ಗುರು ಆಚಾರ್ಯ ದ್ರೋಣರಿಂದ ವಿದ್ಯಾಭ್ಯಾಸ.
ಪಾಂಡವರ ವಿದ್ಯಾಭ್ಯಾಸ.
ಭೀಷ್ಮನು ಇವರ ವಿದ್ಯಾಭ್ಯಾಸದ ಪ್ರಗತಿಯನ್ನು ನೋಡಿ ಇನ್ನೂ ಹೆಚ್ಚಿನ ವಿದ್ಯೆ ಕಲಿಸಲು ಯೋಗ್ಯರಾದ ಆಚಾರ್ಯರಿಗೆ ಶೋಧ ನೆಡೆಸಿದನು.
ಭಾರದ್ವಜನೆಂಬ ಋಷಿಯ ಆಶ್ರಮದಲ್ಲಿ ಪಾಂಚಾಲ ದೇಶದ ರಾಜಕುಮಾರ ದ್ರುಪದನು ಅಭ್ಯಾಸ ಮಾಡುತ್ತಿದ್ದನು.ಭಾರದ್ವಜರ ಮಗ ದ್ರೋಣನು ಸಹ ಅಭ್ಯಾಸ ನಡೆಸಿದ್ದನು.ದ್ರೋಣನು ಅಗ್ನಿವೇಶ ಮಹರ್ಷಿಗಳ ಶಿಷ್ಯನಾಗಿದ್ದನು.ದ್ರೋಣ ಹಾಗೂ ದ್ರುಪದ ಉತ್ತಮ ಗೆಳೆಯರಾದರು.ಓದುವುದು,ಆಡುವುದು, ನಿದ್ದೆ ಮಾಡುವುದು ಹೀಗೆ ಒಟ್ಟಿಗೆ ಮಾಡುತ್ತಿದ್ದರು.
ದ್ರುಪದ “ದ್ರೋಣರಿಗೆ ನಾನು ತಂದೆಗಿರುವ ಒಬ್ಬನೇ ಮಗನು.ನಾನು ರಾಜನಾದ ಮೇಲೆ ನೀನು ಬಂದರೆ ಇಡೀ ಪಾಂಚಾಲ ರಾಜ್ಯವನ್ನೇ ಅರ್ಪಿಸುತ್ತೇನೆ.”ಎಂದು ಹೇಳಿದ್ದನು.
ಅವರಿಬ್ಬರ ಅಭ್ಯಾಸ ಮುಗಿದಾಗ ದ್ರುಪದನು ತನ್ನ ರಾಜ್ಯಕ್ಕೆ ಹೋದನು.ದ್ರೋಣರನ್ನು ರಾಜ್ಯಕ್ಕೆ ಬರಲು ಆಹ್ವಾನಿಸಿದನು.ದ್ರೋಣನು ಕೃಪೆ ಎಂಬುವಳನ್ನು ಮದುವೆಯಾಗಿ ಅಶ್ವತ್ಥಾಮನೆಂಬ ಮಗನೊಂದಿಗೆ ಇದ್ದನು.ಕೃಪಾಚರ್ಯರ ತಂಗಿ ಕೃಪೆ.ಕುದುರೆಯಂತೆ ಕೆನೆದಿದ್ದುದರಿಂದ ಅಶ್ವತ್ಥಾಮನೆಂದು ಮಗುವಿಗೆ ಹೆಸರು ಕರೆದರು.
ಹಿಂತಿರುಗಿ ಬರುವಾಗ ಪಾಂಚಾಲ ದೇಶಕ್ಕೆ ಬಂದು ದ್ರುಪದನನ್ನು ಕಂಡರೂ ಆ ವೇಳೆಗೆ ದ್ರುಪದನು ರಾಜನಾಗಿದ್ದನು.ಗೆಳೆಯನನ್ನು ಸ್ನೇಹದಿಂದ ಕಂಡ ದ್ರೋಣನಿಗೆ ದ್ರುಪದನು ನೆನಪೇ ಇಲ್ಲದವನಂತೆ ನಟಿಸಿದನು.ನೀನ್ಯಾರು ? ನಿನ್ನ ಉದ್ಯೋಗವೇನು ? ನನ್ನನ್ನು ಏಕ ವಚನದಿಂದ ಕರೆಯುವೆಯಾ ? ನಾನು ಈ ದೇಶದ ರಾಜ ಎಂದು ಹೇಳಿಕೊಂಡನು.
ಅದಕ್ಕೆ ದ್ರೋಣನು ಏನು ಮಾತನಾಡದೇ ಹೊರಕ್ಕೆ ಬಂದು ಇವನ ಅಹಂಕಾರವನ್ನು ನಾಶಪಡಿಸದೇ ಇರುವುದಿಲ್ಲವೆಂದು ನಿರ್ಧರಿಸಿದನು.ದೇಶ ವಿದೇಶಗಳನ್ನು ತಿರುಗುತ್ತಾ ಹಸ್ತಿನಾವತಿಗೆ ಬಂದು ಮುಟ್ಟಿದನು.
