fbpx
ದೇವರು

ಇಷ್ಟಾರ್ಥ ಸಿದ್ದಿಗಾಗಿ ಮಾಡೋ 48 ದಿನಗಳ ಶ್ರೀ ಗೊರವನಹಳ್ಳಿ ಲಕ್ಷ್ಮೀ ಪೂಜೆ ವಿಧಾನ..

ಶ್ರೀ ಗೊರವನಹಳ್ಳಿ ಲಕ್ಷ್ಮೀ  ಪೂಜಾ ವಿಧಾನ.(48 ದಿನಗಳ ನಿತ್ಯ ಪೂಜೆ)

ಶ್ರೀ ಗೊರವನಹಳ್ಳಿ ಲಕ್ಷ್ಮೀ ಪೂಜೆಯನ್ನು ಇಷ್ಟಾರ್ಥ ಸಿದ್ದಿಗಾಗಿ 48 ದಿನಗಳು ಪೂಜೆ ಮಾಡುವುದು ಸಂಪ್ರದಾಯವಾಗಿದೆ. ಪೂಜೆಯನ್ನು ಯಾವ ದಿನವಾದರೂ ಪ್ರಾರಂಭಿಸಬಹುದು.ಮಂಗಳವಾರ ಹಾಗೂ ಶುಕ್ರವಾರ, ಹುಣ್ಣಿಮೆಗಳಂದು ಉತ್ತಮ.

ಪೂಜೆಗೆ ಸಿದ್ಧತೆ ಹೇಗೆ ಮಾಡಿಕೊಳ್ಳಬೇಕು.

ಒಂದು ಮಣೆಯ ಮೇಲೆ ಗೊರವನಹಳ್ಳಿಯ ಶ್ರೀ ಮಹಾಲಕ್ಷ್ಮೀ ಫೋಟೋವನ್ನು ಇಟ್ಟು ಅದರ ಮೇಲೆ ಕಳಸ ಸ್ಥಾಪನೆ ಮಾಡಬೇಕು.ಕಳಸದ ತುಂಬಾ ನೀರು ಹಾಕಿ ಅದರಲ್ಲಿ ಅರಿಷಿಣ, ಕುಂಕುಮ, ಅಕ್ಷತೆ,ಒಂದು ರೂಪಾಯಿ ನಾಣ್ಯವನ್ನು ಹಾಕಿ ಕಲಶದ ನಾಲ್ಕು ಕಡೆ ಗಂಧ,ಕುಂಕುಮವನ್ನು ಹಚ್ಚಿ ,ಐದು ವೀಳ್ಯದೆಲೆಯನ್ನು ಅಥವಾ ಮಾವಿನ ಎಲೆಯನ್ನಾಗಲಿ ಕಳಸದಲ್ಲಿಟ್ಟು. ಒಂದು ಅರಿಶಿಣದ ಕೊಂಬನ್ನು ಮೂರು ಎಳೆಯ ದಾರದಿಂದ ಕಳಸಕ್ಕೆ ಸುತ್ತಿ ಕಟ್ಟಬೇಕು.ಹರಿಷಿಣ ಕುಂಕುಮ ಹಚ್ಚಿದ ತೆಂಗಿನ ಕಾಯಿಯನ್ನು ಕಳಸದ ಮೇಲೆ ಇಟ್ಟು ಕಳಸ ಸ್ಥಾಪನೆ ಮಾಡಬೇಕು.(ಕಳಸಕ್ಕೆ ಉಪಯೋಗಿಸುವ ಪಾತ್ರೆ ತಾಮ್ರ ಅಥವಾ ಬೆಳ್ಳಿಯದ್ದಾಗಿರಬೇಕು). ಕಲಶವನ್ನು  ಒಂದು ತಟ್ಟೆಯಲ್ಲಿಟ್ಟು ಸ್ವಲ್ಪ ಅಕ್ಕಿಯನ್ನು ಹಾಕಿ ಓಂಕಾರ ಹಾಗೂ ಶ್ರೀ ಕಾರವನ್ನು ಬರೆದು ಕಲಶವನ್ನು ಸ್ಥಾಪಿಸುವುದು.

ಶ್ರೀ ಮಹಾಲಕ್ಷ್ಮೀಯನ್ನು  ಪೂಜಿಸುವ ಮುಂಚೆ ಕಳಸ ಸ್ಥಾಪನೆ ಮಾಡಬೇಕು.

