fbpx
ಮಾಹಿತಿ

ಜಗತ್ತಿನಲ್ಲಿ ನೋಡಲೇಬೇಕಾದ ತಾಣಗಳ ಪಟ್ಟಿಯಲ್ಲಿ ತಾಜಮಹಲ್ 5 ನೇ ಸ್ಥಾನದಲ್ಲಿ..

ಜಗತ್ತಿನಲ್ಲಿ ನೋಡಲೇಬೇಕಾದ ತಾಣಗಳ ಪಟ್ಟಿಯಲ್ಲಿ ನಮ್ಮ ಭಾರತದ  ತಾಜಮಹಲ್ 5 ನೇ ಸ್ಥಾನದಲ್ಲಿ.

ಜೀವನದಲ್ಲಿ ಪ್ರತಿಯೊಬ್ಬರೂ ತಪ್ಪದೇ ನೋಡಲೇ ಬೇಕಾದ ವಿಶ್ವ ಶ್ರೇಷ್ಠ ತಾಣಗಳಲ್ಲಿ ಪ್ರೇಮಸೌದ ತಾಜಮಹಲ್ ಐದನೇ ಸ್ಥಾನ ಪಡೆದಿದೆ.

ಆಸ್ಟ್ರೇಲಿಯಾ ಮೂಲದ ಪ್ರಮುಖ ಮಾರ್ಗದರ್ಶಿ ಸಂಸ್ಥೆ “ಲೋನ್ ಲಿ ಪ್ಲಾನೆಟ್” ಇತ್ತೀಚೆಗೆ  ಅಲ್ಟಿಮೇಟ್ ಟ್ರಾವೆಲ್ ಲಿಸ್ಟ್ ಎಂಬ ಪುಸ್ತಕ ಪ್ರಕಟಿಸಿದ್ದು,ಇದರಲ್ಲಿ ಪ್ರತಿಯೊಬ್ಬರೂ ನೋಡಲೇ ಬೇಕಾದ ವಿಶ್ವದ 500 ತಾಣಗಳನ್ನು  ಪಟ್ಟಿ ಮಾಡಿದೆ.ಈ ಪೈಕಿ ತಾಜಮಹಲ್ ಮೊದಲ 20 ತಾಣಗಳಲ್ಲಿ ಅದರಲ್ಲೂ ಐದನೇ ಸ್ಥಾನದಲ್ಲಿದೆ.

1.ಮೊದಲನೇ ಸ್ಥಾನ ಕಾಂಬೋಡಿಯಾದ ಆಂಗ್ ಕೋರ್  ದೇವಾಲಯ.

ಕಾಂಬೋಡಿಯಾದ ಪುರಾತನ ಆಂಗ್ ಕೋರ್ ಹಿಂದೂ ದೇವಾಲಯವು ವಿಶ್ವದಲ್ಲಿ ನೋಡಲೇಬೇಕಾದ ತಾಣಗಳಲ್ಲಿ  ಮೊದಲ ಸ್ಥಾನದಲ್ಲಿದೆ. ಕಾಂಬೋಡಿಯಾದ ಆಂಗ್ ಕೋರ್ ಹಿಂದೂ ದೇವಾಲಯಗಳ ಸಮುಚ್ಚಯವಾಗಿದ್ದು,ಸುಮಾರು ಒಂದು ಸಾವಿರ ಮಂದಿರಗಳನ್ನು ಮತ್ತು ಸಮಾಧಿಗಳನ್ನು ಹೊಂದಿದೆ. ಪ್ರತಿವರ್ಷ 20 ಲಕ್ಷ ಪ್ರವಾಸಿಗರು ಇಲ್ಲಿ ಬಂದು ಹೋಗುತ್ತಾರೆ.

2.ಎರಡನೇ ಸ್ಥಾನ -ಹವಳದ ದಂಡೆ.

ಗ್ರೇಟ್ ಬ್ಯಾರಿಯರ್ ರೀಫ್ ಎಂದೇ ಖ್ಯಾತವಾದ ಆಸ್ಟ್ರೇಲಿಯಾದ ಅಪರೂಪದ ಹವಳದ ದಂಡೆ ವೀಕ್ಷಣ ಪಟ್ಟಿಗಳಲ್ಲಿ ಎರಡನೇ ಸ್ಥಾನದಲ್ಲಿದೆ.

