ನಮ್ಮವರು ಯಾರು ? ಸಮಯ ಬಂದಾಗಲೇ ಗೊತ್ತಾಗುತ್ತೆ ? ವಿಕ್ರಮ ರಾಜ ಬೇತಾಳನ ಕಥೆ..
ವಿಕ್ರಮ ರಾಜ ಬೇತಾಳನ ಕಥೆ ಮುಂದುವರೆಯುತ್ತದೆ..
ಮತ್ತೆ ಮರುದಿನ ನೇತಾಡುತ್ತಿದ್ದ ಬೇತಾಳನ ಶವವನ್ನು ಹೆಗಲ ಮೇಲೆ ಎತ್ತುಕೊಂಡು ವಿಕ್ರಮ ರಾಜ ಸ್ಮಶಾನದ ಕಡೆ ಹೋರಾಟ
ಆಗ ಬೇತಾಳ “ಎಲೈ ರಾಜ ನಿನಗೆ ಮತ್ತೊಂದು ಸವಾಲನ್ನು ಎಸೆಯುತ್ತೇನೆ ಇದರ ಬಗ್ಗೆ ಯೋಚನೆ ಮಾಡಿ ನನಗೆ ಉತ್ತರ ನೀಡು ” ಎಂದಿತು.
ಗುರುವಿನ ಜ್ಞಾನಕ್ಕೆ ಮಸಿ ಕವಿದ ಕಥೆ , ಎಲುಬಿಲ್ಲದ ನಾಲಿಗೆ ಏನು ಬೇಕಾದರೂ ಮಾಡಬಲ್ಲದು ಹೇಗೆ ಮುಂದೆ ಓದಿ ..
ಒಂದಾನೊಂದು ಕಾಲದಲ್ಲಿ ಒಬ್ಬ ಸನ್ಯಾಸಿ ಇದ್ದ ಆತನೋ ಸಕಲ ಸಿದ್ದಿಗಳನ್ನು ಮಾಡಿಕೊಂಡಿದ್ದ ದೇವಾ ಮಾನವ ಎಂದೆನಿಸಿಕೊಂಡಿದ್ದ ತನ್ನ ಬಳಿ ಸಾವಿರದ ಐನೂರು ಶಿಷ್ಯರನ್ನು ಸಹ ಇರಿಸಿಕೊಂಡಿದ್ದ , ಅವರು ಬಹಳ ವಿಧೇಯರಾಗಿ ಇದ್ದರು ತಮ್ಮ ಗುರುಗಳಿಗಾಗಿ ಏನು ಬೇಕಾದರೂ ಮಾಡಲು ತಯಾರಿದ್ದರು.
ಅಲ್ಲಿಯೇ ಪಕ್ಕದ ಹಳ್ಳಿಯಲ್ಲಿದ್ದ ಜ್ಞಾನ ದಾಸೋಹಿ ಎಂಬ ಗುರುಗಳ ಶಿಷ್ಯನಾಗಿ ಇರಲು ಬಯಸಿದ ಅದರ ಸಲುವಾಗಿ ತನ್ನ ಸಾವಿರದ ಐನೂರು ಶಿಷ್ಯರನ್ನು ಕರೆದುಕೊಂಡು ಹೋರಾಟ ,
ಹೇಗೆ ಹೋರಾಟ ನೆಂದರೆ ಹುಲಿಯನ್ನು ತನ್ನ ವಾಹನ ಮಾಡಿಕೊಂಡು , ನಾಗರ ಹಾವನ್ನು ಹಗ್ಗದ ಚಾಟಿ ಮಾಡಿಕೊಂಡು ಹೋರಾಟ.
ಜ್ಞಾನ ದಾಸೋಹಿ ಎಂಬ ಗುರುಗಳು ತಮ್ಮ ಅಗ್ರಹಾರದ ಮಣ್ಣಿನ ದಿಂಬದ ಮೇಲೆ ಧ್ಯಾನ ದಲ್ಲಿ ತಲ್ಲೀನನಾಗಿದ್ದರು ಇಂತಹ ಸಂದರ್ಭದಲ್ಲಿ ಅಲ್ಲಿಂದಲ್ಲೇ ಸನ್ಯಾಸಿ ಬರುವ ಪರಿಯನ್ನು ಕಂಡರು
ತಾವು ಕುಳಿತಿದ್ದ ದಿಂಬಕ್ಕೆ ಆದೇಶ ನೀಡಿ ಸನ್ಯಾಸಿಯ ಬಳಿ ತೆರಳು ಸೂಚಿಸಿದರು ಇಂತಹ ಅದ್ಬುತ ಸನ್ನಿವೇಶವನ್ನು ಕಣ್ಣಾರೆ ಕಂಡ ಸನ್ಯಾಸಿಗೆ ಬಹಳ ಆಶ್ಚರ್ಯವಾಯಿತು .
ಮಾರನೇ ದಿನ ಬೆಳಗ್ಗಿನ ಜಾವ ಶಿಷ್ಯನಾಗಿ ಸ್ವೀಕಾರ ಮಾಡುತ್ತೇನೆ ಆದರೆ ಒಂದು ಷರತ್ತು ವಿಧಿಸುತ್ತೇನೆ ಅದು ಪೂರ್ಣವಾಗಬೇಕು ಎಂದು ಹೇಳಿದರು.
ಶರತ್ತೇನೆಂದರೆ ಸನ್ಯಾಸಿಯ ಬಳಿ ಇರುವ ಸಾವಿರದ ಐನೂರು ಶಿಷ್ಯ ರ ಪೈಕಿ ಒಬ್ಬನ ಪ್ರಾಣವನ್ನು ಗುರು ಕಾಣಿಕೆಯಾಗಿ ನೀಡಬೇಕು ಎಂಬುದಾಗಿರುತ್ತದೆ .
ಈ ವಿಷಯವನ್ನು ಸನ್ಯಾಸಿಯು ತಮ್ಮ ಶಿಷ್ಯಂದಿರಾ ಬಳಿಗೆ ಹೋಗಿ ತಿಳಿಸಿ ‘ನಿಮ್ಮಲ್ಲಿ ಒಬ್ಬರು ನಾಳಿನ ಪ್ರಾಣ ತ್ಯಾಗಕ್ಕೆ ಸಿದ್ದರಾಗಿ’ ಎಂದು ಹೇಳುತ್ತಾನೆ ಇದನ್ನು ಕೇಳಿಸಿಕೊಂಡ ಶಿಷ್ಯರು ಮುಂದೆ ಏನು ಮಾಡುವರು ?
ಎಲ್ಲಾ ಶಿಷ್ಯರು ಒಪ್ಪಿ ಪ್ರಾಣ ತ್ಯಾಗಕ್ಕೆ ಬರುವರೇ ?
ಕೊನೆಗೂ ಸನ್ಯಾಸಿಗೆ ಶಿಷ್ಯರು ಬುದ್ದಿ ಕಲಿಸುವರೇ ?
ಹೊಗಳು ಭಟ್ಟ ಶಿಷ್ಯರು ಉಳಿಯುವರೇ ?
ಉತ್ತರ ಹೇಳು ಇಲ್ಲವಾದರೆ ನಿನ್ನ ತಲೆ ಸಾವಿರ ಹೋಳಾಗಲಿ ಎಂದು ಬೇತಾಳ ವಿಕ್ರಮನ ಬೆನ್ನ ಮೇಲಿಂದ ಹಾರಿ ಮರದ ಮೇಲೆ ಏರಿದ .
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