ಒಂದು ಪಂಚ ಪಾತ್ರೆಯಲ್ಲಿ ಅಕ್ಕಿಯನ್ನು ತುಂಬಿ ಅದರಲ್ಲಿ ಒಂದು ಚಿಕ್ಕದಾದ ಪಂಚಲೋಹದ ಅಥವಾ ಬೆಳ್ಳಿಯ ಲಕ್ಷ್ಮೀ ವಿಗ್ರಹವನ್ನು ಇಟ್ಟು ಒಂದು ಬಟ್ಟಲಡಿಕೆ ,ಒಂದು ಹರಿಶಿನದ ಕೊಂಬು,ಒಂದು ಬಾದಾಮಿ,ಒಂದು ರೂಪಾಯಿ ನಾಣ್ಯವನ್ನು ಇಟ್ಟು ಕಳಸ ಸ್ಥಾಪನೆ ಮಾಡುವುದು.(ಪ್ರತಿ ಶುಕ್ರವಾರ ಕಲಶವನ್ನು ಬದಲಾಯಿಸುವಾಗ  ಕಳಸದಲ್ಲಿರುವ ಪದಾರ್ಥಗಳನ್ನು ನೈವೇದ್ಯಕ್ಕೆ ಬಳಸಬೇಕು).

ಸ್ತ್ರೀಯರು ಬಲಿಷ್ಟಿಯಾದಲ್ಲಿ ನಾಲ್ಕು ದಿನ ಪೂಜೆಯನ್ನು ನಿಲ್ಲಿಸಿ ಐದನೇ ದಿನ ಹಳೇ ಕಲಶವನ್ನು ತೆಗೆದು ಹೊಸದಾಗಿ ಕಲಶವನ್ನು ಸ್ಥಾಪಿಸಿ ಪೂಜೆಯನ್ನು ಮಾಡಬೇಕು.

ಈ ರೀತಿ ಗೊರವನಹಳ್ಳಿ ಮಹಾಲಕ್ಷ್ಮೀಯ ಪೂಜೆಯನ್ನು ಒಂದು ಮಂಡಲ ಅಂದರೆ 40 ದಿವಸ ಹಾಗೂ ಶ್ರೀ ಹರಿಗಾಗಿ ಎಂಟು ದಿವಸ ಹೀಗೆ  ಒಟ್ಟಿಗೆ 48 ದಿನಗಳು ಪೂಜೆ ಮಾಡಿ ನಂತರ ಶ್ರೀ ಗೊರವನಹಳ್ಳಿಯ ಮಹಾಲಕ್ಷ್ಮೀ ಪೂಜಾ ವಿಧಾನ ಪುಸ್ತಕವನ್ನು ತಮ್ಮ ಶಕ್ತಿಯನುಸಾರ (ಐದು, ಏಳು, ಒಬ್ಬಂತ್ತು ಜನ) ಸುಮಂಗಲಿಯರನ್ನು ಕರೆದು  ಕಡೆಯ ವಾರ ಮಂಗಳ ದ್ರವ್ಯಗಳೊಡನೆ ದಾನವಾಗಿ ಕೊಟ್ಟು ಆಶೀರ್ವಾದ ಪಡೆದು ಶ್ರೀ ಮಹಾಲಕ್ಷ್ಮೀ ಅನುಗ್ರಹಕ್ಕೆ ಪಾತ್ರರಾಗಿರಿ.

ಪೂಜೆ ಮಾಡುವ ಪ್ರತಿ ಸಮಯದಲ್ಲಿ ಪ್ರತಿ ಶುಕ್ರವಾರ ಹೊಸ ಕಳಸ ಸ್ಥಾಪಿಸಬೇಕು.  ಪೂಜಾ ಸ್ಥಳವನ್ನು ಶುದ್ದೀಕರಿಸಿ ರಂಗೋಲಿ ಹಾಕಿ ಗೊರವನಹಳ್ಳಿ ಶ್ರೀ ಮಹಾಲಕ್ಷ್ಮೀ ಫೋಟೋ ಮತ್ತು ಕಲಶವನ್ನು  ಪೂರ್ವ ಅಥವಾ ಉತ್ತರ ಮುಖವಾಗಿ ಇಡಬೇಕು ಪೂಜೆ ಮಾಡಲು ಒಂದು ಚಿಕ್ಕ ಲಕ್ಷ್ಮೀ ವಿಗ್ರಹವನ್ನು ಇಲ್ಲದಿದ್ದರೆ ಲಕ್ಷ್ಮೀ ನಾರಾಯಣ ಸ್ವಾಮಿ ವಿಗ್ರಹವನ್ನು ಪೂಜೆಗೆ ಇಟ್ಟುಕೊಳ್ಳಬೇಕು.

