fbpx
ಕನ್ನಡ

ಮೈಸೂರು ರಾಜ್ಯಕ್ಕೆ “ಕರ್ನಾಟಕ” ರಾಜ್ಯ ಎಂದು ನಾಮಕರಣ ಮಾಡಲು ದೇವರಾಜ ಅರಸು ರವರಿಗೆ ಸೂಚಿಸಿದ ಸಾಹಿತಿ ಬಗ್ಗೆ ನಿಮಗೆ ಗೊತ್ತಾ ?

ಹಿಂದುಳಿದ ವರ್ಗಗಳ ಹರಿಕಾರ “ ಡಿ  ದೇವರಾಜ ಅರಸು”.

ಕರ್ನಾಟಕ ರಾಜ್ಯದ ಹಿಂದುಳಿದ ವರ್ಗಗಳ ಶ್ರೇಯೋಭಿವೃದ್ಧಿಯ ಹರಿಕಾರ, ಉಳುವವನೆ ಒಡೆಯ  ಎಂಬ ಕಾನೂನು ಜಾರಿಗೆ  ತಂದ ಸುಧಾರಕ,ಕರ್ನಾಟಕ ರಾಜ್ಯವನ್ನು ದೀರ್ಘಾವಧಿ ಆಳ್ವಿಕೆ ನೆಡೆಸಿದ ಮುಖ್ಯಮಂತ್ರಿ ಡಿ.ದೇವರಾಜ ಅರಸು ಜನಿಸಿದ್ದು ಮೇ 20,1915 ನೆ3 ಇಸವಿಯಲ್ಲಿ.

ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ರವರು ಹಿಂದುಳಿದವರು,ಶೋಷಿತರು,ಜೀತಕ್ಕೊಳಗಾದವರ ಅಭಿವೃದ್ಧಿಗೆ ಕೈಗೊಂಡ ಕಾರ್ಯಕ್ರಮಗಳೂ ಇಂದಿಗೂ ಚಿರಸ್ಮರಣೀಯವಾಗಿದೆ.

ಡಿ,ದೇವರಾಜ ಅರಸುರವರು ರಾಜ್ಯದ ಮುಖ್ಯಮಂತ್ರಿಯಾಗಿದ್ದ  ಸಂದರ್ಭದಲ್ಲಿ ಹಿಂದುಳಿದ ವರ್ಗಗಳನ್ನು ಗುರುತಿಸಿ ಆವರಿಗೆ ಕಾರ್ಯಕ್ರಮ ರೂಪಿಸಲು ಸಹಕಾರಿಯಾಗುವಂತೆ ಹಾವನೂರು ಆಯೋಗವನ್ನು ರಚಿಸಿದ್ದು,ಅರುಸುರವರಿಗೆ ಹಿಂದುಳಿದ ವರ್ಗದ ಬಗ್ಗೆ ಇದ್ದ ಕಳಕಳಿಯನ್ನು ತೋರುತ್ತದೆ.ಇವರು ಹಿಂದುಳಿದವರಿಗೆ ನೀಡಿದ ಮೀಸಲಾತಿ ದೇಶಕ್ಕೆ ಮಾದರಿಯಾಗಿತ್ತು.

ಜೀತಪದ್ಧತಿ ಕಿತ್ತೊಗೆಯಲು ಮತ್ತು ಉಳ್ಳವರಿಂದ ಉಳುವವರಿಗೆ ಜಮೀನು ನೀಡುವ,ಉಳುವವನೆ ಒಡೆಯ  ಎಂಬ ಕಾನೂನು ಬಡ, ಕೂಲಿ ಕಾರ್ಮಿಕ,ಶೋಷಿತರ  ಆಶಾಕಿರಣವಾಯಿತು.ಕರ್ನಾಟಕ ರಾಜ್ಯ ಪ್ರಸ್ತುತವಾಗಿಯೂ “ ಭಾಗ್ಯಜ್ಯೋತಿ ಯೋಜನೆಯು”ಅರಸುರವರು ಜಾರಿಗೆ ತಂದ ಕಾರ್ಯಕ್ರಮಗಳಲ್ಲಿ  ಒಂದಾಗಿದೆ.

ಮಲ ಹೊರುವ ಪದ್ದತಿ ನಿವಾರಣೆಗೆ ಕೈಗೊಂಡ ಕ್ರಮಗಳು,ಪ್ರಾಥಮಿಕ ಶಿಕ್ಷಣಕ್ಕೆ ನೀಡಿದ ಒತ್ತು. ಇವು ಅರಸು ಆಡಳಿತದ ಪ್ರಮುಖ ಜನಪ್ರಿಯ ಕಾರ್ಯಕ್ರಮಗಳಾಗಿವೆ.

ಕಲ್ಲಹಳ್ಳಿ ದತ್ತು ಗ್ರಾಮವಾಗಿ ಘೋಷಣೆ.

ಡಿ.ದೇವರಾಜು ಅರಸುರವರ ಜನ್ಮ ಶತಮಾನೋತ್ಸವದ  ಸಂದರ್ಭದಲ್ಲಿ ಅರಸುರವರು ಹುಟ್ಟಿದ ಗ್ರಾಮವಾದ ಮೈಸೂರು ಜಿಲ್ಲೆಯ ಹುಣಸೂರು ತಾಲ್ಲೂಕಿನ ಕಲ್ಲಹಳ್ಳಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ಮಾದರಿ ಗ್ರಾಮವನ್ನಾಗಿ ಅಭಿವೃದ್ಧಿ ಪಡಿಸುವ ಉದ್ದೇಶದಿಂದ ಆಗಸ್ಟ್ 20,2015 ರಂದು ದತ್ತು ಗ್ರಾಮ ಎಂದು ಘೋಷಿಸಿದರು.

