fbpx
ದೇವರು

ದುರ್ಯೋಧನ ಸಾಯೋವಾಗ ಗೋಳಾಡಿಕೊಂಡು ಕೃಷ್ಣ ಮುಂದೆ ಮಾಡಿದ ತಪ್ಪುಗಳು ಒಪ್ಪಕೊಂಡಿದ್ದು ಹೀಗೆ..

ಮಹಾಭಾರತದಲ್ಲಿ ದುರ್ಯೋಧನನು ತಾನು ಮಾಡಿದ  ಮೂರು ತಪ್ಪುಗಳನ್ನು  ಕೋನೆಯುಸಿರು ಬಿಡುವುದಕ್ಕೂ  ಮುಂಚೆ ಒಪ್ಪಿಕೊಂಡ.ಆ ಭಗವಂತನಾದ ಶ್ರೀ ಕೃಷ್ಣನು ಕೂಡ ಇದಕ್ಕೆ ಕಾರಣಕರ್ತನಾಗುತ್ತಾನೆ.

ಮಹಾಭಾರತದಲ್ಲಿ ಭಗವಂತನಾದ ಶ್ರೀ ಕೃಷ್ಣನನ್ನು ಅತಿ ಬುದ್ದಿವಂತ, ರಾಜನೀತಿಜ್ಞ ಎಂದು  ಚಿತ್ರಿಸಲಾಗಿದೆ.ಇವನು ಪಾಂಡವರಿಗೆ ಕುರುಕ್ಷೇತ್ರ ಯುದ್ದದಲ್ಲಿ ಗೆಲ್ಲುವುದಕ್ಕೆ  (ಇವನ ಬುದ್ಧಿವಂತಿಕೆ ಮತ್ತು ರಾಜನೀತಿ ತತ್ವಗಳನ್ನು  ಬಳಸಿಕೊಂಡು)  ಸಹಾಯ ಮಾಡಿದ .ಇದರ ಪಾಲಿತಾಂಶವಾಗಿ ಕೌರವರು ಯಾತನೆ ಪಡಬೇಕಾಯಿತು. ದುರ್ಯೋಧನ ಇನ್ನುಳಿದ ನೂರು ಜನ ತಮ್ಮಂದಿರಿಗೂ ಇವನೇ  ದೊಡ್ಡ ಅಣ್ಣ. ದುರ್ಯೋಧನನು ತನ್ನ ಜೀವನದಲ್ಲಿ ಸಾಯುವುದಕ್ಕೂ ಮುಂಚೆ ತಾನು ಮಾಡಿದ್ದ ಮೂರು ದೊಡ್ಡ ತಪ್ಪುಗಳನ್ನು ಒಪ್ಪಿಕೊಂಡ.ಆದುದರಿಂದಲೇ ಕೊನೆಗೆ ಯುದ್ಧದಲ್ಲಿ  ಕೌರವರು ಎಲ್ಲರೂ ಹತರಾಗಿ  ಪಕ್ಷವನ್ನು ಕಳೆದುಕೊಳ್ಳಲು ಕಾರಣವಾಯಿತು.

ಕೆಲವರು ಕೃಷ್ಣನನ್ನು ಹೊಣೆ ಮಾಡುತ್ತಾರೆ. ಕೃಷ್ಣನು ಯುದ್ಧದಲ್ಲಿ  ಅನ್ಯಾಯದ ಕ್ರಮಗಳನ್ನು ಅಳವಡಿಸಿಕೊಂಡ ಆದುದರಿಂದಲೇ ಕೌರವರು ಸೋಲುವುದಕ್ಕೆ ಇವನೇ ಕಾರಣ ಎಂದೂ ಕೂಡ ಹೇಳುತ್ತಾರೆ.ಆದರೆ ಕೃಷ್ಣನು ತನ್ನದೇ ಆದ ರೀತಿಯಲ್ಲಿ ರಾಜನೀತಿಯ  ವ್ಯವಸ್ಥೆಯನ್ನು ಒಳಗಿಳೊಂಡಿರುವ  ಎರಡು ಸ್ಪಷ್ಟವಾದ ಮುಖ್ಯ ಉದ್ದೇಶಗಳನ್ನು  ಹೊಂದಿದ್ದನು.

1.ಮೊದಲನೆಯದು ಈಗಿರುವ ಕೆಟ್ಟ ವ್ಯವಸ್ಥೆಯನ್ನು ನಾಶಪಡಿಸುವುದು.

2.ಎರಡನೆಯದು  ಹೊಸ ವ್ಯವಸ್ಥೆಯನ್ನು ನಿರ್ಮಾಣ ಮಾಡಿ ಜಾರಿಗೆ ತರುವುದು.

