fbpx
ಆರೋಗ್ಯ

ಗರ್ಭಿಣಿಯರು ಮೊದಲ ಮೂರು ತಿಂಗಳು ಯಾವ ಯಾವ ಆಹಾರ ತಿನ್ಬಾರ್ದು ..

ಗರ್ಭಿಣಿಯರು ಮೊದಲ ಮೂರು ತಿಂಗಳು ಯಾವ ಯಾವ ಆಹಾರವನ್ನು ತ್ಯಜಿಸಬೇಕು.

• ಮೀನು:

ಪಾದರಸ ಹೊಂದಿರುವ ಮೀನೆಂದರೆ ನಿಮಗೆ ಇಶ್ಟವೇ?ಹಾಗಾದರೆ ಅದನ್ನು ತ್ಯಜಿಸುವ ಸಮಯ ಈಗ ಬಂದಿದೆ.ಅತಿಯಾದ ಪಾದರಸ ಇರುವ ಮೀನನ್ನು ತಿನ್ನಬೇಡಿ.ಟುನಾ,ಹಾಲಿಬೂಟ್, ಸ್ವಾರ್ಡ್ ಮೀನುಗಳನ್ನು ಗರ್ಭಿಣಿ ಆಗಿರುವವರು ಮತ್ತು ಗರ್ಭಿಣಿ ಆಗ ಬಯಸುವವರು ಈ ಮೀನುಗಳನ್ನು ತಿನ್ನಬಾರದು.

• ಸೋಡಾ:

ಸೋಡಾ ನಿಮ್ಮ ಗಮನವನ್ನು ತಕ್ಷಣ ಸೆಳೆಯಬಹುದು.ಇದು ಗರ್ಭಿಣಿಯರಲ್ಲಿ ಸಕ್ಕರೆ ಪ್ರಮಾಣವನ್ನು ಹೆಚ್ಚಿಸುತ್ತದೆ ಮತ್ತು ಗರ್ಭಿಣಿ ಯಾಗುವ ಮುನ್ನ ಕೂಡ ಸೋಡಾವನ್ನು ಸೇವಿಸಬಾರದು ಯಾಕೆಂದರೆ ಇದು ಮುಂದೆ ಗರ್ಭಿಣಿಯಾದ ನಂತರ ಸಂತಾನದ ಮೇಲೆ ದುಷ್ಪರಿಣಾಮ ಬೀರುತ್ತದೆ.

• ಆಲ್ಕೋಹಾಲ್ :

ಇದನ್ನು ಕೂಡಾ ಗರ್ಭಿಣಿ ಮಹಿಳೆಯರು ಗರ್ಭಧಾರಣೆಯ ಸಮಯದಲ್ಲಿ ತ್ಯಜಿಸಬೇಕು ಇಲ್ಲವೆಂದರೆ ಗರ್ಭಕೋಶದೊಳಗೆ ಬೆಳೆಯುತ್ತಿರುವ ಮಗುವಿನ ಮೇಲೆ ದುಷ್ಪರಿಣಾಮ ಬೀರುತ್ತದೆ.

• ಕೆಫಿನ್:

ಕಾಫಿ,ಟೀ ಯಲ್ಲಿರುವ ಕೆಫಿನ್ ಅಂಶವು ನಾವು ತಿನ್ನುವ ಆಹಾರದಲ್ಲಿರುವ ಕಬ್ಬಿಣಾಂಶವನ್ನು ಹೀರಿಕೊಳ್ಳುವ ಸಾಮರ್ಥ್ಯವನ್ನು ತಡೆಗಟ್ಟುತ್ತದೆ.ಮಗು ಮತ್ತು ತಾಯಿ ಇಬ್ಬರಿಗೂ ಕಬ್ಬಿಣಾoಶದ ಅವಶ್ಯಕತೆ ಬಹಳಷ್ಟು ಅಧಿಕವಾಗಿದೆ. ಆದ್ದರಿಂದ ಗರ್ಭಿಣಿ ಸ್ತ್ರೀಯರು ಕೆಫಿನ್ ಯುಕ್ತ ಯಾವುದೇ ಆಹಾರ ಪಾದರ್ಥಗಳನ್ನು ಸೇವಿಸಬಾರದು.ಒಂದು ದಿನಕ್ಕೆ ಒಂದು ಲೋಟ ಕಾಫಿ ಕುಡಿಯಬಹುದು ಅದು ಒಂದು ಭಾರಿ ಮಾತ್ರ.ಒಂದು ವೇಳೆ ಕಬ್ಬಿಣಾoಶದ ಕೊರತೆ ಉಂಟಾದರೆ ರಕ್ತ ಹೀನತೆಗೆ ಮೊದಲು ತಾಯಿ ನಂತರ ಮಗು ತುತ್ತಾಗುತ್ತಾರೆ.

