ನಿಮ್ಮ ವಿವಾಹಿತ ಜೀವನದಲ್ಲಿ ನೀವು ಅನೇಕ ತೊಂದರೆ ಮತ್ತು ಸಮಸ್ಯೆಗಳನ್ನು ಎದುರಿಸುತ್ತಿದ್ದೇರೆ ? ಹಾಗಾದರೆ ನೀವು ಈ ಸರಳವಾದ ವಾಸ್ತು ಸಲಹೆಗಳನ್ನು ನಿಮ್ಮ ಮನೆಯ ಮಲಗುವ ಕೋಣೆಯಲ್ಲಿ ಅಳವಡಿಸಿಕೊಂಡು,ಸುಖ,ಸಂತೋಷದಿಂದ ಕೂಡಿರುವ ಜೀವನವನ್ನು ನೆಡೆಸಿರಿ.
ಯಾವುದೇ ಮನೆಯಲ್ಲಿರುವ ಶಕ್ತಿ ಆ ಮನೆಯಲ್ಲಿ ವಾಸಿಸುವವರ ಮೇಲೆ ನೇರವಾಗಿ ಪರಿಣಾಮವನ್ನು ಬೀರುತ್ತದೆ.
ಅದರಲ್ಲಿಯೂ ಹೊಸದಾಗಿ ಮದುವೆಯಾಗಿರುವ ಪತಿ ಪತ್ನಿಯ ಮೇಲೆ ಇದು ಮುಖ್ಯವಾಗಿ ಪರಿಣಾಮ ಬೀರುತ್ತದೆ.ಅಂತಹ ನಕಾರಾತ್ಮಕ ಶಕ್ತಿಯನ್ನು ಹೋಗಲಾಡಿಸಿ ಧನಾತ್ಮಕವನ್ನಾಗಿ ಪರಿವರ್ತನೆ ಗೊಳಿಸಲು ಮತ್ತು ಗಂಡ ಹೆಂಡತಿಯ ಸಂಭಂದ ಗಟ್ಟಿಗೊಳಿಸಲು ಕೆಲವು ವಾಸ್ತು ಸಲಹೆಗಳು ಸಹಾಯಕ್ಕೆ ಬರುತ್ತವೆ.ಯಾರಾದರೂ ಸರಿ ನೀವು ಮಲಗುವ ಕೋಣೆಯನ್ನು ವಾಸ್ತು ಪ್ರಕಾರ ಅಳವಡಿಸಿಕೊಂಡರೆ ಒಳ್ಳೆಯದು.
ಮದುವೆಯಾದ ನಂತರ ನಿಮ್ಮ ವೈವಾಹಿಕ ಜೀವನವು ಸುಖ,ಸಂತೋಷ, ನೆಮ್ಮದಿಯಿಂದ ಕೂಡಿರಬೇಕೆಂದರೆ,ಮಲಗುವ ಕೋಣೆಯನ್ನು ವಾಸ್ತುವಿನ ಪ್ರಕಾರ ನಿರ್ಮಿಸಿ ಕೊಳ್ಳಬೇಕು. ವೈವಾಹಿಕ ಜೀವನವನ್ನು ಅನಂದದಾಯಕವಾಗಿ ಇರಿಸಲು, ಈ ವಾಸ್ತು ತತ್ವಗಳನ್ನು ಅಳವಡಿಸಿಕೊಂಡರೆ ಅವು ನಿಮ್ಮ ಜೀವನದಲ್ಲಿ ಸಂತೋಷವಾಗಿರಲು ಸಹಾಯ ಮಾಡುತ್ತವೆ.
ಈ ಕೆಳಗೆ ನೀಡಲಾಗಿರುವ ಅಷ್ಟು ಸರಳವಾದ ಸಲಹೆಗಳನ್ನು ಅನುಸರಿಸಿ ಸುಖ-ಸಂತೋಷ ಭರಿತ ವೈವಾಹಿಕ ಜೀವನವನ್ನು ನೆಡೆಸುವಲ್ಲಿ ಯಶಸ್ವಿಯಾಗಿ ,ಸಂಪೂರ್ಣವಾಗಿ ನಿಮ್ಮ ಜೀವನವನ್ನು ರೂಪಿಸಿ ಧನಾತ್ಮಕತೆಯನ್ನು ತುಂಬಿರುವ ಮಾರ್ಗದಲ್ಲಿ ಕೊಂಡೊಯ್ಯುತ್ತದೆ.