ಪೂಜೆಗೆ ಕುಳಿತು ಕೊಳ್ಳುವವರು ಪೂರ್ವ ಅಥವಾ ಉತ್ತಾರಾಭಿಮುಖವಾಗಿ ಕುಳಿತುಕೊಂಡು ದೇವಿಯನ್ನು ಪೂಜಿಸುವುದು ಒಳ್ಳೆಯದು.ಶ್ರೀ ಮಹಾಲಕ್ಷ್ಮೀ ಪೂಜೆಯನ್ನು ಮಾಡುವವರು 48 ದಿವಸವಾಗಲಿ ಅಥವಾ ನಿತ್ಯವೂ ಪೂಜಿಸಬಹುದು.ಭಕ್ತಿ, ಶ್ರದ್ಧೆ  ಹಾಗೂ ಮನಸ್ಸಿನ ಏಕಾಗ್ರತೆಯಿಂದ ಪೂಜೆ ಮಾಡಿದರೆ ಶೀಘ್ರ ಫಲವನ್ನು ಪಡೆಯಬಹುದು. ಇದು ಅನುಭವದ ಮಾತು.

ಪೂಜಾ ಸಾಮಾಗ್ರಿಗಳು.

ಹರಿಶಿನ,ಕುಂಕುಮ,ಅಕ್ಷತೆ,ಗಂಧ,ಹೂವು,ಗಂಧದ ಕಡ್ಡಿ,ಕರ್ಪುರ, ಗಂಟೆ, ಮಂಗಳಾರತಿ ತಟ್ಟೆ,ಗೆಜ್ಜೇವಸ್ತ್ರ,ನೈವೇದ್ಯಕ್ಕಾಗಿ ಹಸುವಿನ ಶುದ್ದ ಹಸಿ ಹಾಲು,ಹಣ್ಣು, ಅಥವಾ ಕಲ್ಲು ಸಕ್ಕರೆ,ಅಥವಾ ಬೆಲ್ಲದ ಚೂರು,(ಅವರವರ ಶಕ್ತಿಯನುಸಾರ).

ಪಂಚಾಮೃತಕ್ಕಾಗಿ  ಹಸುವಿನ ಹಸಿ ಹಾಲು,ಹಸುವಿನ ಹಾಲಿನ ಮೊಸರು, ಹಸುವಿನ ತುಪ್ಪ, ಜೇನುತುಪ್ಪ, ಕಲ್ಲುಸಕ್ಕರೆ, ಬಾಳೆಹಣ್ಣು ಮಿಶ್ರಣ, ಇದ್ದರೆ ಏಳೆನೀರು ಉಪಯೋಗಿಸಬಹುದು. ಪೂಜೆಗೆ ಪಂಚಾಮೃತವಿಲ್ಲದಿದ್ದರೆ ಪೂಜೆ ಮಾಡಿರುವ ಕಲಶೋಧಕವನ್ನು ದೇವಿಗೆ ಪ್ರೋಕ್ಷಿಸಬಹುದು.

ಭಕ್ತರ ಅನುಕೂಲಕ್ಕೆ ತಕ್ಕಂತೆ ಪೂಜಾ ಕ್ರಮಕ್ಕೆ ತೊಡಗಿಸಿಕೊಳ್ಳಬೇಕು.

ನಿತ್ಯವೂ ಭಕ್ತಾದಿಗಳು ಅವರವರ ಸಮಯಾನುಕೂಲ ನೋಡಿಕೊಂಡು ಮೂರು ಬಾರಿಯಾಗಲಿ ಇಲ್ಲದೆ ಇದ್ದರೆ ಬೆಳ್ಳಗ್ಗೆ ಹಾಗೂ ಸಂಜೆ ಪೂಜೆಯನ್ನು ಮಾಡಬೇಕು.ಮದ್ಯಾಹ್ನ ಹಾಗೂ ಸಂಜೆ ಪೂಜೆಯನ್ನು ಮಾಡುವಾಗ ಕೈಕಾಲು ಮುಖ ತೊಳೆದು ದೇವಿಗೆ   ಪೂಜೆ ಮಾಡಬೇಕು.

ಸಮಯಾವಕಾಶ ಇದ್ದರೆ  ಮಹಾಲಕ್ಷ್ಮೀ ಅಷ್ಟಕ  ಹಾಗೂ  ಮಹಾಲಕ್ಷ್ಮೀ ಅಷ್ಟೋತ್ತರ ಹೇಳಿ ಇಲ್ಲವೇ ಲಕ್ಷ್ಮೀ ಹಾಡುಗಳನ್ನು ಪಠಿಸಬಹುದು.

