್ತು ಮಹಾವೀರ ನಾಗಿರುವೆ.ದುರ್ಬುದ್ದಿಯನ್ನು ದೂರಮಾಡುವೆ. ಸಮೃದ್ಧಿಯಿರುವವರ ಸಂಗಡ ಸಹಾಯಕನಾಗಿರುವೆ.

6.ಕಂಚನವರಣ ವಿರಾಜ್ ಸುವೇಶ ಕಾನನ ಕುಂಡಲ ಕುಂಚಿತ ಕೇಶ.
ಹೇ ಹನುಮಾನ, ನಿಮ್ಮ ಬಣ್ಣ ಬಂಗಾರದ ಬಣ್ಣವಾಗಿದೆ.ಸುಂದರ ವಸ್ತ್ರಗಳಿಂದ ಅಲಂಕೃತರಾಗಿರುವಿರಿ. ಕಿವಿಗಳಲ್ಲಿ ಬಂಗಾರದ ಕುಂಡಲಗಳಿವೆ ಮತ್ತು ಗುಂಗುರು ಕೂದಲುಗಳಿಂದ ಶೋಭಿಸುವಿರಿ.

7.ಹಾಥವಜ್ರ ಅರುಣದ್ವಜಾವಿರಾಜೈ ಕಾಂಥೇಮೊಂಜಿ ಜನೇವೋಚಾಜೈ.
ಹೇ ಪರಾಕ್ರಮಿ ಹನುಮಾನ್,ನಿಮ್ಮ ಕೈಯಲ್ಲಿ ವಜ್ರ ಮತ್ತು ದ್ವಜಗಳಿವೆ.ಭುಜದಲ್ಲಿ ದರ್ಬೆಯ ಯಗನೋಪವೀತಗಳು ಶೋಭಿಸುತ್ತಿವೆ.

8.ಶಂಕರಸುವನ ಕೇಸರಿನಂದನ್ ತೇಜಪ್ರತಾಪ ಮಹಾಜಗವಂದನ್.
ಹೇ ಹನುಮಾನ್,ನೀವು ಶಂಕರನ ಅವತಾರವಾಗಿರುವಿರಿ.ಕೇಸರಿಯ ಪುತ್ರರಾಗಿರುವಿರಿ.ನಿಮ್ಮ ತೇಜಸ್ಸು ಮತ್ತು ಪರಾಕ್ರಮ ಗಳಿಂದ ಇಡೀ ಜಗತ್ತಿನಲ್ಲಿಯೇ ಕೀರ್ತಿಗಳಿಸಿ ವಂದನೆ ಸ್ವೀಕರಿಸುವಿರಿ.

9.ವಿದ್ಯಾವಾನಗುಣಿ ಅತಿಚಾತುರ್ ರಾಮಕಾಜ್ ಕರಿವೇಕೋ ಆತುರ.
ಹೇ ಹನುಮಾನ್,ನೀವು ವಿದ್ಯಾವಂತರೂ, ಗುಣವಂತರೂ ಆಗಿ ಅತಿ ಚತುರರಾಗಿದ್ದೀರಿ.ಶ್ರೀ ರಾಮಚಂದ್ರನ ಕಾರ್ಯ ಮಾಡಲು ಸದಾ ಆತುರರಾಗಿದ್ದೀರಿ.

10.ಪ್ರಭುಚರಿತ್ರ ಸುನಿಯೆಕೋ ರಸಿಯಾ ರಾಮಲಖನ್ ಸೀತಾ ಮನಬಸಿಯಾ.
ಹೇ ಹನುಮಾನ್,ನೀವು ಪ್ರಭು ಶ್ರೀ ರಾಮನ ಚರಿತ್ರೆಯನ್ನು ಗುಣಗಾನವನ್ನು ಕೇಳಿ ಅನಂದಪಡುವಿರಿ.ನಿಮ್ಮ ಹೃದಯದಲ್ಲಿಯೇ ಸೀತಾ,ರಾಮ,ಲಕ್ಷ್ಮಣರನ್ನು ಹೊಂದಿದ್ದೀರಿ.