1973 ನವೆಂಬರ್ 1 ನೇ ತಾರೀಖಿನಂದು ಮೈಸೂರು ರಾಜ್ಯಕ್ಕೆ  “ಕರ್ನಾಟಕ” ರಾಜ್ಯ ಎಂದು ನಾಮಕರಣ ಮಾಡಿದರು.

ಮೈಸೂರು ರಾಜ್ಯವನ್ನು ಕರ್ನಾಟಕ ಎಂದು ನಾಮಕರಣ ಮಾಡಿದರು.

ಡಿ.ದೇವರಾಜ ಅರಸುರವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ನವೆಂಬರ್ 1,1973 ರಂದು ಮೈಸೂರು ರಾಜ್ಯವನ್ನು  “ಕರ್ನಾಟಕ” ಎಂದು ಮರು ನಾಮಕರಣ ಮಾಡಿದರು.

ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣ ಮಾಡಬೇಕೆಂದು ದೇವರಾಜು ಅರಸುರವರಿಗೆ ಖ್ಯಾತ ಸಾಹಿತಿ ಚದುರಂಗ ಅವರು ಸೂಚಿಸಿದ್ದರು.

ದೇವರಾಜು ಅರಸುರವರ ಜೀವನದ ಹೆಜ್ಜೆಗಳು.

1.1915 ಆಗಸ್ಟ್ 20 ರಂದು ದೇವರಾಜ ಅರಸುರವರು ಹುಣಸೂರು ತಾಲ್ಲೂಕಿನ  “ಕಲ್ಲಹಳ್ಳಿ” ಯಲ್ಲಿ ದೇವೀರಮ್ಮಣ್ಣಿ ಮತ್ತು ದೇವರಾಜು ಅರಸುರವರ ಜೇಷ್ಠ ಪುತ್ರನಾಗಿ  ಡಿ.ದೇವರಾಜು ಜನಿಸಿದರು.

2.1921 ರಲ್ಲಿ ಮೈಸೂರಿನಲ್ಲಿ ಪ್ರಾಥಮಿಕ ಶಿಕ್ಷಣ ಆರಂಭಿಸಿದರು.

3.1924 ರಲ್ಲಿ ದೇವರಾಜ ಅರಸು ಅವರ ತಂದೆ ನಿಧನರಾದರು.

4.1924 ರಲ್ಲಿ ಉನ್ನತ ಶಿಕ್ಷಣದ ಬಳಿಕ ರಾಜಕೀಯ ಪ್ರವೇಶ.

5.ಮೈಸೂರು ಪ್ರಜಾಪ್ರತಿನಿದಿ ಸಭಾ  ಚುನಾವಣೆಯಲ್ಲಿ ಗೆಲುವು ಸಾಧಿಸಿದರು.

6.1942 ರಲ್ಲಿ ಕ್ವಿಟ ಇಂಡಿಯಾ ಚಳುವಳಿಯಲ್ಲಿ ಭಾಗವಹಿಸಿ ಸೆರೆಮನೆ ವಾಸ ಅನುಭವಿಸಿದರು.

7.1943 ರಲ್ಲಿ ಚಿಕ್ಕಮಣ್ಣಿ ಜೊತೆ ವಿವಾಹ ವಾದರು.

8.1945 ರಲ್ಲಿ ಮೈಸೂರು ಪ್ರಜಾ ಪ್ರತಿನಿಧಿ  ಸಭೆಯ  ಚುನಾವಣೆಯಲ್ಲಿ ಮತ್ತೆ ಗೆಲುವನ್ನು ಸಾಧಿಸಿದರು.

9.1952 ರಲ್ಲಿ ಮೊದಲ ಮಹಾ ಚುನಾವಣೆಯಲ್ಲಿ ಹುಣಸೂರು ಕ್ಷೇತ್ರದಿಂದ ಮರು ಆಯ್ಕೆ ಗೊಂಡರು.

10.1962 ರಲ್ಲಿ  ನಿಜಲಿಂಗಪ್ಪ ನವರ ಸಂಪುಟದಲ್ಲಿ ಸಾರಿಗೆ ಸಚಿವರಾಗಿದ್ದರು.

11.1969 ರಲ್ಲಿ ಕಾಂಗ್ರೆಸ ವಿಭಜನೆಯಾದಾಗ ಇಂದಿರಾ ಕಾಂಗ್ರೆಸ ಪರ ನಿಂತರು.

12.1971 ರಲ್ಲಿ ಲೋಕಸಭಾ ಚುನಾವಣೆಯಲ್ಲಿ ಇಂದಿರಾ ಕಾಂಗ್ರೆಸ್ಸಿನ ಅಭೂತಪೂರ್ವ ಗೆಲುವಿನ ಶಿಲ್ಪಿ ಯಾದರು.

13.1974 ರಲ್ಲಿ ಭೂ ಸುಧಾರಣಾ ಮಂಡಳಿ ರಚಿಸಿದರು.

14.1979 ರಲ್ಲಿ ಇಂದಿರಾ ಕಾಂಗ್ರೆಸ್ಸಿನಿಂದ ಉಚ್ಚಾಟನೆ.

15.1982 ರಲ್ಲಿ ಮೇ 18 ನೇ ತಾರೀಖಿನಂದು  ಡಿ.ದೇವರಾಜ ಅವರು ದೈವಾದೀನರಾದರು.

ಹೀಗೆ ಇವರಿಂದ ನಮ್ಮ ರಾಜ್ಯಕ್ಕೆ “ ಕರ್ನಾಟಕ” ಎಂಬ ಹೆಸರು ಬಂತು ಮತ್ತು ಆ ಹೆಗ್ಗಳಿಕೆ  ಕೂಡ ಇವರಿಗೆ  ಸಲ್ಲುತ್ತದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top