fbpx
ಆರೋಗ್ಯ

ಗರ್ಭ ನಿರೋಧಕ ಮಾತ್ರೆಗಳ ಬಗ್ಗೆ ಎಲ್ಲರು ತಿಳ್ಕೊಳ್ಳಬೇಕಾದ ವಿಷಯಗಳು ..

ಗರ್ಭ ನಿರೋಧಕ ಮಾತ್ರೆಗಳ ಬಗ್ಗೆ ಎಲ್ಲರು ತಿಳ್ಕೊಳ್ಳಬೇಕಾದ ವಿಷಯಗಳು ..

ಮದುವೆಯಾಗುತ್ತದೆ ಹಿಂದಿನ ಕಾಲದಲ್ಲಿ ವರ್ಷದೊಳಗೆ ಮಡಿಲೊಳಗೆ ಮಗು ಎನ್ನುವ ವಾಡಿಕೆ ಇತ್ತು ಕಾಲ ಕ್ರಮೇಣ ಈ ವಾಡಿಕೆ ಬದಲಾಗಿ ಎರಡು ವರ್ಷಕ್ಕೆ ಹಿಂದಿಂದೆ ಮಗು ಎನ್ನುವ ಪರಿಕಲ್ಪನೆ ಬಂತು ,’ಮಕ್ಕಳಿರಲವ್ವ ಮನೆ ತುಂಬ’ ಹೀಗೆ ಮುಂದುವರೆದು ‘ಆರತಿಗೊಂದು ಕೀರ್ತಿಗೊಂದು’ ಎಂದಾಯಿತು ಬಳಿಕ ‘ಮನೆಗೊಂದು ಮಗು ದೇಶಕ್ಕೆ ನಗು’ ಎಂದಾಯಿತು , ಸ್ವಲ್ಪ ವರ್ಷಗಳ ಕೆಳಗೆ ಈ ಎಲ್ಲಾ ವಾಡಿಕೆ ಬದಲಾಗಿ ರಸ್ತೆಗೊಂದು ದೀಪ ಬೀದಿಗೊಂದು ಪಾಪ ಎಂತಾಯಿತು.

ಎಷ್ಟೆಲ್ಲ ಪೀಠಿಕೆ ಯಾಕೆ ಅಂತೀರಾ ಹೌದು ವಿಷ್ಯ ಇದೆ ಈಗ ಯಾರಿಗೂ ಟೈಮ್ ಇಲ್ಲ ರೀ ಎಲ್ಲರು ಅವರವರ ಕೆರಿಯರ್ ನಲ್ಲಿ ಬ್ಯುಸಿ , ಫ್ಯಾಮ್ಮಿಲಿ ಪ್ಲಾನಿಂಗ್ ಮಾಡುವ ತವಕದಲ್ಲಿ ಕಾಂಡೊಮ್ ಅಥವಾ ಗರ್ಭ ನಿರೋಧಕ ಮಾತ್ರೆಗಳ ಮೊರೆ ಹೋಗುತ್ತಾರೆ ಹೀಗೆ ಮಾಡಿದರೆ ತಾತ್ಕಾಲಿಕವಾಗಿ ಗರ್ಭ ತಡೆಯ ಬಹುದು ಎಂಬ ಯೋಜನೆಯಲ್ಲಿ ಇರುತ್ತಾರೆ .

ಆದರೆ ಎಂದಾದರೂ ಯೋಚನೆ ಮಾಡಿದ್ದೀರಾ ನೀವು ತಿನ್ನುವ ಮಾತ್ರೆಗಳು ಎಷ್ಟು ಸುರಕ್ಷಿತ ಎಂದು ನಿಮಗೆ ತಿಳಿದಿರಲಿ ಗರ್ಭ ನಿರೋಧಕ ಮಾತ್ರೆಗಳು ನಿಮ್ಮನ್ನು ಶಾಶ್ವತವಾಗಿ ಬಂಜೆಯನ್ನಾಗಿ ಮಾಡಬಹುದು.

ಬನ್ನಿ ಗರ್ಭ ನಿರೋಧಕ ಮಾತ್ರೆಗಳ ಅಡ್ಡ ಪರಿಣಾಮಗಳ ಬಗ್ಗೆ ತಿಳಿದುಕೊಳ್ಳೋಣ .

ಗರ್ಭ ನಿರೋಧಕ ಮಾತ್ರೆಗಳು ಸೇವಿಸಿದ ಬಳಿಕ ಹಾರ್ಮೋನ್ ಗಳ ಗುಣಮಟ್ಟ ಮತ್ತು ಸ್ರವಿಸುವಿಕೆಯ ಮೇಲೆ ಬಾರಿ ಪರಿಣಾಮಗಳನ್ನು ಉಂಟುಮಾಡುತ್ತದೆ.

ವಿಪರೀತವಾದ ಹಾರ್ಮೋನ್ ಏರುಪೇರಿನಿಂದ ಖಿನ್ನತೆ ,ದುಃಖ ಮತ್ತು ಇತರ ಮಾನಸಿಕ ತೊಂದರೆಗಳು ಹೆಚ್ಚಾಗುತ್ತದೆ.

ಸ್ತನ ಮೃದುವಾಗಿ ಜಗ್ಗುವ ಅನುಭವಾಗುವ ಸಂಭವ ಹೆಚ್ಚು , ಕೆಲವೊಮ್ಮೆ ಗಂಟುಗಳು ಸಹ ಕಾಣಿಸಿಕೊಳ್ಳುತ್ತದೆ .

ಗರ್ಭ ನಿರೋಧಕ ಮಾತ್ರೆಗಳ ಸೇವನೆಯಿಂದ ಋತು ಅವಧಿಯಲ್ಲಿ ಅಗತ್ಯಕ್ಕಿಂತ ಹೆಚ್ಚು ಅಥವಾ ಬಹಳ ಕಡಿಮೆ ಋತು ಸ್ರಾವವಾಗುತ್ತದೆ .

ಗರ್ಭ ನಿರೋಧಕ ಮಾತ್ರೆ ಸೇವನೆಯಿಂದ ದೇಹದ ತೂಕ ಕೂಡ ಹೆಚ್ಚಾಗಬಹುದು.

ಗರ್ಭ ನಿರೋಧಕ ಮಾತ್ರೆ ಸೇವನೆಯಿಂದ ತುರಿಕೆ ,ಉರಿಯಂತಹ ಸಮಸ್ಯೆಗಳು ಸಹ ಕಾಣಿಸಿಕೊಳ್ಳುತ್ತವೆ

ತಲೆ ನೋವು ಅಥವಾ ಅರ್ಧ ತಲೆ ನೋವು (ಮೈಗ್ರೇನ್ ) ನಂತಹ ಸಮಸ್ಯೆಗಳು ಹೆಚ್ಚಾಗಿ ಕಾಣಿಸುತ್ತದೆ.

ಆದ್ದರಿಂದ ಆದಷ್ಟು ಸುರಕ್ಷಿತ ಲೈಂಗಿಕ ಕ್ರಮಗಳು ಮತ್ತು ಗರ್ಭ ನಿರೋಧಕ ಕ್ರಮಗಳನ್ನು ಅನುಸರಿಸಿ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top