ಆರೋಗ್ಯ

ಬೇಸಿಗೆಯಲ್ಲಿ ಮೈಗ್ರೇನ್‌ನಿಂದ ದೂರವಿರಲು ಪಾಲಿಸಬಹುದಾದ 5 ಮಾರ್ಗಗಳು

 

ಬೇಸಿಗೆಯಲ್ಲಿ ಮೈಗ್ರೇನ್‌ನಿಂದ ದೂರವಿರಲು ಪಾಲಿಸಬಹುದಾದ 5 ಮಾರ್ಗಗಳು:

ಮೈಗ್ರೇನ್‌ ಒಂದು ನರವೈಜ್ಞಾನಿಕ ರೋಗಲಕ್ಷಣ, ದೈಹಿಕ ಗ್ರಹಿಕೆಯನ್ನು ವ್ಯಸ್ತಗೊಳಿಸುವ ಇದು ವಿಪರೀತ ತಲೆನೋವು ಮತ್ತು ವಾಕರಿಕೆ ಮೊದಲಾದವುಗಳನ್ನು ಉಂಟುಮಾಡುತ್ತದೆ. ವೈಜ್ಞಾನಿಕವಾಗಿ ‘ಮೈಗ್ರೇನ್‌ ತಲೆನೋವು’ ಒಂದು ನರವೈಜ್ಞಾನಿಕ ಸ್ಥಿತಿ, ಸಾಮಾನ್ಯವಾಗಿ ಪುರುಷರಿಗಿಂತ ಮಹಿಳೆಯರಲ್ಲಿ ಇದು ಹೆಚ್ಚು. ಪ್ರಾಚೀನ ಫ್ರೆಂಚ್‌ನ migraigne ನಿಂದ migraine (ಮೈಗ್ರೇನ್) ಪದವನ್ನು ಎರವಲು ಪಡೆಯಲಾಗಿದೆ. (ಮ‌ೂಲತಃ “megrim” ಎಂದಿದ್ದ ಪದವನ್ನು 1777ರಲ್ಲಿ ಆಧುನಿಕ ಫ್ರೆಂಚ್ ಮಾದರಿಯಲ್ಲಿ ಮರುಉಚ್ಛಾರಣೆಗೆ ಒಳಪಡಿಸಲಾಯಿತು). ಈ ಫ್ರೆಂಚ್ ಪದ ಹಿಂದಿನ ಲ್ಯಾಟಿನ್ ಪದದ hemicrania ಎಂಬ ಸಾಮಾನ್ಯ ಉಚ್ಛಾರಣೆಯಿಂದ ನಿಷ್ಪನ್ನಗೊಂಡಿದೆ. ಈ ಲ್ಯಾಟಿನ್ ಪದವೂ ಗ್ರೀಕ್‌‌ನಲ್ಲಿ “ಅರ್ಧ” ಮತ್ತು “ತಲೆಬುರುಡೆ” ಎಂಬರ್ಥವಿರುವ hemikrania ಎಂಬ ಗ್ರೀಕ್ ಪದದಿಂದ ಎರವು ಪಡೆಯಲಾಗಿದೆ.

