ಆರೋಗ್ಯ

ಪರಂಗಿ ಹಣ್ಣಿನಲ್ಲಿರುವ 6 ಆರೋಗ್ಯಕಾರಿ ಮಾಂತ್ರಿಕ ಗುಣಗಳು ತಿನ್ನಲು ಇಷ್ಟ ಪಡದೆ ಇದ್ದರು ತಿನ್ನುವಂತೆ ಮಾಡುತ್ತೆ ..

ಪಪ್ಪಾಯ ಹಣ್ಣಿನ ಆರೋಗ್ಯವರ್ಧಕ ಗುಣಗಳು:

ಪಪ್ಪಾಯ ಉಷ್ಣ ವಲಯ ಪ್ರದೇಶದಲ್ಲಿ ಬೆಳೆಯುವ ಒಂದು ಆರೋಗ್ಯಪೂರ್ಣವಾದ ಹಣ್ಣು. ಇದು ಮೂಲತಃ ಮಧ್ಯ ಅಮೇರಿಕಾ ಹಾಗು ಮೆಕ್ಸಿಕೋ ದೇಶದ ಹಣ್ಣಾಗಿದ್ದರೂ ಈಗ ವಿಶ್ವದ ಎಲ್ಲಾ ಭಾಗದಲ್ಲೂ ಬೆಳೆಯುತ್ತಾರೆ.

ಪಪ್ಪಾಯ ಹಣ್ಣಿನ ಗುಣವಿಶೇಷತೆಗಳನ್ನು ತಿಳಿಯೋಣ ಬನ್ನಿ:

ಪಪ್ಪಾಯದಲ್ಲಿ ಯಥೇಚ್ಛವಾಗಿ ಉತ್ಕರ್ಷಣ ನಿರೋಧಕಗಳು (antioxidants) ಇದ್ದು ಇವು ಉರಿಯೂತವನ್ನು ತಡೆಯುತ್ತವೆ.

ಪಪ್ಪಾಯ ಹಣ್ಣಿನಲ್ಲಿ anti aging ಜೀವಾಂಶಗಳಿದ್ದು ಇದನ್ನು ತಿನ್ನುವುದರಿಂದ ನಾವು ತಾರುಣ್ಯಭರಿತರಾಗಿ ಕಾಣುತ್ತೇವೆ.

ಮೊದಲೇ ಹೇಳಿರುವಂತೆ antioxidants ಪಪ್ಪಾಯದಲ್ಲಿ ಬಹಳವೇ ಇರುವುದರಿಂದ ಒತ್ತಡ ನಿವಾರಣೆ ಹಾಗೂ ಹೃದಯದ ತೊಂದರೆಗಳನ್ನು ತಡೆಯುತ್ತವೆ.

ಪಪ್ಪಾಯದಲ್ಲಿ ವಿಟಮಿನ್ ಸಿ ಹಾಗೂ ವಿಟಮಿನ್ ಎ ಎರಡೂ ಇರುವುದರಿಂದ ಚರ್ಮದ ಕಾಂತಿ ಹಾಗೂ ಕಣ್ಣಿನ ದೃಷ್ಟಿ ಎರಡಕ್ಕೂ ಒಳ್ಳೆಯದು .

ಪಪ್ಪಾಯದಲ್ಲಿ ಪಪ್ಪಾಯಿನ್ ಎಂಬ ಕಿಣ್ವವಿದ್ದು (enzyme) ಇದು ಅಜೀರ್ಣತೆಯ ತೊಂದರೆಯನ್ನು ನಿವಾರಿಸುತ್ತದೆ .

ಈಗ ತಿಳಿದಿರಲ್ಲಾ ಇದರ ಗುಣಗಳನ್ನು !! ಪಪ್ಪಾಯವನ್ನು ಬೆಳಗಿನ ತಿಂಡಿಗೆ ಸೇವಿಸಬಹುದು, ಸಲಾಡ್ ಮಾಡಿ ಸೇವಿಸಬಹುದು, ರಾತ್ರಿ ಊಟವಾದ ಮೇಲೆ ಸೇವಿಸಬಹುದು(desserts). ಹೀಗೆ ಪಪ್ಪಾಯ ಸೇವಿಸಿ ಅದರ ಪ್ರಯೋಜನ ಪಡೆಯಿರಿ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top