fbpx
ದೇವರು

ವೃತ್ತಿಪರ ಜೀವನದಲ್ಲಿ ಒಳ್ಳೆಯ ಅದೃಷ್ಟ ಬರಬೇಕೆಂದರೆ ಈ ಫೆಂಗ್ ಶುಯ್ ವಸ್ತುಗಳನ್ನು ಬಳಸಿ..

ಫೆಂಗ್ ಶುಯ್ ವಸ್ತುಗಳು ನಮ್ಮ  ವೃತ್ತಿಪರ  ಜೀವನದಲ್ಲಿ ಒಳ್ಳೆಯ ಅದೃಷ್ಟವನ್ನು ತರುತ್ತವೆ.

ಈ ವಸ್ತುಗಳನ್ನು ಅತ್ಯಂತ ಸುಲಭವಾಗಿ ಸಿಗುವ ಹಾಗೆ ಮಾಡಿರುವುದಕ್ಕೆ ದೇವರಿಗೆ ನಾವು ಕೃತಜ್ಞತೆಯನ್ನು ಸಲ್ಲಿಸಬೇಕು.ಯಾಕೆಂದರೆ ಈ ಐದು ವಸ್ತುಗಳಲ್ಲಿ ಯಾವುದಾದರೂ ಒಂದನ್ನು ನಿಮ್ಮ ಮೇಜಿನ ಮೇಲೆ ಆಥವಾ ಕೆಲಸ ಮಾಡುವ ಕಚೇರಿ ಮತ್ತು ಸ್ಥಳದಲ್ಲಿ ಇಟ್ಟುಕೊಂಡರೆ ನಿಮ್ಮ ಅದೃಷ್ಟವನ್ನು ಹೆಚ್ಚಿಸುತ್ತದೆ ಎಂದು ಅಪಾರ ಜನರು ನಂಬಿದ್ದಾರೆ.

ಫೆಂಗ್ ಶುಯ್ ಇದೊಂದು ಒರಿಎಂಟಲ್ ವಾಸ್ತುಶಿಲ್ಪ ವಿಜ್ಞಾನ. ಇದು ಇಡೀ ವಿಶ್ವದಲ್ಲಿಯೇ ಅಪಾರವಾದ ಜನರ ನಂಬಿಕೆ ಮತ್ತು  ವಿಶ್ವಾಸವನ್ನು   ಗಳಿಸಿದೆ.ಇದು ಜನರ ಜೀವನವನ್ನು  ವೃದ್ಧಿಸುವುದರಲ್ಲಿ ಹೆಸರುವಾಸಿಯಾಗಿದ್ದು, ಜನರಿಗೆ ಅದೃಷ್ಟವನ್ನು ತಂದುಕೊಟ್ಟು ಅದನ್ನು ಇನ್ನೂ ಹೆಚ್ಚಿಸುವಂತೆ ಆಗುವಹಾಗೆ  ಮಾಡುತ್ತದೆ ಎಂದು ಎಲ್ಲರೂ ನಂಬಿದ್ದಾರೆ. ಇಂದಿನ ಯುವಜನತೆಯಲ್ಲಿ ವೃತ್ತಿ  ಜೀವನ ದೊಡ್ಡ ಪ್ರಾಮುಖ್ಯತೆಯನ್ನು ಹೊಂದಿದ್ದು , ಇವತ್ತು ನಾವು ನಿಮಗೆ ಕೆಲವು ಸರಳವಾದ  ಫೆಂಗ್ ಶುಯ್ ವಸ್ತುಗಳನ್ನು ತೋರಿಸುತ್ತಿದ್ದೇವೆ ಅವು ನಾವಿರುವ ಸ್ಥಳದಿಂದಲೇ ನಮ್ಮ ಅದೃಷ್ಟವನ್ನು ಇಮ್ಮಡಿಗೊಳಿಸುತ್ತವೆ.

ಈ ವಸ್ತುಗಳು ಹೇಗೆ ಪರಿಣಾಮ  ಬೀರುತ್ತವೆ ?ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತದೆ.