ಕೆಲವೊಮ್ಮೆ ಮೈಗ್ರೇನ್‌‌ ಕಾಣಿಸಿಕೊಳ್ಳಲು ಸ್ಪಷ್ಟ “ಕಾರಣ”ಗಳಿರುವುದಿಲ್ಲ. ಕೆಲವು ಪರಿಸರದ ಅಂಶಗಳಿಗೆ ಪ್ರವೇಶಿಸುವುದರಿಂದ ವ್ಯಕ್ತಿಯ ಮೈಗ್ರೇನ್‌ ತೀವ್ರಗೊಳ್ಳುತ್ತದೆ ಅಥವಾ ಪ್ರಚೋದನೆಗೆ ಒಳಗಾಗುತ್ತದೆ ಎಂಬುದೊಂದು ಸಿದ್ಧಾಂತ. ಮೈಗ್ರೇನ್‌ಗೆ ಈಡಾಗುವವರ ತಲೆನೋವು ಮತ್ತು ಹಲವಾರು ಪ್ರಚೋದಕ ಅಂಶಗಳ ನಡುವಿನ ಸಂಬಂಧವನ್ನು ಗುರುತಿಸುವ ಮ‌ೂಲಕ ಹಾಗೂ ಮೈಗ್ರೇನ್ ಬಂದ ಬಗ್ಗೆ “ತಲೆನೋವು ಡೈರಿ” ದಾಖಲೆಯನ್ನು ಇಟ್ಟುಕೊಳ್ಳುವುದರ ಮ‌ೂಲಕ ಅವರ ತಲೆನೋವಿನ ಪ್ರಚೋದಕಗಳನ್ನು ಕಂಡುಹಿಡಿಯುವಂತೆ ಸಲಹೆ ನೀಡಲಾಗುತ್ತದೆ.

ಪ್ರಚೋದಕ ಆಹಾರ ಕ್ರಮದಿಂದ ದೂರವಿರುವಂತೆಯೂ ಮುನ್ಸೂಚನೆ ಕೊಡಲಾಗುತ್ತದೆ. ಕೆಲವಷ್ಟು ಪ್ರಚೋದಕ ಅಂಶಗಳು ಅದರ ಪ್ರಮಾಣವನ್ನು ಅವಲಂಬಿಸಿರುತ್ತವೆ ಎಂಬುದು ಗಮನಾರ್ಹ. ಗಾಢವರ್ಣದ ಚಾಕೋಲೇಟ್‌ನ ಸಣ್ಣ ತುಂಡನ್ನು ತಿಂದರೆ ಬಾರದಿರುವ ಮೈಗ್ರೇನ್‌‌, ಅರ್ಧ ಭಾಗದಷ್ಟು ಅದೇ ಚಾಕೋಲೇಟ್‌ ತಿಂದರೆ ನೋವಿಗೆ ಪಕ್ಕಾಗಬಲ್ಲ ವ್ಯಕ್ತಿಗೆ ಖಂಡಿತವಾಗಿ ಬರಬಹುದು. ಏಕಕಾಲದಲ್ಲಿ ಒಂದಕ್ಕಿಂತ ಹೆಚ್ಚು ಪ್ರಚೋದಕ ಅಂಶಗಳಿಗೆ ಈಡಾದಾಗ ಮೈಗ್ರೇನ್‌ ಉಂಟಾಗುವ ಸಂಭಾವ್ಯತೆ ಹೆಚ್ಚಾಗಿರುತ್ತದೆ. ಈ ಬೇಸಿಗೆಯಲ್ಲಿ ಬಿಸಿಲಿನ ಭೇಗೆಯ ಜೊತೆಗೆ ಮೈಗ್ರೇನ್‌ ಕೂಡ ಸೇರಿದರೆ ನರಕಯಾತನೆಯಾದೀತು.

ಬೇಸಿಗೆಯಲ್ಲಿ ಈ 5 ನಿಯಮಗಳನ್ನು ಪಾಲಿಸಿದರೆ ಮೈಗ್ರೇನ್‌ ನಿಂದ ದೂರವಿರಬಹುದು.

ಸೂರ್ಯನ ಪ್ರಖರ ಬಿಸಿಲಿನಲ್ಲಿ ಜಾಸ್ತಿ ಕೆಲಸ ಮಾಡಬೇಡಿ: ಝಗಝಗಿಸುವ ಬೆಳಕು, ಸೂರ್ಯನ ಪ್ರಖರ ಕಾಂತಿ ಮೈಗ್ರೇನ್‌ ನ ಮುಖ್ಯ ಪ್ರಚೋದಕಗಳು. ಬೇಸಿಗೆಯಲ್ಲಿ ಆದಷ್ಟು ಇವುಗಳಿಂದ ದೂರವಿರಿ. ಹಾಗೆ ಅನಿವಾರ್ಯವಾದಲ್ಲಿ ಕೂಲಿಂಗ್ ಗ್ಲಾಸ್ ಹಾಗೂ ಕ್ಯಾಪ್ ಧರಿಸುವುದು ಮರೆಯಬೇಡಿ.