11.ಸೂಕ್ಷ್ಮ ರೂಪದರಿಸಿಯಹಿ ದಿಖಾವಾ ವಿಕಟರೂಪಧರಿ ಲಂಕಜರಾವ.
ಹೇ ವಾಯುಪುತ್ರ, ನೀವು ಸೂಕ್ಷ್ಮ ರೂಪ ಧರಿಸಿ ಸೀತೆಯ ಎದುರಿಗೆ ಕಂಡು ಬಂದಿರಿ,ಭಯಂಕರ ರೂಪವನ್ನು ಧರಿಸಿ ಲಂಕೆಯನ್ನು ಸುಟ್ಟು ಹಾಕಿದಿರಿ.

12.ಭೀಮರೂಪಧರಿ ಅಸುರ ಸಂಹಾರೇ ರಾಮಚಂದ್ರಜೀಕೆ ಕಾಜ ಸವಾರೇ.
ಹೇ ಹನುಮಾನ್, ನೀವು ಭಯಂಕರ ರೂಪ ಧರಿಸಿ ರಾಕ್ಷಸರ ಸಂಹಾರ ಮಾಡಿದಿರಿ.ಭಗವಾನ್ ಶ್ರೀ ರಾಮನ ಉದ್ದೇಶವನ್ನು ಸಫಲಗೊಳಿಸಲು ಸಹಾಯ ಮಾಡಿದಿರಿ.

13.ಲಾಯ ಸಂಜೀವನ್ ಲಖನ ಜಿಯಾಯೇ ಶ್ರೀ ರಘುವೀರ ಹರಖೀಪುರಲಾಯೇ.
ದಿವ್ಯ ಸಂಜೀವಿನಿ ಗಿಡವನ್ನು ತಂದು ಮೂರ್ಛೆ ಹೊಂದಿದ್ದ ಲಕ್ಷ್ಮಣನನ್ನು ಬದುಕಿಸಿದಿರಿ.ಶ್ರೀ ರಘುರಾಮನ ಹೃದಯದಲ್ಲಿ ಸಂತೋಷವನ್ನು ಉಂಟು ಮಾಡಿದಿರಿ.

14.ರಘುಪತಿ ಕಿ ನಹೀ ಬಹುತಬಡಾಈ ತುಮ ಮಮ ಪ್ರಿಯ ಭರತಹಿ ಸಮಭಾಈ.
ಹೇ ಅಂಜನಿನಂದನ, ನೀವು ಭಗವಾನ್ ಶ್ರೀ ರಾಮನ ಪ್ರಶಂಸೆಗೆ ಪಾತ್ರರಾದಿರಿ. ಆದುದರಿಂದಲೇ ರಾಮನು ತನ್ನ ಸಹೋದರ ಭರತನಂತೆ ನಿಮ್ಮನ್ನು ಪ್ರೀತಿಯಿಂದ ಕಂಡನು.

15.ಸಹಸ್ರವದನ ತುಮ್ಹಾರೋ ಯಶಗಾವೈ ಅಸ ಕಹಿ ಶ್ರೀಪತಿ ಕಂಠಲ ಗಾವೈ.
“ಸಾವಿರಾರು ಜನರು ನಿನ್ನ ಯಶಸ್ಸನ್ನು ಕೊಂಡಾಡಲಿ”ಎಂದು ಶ್ರೀ ರಾಮನು ನಿಮ್ಮನ್ನು ಅಪ್ಪಿಕೊಂಡು ಪ್ರೀತಿಯಿಂದ ಹಾರೈಸಿದ್ದಾನೆ.