3.ಮೂರನೇ ಸ್ಥಾನ-ಮಾಚಪಿಚ್ಚು

ಇದು  ಪರ್ವತಗಳಲ್ಲಿಯೇ ಅತೀ ಎತ್ತರದ ಪರ್ವತ ಕೋಶವಾಗಿದ್ದು ಪೆರು ಎಂಬ ಸ್ಥಳದಲ್ಲಿದ್ದು,ಊರುಂಬಾ ನದಿಯ ಕಣಿವೆಯ ಮೇಲಿದೆ.ಇದನ್ನು 15 ನೇ ಶತಮಾನದಲ್ಲಿ ನಿರ್ಮಿಸಲಾಗಿದೆ ಮತ್ತು ಆನಂತರ ಕೈ ಬಿಡಲಾಯಿತು.ಇದು ಅತ್ಯಾಧುನಿಕ ಶ್ರೇಷ್ಠ ಕಲ್ಲಿನ ಗೋಡೆಗಳಿಂದ  ಹೆಸರುವಾಸಿಯಾಗಿದೆ.ಇದು ಗಾರೆಗಳ ಬಳಕೆ ಇಲ್ಲದೆ,ಕಟ್ಟಡದ ಬ್ಲಾಕಗಳನ್ನು ಖಗೋಳಶಾಸ್ತ್ರದ ಪ್ರಕಾರ ಜೋಡಣೆ ಮಾಡಲಾಗಿದೆ ಮತ್ತು ವಿಹಂಗಮ ನೋಟಕ್ಕೆ ಸಾಕ್ಷಿಯಾಗಿ ಎಲ್ಲರ ಕಣ್ಮನ ಸೆಳೆಯುತ್ತಿದೆ.

4.ನಾಲ್ಕನೇ ಸ್ಥಾನ-ಚೀನಾದ ಮಹಾಗೋಡೆ.

ಇದು ಚೀನಾದ ಇತಿಹಾಸಿಕತೆಯನ್ನು ಸಾರುತ್ತದೆ.ಇದನ್ನು ಕಲ್ಲು,ಇಟ್ಟಿಗೆ,ದಮ್ಮಡಿ ಭೂಮಿ,ಮರದ ಮತ್ತು ಇತರೆ  ಸಾಮಗ್ರಿಗಳಿಂದ ಪೂರ್ವದಿಂದ ಪಶ್ಚಿಮಕ್ಕೂ ಸುತ್ತುವರೆದು ಉತ್ತಾರಾಭಿಮುಖವಾಗಿ ಗಡಿಯುದ್ದಕ್ಕೂ ಕಟ್ಟಲಾಗಿದೆ.ಚೀನಾದ ರಾಜ್ಯಗಳನ್ನು ಮತ್ತು ಸಾಮ್ರಾಜ್ಯವನ್ನು ರಕ್ಷಿಸಲು ವಿವಿಧ ಅಲೆಮಾರಿಗಳ ದಾಳಿಗಳು ಮತ್ತು ಆಕ್ರಮಣಗಳ ವಿರುದ್ಧ ರಕ್ಷಿಸಲು  ಕ್ರಿಸ್ತ ಪೂರ್ವ 7 ನೇ ಶತಮಾನದಲ್ಲಿಯೇ  ಯುರೇಷ್ಯನ್ ಸ್ಟೆಪ್ಪಿಯವರ ಗುಂಪು ಹಲವಾರು ಗೋಡೆಗಳನ್ನು ನಿರ್ಮಿಸಿತ್ತು.

