fbpx
ಆರೋಗ್ಯ

ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕಾಮ ಕಸ್ತೂರಿ ಬೀಜ ನೆನೆಸಿದ ನೀರು ಕುಡೀರಿ ಆಮೇಲೆ ಇದು ಮಾಡೋ ಅದ್ಬುತ ಗಮನಿಸಿ..

ಕಾಮ ಕಸ್ತೂರಿಗೆ ‘ಸಬ್ಜಾ’ , ಬೇಸಿಲ್ ಸೀಡ್ಸ್ ಅಥವಾ ‘ತುಕ್‎ಮಾರಿಯಾ ಸೀಡ್ಸ್’ ಎಂಬ ಹೆಸರೂ ಇದೆ. ಸಂಸ್ಕೃತದಲ್ಲಿ ಇದಕ್ಕೆ ಕಠಿಂಜರ ಅಥವ ಪರ್ಣಾಸವೆಂದು ಹೆಸರು ‘ಕಠಿನಂ ಜರಯತಿ’ ಎಂದರೆ ಎಂತಹ ಕಠಿಣ ಮನಸ್ಕರನ್ನೂ ಬದಲಾಯಿಸುವ ವಿಶಿಷ್ಟ ಸುಗಂಧವುಳ್ಳ ಗಿಡವಿದು.

ಈ ಬೀಜ ಬಣ್ಣದಲ್ಲಿ ಕಪ್ಪಾಗಿರುತ್ತದೆ ಇದನ್ನು ಸಿಹಿ ತುಳಸಿ ಸಸಿಗಳಿಂದ ಸಂಗ್ರಹಿಸಲಾಗುತ್ತದೆ. ಬೀಜಗಳನ್ನು ನೀರಿನಲ್ಲಿ ನೆನೆಸಿ ನಂತರ ತೆಗೆದುಕೊಳ್ಳಲಾಗುತ್ತದೆ .

ಅಮೆರಿಕದ ಸಾಂಬಾರ ಪದಾರ್ಥಗಳ ವ್ಯಾಪಾರ ಸಂಘಟನೆ ನೀಡಿರುವ ವರದಿ ಪ್ರಕಾರ ಕಾಮಕಸ್ತೂರಿಯಲ್ಲಿ ಶೇ ೬.೧ರಷ್ಟು ತೇವಾಂಶ, ಶೇ ೧೧.೯ರಷ್ಟು ಪ್ರೋಟಿನ್‌, ಶೇ ೩.೬ರಷ್ಟು ಕೊಬ್ಬು, ಶೇ ೨೦.೫ರಷ್ಟು ನಾರು, ಶೇ ೪೧.೨ರಷ್ಟು ಕಾರ್ಬೋಹೈಡ್ರೇಟ್‌, ಶೇ ೧೬.೭ರಷ್ಟು ಬೂದಿ ಅಂಶಗಳಿವೆ.

ಒಂದುಟೀ ಚಮಚ ಬೀಜಗಳನ್ನು ಒಂದು ಬಟ್ಟಲು ನೀರಿನಲ್ಲಿ ನೆನೆ ಹಾಕುವುದು.ಬೆಳಿಗ್ಗೆ ಈ ಬೀಜಗಳು ಲೋಳಿ ಸರದಂತೆಅಂಟುಅಂಟಾಗಿಉಬ್ಬಿರುತ್ತವೆ. ಇದರಲ್ಲಿ ಸ್ವಲ್ಪಕಲ್ಲು ಸಕ್ಕರೆ ಪುಡಿಯನ್ನು ಸೇರಿಸಿ ಸೇವಿಸುವುದು.ಶರೀರಕ್ಕೆತಂಪು ನೀಡುವುದು.

ಫ್ಲೇವನಾಯ್ಡ್ಸ್ ಅಂಶವನ್ನು ಇದು ಒಳಗೊಂಡಿದ್ದು ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಪ್ರತಿನಿತ್ಯ ಕಾಮಕಸ್ತೂರಿ ಎಲೆಗಳ ರಸವನ್ನು ದೇಹಕ್ಕೆ ಹಚ್ಚಿಕೊಂಡರೆ ದುರ್ಗಂಧ ನಿವಾರಣೆಯಾಗುತ್ತದೆ

ಗಂಟಲು ಬೇನೆ ಕಾಮಕಸ್ತೂರಿಯ ಹಸಿ ಎಲೆಗಳ ರಸವನ್ನು ಹಿಂಡಿ ಬಟ್ಟೆಯಲ್ಲಿ ಶೋಧಿಸಿ, ಜೇನುತುಪ್ಪದಲ್ಲಿ ಬೆರೆಸಿ ನೆಕ್ಕುವುದು.

ಮೂಗಿನಿಂದ ನೀರು ಸುರಿಯುವುದು, ಶೀತ ಮತ್ತು ಜ್ವರಕ್ಕೆ ಕಾಮಕಸ್ತೂರಿ ಎಲೆಗಳ ಕಷಾಯ ಮಾಡಿ 1/4 ಒಳಲೆ ಕಷಾಯಕ್ಕೆ ಸ್ವಲ್ಪಜೇನು ಸೇರಿಸಿ ಕುಡಿಸುವುದು.

ಬೇಸಿಗೆಯಲ್ಲಿ ತಂಪಾದ ಶರಬತ್ತು ಒಂದುಟೀ ಚಮಚ ಬೀಜಗಳನ್ನು ಒಂದು ಬಟ್ಟಲು ನೀರಿನಲ್ಲಿರಾತ್ರಿ ವೇಳೆಯಲ್ಲಿ ನೆನೆಹಾಕುವುದು.ಸ್ವಲ್ಪ ಸಕ್ಕರೆ, ಮಂಜುಗಡ್ಡೆಪುಡಿ ಮತ್ತು ಒಂದು ಚಿಟಿಕೆ ಕೇಸರಿ ಬಣ್ಣ ಹಾಕಿ, ತಂಪಾದ ಪಾನೀಯ ತಯಾರಿಸುವುದು.ಇದನ್ನು ಸೇವಿಸುವುದರಿಂದ ಬಾಯಾರಿಕೆ ಶಮನವಾಗುವುದು.

ರಕ್ತಬೇಧಿಗೆ ಒಂದುಟೀ ಚಮಚ ಕಸ್ತೂರಿ ಬೀಜವನ್ನುಒಂದು ಬಟ್ಟಲುತಣ್ಣೀರಿಗೆ ಬೆರೆಸಿ ನುಣ್ಣಗೆರುಬ್ಬಿ ಶೋಧಿಸಿ ಸೇವಿಸುವುದು.

ಅಜೀರ್ಣ ಮತ್ತು ಹೊಟ್ಟೆಯ ಬಾಧೆಗೆ ಕಾಮಕಸ್ತೂರಿ ಗಿಡದ ಹೂಗಳನ್ನು ನೀರಿನಲ್ಲಿ ಅರೆದು ಶೋಧಿಸಿ, ಸ್ವಲ್ಪಜೇನು ಕೂಡಿಸಿ ಸೇವಿಸುವುದು.ಒಂದು ವೇಳೆಗೆ ಅರ್ಧಟೀ ಚಮಚ ರಸ ಸಾಕಾಗುವುದು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

2 Comments

2 Comments

Leave a Reply

Your email address will not be published. Required fields are marked *

To Top