ಕೃಷ್ಣನಿಗೆ  ನೈತಿಕತೆಯ  ಬಗ್ಗೆ  ಕಾಳಜಿ  ಇರಲಿಲ್ಲ ಮತ್ತು ಅದರ ಬಗ್ಗೆ ಸ್ವಲ್ಪವೂ ತಲೆಯನ್ನು ಕೆಡಿಸಿಕೊಳ್ಳಲಿಲ್ಲ.ಅವನ ಉದ್ದೇಶ ಮೊದಲನೇ ಹಂತದ ಯುದ್ಧ ನೆಡೆಯುತ್ತಿರುವಾಗಲೇ ಸಂಪೂರ್ಣವಾಗಿ ಕೌರವರನ್ನು ನಾಶಪಡಿಸುವುದಾಗಿತ್ತು.

ಎರಡನೇ ಹಂತಕ್ಕೆ ಬಂದಾಗ,ಕೃಷ್ಣನು ಯುಧಿಷ್ಠಿರನನ್ನು ರಾಜನನ್ನಾಗಿ ಮಾಡುವ ಚಿಂತನೆ ನೆಡೆಸಿದ್ದನು.ಯಾರು ಅವನ ಆಲೋಚನೆಗಳನ್ನು  ರಾಜಿಮಾಡಿಕೊಳ್ಳುತ್ತಿರಲಿಲ್ಲ. ಎಂತಹ  ಭೀಕರ ಪರಿಸ್ಥಿತಿ ಬಂದರೂ ಕೂಡ ರಾಜನಿಗೆ ಎದುರಿಸುವ ಸಾಮರ್ಥ್ಯ ಮತ್ತು ಶಕ್ತಿ ಇರಬೇಕು.ಅವರ ಮುಂದಿನ ಗುರಿಯನ್ನು ಸಾಧಿಸುವುದಕ್ಕೆ ಒಬ್ಬ ರಾಜ ಮತ್ತು  ರಾಜನನ್ನಾಗಿ ಮಾಡುವವರಿಗೆ  ಆ ದೃಷ್ಟಿ  ಇರಬೇಕು.

ದುರ್ಯೋಧನನ ಪ್ರಕಾರ ಅವನು ಮಾಡಿದ  ಮೂರು ಅತ್ಯಂತ ದೊಡ್ಡ ತಪ್ಪುಗಳು ಮತ್ತು ಆ ಭಗವಂತನಾದ ಶ್ರೀ ಕೃಷ್ಣನು ಅವುಗಳನ್ನು ಏನು ಮಾಡಿದನು?

ಇವನ್ನು ತಿಳಿದ ಮೇಲೆ ನೀವೂ  ನಿಮ್ಮ ಜೀವನದಲ್ಲಿ ಇವುಗಳನ್ನು ಅಳವಡಿಸಿಕೊಳ್ಳುತ್ತೀರಾ  ಎಂದು ನಾವು ಖಚಿತವಾಗಿ ಹೇಳಬಹುದು.

1.ಮೊದಲು ಮಾಡಿದ ತಪ್ಪು-

ದುರ್ಯೋಧನನು ಶ್ರೀ ಕೃಷ್ಣನ ಸೇನೆಯನ್ನು ಸೇರದಿದ್ದಕ್ಕೆ ಕ್ಷಮೆ ಕೇಳಿ ,ವಿಷಾಧಿಸುತ್ತಾನೆ.ಸ್ವತಃ ಭಗವಂತನಾದ ಕೃಷ್ಣನೇ ಆಯ್ಕೆಯನ್ನು  ಮಾಡಿಕೊಳ್ಳುವ ಅವಕಾಶ  ಕೊಟ್ಟಾಗ ದುರ್ಯೋಧನನು  ಬರಲಿಲ್ಲ,ಆದರೆ ಇದರ ಬದಲು   ಕೃಷ್ಣನ ಕಡೆ ಇರುವ ಸತ್ಯವನ್ನು ಅರಿಯಲು ಮತ್ತು  ಕಾಣಲು ನನಗೆ ಸಾಧ್ಯವಾಗಲಿಲ್ಲ ಎಂದು ಹೆಮ್ಮೆಯಿಂದ ಹೇಳಿಕೊಂಡನು.

