fbpx
ದೇವರು

ಬ್ರಹ್ಮಚಾರಿ ಹನುಮಂತನ ಹೆಂಡತಿಯ ಪರಿಚಯ ಮಾಡುತ್ತೇವೆ ಬನ್ನಿ!!!

ಹನುಮಂತನ ಶ್ರೀಮತಿಯ ಪರಿಚಯ ಮಾಡುತ್ತೇವೆ ಬನ್ನಿ!!!

ಇದೇನಪ್ಪಾ!!! ಅಂತ ಆಶ್ಚರ್ಯಪಡುತ್ತಿದ್ದೀರಾ? ಆಜನ್ಮ ಬ್ರಹ್ಮಚಾರಿಯಾದ ಹನುಮನಿಗೆ ಹೆಂಡತಿ ಎಲ್ಲಿ ಬಂದಳು?? ಅಷ್ಟೇ ಅಲ್ಲ, ಅವನೊಬ್ಬ ಮಗನ ತಂದೆಯೂ ಹೌದು. ಕೆಲವರಿಗೆ ತಿಳಿದಿರಬಹುದು. ಹನುಮನಿಗೆ ಮಕರಧ್ವಜ ಎಂಬ ಪುತ್ರನೂ ಇದ್ದಾನೆ. (ಇವನು ಹನುಮನ ಬೆವರನ್ನು ನುಂಗಿದ, ಮೀನಿನ ಗರ್ಭದಲ್ಲಿ ಜನಿಸುತ್ತಾನೆ; ಲಂಕಾದಹನವಾದ ಮೇಲೆ ತಂಪು ಮಾಡಿಕೊಳ್ಳಲು ಲಂಕೆಯ ಸಮುದ್ರದಲ್ಲಿ ಹನುಮ ಮುಳುಗೇಳುತ್ತಾನೆ, ಆಗ ಈ ಘಟನೆ ನಡೆಯುತ್ತದೆ). ಆದರೆ ಹನುಮನ ಹೆಂಡತಿ ಯಾರು, ಹೇಗೆ ಇವರ ವಿವಾಹವಾಯಿತು? ಈ ಮಾಹಿತಿ ನಮಗೆ ಪರಾಶರ ಸಂಹಿತೆಯಲ್ಲಿ ಲಭ್ಯವಿದೆ.

ಮಹರ್ಷಿ ಪರಾಶರರ ಪ್ರಕಾರ ಹನುಮನು ಭಗವಾನ್ ಸೂರ್ಯನನ್ನು ತನ್ನ ಗುರುವೆಂದು ಆರಾಧಿಸುತ್ತಿದ್ದನು. ಸೂರ್ಯನಿಂದ ವಿದ್ಯೆಯನ್ನು ಕಲಿತು ಸಕಲವೇದಪಾರಂಗತನಾದನು. ಆದರೆ ನವ ವ್ಯಾಕರಣಗಳನ್ನು ಮಾತ್ರ ಕಲಿಯಲಾಗಲಿಲ್ಲ. ಏಕೆಂದರೆ ಅದಕ್ಕೊಂದು ನಿಬಂಧನೆ ಇತ್ತು. ಅದೇನೆಂದರೆ ನವ ವ್ಯಾಕರಣಗಳನ್ನು ಸಿದ್ಧಿಸಿಕೊಳ್ಳಲು ಇಚ್ಛಿಸುವವನು ಗೃಹಸ್ಥನಾಗಬೇಕೆಂಬುದು. ಆದ್ದರಿಂದ ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು ಹಾಗೂ ಮಹೇಶ್ವರರು ಸೂರ್ಯನಲ್ಲಿಗೆ ಹೋಗಿ ಅವನ ಕಿರಣಗಳ ಪ್ರಭೆಯಿಂದ ಸುಂದರ ಕನ್ಯೆಯೊಬ್ಬಳನ್ನು ಸೃಷ್ಟಿ ಮಾಡಿದರು. ಆಕೆಯೇ ಸುವರ್ಚಲಾ. ಅವಳು ಅಯೋನಿಜೆ.(ಅಂದರೆ ಯೋನಿಯಿಂದ ಜನಿಸಿದವಳಲ್ಲ) ಹನುಮಂತನನ್ನು ಮದುವೆಗೆ ಒಪ್ಪಿಸುವುದು ಅಷ್ಟು ಸುಲಭದ ಮಾತಾಗಿರಲಿಲ್ಲ.

ಸೂರ್ಯನು ತನಗೆ ಗುರುದಕ್ಷಿಣೆಯಾಗಿ ನೀನು ಸುವರ್ಚಲೆಯನ್ನು ವರಿಸಬೇಕೆಂದು ಆಜ್ಞಾಪಿಸಿದನು. ಈ ಪ್ರಸ್ತಾವನೆ ಕೇಳಿ ಹನುಮಂತ ಗಲಿಬಿಲಿಗೊಳ್ಳುತ್ತಾನೆ; ಅವನು ಮೊದಲು ಒಪ್ಪಿಗೆ ನೀಡುವುದಿಲ್ಲ. ಆಗ ಸೂರ್ಯನು ಈ ಮದುವೆಯು ಲೋಕ ಕಲ್ಯಾಣಾರ್ಥವೆಂದೂ, ಇದರಿಂದ ಹನುಮನ ಬ್ರಹ್ಮಚರ್ಯಕ್ಕೆ ಧಕ್ಕೆ ಬಾರದೆಂದೂ ತಿಳಿಸುತ್ತಾನೆ. ಸುವರ್ಚಲೆಯನ್ನು ಮದುವೆಯಾದರೂ ಹನುಮಂತನು ಬ್ರಹ್ಮಚಾರಿಯೇ ಆಗಿರುವಂತೆ ಸೂರ್ಯ ವರ ನೀಡುತ್ತಾನೆ. ಇದಕ್ಕೆ ಒಪ್ಪಿಗೆ ಸೂಚಿಸಿದ ಹನುಮ ಸುವರ್ಚಲೆಯನ್ನು ವರಿಸುತ್ತಾನೆ. ವಿವಾಹದ ನಂತರ ಸುವರ್ಚಲೆಯು ತಪಸ್ಸನ್ನು ಆಚರಿಸಲು ಹೊರಡುತ್ತಾಳೆ. ಇವಳನ್ನು ದಕ್ಷಿಣ ಭಾರತದಲ್ಲಿ ಸುವರ್ಚಲಾದೇವಿಯೆಂದು ಆರಾಧಿಸುತ್ತಾರೆ. ಈಕೆಯನ್ನು ಆರಾಧಿಸಿದರೆ ಸಾಂಸಾರಿಕ ಜೀವನ ಸುಖಕರವಾಗುತ್ತದೆ ಎಂಬ ನಂಬಿಕೆಯಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top