16.ಸನಕಾದಿ ಬ್ರಹ್ಮಾದಿ ಮುನಿಶಾ ನಾರದ ಶಾರದ ಸಹಿತ ಅಹೀಶಾ.
ಶ್ರೀ ಸನಕ , ಸನಂದನ, ಸನಾತನರಾದಿಯಾಗಿ ಸಕಲ ಮುನಿಗಳು, ಬ್ರಹ್ಮಾದಿದೇವತೆಗಳು ನಾರದ,ಶಾರದಾ,ಶೇಷನಾಗ ಮುಂತಾದವರು ನಿಮ್ಮ ಗುಣಗಾನ ಮಾಡಿದ್ದಾರೆ.

17.ಯಮ ಕುಭೇರ ದಿಕ್ ಪಾಲ ಜಹಾತೇ ಕಪಿ ಕೋವಿದ ಕಹಿ ಸಕೆ ಕಹಾತೇ.
ಯಮ,ಕುಭೇರ,ಮುಂತಾದ ದಿಕ್ಪಾಲಕರು,ಕವಿ,ವಿದ್ವಾಂಸರು ನಿಮ್ಮ ಯಶಸ್ಸನ್ನು ಪೂರ್ಣವಾಗಿ ವರ್ಣಿಸಲು ಸಮರ್ಥರಾಗಿಲ್ಲ.

18.ತುಮ ಉಪಕಾರ ಸುಗ್ರೀವಹೀಕಿನ್ಹಾ ರಾಮಮಿಲಾಯ ರಾಜಪದ ದೀನ್ಹಾ.
ಹೇ ಪವನಪುತ್ರ, ನೀನು ವಾನರರಾಜ ಸುಗ್ರೀವನೊಂದಿಗೆ ಶ್ರೀ ರಾಮನ ಭೇಟಿ ಮಾಡಿಸಿದಿರಿ.ಸುಗ್ರೀವನನ್ನು ಕಪಿಗಳ ರಾಜ್ಯದ ರಾಜನನ್ನಾಗಿಸಿದಿರಿ.

19.ತುಮ್ಹಾರೆ ಮಂತ್ರ ವಿಭೀಷಣ ಮಾನಾ ಲಂಕೇಶ್ವರ್ ಭಯೇ ಸಬಜಗಜಾನ.
ನಿಮ್ಮ ಆಲೋಚನೆಗಳನ್ನು ವಿಭೀಷಣನು ಅನುಸರಣೆ ಮಾಡಿದನು.ಲಂಕೇಶ್ವರ ರಾವಣನು ಸತ್ತಾಗ ವಿಭೀಷಣನೇ ಲಂಕೆಯ ರಾಜನಾದನು.ಅದನ್ನು ಎಲ್ಲಾ ಜನರು ತಿಳಿದಿದ್ದಾರೆ.

20.ಜುಗ ಸಹಸ್ರ ಯೋಜನ ಪರ ಬಾನೋ ಲೀಲ್ಯೊತ್ಸಾಹಿ ಮಧರ ಫಲ ಜಾನೊ.
ಸೂರ್ಯನು ಸಹಸ್ರಾರು ಯೋಜನೆ ದೂರದಲ್ಲಿದ್ದಾನೆ. ಅಲ್ಲಿಯ ತನಕ ತಲುಪಲು ಬಹಳ ಯುಗಗಳೇ ಬೇಕಾಗುವವು.ಆದರೆ ಆ ಸೂರ್ಯನನ್ನು ಮಧುರ ಹಣ್ಣೆಂದು ತಿಳಿದು ನುಂಗಲು ಬಯಸಿದಿರಿ.

21.ಪ್ರಭು ಮುದ್ರಿಕಾ ಮೇಲಿ ಮುಖ ಮಾಹೀ ಜಲಧಿ ಲಾಂಘಿಗಯೇ ಅಚರಜ ನಾಹೀ.
ನೀವು ಪ್ರಭು ಶ್ರೀ ರಾಮಚಂದ್ರನು ಕೊಟ್ಟ ಮುದ್ರೆಯುಂಗುರ ಹಿಡಿದು ಸಮುದ್ರವನ್ನು ಜಿಗಿದ್ದಿದ್ದು ಯಾರಿಗೂ ಆಶ್ಚರ್ಯವೆನಿಸಲಿಲ್ಲ.