1.ನೀವು ಮಲಗುವ ಕೋಣೆಯಲ್ಲಿ ವಸ್ತುಗಳನ್ನು ಸಂಗ್ರಹಿಸಿ ಇಟ್ಟುಕೊಳ್ಳವ ಮಾದರಿಯಲ್ಲಿ ಇಟ್ಟುಕೊಳ್ಳಬೇಡಿ,ವಿಶಾಲವಾಗಿದ್ದರೆ ಉತ್ತಮ.
2.ಮಲಗುವ ಕೋಣೆಯು ನಿಮ್ಮ ಮನೆಯ ಉತ್ತರ-ಪೂರ್ವ ದಿಕ್ಕಿನಲ್ಲಿದ್ದರೆ ಗಂಡ-ಹೆಂಡತಿಯ ನಡುವೆ ಆಗಾಗ್ಗೆ ಜಗಳ,ಮನಸ್ತಾಪ ಮತ್ತು ಕೋಪದಿಂದ ಕೂಡಿರುತ್ತದೆ. ಆದ್ದರಿಂದ ಮಲಗುವ ಕೋಣೆಯನ್ನು ಉತ್ತರ-ಪೂರ್ವ ದಿಕ್ಕಿನಲ್ಲಿ ನಿರ್ಮಾಣ ಮಾಡಿಸಿ ಕೊಳ್ಳಬೇಡಿ.
3.ತೂಗಾಡುವ ಮತ್ತು ನೇತಾಡುವ ಕನ್ನಡಿಯನ್ನು ಎಂದಿಗೂ ನೀವು ಮಲಗುವ ಕೋಣೆಯಲ್ಲಿ ಹಾಕಬಾರದು.ನಿಮ್ಮ ಹಾಸಿಗೆಯ ಎದುರಿಗೆ ನೇರವಾಗಿ ಕನ್ನಡಿ ಇದ್ದರೆ ಇದರ ಕಾರಣದಿಂದ ನಿಮ್ಮಿಬ್ಬರ ಮದ್ಯೆ ಮೂರನೆಯವರ ಪ್ರವೇಶ ಆಗಿ ನಿಮ್ಮ ಸಂಭಂದದಲ್ಲಿ ಬಿರುಕು ಉಂಟಾಗುವ ಸಾಧ್ಯತೆ ಹೆಚ್ಚಿದ್ದು ,ವೈವಾಹಿಕ ಜೀವನದಲ್ಲಿ ಸುಖ, ಸಂತೋಷ ಇಲ್ಲದಂತಹ ಸ್ಥಿತಿ ಎದುರಾಗುತ್ತದೆ.
4.ಮಲಗುವ ಕೋಣೆಯಲ್ಲಿನ ಕಿಟಕಿಗಳು ಬೇರೆ ಪಕ್ಕದ ಕೋಣೆಗೆ ಹೊಂದಿಕೊಂಡಿರಬಾರದು ಹಾಗೆ ನಿರ್ಮಾಣ ಕೂಡ ಮಾಡಬಾರದು.ಗಂಡ-ಹೆಂಡತಿಯ ನಡುವಿನ ಮಾತಿನ ಸಂಭಾಷಣೆ ಅವರಿಬ್ಬರಲ್ಲಿಯೇ ಇರಬೇಕು.ಆಚೆ ಮೂರನೇಯ ವ್ಯಕ್ತಿಗೆ ತಿಳಿಯಬಾರದು,ಹಾಗೆ ಹೇಳಿಕೊಳ್ಳಬಾರದು ಕೂಡ.
5.ನೀವು ಮಲಗುವ ಕೋಣೆಯಲ್ಲಿ ತೆಳು ಮತ್ತು ಹಿತವಾದ ಬಣ್ಣಗಳನ್ನು ಬಳಸಿ ಅಲಂಕಾರ ಗೊಳಿಸಿ.ಗೋಡೆಗಳನ್ನು ಆಹ್ಲಾದಕರ ಮತ್ತು ಆಕರ್ಷಿತವಾದ ಚಿತ್ರಗಳ ಆಕೃತಿಗಳೊಂದಿಗೆ ಅಲಂಕರಿಸಿ.ಆದರೆ ಅವುಗಳ ಸಂಖ್ಯೆ ಒಂದು ಅಥವಾ ಎರಡು ಇರಬೇಕು ಜಾಸ್ತಿ ಬೇಡ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
