fbpx
ರಾಜಕೀಯ

‘ರಾಜ್ಯದಲ್ಲಿ ಪ್ರಾದೇಶಿಕ ಪಕ್ಷದ ಉಳಿವಿಗಾಗಿ ಶ್ರಮಿಸುತ್ತೇನೆ, ನನಗೆ ರಾಷ್ಟ್ರಪತಿ ಹುದ್ದೆ ಬೇಡ, ಆ ಹುದ್ದೆ ಅಲಂಕರಿಸಲು ನನಗೆ ಯಾವುದೇ ಆಸಕ್ತಿ ಇಲ್ಲ’ -ಎಚ್ ಡಿ ದೇವೇಗೌಡರು

ರಾಜ್ಯದಲ್ಲಿ ಜೆಡಿಸ್ ಪಕ್ಷ ಸಂಘಟನೆ ಬಲಪಡಿಸಲು ಹಾಗೂ ಪುತ್ರ ಎಚ್.ಡಿ. ಕುಮಾರಸ್ವಾಮಿ ಬೆನ್ನಿಗೆ ನಿಲ್ಲಲು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರು ರಾಷ್ಟ್ರಪತಿ ಹುದ್ದೆಗೆ ಅಭ್ಯರ್ಥಿಯಾಗಲು ಬಂದ ಆಹ್ವಾನವನ್ನು ನಯವಾಗಿ ನಿರಾಕರಿಸಿದ್ದಾರೆ.

ರಾಷ್ಟ್ರಪತಿ ಹುದ್ದೆ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಈಗ ನಿರ್ಣಾಯಕ ಹಂತ ತಲುಪಿದ್ದು , ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ರಾಷ್ಟ್ರಪತಿ ಸ್ಥಾನಕ್ಕೆ ಮಾಜಿ ಪ್ರಧಾನಿ ಹಾಗೂ ಜಾತ್ಯತೀತ ಜನತಾದಳ ವರಿಷ್ಠ ಎಚ್.ಡಿ. ದೇವೇ ಗೌಡ ಅವರ ಹೆಸರು ಪ್ರಸ್ತಾಪಿಸಿದ್ದಾರೆ. ಅದರಂತೆ ಅವರು ಭಾನುವಾರ ರಾತ್ರಿ ಮಾಜಿ ಪ್ರಧಾನಿ ಗೌಡರಿಗೆ ದೂರವಾಣಿ ಕರೆ ಮಾಡಿ ರಾಷ್ಟ್ರಪತಿ ಸ್ಥಾನದ ಅಭ್ಯರ್ಥಿಯಾಗಿ ಸ್ಪರ್ಧಿಸುವಂತೆ ಮನವಿ ಮಾಡಿದ್ದಾರೆ. ಬಿಜೆಪಿ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಸಿದ್ದವಾಗಿದ್ದು , ವಿಪಕ್ಷಗಳ ಒಕ್ಕೂಟದ ವತಿಯಿಂದ ರಾಷ್ಟ್ರಪತಿ ಹುದ್ದೆಗೆ ಸ್ಪರ್ಧಿಸಲು ನೀವೇ ಸಮರ್ಥ ಹಾಗೂ ಅರ್ಹ ವ್ಯಕ್ತಿಗಳಾಗಿದ್ದೀರಿ. ಆದ್ದರಿಂದ ಬಿಜೆಪಿ ಅಭ್ಯರ್ಥಿಗೆ ಪ್ರತಿಸ್ಪರ್ಧಿಯಾಗಿ ತಾವೇ ಕಣಕ್ಕಿಳಿಯಬೇಕು ಎಂದು ಕೇಳಿಕೊಂಡಿದ್ದಾರೆ.ಆದರೆ ದೇವೇಗೌಡ ಅವರು ಸೋನಿಯಾ ಅವರ ಈ ಮನವಿಯನ್ನು ನಯವಾಗಿಯೇ ನಿರಾಕರಿಸಿದ್ದು , ನಾನು ಕರ್ನಾಟಕದಲ್ಲೇ ರಾಜಕಾರಣ ಮಾಡುತ್ತೇನೆ ಎಂದಿದ್ದಾರೆ.

‘ರಾಜ್ಯದಲ್ಲಿ ಪ್ರಾದೇಶಿಕ ಪಕ್ಷದ ಉಳಿವಿಗಾಗಿ ಶ್ರಮಿಸುತ್ತೇನೆ, ನನಗೆ ರಾಷ್ಟ್ರಪತಿ ಹುದ್ದೆ ಬೇಡ, ಆ ಹುದ್ದೆ ಅಲಂಕರಿಸಲು ನನಗೆ ಯಾವುದೇ ಆಸಕ್ತಿ ಇಲ್ಲ. ನಾನು ನನ್ನ ಕರ್ನಾಟಕದಲ್ಲಿ ನನ್ನ ಜನರ ಮಧ್ಯದಲ್ಲೇ ಇರಲು ಬಯಸುತ್ತೇನೆ. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಪಕ್ಷವನ್ನು ಬಲಪಡಿಸಲು ಶ್ರಮಿಸುತ್ತಿದ್ದಾರೆ. ನಾನು ಕೂಡ ಅವರಿಗೆ ನೆರವಾಗುತ್ತೇನೆ. ಕರ್ನಾಟಕದ ಜನರ ಮಧ್ಯೆಯೇ ಬದುಕಿ ನನ್ನ ಜನಗಳ ನಡುವೆ ನನ್ನ ಜೀವನ ಮುಗಿಸುತ್ತೇನೆ ಎಂಬ ವಿಶ್ವಾಸ ನನ್ನದು’ ಎಂದು ಹಾಸನದ ಹೊಳೆನರಸೀಪುರದಲ್ಲಿ ಮಾಧ್ಯಮದವರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಪಕ್ಷವನ್ನು ರಾಜ್ಯದಲ್ಲಿ ಬಲಪಡಿಸಬೇಕು, ಕುಮಾರಸ್ವಾಮಿ ಅವರಿಗೆ ಬೆಂಗಾವಲಾಗಿ ಆತನ ಹೋರಾಟಕ್ಕೆ ನಾನು ನಿಲ್ಲುತ್ತೇನೆ’ ಎಂದು ದೇವೆಗೌಡರು ಹೇಳಿದ್ದಾರೆ. ‘ನನ್ನಂತೆ ಹಿರಿಯರು, ಅರ್ಹರು ಸಾಕಷ್ಟು ಮಂದಿ ಇದ್ದಾರೆ. ನಾನು ರಾಷ್ಟ್ರಪತಿಗೆ ಏಕೈಕ ಅರ್ಹ ಅಭ್ಯರ್ಥಿ ಎಂದು ಬಿಂಬಿಸುವುದು ಸರಿಯಲ್ಲ’ ಎಂದು ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದ್ದಾರೆ.⁠⁠⁠⁠

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top