• ಸೋಯಾವನ್ನು ತ್ಯಜಿಸಿ:

ನಿಮ್ಮ ಆಹಾರದಲ್ಲಿ ಸೋಯಾವನ್ನು ತ್ಯಜಿಸಿ,ದೂರವಿಡಿ. ಯಾಕೆಂದರೆ ಇದು ಮುಂದೆ ನಿಮ್ಮ ಗರ್ಭವನ್ನು ಅಪಾಯಕ್ಕೆ ದೂಡಿಬಿಡುತ್ತದೆ.ಅದರಲ್ಲೂ ನಿಮಗೆ ಸಂತಾನ ಹೀನತೆಯ ಸಮಸ್ಯೆ ಇದ್ದಲ್ಲಿ ಸೋಯಾವನ್ನು ಆಹಾರ ಪಟ್ಟಿಯಿಂದ ಸಂಪೂರ್ಣವಾಗಿ ತೆಗೆದುಬಿಡಿ.

• ಬೇಯಿಸದೇ ಇರುವ ಆಹಾರ ಪದಾರ್ಥಗಳು:

ಬೇಯಿಸದೇ ಇರುವ ಯಾವುದೇ ಆಹಾರ ಪದಾರ್ಥಗಳನ್ನು ಸೇವಿಸಬೇಡಿ. ಅದರಲ್ಲೂ ಬೆಂದಿರದ ಮಾಂಸ, ಮೀನು, ಪಾಶ್ಚಿಕರಿಸಿದ ಹಾಲು,ಹಾಲಿನ ಉತ್ಪನ್ನಗಳು,ಚೀಸಗಳು ಯಾಕೆಂದರೆ ಇದರಲ್ಲಿವ ಹಾನಿಕಾರಕ ಸಾಲ್ಮೊನ್ನೆಲ್ಲ ಎಂಬ ಕೀಟಾಣು ಅಪಾಯವನ್ನು ತಂದೊಡ್ಡುತ್ತದೆ.ಇದು ನಿಮ್ಮ ಗರ್ಭಕ್ಕೆ ಹಾನಿಕಾರಕ.

• ಧೂಮಪಾನ:

ಕೆಲವು ಮಹಿಳೆಯರು ಧೂಮಪಾನ ಕೂಡ ಮಾಡುವ ಅಭ್ಯಾಸ ಇರುತ್ತದೆ.ಇದು ಗರ್ಭದಲ್ಲಿರುವ ಮಗುವಿಗೆ ಹಾನಿಕಾರಕ ಗಂಭೀರ ಪರಿಣಾಮ ಬೀರುತ್ತದೆ.

• ಔಷಧಿಗಳು:


ಯಾವುದೇ ಔಷಧಿಗಳನ್ನು ವಿನಾಕಾರಣ ವೈದ್ಯರ ಸಲಹೆ ಇಲ್ಲದೆ ತೆಗೆದುಕೊಳ್ಳುವುದು ಸರಿಯಲ್ಲ.ಯಾಕೆಂದರೆ ಕೆಲವು ಔಷಧಿಗಳನ್ನು ಗರ್ಭಿಣಿಯ ಸಮಯದಲ್ಲಿ ತೆಗೆದುಕೊಳ್ಳುವಂತಿಲ್ಲ, ಅದಕ್ಕೋಸ್ಕರ ಆ ಔಷಧಿಗಳನ್ನು ಗರ್ಭಿಣಿಯ ಸಮಯದಲ್ಲಿ ತೆಗೆದುಕೊಳ್ಳಬಾರದು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top