fbpx
ಉಪಯುಕ್ತ ಮಾಹಿತಿ

ಚಪ್ಪಲಿ ಮನೆ ಹೊರಗಡೆ ಬಿಟ್ಟು ಕಾಲ್ ತೊಳ್ಕೊಂಡು ಬಾ ಅಂತ ಯಾಕೆ ಹೇಳ್ತಾರೆ ಗೊತ್ತಾ ? ಓದಿ ವೈಜ್ಞಾನಿಕ ಕಾರಣ..

ಮನೆಯೊಳಗೆ ಪಾದರಕ್ಷೆ ಹಾಕಿಕೊಂಡು ಯಾಕೆ ಹೋಗಬಾರದು.

ಮನೆಯೊಳಗೆ ಪಾದರಕ್ಷೆ ಅಂದರೆ ಚಪ್ಪಲಿಗಳನ್ನು ಹಾಕಿಕೊಂಡು ಓಡಾಡೋದು ಈಗಿನ ಕಾಲದಲ್ಲಿ ಪ್ಯಾಶನ್ ಆಗ್ಬಿಟ್ಟಿದೆ ಆದರೆ ಅದು ತಪ್ಪು ಹಾಗೆ ಮಾಡಬಾರದು ಅದಕ್ಕಾಗಿಯೇ ನಮ್ಮ ಹಿರಿಯರು ಚಪ್ಪಲಿ ಹೊರಗೆ ಬಿಟ್ಟು ಕಾಲು ನೀರಲ್ಲಿ ತೊಳಕೊಂಡ ಆಮೇಲೆ ಮನೆ ಒಳಗೆ ಬರ್ತಿದ್ರು.ಈಗ ಅದೆಲ್ಲ ಇಲ್ಲ ಸುಮನ್ನೇ ಮನೆವಳಗೆ ನುಗ್ಗಿ ಹೋಗ್ತಾ ಇರ್ತೀವಿ.ನೀವು ಕೂಡ ಹೀಗೆ ಚಪ್ಪಲಿ ಹಾಕೊಂಡೇ ಮನೇಲಿ ಓಡಾಡ್ತೀರ ಹಾಗೆ ಮಾಡಿದರೆ ಏನಾಗತ್ತೆ ಅಂತ ತಿಳ್ಕೊಳ್ಳಿ.

ನಾವು ಇಡೀ ಊರನ್ನು ಸುತ್ತಿಕೊಂಡು ಬಂದ ಚಪ್ಪಲಿಯನ್ನು ಮನೆಯ ಒಳಗೆ ಹಾಕಿಕೊಂಡು ಬರಬಾರದು ಮನೆಯ ಹೊರಗೆ ಬಿಟ್ಟು ಕಾಲು ತೊಳೆದು ಒಳಗೆ ಹೋಗಬೇಕು.

ಮನೆಯಲ್ಲಿ ಇಟ್ಟ ವಸ್ತುಗಳು ಮಾಯ ಆಗಿ ಬಿಡುತ್ತವೆ.ಅಂದರೆ ಕಳ್ಳತನ ನಡೆಯುತ್ತೆ,ಅಷ್ಟೇ ಅಲ್ಲ ಮನೆಗೆ ಸದಾ ದಾರಿದ್ರ್ಯ,ಮನೆಯಲ್ಲಿ ಮಾಡಿದ್ದ ಅಡುಗೆ ಕೆಟ್ಟು ಹೋಗೋದು ಅಂದರೆ ಹಳಸಿ ಹೋಗುವುದು ಮತ್ತು ಆರೋಗ್ಯ ಕೆಡುತ್ತದೆ.

ರಾಹು ,ಕುಜ,ಶನಿ ಪೂರ್ಣ ಸಂಕ್ರಮನದಿಂದ ಒಟ್ಟಿಗೆ ಮನೆಗೆ ಬಂದು ಹಬ್ಬದ ರೀತಿಯಲ್ಲಿ ಮನೆಯನ್ನು ನಾಶ ಮಾಡೋಕೆ ನಾವೇ ಅವಕಾಶ ಮಾಡಿಕೊಟ್ಟ ಹಾಗೆ ಆಗಬಿಡುತ್ತೆ ಮತ್ತೆ ಈ ಮೂರು ಗ್ರಹಗಳು ಸೇರಿ ಮನೆಯನ್ನೇ ನಾಶ ಮಾಡುತ್ತವೆ ಎಂದು ಧರ್ಮ ಶಾಸ್ತ್ರದಲ್ಲಿ ಹೇಳಲಾಗಿದೆ.