ಈ ವಸ್ತುಗಳು ಶಕ್ತಿ ಮತ್ತು ಐಷಾರಾಮಿ ಜೀವನ,ಧನಾತ್ಮಕತೆಯ ಸಂಕೇತವಾಗಿದೆ.ಇವುಗಳನ್ನು ನಿಮ್ಮ ಮೇಜಿನಲ್ಲಿ  ಅಥವಾ ಕೆಲಸ ಮಾಡುವ ಸ್ಥಳ, ಕಚೇರಿಗಳಲ್ಲಿ, ನಿಮ್ಮ ದೃಷ್ಟಿ ಸದಾ ಇವುಗಳ ಮೇಲೆ ಬೀಳುವಂತೆ ನೋಡಿಕೊಳ್ಳಬೇಕು( ಅಂದರೆ ನಿಮ್ಮ ಕಣ್ಣಿಗೆ ಕಾಣಿಸಬೇಕು ಯಾವಾಗಲೂ ) ಅಂತಹ ಸ್ಥಳದಲ್ಲಿ ಇರಿಸಬೇಕು.ಅವುಗಳ ಮೇಲೆ  ಅಗಾಗ್ಗೆ ಭಾವನೆಗಳು ನಮ್ಮ ಮೆದುಳಿನಲ್ಲಿ  ಮೂಡುತ್ತವೆ. ನಮ್ಮ ಯೋಚನಾ ಶಕ್ತಿಯನ್ನು ಧನಾತ್ಮಕತೆಯ ದಿಕ್ಕಿನ ಕಡೆಗೆ ಕರೆದುಕೊಂಡು ಹೋಗುತ್ತವೆ.ನಿಮಗೆ ಗೊತ್ತಿಲದೇ ,ಅರಿವಿಗೆ ಬಾರದ ರೀತಿಯಲ್ಲಿ ಕೆಲಸ ಮಾಡುತ್ತವೆ.

ಆದರೂ, ನೀವು ಸುಮ್ಮನೆ ಮೇಜಿನ ಮೇಲೆ ಇಟ್ಟುಕೊಂಡರೆ ಸಾಕಾಗುವುದಿಲ್ಲ, ಅವುಗಳ ಅರ್ಥವನ್ನು  ಮತ್ತು  ಪ್ರಾಮುಖ್ಯತೆಯನ್ನು  ತಿಳಿಯದೇ ಇಟ್ಟುಕೊಂಡರೆ ಅವು ಅಷ್ಟು ಲಾಭವನ್ನು ತಂದು ಕೊಡುವುದಿಲ್ಲ.ಯಾಕೆಂದರೆ ನೀವು ಇದರ ಬಗ್ಗೆ ಏನು ಗೊತ್ತಿಲದೇ ಅಲ್ಪ ಸ್ವಲ್ಪ ಯಾರೋ ಹೇಳಿದ್ದನ್ನು ತಿಳಿದು ಅವುಗಳನ್ನು ಸುಮ್ಮನೆ ತೆಗೆದುಕೊಂಡು ಹೋಗಿ ಇಟ್ಟುಕೊಳ್ಳುತ್ತೀರಿ. ಹೀಗೆ ಮಾಡಿದರೆ ಅವುಗಳ ಬಗ್ಗೆ ಏನೂ ತಿಳಿಯದ ಕಾರಣ ಅವುಗಳ ಶಕ್ತಿಯ ಬಗ್ಗೆ ನಮಗೆ ಯಾವ ಜ್ಞಾವು ಇಲ್ಲದ ಕಾರಣ ನಾವು ಇವುಗಳ ಬಗ್ಗೆ ಅಷ್ಟಾಗಿ  ಯೋಚನೆ ಮಾಡುವುದಿಲ್ಲ. ಅದೇ ತಿಳಿದು ಕೊಂಡರೆ ನಮಗೆ ಗೊತ್ತಾಗುತ್ತದೆ  ಯಾವ ವಸ್ತುವಿನಿಂದ ಏನು ಲಾಭ ,ಯಾಕೆ ಇಟ್ಕೋಬೇಕು?ಅಂತ ಆವಾಗ ನಮ್ಮ ಮನಸ್ಸಿನಲ್ಲಿ ಈ ವಸ್ತುಗಳು ಧನಾತ್ಮಕ ಶಕ್ತಿಯನ್ನು ತುಂಬಿ ಧನಾತ್ಮಕತೆಯ ಕಡೆಗೆ ನಮ್ಮ ಮನಸ್ಸನ್ನು  ಕೊಂಡೊಯ್ಯುತ್ತವೆ.

ಆದ್ದರಿಂದಲೇ ಇಂದು ನಾವು ನಿಮಗೆ ಇದರ ಬಗ್ಗೆ ಅರಿವು ಮೂಡಿಸಲು ನಿರ್ಧಾರ ಮಾಡಿದ್ದೇವೆ.ವಿಶೇಷ ಮತ್ತು ಬಹಳ ಸಾಮಾನ್ಯ ಎನಿಸುವ ಫೆಂಗ್ ಶುಯ್ ವಸ್ತುಗಳು ನಮ್ಮ  ವೃತ್ತಿಪರ  ಜೀವನದಲ್ಲಿ ಒಳ್ಳೆಯ ಅದೃಷ್ಟವನ್ನು ತರುತ್ತವೆ.