ಮಧ್ಯಾಹ್ನದ ಸಮಯದಲ್ಲಿ ಕೌರವ ಮತ್ತು ಪಾಂಡವರು ಚಂಡಿನ ಆಟವನ್ನು ಆಡುವಾಗ ಚೆಂಡು ಬಾವಿಯಲ್ಲಿ ಬಿದ್ದಿತು. ಎಲ್ಲರೂ ಮೇಲಕ್ಕೆ ತರುವ ಉಪಾಯವನ್ನು ಚಿಂತಿಸಿದರು.
ದ್ರೋಣರು ನೀವು ಬಿಲ್ವಿದ್ಯೆ ಕಲಿತಿಲ್ಲವೇ ?ಬಾಣ ಪ್ರಯೋಗಿಸಿ ಚೆಂಡನ್ನು ಮೇಲಕ್ಕೆ ತನ್ನಿರಿ ಎಂದರು. ಅವರಿಗೆ ಸಾಧ್ಯವಾಗಲಿಲ್ಲ.
ಆಗ ದ್ರೋಣರು ತಾವೇ ದರ್ಬೆಯೊಂದನ್ನು ಮಂತ್ರಿಸಿ ಬಾವಿಗೆ ಕಳಿಸಿದರು ಅದು ಬಾಣವಾಗಿ ಚೆಂಡನ್ನು ಮೇಲಕ್ಕೆ ತಂದಿತು.ಒಂದಾದ ಮೇಲೆ ಒಂದರಂತೆ ದರ್ಬೆಯನ್ನು ಸೇರಿಸಿ ಚೆಂಡನ್ನು ಮೇಲೆ ತಂದರು.
ಭೀಷ್ಮರಿಗೆ ಈ ವಿಷಯ ತಿಳಿದಾಗ ಅದರದಿಂದ ದ್ರೋಣರನ್ನು ಅರಮನೆಗೆ ಕರೆದೊಯ್ದು ಸತ್ಕರಿಸಿ ರಾಜಕುಮಾರರಿಗೆ ಬಿಲ್ವಿದ್ಯೆ ಕಲಿಸುವ ಗುರುಗಳಾಗಿರಿ ಎಂದು ಕೇಳಿಕೊಂಡರು. ದ್ರೋಣರು ಸಹ ಇಂತಹ ಅವಕಾಶಕ್ಕಾಗಿ ಕಾದಿದ್ದರು.ಆದುದರಿಂದ ಸಂತೋಷದಿಂದ ಒಪ್ಪಿಕೊಂಡು ಎಲ್ಲ ಮಕ್ಕಳಿಗೆ ಬಿಲ್ವಿದ್ಯೆ ಕಲಿಸಲಾರಂಭಿಸಿದರು.
ದ್ರೋಣರು ಶಿಷ್ಯರನ್ನು ಕುರಿತು ಈ ರೀತಿ ಕೇಳಿದರು.ಧನುರ್ವಿದ್ಯೆಯನ್ನು ಕಲಿತು ನನ್ನ ಆಸೆಯನ್ನು ಈಡೇರಿಸುವವರು ನಿಮ್ಮಲ್ಲಿ ಯಾರಿದ್ದೀರಿ ? ಎಂದು ಕೇಳಿದಾಗ ಅರ್ಜುನನು ಅನುಮಾನ ಮಾಡದೇ ಗುರುಗಳೇ ನಾನು ನಿಮ್ಮ ಆಸೆಯನ್ನು ಈಡೇರಿಸುತ್ತೇನೆ ಎಂದನು.
ಗುರು ದ್ರೋಣರು ತಮ್ಮ ಆಸೆಯನ್ನು ಹೇಳಲಿಲ್ಲ. ಅರ್ಜುನನು ಕೇಳಲಿಲ್ಲ.ಎಲ್ಲರಿಗೂ ಪ್ರೀತಿಯಿಂದ ಬಿಲ್ವಿದ್ಯೆಯನ್ನು ಕಲಿಸಿದರು. ಆದರೂ ಅರ್ಜುನನು ಅತ್ಯಂತ ಪ್ರೀತಿಯ ಶಿಷ್ಯನಾದನು.ಅರ್ಜುನನ ಕೈಚಳಕ, ಚಮತ್ಕಾರ ಉಳಿದವರಿಗೆ ಬರಲಿಲ್ಲ.
ಒಮ್ಮೆ ಊಟ ಮಾಡುತ್ತಿರುವಾಗ ದೀಪ ಆರಿ ಹೋಯಿತು.ಆದರೂ ಊಟ ಸಾಗಿತ್ತು.ಆಗ ಅಭ್ಯಾಸದಿಂದಾಗಿ ಕತ್ತಲಲ್ಲಿಯೂ ಬಾಣಪ್ರಯೋಗ ಸಾಧ್ಯವೆಂದು ಅರ್ಜುನ ತಿಳಿದುಕೊಂಡನು.ಕತ್ತಲಲ್ಲಿ ಅಭ್ಯಾಸ ಮಾಡುತ್ತಿರುವ ಅರ್ಜುನನಿಗೆ ನಿನನ್ನು ಅದ್ವಿತೀಯ ಬಿಲ್ವಾಣನನ್ನಾಗಿಸುತ್ತೇನೆ ಎಂದು ಮೆಚ್ಚಿ ನುಡಿದರು.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
