fbpx
ತಿಂಡಿ ತೀರ್ಥ

ರುಚಿಯಾದ ಎಣ್ಣೆಗಾಯಿ ಮಾಡುವ ವಿಧಾನ..

ರುಚಿಯಾದ ಎಣ್ಣೆಗಾಯಿ ಮಾಡುವ ವಿಧಾನ :

5-6 ಸಣ್ಣ ಬದನೇಕಾಯಿ
4 ಟೀಸ್ಪೂನ್ ಎಣ್ಣೆ
6-7 ಕರಿ ಬೇವು ಎಲೆಗಳು

ಇಂಗು -ರುಚಿಗೆ
1/2 ಟೀಸ್ಪೂನ್ಅರಿಶಿನದ ಪುಡಿ

ಮಸಾಲೆ ತಯಾರು ಮಾಡುವ ವಿಧಾನ :

4-5 ಬ್ಯಾಡಗಿ ಕೆಂಪು ಮೆಣಸಿನಕಾಯಿಗಳು
3 ಟೀಸ್ಪೂನ್ ತುರಿದ ತೆಂಗಿನಕಾಯಿ
2 ಹಸಿಮೆಣಸುಗಳು
2 ಟೀಸ್ಪೂನ್ ಕಡಲೆಕಾಯಿಗಳು
1/2ಟೀಸ್ಪೂನ್ ಜೀರಿಗೆ
2 ಟೀಸ್ಪೂನ್ ಕಡಲೆ ಬೇಳೆ
1 ಟೀಸ್ಪೂನ್ ಹೆಸರು ಬೇಳೆ
1 ದೊಡ್ಡ ಈರುಳ್ಳಿ
4-5 ಬೆಳ್ಳುಳ್ಳಿ ಎಸಳು
2ಟೀಸ್ಪೂನ್ ಕೊತ್ತುಂಬರಿ
ನಿಂಬೆ ಗಾತ್ರದ ಹುಣಿಸೇಹಣ್ಣು
ಇಂಗು
ರುಚಿಗೆ ಉಪ್ಪು

ಇವೆಲ್ಲವನ್ನೂ ಸೇರಿಸಿ ಸ್ವಲ್ಪ ನೀರು ಬೆರೆಸಿ ಗಟ್ಟಿ ಚಟ್ನಿಯಂತೆ ರುಬ್ಬಿಕೊಳ್ಳಿ.

ವಿಧಾನ:

ಬದನೆಗಳನ್ನು ತೊಳೆದುಕೊಳ್ಳಿ ಮತ್ತು ಅವುಗಳ ತೊಟ್ಟನ್ನು ಹಾಗೆ ಇರಿಸಿ ಪ್ಲಸ್ ರೀತಿಯಲ್ಲಿ ಸೀಳುಗಳನ್ನು ಮಾಡಿಕೊಳ್ಳಿ

ಬದನೆ ಕಾಯಿಯ ಒಳಗೆ ಒಂದು ಚಮಚದಷ್ಟು ಮಸಾಲೆ ಸೇರಿಸಿ ಪಕ್ಕಕ್ಕೆ ಇರಿಸಿ.

ಒಂದು ಬಾಣಲೆಯಲ್ಲಿ ಸ್ವಲ್ಪ ಎಣ್ಣೆಯನ್ನು ಹಾಕಿ , ಕರಿ ಬೇವಿನ ಸೊಪ್ಪು ಸೇರಿಸಿ , ಸ್ವಲ್ಪ ಅರಿಶಿನ ಪುಡಿ ಹಾಕಿ , ಸ್ಟಫ್ ಮಾಡಿಕೊಂಡ ಬದನೆಕಾಯಿಯನ್ನು ಸಹ ಹಾಕಿಕೊಳ್ಳಿ .

ನಂತ್ರ ಉಳಿದ ಮಸಾಲಾ ಸೇರಿಸಿ.

ಅಗತ್ಯವಿದ್ದರೆ ಸ್ವಲ್ಪ ನೀರು ಸೇರಿಸಿ.

7-5 ನಿಮಿಷಗಳ ಕಾಲ ಬೇಯಿಸಿ .

ಇಷ್ಟು ಮಾಡಿದರೆ ಎಣ್ಣೆಗಾಯಿ ರೆಡಿ ..

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top