fbpx
ಭವಿಷ್ಯ

ಜಗಳವಿಲ್ಲದ ನೆಮ್ಮದಿಯ ಸಂಸಾರಕ್ಕೆ ಫೆಂಗ್ ಶುಯಿ ವಾಸ್ತು ಸಲಹೆಗಳು ಹೀಗಿವೆ..

1.ನೀವು ಮಲಗುವ ಕೋಣೆಯಲ್ಲಿ ತೆಳು ಮತ್ತು ಹಿತವಾದ ಬಣ್ಣಗಳನ್ನು ಬಳಸಿ ಅಲಂಕಾರ ಗೊಳಿಸಿ.ಗೋಡೆಗಳನ್ನು ಆಹ್ಲಾದಕರ ಮತ್ತು ಆಕರ್ಷಿತವಾದ ಚಿತ್ರಗಳ ಆಕೃತಿಗಳೊಂದಿಗೆ ಅಲಂಕರಿಸಿ.ಆದರೆ ಅವುಗಳ ಸಂಖ್ಯೆ ಒಂದು ಅಥವಾ ಎರಡು ಇರಬೇಕು ಜಾಸ್ತಿ ಬೇಡ.

2.ಮದುವೆಯ ನಂತರದ ವೈವಾಹಿಕ ಜೀವನ  ಸುಖ,ಸಮೃದ್ಧಿ,ಶಾಂತಿಯಿಂದ ನೆಲೆಸಬೇಕೆಂದರೆ, ನೀವಿಬ್ಬರೂ ಮದುವೆಯಾಗುವ ಸಮಯದಲ್ಲಿ ಜೊತೆಯಾಗಿ ತೆಗೆಸಿಕೊಂಡ ಒಂದು ಫೋಟೋವನ್ನು  ಮಲಗುವ ಕೋಣೆಯಲ್ಲಿ ಹಾಕಿ.

3.ಮಲಗುವ ಕೋಣೆಯ ಒಳಗೆ ಹೊಂದಿಕೊಂಡಂತೆ  ಸ್ನಾನದ ಮನೆ ಇದ್ದರೆ ಒಳ್ಳೆಯದೇ.ಆದರೆ ಅದರ ಬಾಗಿಲನ್ನು ಬಳಸದೇ ಇರುವ ಸಮಯದಲ್ಲಿ ಮುಚ್ಚಿರಬೇಕು.ಅದರ ನೇರ ದೃಷ್ಟಿ ಮಲಗುವ ಕೋಣೆಯ ಮೇಲೆ ಬೀಳಬಾರದು.

4.ರಾತ್ರಿ ಮಲಗಿದ ಸಮಯದಲ್ಲಿ ವಿದ್ಯುತ್ ಬಲ್ಬಗಳಿಂದ ನೇರ ಬೆಳಕು ಹಾಸಿಗೆಯ ಮೇಲೆ ಬೀಳಬಾರದು.ನೀವು  ಮಲಗಿದ ನಂತರವೂ ಮಲಗುವ ಕೋಣೆಯಲ್ಲಿ ಬೆಳಕು ಇರಬೇಕೆಂದು  ಬಯಸಿದರೆ ಆ ಬೆಳಕು ನೇರ ಹಾಸಿಗೆಯ ಮೇಲೆ  ಬೀಳದಂತೆ ನೋಡಿಕೊಳ್ಳಿ.ಅದರ ದಿಕ್ಕನ್ನು ಬದಲಿಸಿ.

5.ಒಂದು ಚಿಕ್ಕ ಗಾಜಿನ  ಶೀಷೆ, ಸಿರಾಮಿಕ್  ಮಡಿಕೆ, ಅಥವಾ ಗಾಜಿನ ಬಟ್ಟಲಿನಲ್ಲಿ ಸಣ್ಣ ಸ್ಪಟಿಕಗಳನ್ನು   ಮತ್ತು ಹರಳುಗಳನ್ನು ಇಟ್ಟು ಮೇಣದ ಬತ್ತಿಯನ್ನು ಹಚ್ಚಿ  ಅದನ್ನು ಪೂರ್ವ-ದಿಕ್ಕಿನ ಮೂಲೆಯಲ್ಲಿ ಇಡಿ. ಇದು ಖಂಡಿತವಾಗಿಯೂ ಸಂಬಂಧದಲ್ಲಿ ಪ್ರೀತಿ ಮತ್ತು ಬಾವೋದ್ರೇಕವನ್ನು ಹೆಚ್ಚಿಸುತ್ತದೆ.

6.ಒಂದು ಜೊತೆ ಅಲಂಕಾರಕ್ಕೆ ಇಡುವ  ಹೂ ಕುಂಡಗಳನ್ನು ಮಲಗುವ ಕೋಣೆಯಲ್ಲಿ ಇಡಬೇಕು.ಇದು ಪತಿ ಮತ್ತು ಪತ್ನಿಯ ಸಂಕೇತವಾಗಿದ್ದು.ಇದು ವಿವಾಹಿತರ ಜೀವನದಲ್ಲಿ ನಿಮ್ಮಿಬ್ಬರಲ್ಲೂ ಪ್ರೀತಿಯನ್ನು ಹೆಚ್ಚಿಸುವಲ್ಲಿ ಸಹಕಾರಿಯಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top