1.ಚೀನಾದ ನಾಣ್ಯಗಳು.

ಈ ಫೆಂಗ್ ಶುಯ್ ನಾಣ್ಯಗಳನ್ನು ಇಟ್ಟುಕೊಳ್ಳುವುದರ ಮಹತ್ವ ಏನೆಂದರೆ ನಿಮಗೆ  ಹಣದ ಕೊರತೆ ಜೀವನದಲ್ಲಿ  ಎಂದಿಗೂ  ಎದುರಾಗುವುದಿಲ್ಲ. ನಿಮಗೆ ಬೇಕಾದರೆ,ನೀವು ಇದನ್ನು ನಿಮ್ಮ ಕೈ ಚೀಲದಲ್ಲಿ ಅಂದರೆ ಪರ್ಸ್ನಲ್ಲಿ ಇಟ್ಟುಕೊಳ್ಳಬಹುದು.ತಡವಾಗಿಯಾದರೂ ಅವು ಈಗ ಎಲ್ಲೆಡೆ ಮಾರುಕಟ್ಟೆಗೆ ಬಂದಿವೆ.ನಾವು ಬೀಗವನ್ನು ತೆರೆಯುವ ಕೀಲಿ ಕೈಗಳಾಗಿ ಹಾಕಿಕೊಳ್ಳುವ ಕೀ ಚೈನ್ಗಳ ರೂಪದಲ್ಲಿ ಬಂದಿವೆ.ಆದ್ದರಿಂದ ಇವುಗಳನ್ನು ಹುಡುಕುವುದರಲ್ಲಿ  ಯಾವುದೇ ತೊಂದರೆಯಿಲ್ಲ.

2.ಅದೃಷ್ಟದ ಬೆಕ್ಕು.

ಕ್ಷುಲ್ಲಕ ಬೆಕ್ಕು.

ಈ ಬೆಕ್ಕಿಗೆ ಜಪಾನೀಯರು ಇಟ್ಟ  ಹೆಸರು  ‘ಮನೆಕಿ ನೋಕೋ’ ಅಂದರೆ ಇದರ ಅರ್ಥ ಕ್ಷುಲ್ಲಕ ಬೆಕ್ಕು ಎಂದು.ಇದನ್ನು ಸಾಮಾನ್ಯವಾಗಿ ವ್ಯಾಪಾರ ಮತ್ತು ವ್ಯವಹಾರ ಮಾಡುವ ಸ್ಥಳದಲ್ಲಿ ಬಳಸುತ್ತಾರೆ.  ಅಲ್ಲಿ  ಇದನ್ನು ಕ್ಷುಲ್ಲಕ (ಹೊರಗೆ ಬಾ ಎಂದು ಅರ್ಥ)  ಎಂದು ಗ್ರಾಹಕರಿಗೆ ಎಡ ಪಾದದಿಂದ ಕರೆದು , ಹಣವನ್ನು ಬಲ ಪಾದದಿಂದ ಆಹ್ವಾನಿಸುತ್ತದೆ. ಇದರ ಬಂಗಾರದ  ಮೈ ಬಣ್ಣ ಸಂಪತ್ತು ಮತ್ತು ಸಮೃದ್ಧಿಯನ್ನು ಸೂಚಿಸುತ್ತದೆ.

3.ಡ್ರ್ಯಾಗನ್.

ಡ್ರ್ಯಾಗನ್ ಶಕ್ತಿ ಮತ್ತು ಸಾಮರ್ಥ್ಯದ ಸಂಕೇತವನ್ನು ಸೂಚಿಸುತ್ತದೆ. ಆದರೆ ಬಹಳ ಮುಖ್ಯವಾಗಿ ಇದು ಕೆಟ್ಟ ಶಕ್ತಿಗಳಿಂದ  ಜೀವನದಲ್ಲಿ ನಮ್ಮನ್ನು ರಕ್ಷಿಸುತ್ತದೆ.ಇವುಗಳನ್ನು ಇಟ್ಟುಕೊಳ್ಳುವುದು ನಮಗೆ ಲಾಭಕರ ಮನೆಯಲ್ಲಿ ಅಥವಾ ಕೆಲಸ ಮಾಡುವ ಕಚೇರಿ ಸ್ಥಳದಲ್ಲಿ ಪೂರ್ವ ದಿಕ್ಕಿನಲ್ಲಿ ಇರಿಸಿ.

