fbpx
ಆರೋಗ್ಯ

ಹಸಿ ಶುಂಠಿ ಬದ್ಲು ಒಣಗಿದ ಶುಂಠಿ ಉಪಯೋಗ ಮಾಡಿದ್ರೆ ಈ 14 ಲಾಭಗಳನ್ನು ಪಡ್ಕೊಬಹುದು..

ಹಸಿ ಶುಂಠಿ ಬದ್ಲು ಒಣಗಿದ ಶುಂಠಿ ಉಪಯೋಗ ಮಾಡಿದ್ರೆ ಈ 14 ಲಾಭಗಳನ್ನು ಪಡ್ಕೊಬಹುದು..

ಶುಂಠಿಯ ಔಷಧೀಯ ಮೌಲ್ಯವನ್ನು ಉತ್ತಮವಾಗಿ ದಾಖಲಿಸಲಾಗಿದೆ ಪ್ರಾಚೀನ ಕಾಲದಿಂದಲೂ ಮನುಷ್ಯನಿಗೆ ಅನೇಕ ವಿಧಗಳಲ್ಲಿ ಉಪಯೋಗಕ್ಕೆ ಬರುತ್ತಿದೆ,

ಉರಿಯೂತ , ಕೊಲೆಸ್ಟರಾಲ್ ಸಮಸ್ಯೆಗೆ ರಾಮಬಾಣ , ಫೈಬರ್, ವಿಟಮಿನ್ ಬಿ 6, ಐರನ್, ಮೆಗ್ನೀಷಿಯಂ, ಪೊಟ್ಯಾಸಿಯಮ್, ವಿಟಮಿನ್ ಇ ಮತ್ತು ಮ್ಯಾಂಗನೀಸ್ ಅಂಶಗಳ ಉತ್ತಮ ಮೂಲವಾಗಿದೆ.


ಜಿಂಗೊಲ್, ಝಿಂಗರೋನ್ ಮತ್ತು ಶೋಗೋಲ್ನಂತಹ ಅನೇಕ ಸಾರಭೂತ ತೈಲಗಳನ್ನು ಹೊಂದಿರುತ್ತದೆ , ಜಿಂಜೊಲ್ ಉರಿಯೂತ ನಿವಾರಕ, ನೋವುನಿವಾರಕ ಅಂಶಗಳನ್ನು ಹೊಂದಿದೆ ,  ಬ್ಯಾಕ್ಟೀರಿಯಾ ವಿರೋಧಿ ಗುಣಲಕ್ಷಣಗಳನ್ನು ಹೊಂದಿದೆ , ಇದು ಹೊಟ್ಟೆಯಲ್ಲಿ ಗ್ಯಾಸ್ಟ್ರಿಕ್ ರಸವನ್ನು ಉತ್ಪಾದಿಸಲು ಸಹಾಯ ಮಾಡುತ್ತದೆ. ಝಿಂಜರ್ನ್, ಸಣ್ಣ ಮಕ್ಕಳಲ್ಲಿ ಅತಿಸಾರವನ್ನು ಉಂಟುಮಾಡುವ ಬ್ಯಾಕ್ಟೀರಿಯಾ ಇ ಕೊಲಿ ವಿರುದ್ಧ ಪರಿಣಾಮಕಾರಿಯಾಗಿ ಹೋರಾಡುತ್ತದೆ.
1. ಅಜೀರ್ಣಕ್ಕಾಗಿ ಒಣ ಶುಂಠಿ:

ಬಿಸಿ ನೀರಿಗೆ 1 ಗ್ರಾಂ ಒಣ ಶುಂಠಿ ಸೇರಿಸಿ, ಸ್ವಲ್ಪ ಸೈನ್ಧವ ಲವಣ ಸೇರಿಸಿ ಕುಡಿಯಿರಿ ಇದು ಹೊಟ್ಟೆ ನೋವಿನಿಂದ ಪರಿಹಾರವನ್ನು ನೀಡುವುದು.

2. ದೇಹದ ವಾಯು ಸಮಸ್ಯೆ :

ಶುಷ್ಕ ಶುಂಠಿ, ಕಪ್ಪು ಉಪ್ಪು ಬೆಚ್ಚಗಿನ ನೀರಿನಲ್ಲಿ ಬೆರೆಸಿ ಇದು ವಾಯು ಸಮಸ್ಯೆಯನ್ನು ನಿವಾರಿಸಿ.

3. ಕೆಮ್ಮು ಮತ್ತು ಶೀತ ಸಮಸ್ಯೆಗೆ ಒಣ ಶುಂಠಿ:

1 ಟೀಸ್ಪೂನ್ ಜೇನುತುಪ್ಪ, 1 ಟೀ ಚಮಚ ತುಪ್ಪ ಮತ್ತು 5 ಗ್ರಾಂ ಒಣ ಶುಂಠಿಯ ಪುಡಿ ಸೇರಿಸಿ. ಪ್ರತಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತೆಗೆದುಕೊಂಡರೆ ಕೆಮ್ಮು ಮತ್ತು ಎದೆ ಉರಿ ಸಮಸ್ಯೆ ನಿವಾರಣೆಯಾಗುತ್ತದೆ.