ಉಪವಾಸವಿರಬೇಡಿ: ಹೌದು ಖಾಲಿ ಹೊಟ್ಟೆಯಲ್ಲಿ ಇರುವುದು ಮೈಗ್ರೇನ್‌ ನ ಪ್ರಚೋದಕ. ಹೊರಗೆ ಹೋದಾಗ ಅನಿವಾರ್ಯವಾಗಿ ಊಟ ತಡವಾಗುವ ಸಂದರ್ಭ ಇದ್ದರೆ ಸಾಕಷ್ಟು ನೀರು ಕುಡಿಯುತ್ತಿರಿ; ಹಣ್ಣುಗಳನ್ನು ಕೊಂಡೊಯ್ದಿರಿ, ಅವುಗಳನ್ನು ತಿನ್ನಬಹುದು. ಅವಕಾಶವಾದರೆ ಮಜ್ಜಿಗೆ ಕುಡಿಯಿರಿ. ಆಗ ಹೊಟ್ಟೆ ಖಾಲಿಯಿರುವುದಿಲ್ಲ.

ಮದ್ಯಸೇವನೆಯಿಂದ ದೂರವಿರಿ: ಮದ್ಯಪಾನ ಯಾವ ಕಾರಣಕ್ಕೂ ಒಳ್ಳೆಯದಲ್ಲ; ಸಾಧ್ಯವಾದರೆ ಬಿಟ್ಟು ಬಿಡುವುದು ಉತ್ತಮ.

ನಿದ್ರೆಗೆಡಬೇಡಿ: ಹೌದು, ಯಾವುದೇ ಒತ್ತಡಕ್ಕೆ ಒಳಗಾಗುವುದು, ನಿದ್ದೆ ಮಾಡದೇ ಇರುವುದು ಒಳ್ಳೆಯ ಅಭ್ಯಾಸವಲ್ಲ. ನಿದ್ರಾಹೀನತೆ ಸಹ ಮೈಗ್ರೇನ್‌ ನ ಪ್ರಚೋದಕ. ಹಾಗಾಗಿ ಕಣ್ತುಂಬ ನಿದ್ದೆ ಮಾಡಿ.

ಸದ್ದು ಗದ್ದಲದಿಂದ ದೂರವಿರಿ: ಹೌದು. ಸಭೆ ಸಮಾರಂಭಗಳ ಭಾರೀ ಧ್ವನಿ ವರ್ಧಕಗಳು, ಗಲಾಟೆ ಇವುಗಳು ಮೈಗ್ರೇನ್‌ ನ ಪ್ರಚೋದಕಗಳು. ಹಾಗಾಗಿ ಅವುಗಳಿಂದ ಸಾಧ್ಯವಾದಷ್ಟು ದೂರವಿರಿ. ನೀವು ಹೋಗುವುದು ಅನಿವಾರ್ಯವಾದರೆ ಹಿಂದಿನ ರಾತ್ರಿ ಚೆನ್ನಾಗಿ ನಿದ್ದೆ ಮಾಡಿರಿ, ಖಾಲಿ ಹೊಟ್ಟೆಯಲ್ಲಿ ಇರಬೇಡಿ. ಆದಷ್ಟು ಬೇಗ ಹಿಂತಿರುಗಿ ಮತ್ತೆ ಅಂದಿನ ರಾತ್ರಿಯೂ ಕೂಡ ಚೆನ್ನಾಗಿ ನಿದ್ದೆ ಮಾಡಿ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top