4.ನಗುವ ಬುದ್ದ.

ಇದು ಮಾನಸಿಕ ಒತ್ತಡ  ಅಥವಾ ಕೆಲಸದ ಒತ್ತಡದ ಯೋಚನೆಯನ್ನು ದೂರ ತಳ್ಳುತ್ತದೆ. ಜೀವನವನ್ನು ನಗುವಿನಿಂದ ತುಂಬುತ್ತದೆ. ಬುದ್ಧನ ನಗುವೇ ಯಶಸ್ಸಿನ ಸೂತ್ರವಾಗಿದೆ.ನೀವು ಮಾಡುವ ಪ್ರತೀ ಸಹಾಸೋದ್ಯಮ ಕೆಲಸಗಳಲ್ಲಿಯೂ ಯಶಸ್ಸನ್ನು ತಂದುಕೊಡುತ್ತದೆ.

ಆಶ್ಚರ್ಯವೇನು ಅನಿಸುವುದಿಲ್ಲ,ಇದು ಎಲ್ಲರಿಗೂ ಸಾಮಾನ್ಯವಾಗಿ ತಿಳಿದಿರುವ ವಿಷಯವೇ ಮತ್ತು ಸುಲಭವಾಗಿ ಸಿಗುವ ಫೆಂಗ್ ಶುಯ್ ವಸ್ತುವಾಗಿದ್ದು, ಅದು ನಗುವ ಬುದ್ದವೇ ಆಗಿದೆ.

5.ಅದೃಷ್ಟದ ಬಿದಿರು.

ಇದು ಆರೋಗ್ಯ, ಸಮೃದ್ದಿ ಮತ್ತು ಅದೃಷ್ಟವನ್ನು  ಆಕರ್ಷಿಸುತ್ತದೆ . ಇದಕ್ಕೆ  ಮಣ್ಣಿನ ಅವಶ್ಯಕತೆಯಿಲ್ಲ,ಸ್ವಲ್ಪ ನೀರು ಹಾಕಿದರೆ ಸಾಕು ,ಹಸಿರು ಬಣ್ಣವನ್ನು ಹೊಂದಿದ್ದು ,ಇದು ನಮ್ಮ ಇಂದ್ರಿಯಗಳನ್ನು ಶಮನಗೊಳಿಸಿ ವಿಶ್ರಾಂತಿ ಪಡೆಯಲು ಸಹಕರಿಸುತ್ತದೆ.ಈ ಕಾರಣದಿಂದಲೇ ನಿಮಗೆ ಕೆಲಸದ ವೇಳೆಯಲ್ಲಿ ಉತ್ತಮ ನಿರ್ದಾರವನ್ನು ತೆಗೆದುಕೊಳ್ಳಲು ನೆರವು ಮಾಡುತ್ತದೆ.

ನಿಜ ಹೇಳಬೇಕೆಂದರೆ ನೀವು ಯಾರಿಗಾದರೂ ಇದನ್ನು ಉಡುಗೊರೆಯ ರೀತಿಯಲ್ಲಾದರೂ ಕೊಡಬಹುದು ಒಳ್ಳೆಯದಾಗುತ್ತದೆ.

6.ಮಂಗಳಕರ ಅಂಶಗಳು.

ಇವೆಲ್ಲವುಗಳ ಹಿಂದೆ,ಯಾವುದಾದರೂ ಒಂದು ವಸ್ತು ಅದು ಫೆಂಗ್ ಶುಯ್ ಅನ್ನು ಪ್ರತಿನಿಧಿಸುತ್ತದೆ ಎಂದರೆ ಅವು

ಉದಾಹರಣೆಗೆ: ಬೆಂಕಿ , ಭೂಮಿ,ಕಬ್ಬಿಣ , ನೀರು, ಮರ ಇವುಗಳನ್ನು ಮಂಗಳಕರ ಎಂದು ಪರಿಗಣಿಸಲಾಗಿದೆ. ಇವುಗಳನ್ನು ಕೆಲಸ ಮಾಡುವ ಸ್ಥಳಗಳಲ್ಲಿ ಒಳ್ಳೆಯ ಅದೃಷ್ಟವನ್ನು ತಂದುಕೊಡುವ ಸೂಚಕಗಳಂತೆ  ಬಳಸಬಹುದು.

ನೀವೆಲ್ಲರೂ ಇವುಗಳನ್ನು ಬಳಸಿ ನೋಡಿ, ನಿಮ್ಮ ಅದೃಷ್ಟವೂ ಬದಲಾಗಬಹುದು .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top