5. ಐದನೇ ಸ್ಥಾನದಲ್ಲಿ-ತಾಜಮಹಲ್

ಇದು ನಮ್ಮ ಭಾರತದ ದೇಶದ ರಾಜಧಾನಿಯಾದ ದೆಹಲಿಯ ಅಗ್ರದಲ್ಲಿದೆ.ತಾಜಮಹಲ್ ಆಗಾಗ್ಗೆ ಅರಮನೆಯ ಕೀರಿಟವೆಂದೇ ಅರ್ಥೈಸಿಕೊಳ್ಳುತ್ತಾರೆ.ಯಮುನಾ ನದಿಯ ದಕ್ಷಿಣ ದಂಡೆಯಲ್ಲಿರುವ ಭಾರತದ ನಗರ ಆಗ್ರದಲ್ಲಿ , ದಂತದ ಬಿಳಿ ಅಮೃತಶಿಲೆಯಲ್ಲಿ ಕಟ್ಟಲಾಗಿದ್ದು.1932 ರಲ್ಲಿ ಮುಘಲ್ ದೊರೆ ,ಚಕ್ರವರ್ತಿ ಶಹಜಹಾನ ( ನಿವೃತ್ತಿ ಪಡೆದರು 1628-1658).ತನ್ನ ಪ್ರೀತಿಯ ಮೆಚ್ಚಿನ ಪತ್ನಿಯ ನೆನಪಿಗೋಸ್ಕರ ಇದನ್ನು ಶಹಜಹಾನ ಕಟ್ಟಿಸಿದನು.ತಾಜಮಹಲನ್ನು ಮುಮ್ತಾಜ್ ಮಹಲ್ ಎಂದು ಕೂಡ ಕರೆಯುತ್ತಾರೆ. ಇದು ಎಲ್ಲರ ಆಕರ್ಷಣೆಗೊಳಗಾಗಿದೆ. ಇದರೊಳಗೆ ಮುಮ್ತಾಜ್ ಸಮಾಧಿ ಮತ್ತು ಅತಿಥಿ ಗೃಹಗಳನ್ನು ಒಳಗೊಂಡು 17  ಹೆಕ್ಟೇರ್ ಅಂದರೆ 42 ಎಕರೆಯ ವಿಸ್ತೀರ್ಣವಾದ  ಸಂಕೀರ್ಣದಲ್ಲಿದ್ದು ಮೂರು ಕಡೆಯಿಂದಲೂ ಕೆತ್ತನೆ ಮಾಡಲಾಗಿರುವ ಸುಂದರ ಗೋಡೆಗಳಿಂದ ಸುತ್ತುವರೆದಿದೆ ಮತ್ತು ಹೊರಗಡೆ ಔಪಚಾರಿಕ ಉದ್ಯಾನವನ್ನೂ ಒಳಗೊಂಡು ಎಲ್ಲರ ಗಮನವನ್ನು ಸೆಳೆಯುತ್ತದೆ.ಹೀಗೆ ನಮ್ಮ ಭಾರತದ  ತಾಜಮಹಲ್ 5ನೇ ಸ್ಥಾನದಲ್ಲಿದೆ.

 

ಪಟ್ಟಿಯಲ್ಲಿರುವ ಮೊದಲ ಹತ್ತು ಪ್ರವಾಸಿ ತಾಣಗಳು.

1.ಆಂಗ್ ಕೋರ್ ದೇವಾಲಯ -ಕಾಂಬೋಡಿಯಾ.

2.ಗ್ರೇಟ್ ಬ್ಯಾರಿಯರ್ ರೀಪ್, ಆಸ್ಟ್ರೇಲಿಯಾ.

3.ಮಾಚುಪಿಚ್ಚು -ಪೆರು.

4.ಚೀನಾದ ಮಹಾಗೋಡೆ (the great wall of chaina).

5.ತಾಜಮಹಲ್, ಅಗ್ರ-ಭಾರತ.

6.ಗ್ರ್ಯಾಂಡ್ ಕ್ಯಾನಿಯನ್ ನ್ಯಾಷನಲ್ ಪಾರ್ಕ್ ,ಅಮೆರಿಕ.

7.ಕೊಲೋಸಿಯಂ,ಇಟಲಿ.

8.ಇಗ್ವಾಜು ಜಲಪಾತ, ಬ್ರೆಜಿಲ್, ಅರ್ಜೆಂಟೈನಾ.

9.ಅಲ್ ಹಂಬ್ರಾ,ಸ್ಪೇನ್.

10.ಆಯಾಸೋಫಿಯಾ,ಟರ್ಕಿ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top