22.ದುರ್ಗಮಕಾಜ ಜಗತ ಕೇ ಜೇತೇ ಸುಗಮ ಅನುಗ್ರಹ ತುಮ್ಹರ ತೇತೇ.
ಈ ಜಗತ್ತಿನಲ್ಲಿ ಅತಿ ಕಠಿಣವಾದ ಕಾರ್ಯಗಳೂ ಸಹ ನಿಮ್ಮ ಅನುಗ್ರಹದಿಂದ ಸುಗಮವಾಗುತ್ತವೆ.

23.ರಾಮದುಅರೆ ತುಮ ರಖವಾರೇ ಹೋತನ ಅಜ್ಞಾ ಬಿನಾ ಪೈಸಾರೇ.
ಹೇ ಹನುಮಾನ್, ನೀವು ಶ್ರೀ ರಾಮಚಂದ್ರನ ಮನೆಯ ದ್ವಾರ ಪಾಲಕರಾಗಿದ್ದೀರಿ.ನಿಮ್ಮ ಆಜ್ಞೆಯಿಲ್ಲದೆ ಯಾರೂ ಆ ಮನೆಯನ್ನು ಪ್ರವೇಶ ಮಾಡಲಾರರು.

24.ಸಬ ಸುಖ ಲಹೈ ತುಮ್ಹಾರೆ ಶರನಾ ತುಮ ರಕ್ಷಕ ಕಾಹೂಕೋ ಡರನಾ.
ಹೇ ಪವನಸುತ ನಿಮ್ಮ ಶರಣದಲ್ಲಿರುವಾಗ ಎಲ್ಲಾ ರೀತಿಯ ಸುಖ ಪ್ರಾಪ್ತಿಯಾಗುವುದು.ಯಾವುದೇ ಪ್ರಕಾರದ ಹೆದರಿಕೆಯಿರುವುದಿಲ್ಲ.

25.ಅಪನ್ ತೇಜ ಸಂಹಾರೊ ಆಪೈ ತೀನೋ ಲೋಕ ಹಾಂಕತೇ ಕಾಂಪೈ.
ಹೇ ಭಜರಂಗಬಲಿ, ನಿಮ್ಮ ವೇಗವನ್ನು ನೀವೇ ಬಲ್ಲಿರಿ, ನಿಮ್ಮ ಗರ್ಜನೆಯಿಂದ ಮೂರುಲೋಕದ ಪ್ರಾಣಿಗಳು ನಡುಗುವವು.

26.ಭೂತ ಪಿಶಾಚ ನಿಕಟ ನಹೀ ಅವೈ ಮಹಾವೀರ ಜಬ ನಾಮ ಸುನಾವೈ.
ಹೇ ಆಂಜನೇಯ, ಯಾರು ‘ಮಹಾವೀರ’ನೆಂಬ ಹೆಸರನ್ನು ಜಪಿಸುತ್ತಾರೋ ಅವರ ಬಳಿಗೆ ಭೂತ ಪಿಶಾಚಿಗಳು ಬರುವುದಿಲ್ಲ.

27.ನಾಸೈ ರೋಗ ಹರೈ ಸಬ ಪೀರಾ ಜಪ ತಪ ನಿರಂತರ ಹನುಮಂತ ವೀರಾ.
ಹೇ ಹಾನುಮಾನ್, ನಿಮ್ಮ ಹೆಸರನ್ನು ನಿರಂತರ ಜಪ ಮಾಡುವುದರಿಂದ ಎಲ್ಲ ರೋಗಗಳು ನಾಶ ಹೊಂದುತ್ತವೆ ಮತ್ತು ಎಲ್ಲ ಕಷ್ಟಗಳು ದೂರವಾಗುತ್ತವೆ.