2.ಎರಡನೇ ತಪ್ಪು-

ಕೃಷ್ಣನ ಚಾತುರ್ಯ ಮತ್ತು  ಕುಶಲತೆಯಿಂದ ಮಾರ್ಪಾಡಾಗಿ, ದುರ್ಯೋಧನನು  ಗಾಂಧಾರಿಯ ಮುಂದೆ ಪೂರ್ತಿ ಬೆತ್ತಲಾಗಿ  ಕಾಣಿಸಿಕೊಳ್ಳಲಿಲ್ಲ. ತನ್ನ ತಾಯಿಯಾದ ಗಾಂಧಾರಿಯು  ತನ್ನಲ್ಲಿರುವ ಶಕ್ತಿಯನ್ನು ವರವಾಗಿ ನೀಡಲು ಕರೆದಾಗ ಅವನು ಸಂಪೂರ್ಣ ಬೆತ್ತಲಾಗಿ ಬರಲಿಲ್ಲ. ಅದರ ಬದಲು ಇವನು ತನ್ನ ಸೊಂಟಕ್ಕೆ ಯಾವುದೋ ಒಂದು ಬಳ್ಳಿಯನ್ನು ಸುತ್ತಿಕೊಂಡು ಬಂದನು.ಇದರ ಫಲಿತಾಂಶವಾಗಿ  ಅವನ ಸೊಂಟವು ಯುದ್ಧದಲ್ಲಿ ಆಕ್ರಮಣಕ್ಕೆ ಒಳಗಾಯಿತು.

3.ಅವನ ಮೂರನೇ ತಪ್ಪು-

ಅವನು  ಯುದ್ಧದಲ್ಲಿ  ಹೋರಾಡುವಾಗ ಅತ್ಯಂತ ದುರ್ಬಲರು ಎನಿಸಿಕೊಳ್ಳುವ ಯೋಧರ ಜೊತೆ  ನಿಂತು ಯುದ್ದ ನೆಡೆಸಿದನು.ನಂತರ ಪರಿಣಾಮವಾಗಿ ಕೌರವರ ಕಡೆ ಇದ್ದ ಪ್ರಮುಖವಾದ ಸಾವಿರಾರು ಯೋಧರು ಹತರಾದರು.

4. ದ್ರೌಪದಿಯ ಮಾನ ಹರಣ ಮಾಡಿದರು.

ಕೃಷ್ಣನ ಪ್ರತಿಕ್ರಿಯೆ.

ಮಹಾಭಾರತದಲ್ಲಿ  ಭಗವಂತನಾದ ಶ್ರೀ ಕೃಷ್ಣನು ಹೀಗೆ ವಾದಿಸುತ್ತಾನೆ.ಪಾಂಡವರು ಕೌರವರನ್ನು ನ್ಯಾಯೋಚಿತವಾದ ಹೋರಾಟದಿಂದ  ಸೋಲಿಸಲು ಸಾಧ್ಯವಾಗುತ್ತಿರಲಿಲ್ಲ. ಪಾಂಡವರನ್ನು ಸೋಲಿಸಿದರೆ ಧರ್ಮವನ್ನೇ ನಾಶಪಡಿಸಿದಂತೆ ಆಗುತ್ತಿತ್ತು ಎಂದು ಕೃಷ್ಣನು  ದುರ್ಯೋಧನನಿಗೆ ಹೇಳಿದನು,ನಿಮ್ಮ ಸೋಲಿಗೆ ದೊಡ್ಡ ಕಾರಣವೇ ಅಧರ್ಮ ಮತ್ತು ನಿಮ್ಮ ಅನ್ಯಾಯದ ವರ್ತನೆ.ನೀವು ಎಲ್ಲಾ ಪುರುಷರ ಸಮ್ಮುಖದಲ್ಲಿ ಮಹಿಳೆಗೆ ಮಾನಭಂಗ, ಅವಮಾನ ಮಾಡಿ ಅಪಖ್ಯಾತಿಯನ್ನು ಗಳಿಸಿದಿರಿ,ಇದು ಬರೀ ಒಂದು ಉದಾಹರಣೆಯಷ್ಟೇ ಈತರಹದ ಎಷ್ಟೋ ಸಾವಿರಾರು ತಪ್ಪುಗಳನ್ನು ನೀವು ಮಾಡಿದ್ದೀರಾ ಎಂದು ಕೃಷ್ಣನು ಹೇಳಿದನು.

ಹೀಗೆ ಅನ್ಯಾಯ, ಅಧರ್ಮದ ಮಾರ್ಗ ಯಾವತ್ತಿದ್ದರೂ ವಿನಾಶದ ಕೂಪಕ್ಕೆ ತಳ್ಳುತ್ತದೆ.ಈ ಕಲಿಯುಗದಲ್ಲಿ ನೆಡೆಯುತ್ತಿರುವುದೆಲ್ಲವೂ ಅನ್ಯಾಯ ಮತ್ತು ಅಧರ್ಮವೇ ಸತ್ಯವಂತರು ಬಹಳ ಕಡಿಮೆ.ಈ ಕಥೆಯನ್ನು ಕೇಳಿದ ಮೇಲಾದರೂ ಎಚ್ಚೆತ್ತುಕೊಳ್ಳಿ ಸ್ನೇಹಿತರೇ. ನ್ಯಾಯ,ಧರ್ಮದ ಮಾರ್ಗಗಳನ್ನು ನಿಮ್ಮ ಜೀವನದಲ್ಲಿಯೂ ಸಹ ಅಳವಡಿಸಿಕೊಳ್ಳಿ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top