ಧರ್ಮ ಶಾಸ್ತ್ರ ಹೇಳುತ್ತೆ ಊರೆಲ್ಲ ಓಡಾಡಿಕೊಂಡು ಬಂದ ಚಪ್ಪಲಿಯನ್ನು ಮನೆ ಒಳಗೆ ತರಬಾರದು ಮನೆಯೊಳಗೆ ತರದೆ ಹೊರಗೆ ಬಿಟ್ಟರೆ  ಈತರ ಮಾಡುವುದರಿಂದ  ಶನಿ,ಕುಜ,ರಾಹು ಸಂಧಿಗಳು ನೆಡೆಯುದಿಲ್ಲ,ಮನೆಯ ವಾತಾವರಣ ಕೂಡ ಪ್ರಶಾಂತವಾಗಿರುತ್ತದೆ ಅನ್ನುವ ಮಾತನ್ನು ಧರ್ಮ ಶಾಸ್ತ್ರಾದಲ್ಲಿ ಹೇಳಲಾಗಿದೆ.

ಇಷ್ಟೋತ್ತು ಶಾಸ್ತಗಳಲ್ಲಿ ಚಪ್ಪಲಿ ಹಾಕಿಕೊಂಡು ಮನೆಯಲ್ಲಿ ಓಡಾಡುವುದರ ಬಗ್ಗೆ ಕೇಳಿದಾಯ್ತು ಈಗ ವೈಜ್ಞಾನಿಕ ಕಾರಣಗಳು ತಿಳಿದುಕೊಳ್ಳೋಣ ಬನ್ನಿ..

96% ಕೊಲಿಫಾರ್ಮ್ಸ್ ಬ್ಯಾಕ್ಟೀರಿಯಾ ನಮ್ಮ ಚಪ್ಪಲಿಗಳಲ್ಲಿ ಇರುತ್ತವೆ ಇದು ಮಾನವರ ಮಲದಲ್ಲಿ ಮತ್ತು ಪ್ರಾಣಿಗಳಲ್ಲಿ ಕಂಡುಬರುವ ಬ್ಯಾಕ್ಟೀರಿಯಾವಾಗಿದೆ ,
ಏಳು ಬಗೆಯ ಬ್ಯಾಕ್ಟೀರಿಯಾಗಳು ಚಪ್ಪಲಿ ಮತ್ತು ಶೂ ಗಳಲ್ಲಿ ಇವೆಯಂತೆ. ಇದರಲ್ಲಿ ಇ. ಕೊಲಿ, ಕ್ಲೆಬ್ಸಿಯಾಲ್ಲಾ ನ್ಯುಮೋನಿಯಾ (ಮೂತ್ರದ ಸೋಂಕನ್ನು ಉಂಟುಮಾಡುತ್ತದೆ), ಮತ್ತು ಸೆರೆಷಿಯಾ ಫಿಕೇರಿಯಾ (ಇದು ಉಸಿರಾಟದ ಸೋಂಕುಗಳಿಗೆ ಕಾರಣವಾಗುತ್ತದೆ).

ಅದಕ್ಕೋಸ್ಕರ ಇನ್ಮೇಲೆ ಎಲ್ಲರೂ ಮನೆಯ ಒರಗೆ ಚಪ್ಪಲಿಯನ್ನು ಬಿಟ್ಟು ಹೋಗಿ ಅದಕ್ಕೆ ಹೇಳೋದು ನಮ್ಮ ಪೂರ್ವಿಕರು ಏನೇ ಹೇಳಿದರೂ ನಿಖರವಾದ ಕಾರಣ ಇಲ್ಲದೆ ಹೇಳೋದಿಲ್ಲ ಅಂತ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top