28.ಸಂಕಟ್ ತೇ ಹನುಮಾನ್ ಚುಡಾವೈ ಮನ ಕ್ರಮ ವಚನ ಧ್ಯಾನ ಜೋ ಲಾವೈ.
ಯಾವ ವ್ಯಕ್ತಿ ಕೆಲಸ ಮಾಡುವಾಗ ಮನಸ್ಸು ವ್ಯವಹಾರ ಮಾತುಗಳಲ್ಲೂ ನಿಮ್ಮನ್ನೇ ದ್ಯಾನಿಸುತ್ತಾನೆಯೋ ಅವನೆಲ್ಲ ದುಃಖವನ್ನು ನೀವು ದೂರಮಾಡಿರುವಿರಿ.

29.ಸಬ ಪರ ರಾಮ ತಪಸ್ವಿ ರಾಜಾ ತಿನಕೇ ಕಾಜ ಸಕಲ ತುಮ ಸಾಜಾ.
ರಾಜನಾದ ಶ್ರೀ ರಾಮಚಂದ್ರನು ಶ್ರೇಷ್ಠ ತಪಸ್ವಿಯಾಗಿದ್ದಾನೆ. ಅವನ್ನೆಲ್ಲ ಕಾರ್ಯಗಳನ್ನು ನೀವು ಪೂರ್ಣಗೊಳಿಸಿದಿರಿ.

30.ಔರ್ ಮನೋರಥ ಜೋ ಕೋಯಿ ಲಾವೈ ಸೋಯಿ ಅಮಿತ ಜೀವನ ಫಲ ಪಾವೈ.
ಹೇ ಹನುಮಾನ್, ನಿಮ್ಮ ಕೃಪೆಯಿಂದ ಎಲ್ಲ ಇಷ್ಟಗಳು ಪೂರ್ಣವಾಗುವವು.ಕಲ್ಪನೆ ಮಾಡದ ಫಲಗಳೂ ಸಹ ಬೇಗ ಸಿಗುವವು.

32.ಚಾರೋ ಯುಗ ಪ್ರತಾಪ ತುಮ್ಹಾರಾ ಹೈ ಪರಸಿದ್ದ ಜಗತ ಉಜಿಯಾರಾ.
ಹೇ ಹನುಮಾನ್, ನಿಮ್ಮ ಕೀರ್ತಿಯು ತ್ರೇತಾಯುಗ,ದ್ವಾಪರಯುಗ, ಸತ್ಯಯುಗ ಮತ್ತು ಕಲಿಯುಗಗಳಲ್ಲಿ ಪ್ರಸಿದ್ದವಾಗಿದೆ. ಇಡೀ ಜಗತ್ತೇ ನಿಮ್ಮ ಉಪಾಸನೆಯನ್ನು ಮಾಡುವುದು.

33.ಸಾಧು ಸಂತ ಕೇ ತುಮ ರಖವಾರೆ ಅಸುರ ನಿಕಂದನ ರಾಮ ದುಲಾರೆ.
ಹೇ ರಾಮಭಕ್ತ ರಾಮನ ಪ್ರೀತಿ ಪಾತ್ರನೇ,ನೀವು ಸಾಧು ಸಂತರ ಮತ್ತು ಸಜ್ಜನರ ರಕ್ಷಕರಾಗಿದ್ದೀರಿ. ದುಷ್ಟರ ನಾಶ ಮಾಡುವಿರಿ.

34.ಅಷ್ಟಸಿದ್ದಿ ನವನಿಧಿ ಕೆ ಧಾತಾ ಅಸ ವರ ದೀನ ಜಾನಕೀ ಮಾತಾ.
ಹೇ ಕೇಸರಿನಂದನ,ತಾಯಿ ಸೀತೆಯು ನಿಮಗೆ ನೀಡಿದ ‘ಅಣಿಮಾ’ ಮುಂತಾದ ಎಂಟು ಸಿದ್ದಿಗಳನ್ನು ಮತ್ತು ನವ ನಿಧಿಗಳನ್ನು ನೀವು ಯಾವ ಭಕ್ತರಿಗೆ ಬೇಕಾದರೂ ನೀಡಬಲ್ಲಿರಿ.