“ನಮಸ್ತೇಸ್ತು ಮಹಾಮಾಯೆ ಶ್ರೀ ಪೀಟೇ ಸುರಪೂಜಿತೇ

ಶಂಕ ಚಕ್ರಗದಾ ಹಸ್ತೆ ಮಹಾಲಕ್ಷ್ಮೀ ನಮೋಸ್ತುತೆ” ಎಂದು ಪ್ರಾರ್ಥಿಸಿ  ನೈವೇದ್ಯವನ್ನು ಸಮರ್ಪಿಸಬಹುದು.  ದೀಪವನ್ನು ಬೆಳಗಿಸಿ ಊದುಬತ್ತಿಯನ್ನು ಹಚ್ಚಿ ಶಕ್ತಿಗನುಗುಣವಾಗಿ ನೈವೇದ್ಯ ಸಮರ್ಪಿಸಿ ಮಂಗಳಾರತಿ ಮಾಡಬೇಕು.

ನಿತ್ಯವೂ ಬೆಳ್ಳಗ್ಗೆ ಪೂಜೆಯ ನಂತರ ಒಂದು ಸೇರು ಅಕ್ಕಿ ಹಿಡಿಯುವ ಪಾತ್ರೆಯನ್ನು ಇಟ್ಟುಕೊಂಡು,ನಿತ್ಯವೂ ಒಂದು ಹಿಡಿ ಅಕ್ಕಿಯನ್ನು ಆ ಪಾತ್ರೆಗೆ ಹಾಕುತ್ತಿರಬೇಕು.ನಿತ್ಯವೂ ಮಹಾಲಕ್ಷ್ಮೀಯನ್ನು   ‘ಲಕ್ಷ್ಮೀ ನಿನ್ನ ದಯೆ ಲಕ್ಷ್ಮೀ ನಿನ್ನ ದಯೆ’ ಎಂಬುದಾಗಿ ಮೂರು ಬಾರಿ ದ್ಯಾನಿಸುತ್ತಿರಬೇಕು. ಪಾತ್ರೆ ತುಂಬಿದ ನಂತರ ಆ ಅಕ್ಕಿಯ ಬೆಲೆಯನ್ನು ಕನಿಷ್ಠ ಒಂದು ರೂಪಾಯಿ  ಅಥವಾ ಅವರ ಶಕ್ತಿಗನುಸಾರವಾಗಿ  ದೇವಿಗೆ ಸಮರ್ಪಿಸಿ.ಆ ಅಕ್ಕಿಯನ್ನು ಮನೆಯವರಾಗಲಿ ಅಥವಾ ಬಂದ ಅಥಿತಿಗಳಿಗಾಗಲಿ  ಬಡಿಸಬಹುದು.ಅಥವಾ ತೆಗೆದಿಟ್ಟಿರುವ ಹಣದ  ಸಮೇತ ದೇವಸ್ಥಾನಕ್ಕಾಗಲಿ ತಲುಪಿಸಬಹುದು.ಕಾರ್ಯ ನೆರವೇರಿದ ನಂತರ ಭಕ್ತಾದಿಗಳು ಗೊರವನಹಳ್ಳಿಯ ಶ್ರೀ ಮಹಾಲಕ್ಷ್ಮೀ ಸನ್ನಿಧಿಗೆ ಬಂದು ತಮ್ಮ ಶಕ್ತಿಗನುಸಾರವಾಗಿ ಪೂಜೆಯನ್ನು ಮಾಡಿಸಿ ಕಾಣಿಕೆಯನ್ನು ನೀಡಬಹುದು.ಸಂತಾನವಿಲ್ಲದವರು, ಮದುವೆ ಆಗದೆ ಇರುವ ಹೆಣ್ಣುಮಕ್ಕಳು ಹಾಗೂ ಕಷ್ಟಗಳನ್ನು ಪರಿಹರಿಸಿಕೊಳ್ಳಲು ಎಲ್ಲರೂ ಗೊರವನಹಳ್ಳಿಯ ಶ್ರೀ ಮಹಾಲಕ್ಷ್ಮೀಯನ್ನು ಪೂಜಿಸಿ ಆ ಮಹಾತಾಯಿಯ ಕೃಪೆಗೆ ಪಾತ್ರರಾಗಿರಿ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top