4. ಮೂತ್ರದ ಸೋಂಕುಗಳಿಗೆ ಒಣ ಶುಂಠಿ:

ಹಾಲು ಮತ್ತು ಸಕ್ಕರೆಗೆ ಒಣಗಿದ ಶುಂಠಿ ಪುಡಿ ಸೇರಿಸಿ ಕುಡಿಯಿರಿ ಇದು ಮೂತ್ರದ ಸೋಂಕುಗಳನ್ನ ತಡೆಯಲು ಸಹಾಯ ಮಾಡುತ್ತದೆ.

5. ಬಿಕ್ಕಳಿಕೆ ನಿವಾರಣೆಗೆ :

ಹಾಲಿಗೆ ಅರ್ಧ ಚಮಚ ಒಣಗಿದ ಶುಂಠಿ ಪುಡಿ ಸೇರಿಸಿ ಕುಡಿಯಿರಿ .

6. ಶುಂಠಿಯ ಪುಡಿವನ್ನು ಹಾಲಿನೊಂದಿಗೆ ಸೇವಿಸುವುದರಿಂದ ನೆಗಡಿ ಕಡಿಮೆಯಾಗುತ್ತದೆ.

7. ಶುಂಠಿ ಪುಡಿವನ್ನು ಸೈಂಧವ ಲವಣ ಬೆರೆಸಿ ಭೋಜನದ ಮೊದಲು ಸೇವಿಸಿದರೆ ಅಗ್ನಿ ವೃದ್ಧಿಯಾಗಿ ನಾಲಿಗೆಯ ರುಚಿ ಹೆಚ್ಚುತ್ತದೆ.

8. ಶುಂಠಿಯ ಕಷಾಯ ಮಾಡಿ ಅದಕ್ಕೆ ಜೇನುತುಪ್ಪ ಬೆರೆಸಿಕೊಟ್ಟರೆ ಜ್ವರದಿಂದ ಬಳಲುತ್ತಿರುವವರಿಗೆ ಒಳ್ಳೆಯದು.

9. ಶುಂಠಿ ಪುಡಿಗೆ ನಿಂಬೆರಸ ಮತ್ತು ಸೈಂಧವ ಲವಣ ಸೇರಿಸಿ ಸೇವಿಸುವುದರಿಂದ ಅರುಚಿಗೆ ಒಳ್ಳೆಯದು.

10. ಶುಂಠಿ ಪುಡಿಯನ್ನು ಹಾಲಿನಲ್ಲಿ ಬೆರೆಸಿ, ಕುದಿಸಿ ಕಲ್ಲುಸಕ್ಕರೆ ಸೇರಿಸಿ ಕುಡಿದರೆ ಬಲಹೀನತೆ ದೂರವಾಗುತ್ತದೆ.

11. ಶುಂಠಿಯ ಪುಡಿಯನ್ನು ಹರಳೆಣ್ಣೆ ಸೇರಿಸಿ ಸೇವಿಸಿದರೆ ಆಮದು ತೊಂದರೆಗೆ ಓಳ್ಳೆಯದು.

12. ಶುಂಠಿಯ ಪುಡಿಯನ್ನು ಉಗುರು ಬೆಚ್ಚಗಿನ ನೀರಿನಲ್ಲಿ ಸೇವಿಸುವುದರಿಂದ ಕಫ ಮತ್ತು ಆಮದು ಅತಿಸಾರಕ್ಕೆ ಒಳ್ಳೆಯದು.

13. 40 ಮಿ.ಲೀ. ಶುಂಠಿ ಕಷಾಯಕ್ಕೆ ಜೇನುತುಪ್ಪ ಸೇರಿಸಿ ಸೇವಿಸುವುದರಿಂದ ಮಂದಾಗ್ನಿ, ಹಸಿವಿಲ್ಲದಿರುವಿಕೆ, ದಮ್ಮು, ಉದರ ರೋಗಕ್ಕೆ ಒಳ್ಳೆಯದು, ಭೋಜನದ ಮೊದಲು ಸೇವಿಸುವುದರಿಂದ ಆಮ್ಲ, ಅಜೀರ್ಣ, ಮೂಲವ್ಯಾಧಿ, ಮಲಬದ್ಧತೆಗೆ ಒಳ್ಳೆಯದು.

14. ಶುಂಠಿ ಪುಡಿ ಮತ್ತು ಅಣಿಲೆಕಾಯಿ ಪುಡಿಯನ್ನು ಬೆಲ್ಲದೊಂದಿಗೆ ಬೆರೆಸಿ ಸೇವಿಸುವುದರಿಂದ ಹಸಿವಿಲ್ಲದಿರುವಿಕೆಗೆ ಒಳ್ಳೆಯದು.

ಎಚ್ಚರಿಕೆ: ಶುಂಠಿಯ ರಸವನ್ನು ಬೇಸಿಗೆ ಕಾಲದಲ್ಲಿ, ಪಿತ್ತದ ಜ್ವರ, ಚರ್ಮವ್ಯಾಧಿಗಳಲ್ಲಿ ಬಳಲುತ್ತಿರುವವರು ಸೇವಿಸಬಾರದು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top