35.ರಾಮರಸಾಯನ ತುಮ್ಹರೇ ಪ್ಯಾಸಾ ಸಾಧರಹೊ ರಘುಪತಿ ಕೆ ದಾಸಾ.
ರಾಮನೆಂಬ ರಾಸಾಯನ ಸಿದ್ದ ಔಷಧ ನಿಮ್ಮ ಬಳಿಯಲ್ಲಿ ಸದಾ ಇರುವುದು,ನೀವು ರಘುಪತಿಯ ದಾಸರಾಗಿದ್ದೀರಿ.

36.ತುಮ್ಹಾರೆ ಭಜನ ರಾಮಕೋಪಾವೈ ಜನ್ಮ ಜನ್ಮ ಕೇ ದುಃಖ ಬಿಸರಾವೈ.
ಹೇ ಹನುಮಾನ್, ನಿಮ್ಮ ಭಜನೆ ಮಾಡುವುದರಿಂದ,ಭಕ್ತನು ರಾಮನ ದರ್ಶನ ಪಡೆಯುತ್ತಾನೆ.ಆದ್ದರಿಂದ ಜನ್ಮ ಜನ್ಮಾಂತರದ ದುಃಖಗಳೂ ಸಹ ದೂರವಾಗುತ್ತವೆ.

37.ಅಂತಃಕಾಲ ರಘುಪತಿ ಪುಸಜಾಯೀ ಜಹಾಜನ್ಮಿ ಹರಿಭಕ್ತ ಕಹಲಾಯೀ.
ಹೇ ಪವನನಂದನ, ಅಂತ್ಯ ಕಾಲದಲ್ಲಿಯೂ ನಿಮ್ಮ ಭಜನೆ ಮಾಡಿದ ಪ್ರಾಣಿ ಶ್ರೀ ರಾಮನೆಂಬ ಧಾಮವನ್ನು ಸೇರುವನು.ಎಲ್ಲಿಯೇ ಜನ್ಮ ಪಡೆದರೂ ಹರಿ ಭಕ್ತನನಿಸಿಕೊಳ್ಳುವನು.

38.ಔರದೇವತಾ ಚಿತ್ತ ನ ಧರಯಾ ಹನುಮತ ಸೇಯಿ ಸರ್ವಸುಖ ಕರಯಾ.

ಹೇ ಹಾನುಮಾನ್, ಯಾವ ಭಕ್ತ ಸತ್ಯವಾದ ಭಕ್ತಿಯಿಂದ ನಿಮ್ಮನ್ನು ಭಜಿಸುತ್ತಾನೋ ಅವನು ಎಲ್ಲ ರೀತಿಯ ಸುಖವನ್ನು ಪಡೆಯುತ್ತಾನೆ. ಅವನಿಗೆ ಬೇರೆ ದೇವತೆಗಳ ಪೂಜೆ ಮಾಡುವ ಅವಶ್ಯಕತೆಯಿಲ್ಲ.

39.ಸಂಕಟ ಕಟೈ ಮಿಟೈ ಸಬಪೀರಾ ಜೋ ಸುಮಿರೈ ಹನುಮತ ಬಲಬೀರಾ.
ಯಾವ ವ್ಯಕ್ತಿ ನಿನ್ನ ನಾಮಸ್ಮರಣೆ ಮಾತ್ರದಿಂದ ತನ್ನ ಸಂಕಟದಿಂದ ದೂರವಾಗುವನೋ,ಪೀಡೆ ನಿವಾರಣೆ ಹೊಂದುವನೋ ಅಂತಹ ದೇವನಾದ ಬಲವೀರ ಹನುಮಂತನೇ ಅನುಗ್ರಹಿಸು.

40.ಜೈ ಜೈ ಜೈ ಹನುಮಾನ ಗೋಸಾ ಈ ಕೃಪಾಕರೊ ಗುರುದೇವ ಕೀ ನಾಈ.
ಹೇ ವೀರ ಹಾನುಮಾನ್, ನಿಮಗೆ ಜಯವಾಗಲಿ,ನೀವು ಗುರುವಿನಂತೆ ನನ್ನ ಮೇಲೆ ಕೃಪೆ ತೋರಿರಿ.ನಾನು ಯಾವಾಗಲೂ ನಿಮ್ಮ ಸೇವೇ ಮಾಡುವಂತೆ ಅನುಗ್ರಹಿಸಿರಿ.

41.ಜೋ ಶತಬಾರ ಪಾಠಕರ ಕೋಈ ಚುಟಹಿ ಬಂದಿ ಮಹಾಸುಖ ಹೋ ಈ.
ಯಾವ ವ್ಯಕ್ತಿಯೂ ಶುದ್ಧ ಹೃದಯದಿಂದ ಈ ‘ ಹನುಮಾನ್ ಚಾಲೀಸಾ’ವನ್ನು ನೂರು ಬಾರಿ ಪಠಿಸುತ್ತಾನೋ ಅವನಿಗೆ ಸಂಸಾರ ಬಂಧನ ದೂರವಾಗುವುದು ಮತ್ತು ಪರಮಾನಂದವಾಗುವುದು.

42.ಜೋ ಯಹ ಪಡೈ ಹನುಮಾನ ಚಾಲೀಸಾ ಹೋಯ ಸಿದ್ದಿ ಸಾಖಿ ಗೌರೀಸಾ.
ಯಾರು ಈ ಹಾನುಮಾನ್ ಚಾಲೀಸಾ ಓದುತ್ತಾರೋ ಅವರಿಗೆ ಸಫಲತೆ ಉಂಟಾಗುವುದು.ಭಗವಾನ್ ಶಂಕರನೇ ಈ ವಿಷಯದಲ್ಲಿ ಸಾಕ್ಷಿಯಾಗುವನು.

43.ತುಳಸಿದಾಸ ಸದಾ ಹರೀಚೇರಾ ಕೀ ಜೈನಾಥ ಹೃದಯ ಮಹಾಡೇರ.
ಹೇ ನನ್ನ ಒಡೆಯ ಹನುಮಾನ್,ತುಳಸಿದಾಸ ಸದಾ ರಾಮನ ದಾಸನಾಗಿದ್ದಾನೆ.ಆದುದರಿಂದ ರಾಮಭಕ್ತನಾದ ನೀನು ಸದಾ ತುಳಸಿದಾಸರ ಹೃದಯದಲ್ಲಿರುವೆ.

44.ಪವನ ತನಯ ಸಂಕಟ ಹರಣ ಮಂಗಳ ಮೂರುತಿ ರೂಪ ರಾಮಲಖನ ಸೀತಾ ಸಹಿತ ಹೃದಯ ಬಸಹು ಸುರ ಭೂಪ.
ಹೇ ಪವನಪುತ್ರ,ನೀನು ಎಲ್ಲ ಸಂಕಟವನ್ನು ದೂರ ಮಾಡುವನು.ಮಂಗಳ ಮೂರ್ತಿಯಾಗಿರುವೆ.ನೀನು ಶ್ರೀರಾಮ ಸೀತಾ ಲಕ್ಷ್ಮಣರೊಂದಿಗೆ ಸದಾ ನನ್ನ ಹೃದಯದಲ್ಲಿ ನೆಲೆಸು ಎಂದು ಪ್ರಾರ್ಥಿಸುತ್ತೇನೇ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

1 Comment

1 Comment

Leave a Reply

Your email address will not be published. Required fields are marked *

To Top